ಆಗಸ್ಟ್ 05, 2011

ಇಡೀ ಭಾರತವೇ ಒಂದು ದೊಡ್ಡ ಕಸಾಯಿಖಾನೆ’ : ನಾಗೇಶ್ ಹೆಗಡೆನಾಗೇಶ್ ಹೆಗಡೆ ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಮುಖ ಹೆಸರು. ೨೫ ವರ್ಷಗಳ ಹಿಂದೆ ಪರಿಸರ ವಿಜ್ಞಾನ ವಿಷಯದಲಲಿ ದೇಶದಲ್ಲೇ ಮೊದಲ ಪ್ರಾಧ್ಯಾಪಕರಾಗಿ ನೈನಿತಾಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಇವರು ನಂತರ ಸೀದಾ ಕನ್ನಡ ಪತ್ರಿಕೋದ್ಯಮಕ್ಕೆ ದುಮುಕಿ ವಿಜ್ಞಾನ ವರದಿಗಾರರಾಗಿ’, ಬಾತ್ಮೀದಾರರಾಗಿ ಅಂಕಣಕಾರರಾಗಿ ವಿಜ್ಞಾನದ ಸತ್ಯಗಳನ್ನು ಕನ್ನಡಿಗರಿಗೆ ಅತ್ಯಂತ ಸರಳವಾಗಿ ತಿಳಿಸುತ್ತಾ ಬಂದಿರುವವರು. ನಮ್ಮಲ್ಲಿ ವೈಜ್ಞಾನಿಕ ಚಿಂತನೆಯನ್ನು ಸದಾ ಉದ್ದೀಪನಗೊಳಿತ್ತಾ ಬಂದಿರುವ ನಾಗೇಶ್ ಹೆಗಡೆಯವರು ಹಲವಾರು ವಿಷಯಗಳ ಕುರಿತು ಹಂಚಿಕೊಂಡಿದ್ದಾರೆ.

ಒಬಾಮ ಅಧಿಕಾರಕ್ಕೇರಿದಾಗಿನಿಂದ ಅಣ್ವಸ್ತ್ರ ಮುಕ್ತ ವಿಶ್ವಕ್ಕಾಗಿ ಕರೆ ನೀಡುತ್ತಲೇ ಇದ್ದಾರೆ. ಇತ್ತೀಚಿನ ಫುಕೋಸಿಮಾ ದುರಂತದ ಹಿನ್ನೆಲೆಯಲ್ಲಿ ಒಟ್ಟಾರೆ ಅಣುಶಕ್ತಿ ಬಳಕೆಯ ಬಗ್ಗೆ ಪುನರ್ ಚಿಂತನೆ ನಡೆಸಬೇಕಾದಅವಶ್ಯಕತೆಯಿದೆಯೆ?
-ಮರುಚಿಂತನೆ ಈಗಾಗಲೇ ಆರಂಭವಾಗಿದೆ. ಜಪಾನ್‌ನ ಒಟ್ಟೂ ವಿದ್ಯುತ್ ಉತ್ಪಾದನೆಯಲ್ಲಿ ಅಣುಶಕ್ತಿಯ ಪಾಲು ಶೇಕಡಾ ೩೦ರಷ್ಟಿತ್ತು. ಅದನ್ನು ಶೇ. ೫೦ಕ್ಕೆ ಏರಿಸಬೇಕೆಂದು ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಫುಕುಶಿಮಾ ದುರಂತದ ಅಂಥ ವಿಸ್ತರಣಾ ಯೋಜನೆಯನ್ನು ಮರುಪರಿಶೀಲನೆ ಮಾಡುವುದಾಗಿ ಜಪಾನಿನ ಪ್ರಧಾನ ಮಂತ್ರಿ ನವೊತೊ ಕಾನ್ ಮೊನ್ನೆ ಸಂಸದೀಯ ಸಮಿತಿಯ ಎದುರು ಹೇಳಿದ್ದಾರೆ. ಜರ್ಮನಿಯಂತೂ ಈಗಿನ ಸ್ಥಾವರಗಳನ್ನೂ ಕ್ರಮೇಣ ಮುಚ್ಚುವುದಾಗಿ ಘೋಷಿಸಿದೆ. ನಮ್ಮ ದೇಶದಲ್ಲಿ ಮಾತ್ರ ಅಂಥ ಸಾಧ್ಯತೆಗಳಿಲ್ಲ. ಏಕೆಂದರೆ ಈಚೆಗಷ್ಟೇ ಅಮೆರಿಕದೆದುರು ಮಂಡಿಯೂರಿ ಕೂತು ಗಾಣಕ್ಕೆ ಕೈಕೊಟ್ಟಿದ್ದಾಗಿದೆ. ಅಣುಸ್ಥಾವರಗಳ ಸುರಕ್ಷಾ ವಿಧಿವಿಧಾನಗಳ ಮರುಪರಿಶೀಲನೆ ಮಾಡಲಾಗುತ್ತದೆ ಎಂದೇನೋ ಹೇಳುತ್ತಿದ್ದಾರೆ- ಮಾಡುವವರು ಯಾರುಅದೇ ಅಣುಶಕ್ತಿ ಇಲಾಖೆಯ ತಜ್ಞರೇ ತಾನೆಈ ಆಶ್ವಾಸನೆಯನ್ನು ಜನತೆ ಹಾಗಿರಲಿಅಣುವಿಜ್ಞಾನಿಗಳೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದ್ದುದರಲ್ಲಿ ಕೊಂಚ ಸಮಾಧಾನದ ಸಂಗತಿ ಏನೆಂದರೆ ಅಣುಶಕ್ತಿ ನಿಯಂತ್ರಣ ಮಂಡಲಿ (ಎಇಆರ್‌ಬಿ)ಯನ್ನು ಅಣುಶಕ್ತಿ ಆಯೋಗದ ತೆಕ್ಕೆಯಿಂದ ಪ್ರತ್ಯೇಕಿಸಲು ನಿರ್ಧರಿಸಲಾಗಿದೆ. ಇಷ್ಟುವರ್ಷ ಎಇಆರ್‌ಬಿ ಎಂಬುದು ಹಲ್ಲಿಲ್ಲದ ಹಾವಿನಂತಿತ್ತು. ತನಗೆ ಸಂಬಳ ಕೊಡುವ ಯಜಮಾನನ ಮೇಲೆ ಕಣ್ಣಿಡಬೇಕಾದ ನೆಪಮಾತ್ರದ ಕೆಲಸ ಅದರದ್ದಾಗಿತ್ತು. ಇನ್ನುಮೇಲೆ ಅಣುಸ್ಥಾವರಗಳ ಆಗುಹೋಗುಗಳ ತಪಾಸಣೆ ಮಾಡುವ ಮಂಡಲಿಗೆ ಸ್ವತಂತ್ರ ಅಸ್ತಿತ್ವ ಸಿಗಲಿದೆ. 
ಜಾಗತಿಕ ತಾಪಮಾನ ಅಪಾಯಕಾರಿ ಮಟ್ಟ ತಲುಪುತ್ತಿದೆ. ಆದರೆಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅದಕ್ಕೆ ಹೆಚ್ಚು ಹೊಣೆಗಾರರಾಗಿರುವ ಅಮೆರಿಕ ಮತ್ತು ಚೀನಾದಂತಹ ರಾಷ್ಟ್ರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳು ತೃಪ್ತಿದಾಯಕವಾಗಿವೆಯೆ?
-ಅಮೆರಿಕವನ್ನು ಬಿಡಿಅದರ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ (ಸೀನಿಯರ್) ನಾನು ಅಮೆರಿಕಕ್ಕೆ ಅಧ್ಯಕ್ಷನೇ ವಿನಾ ಜಗತ್ತಿನ ಅಧ್ಯಕ್ಷ ಅಲ್ಲ’ ಎಂದು ರಿಯೊ ಶೃಂಗಸಭೆಗೆ ಬಂದಿದ್ದಾಗ ಘೋಷಿಸಿದ್ದರು. ಇಂದಿಗೂ ಅಲ್ಲಿನ ಅಧ್ಯಕ್ಷರ ಧೋರಣೆ ಅದೇ ಇದೆ: ಜಗತ್ತು ಎಕ್ಕುಟ್ಟಿ ಹೋದರೆ ಹೋಗಲಿತನ್ನ ದೇಶದ ಹಿತಾಸಕ್ತಿಗೆ ಏನೂ ಧಕ್ಕೆ ಆಗಬಾರದು ಎಂದು. ಇನ್ನುಇತ್ತ ಚೀನಾ ದೇಶವಂತೂ ಸಂಪನ್ಮೂಲ ಕಬಳಿಕೆ ಮತ್ತು ದುಂದುವೆಚ್ಚದಲ್ಲಿ ಅಮೆರಿಕವನ್ನು ಸರಿಗಟ್ಟಲೆಂದೇ ದಾಂಗುಡಿ ಇಡುತ್ತಿದೆ. ಆದರೆ ಮುಂದೆಯೂ ಇದೇ ಧೋರಣೆ ಇರತ್ತದೆಂದು ಹೇಳುವಂತಿಲ್ಲ. ಅಮೆರಿಕದಲ್ಲಿ ಕ್ಯಾಲಿಫೋರ್ನಿಯಾದಂಥ ರಾಜ್ಯಗಳು ಅಕ್ಷಯ ಶಕ್ತಿಮೂಲಗಳ ಅಭಿವೃದ್ಧಿಗೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿವೆ. ಕೆಲವು ಹೊಸ ವಾಣಿಜ್ಯ ಕಂಪನಿಗಳು ಈ ನಿಟ್ಟಿನ ಸಂಶೋಧನೆಗೆ ಅಪಾರ ಹಣವನ್ನು ಸುರಿಯುತ್ತಿವೆ. ಚೀನಾ ಕೂಡಾ ಸೌರಶಕ್ತಿಗಾಳಿಶಕ್ತಿಗೆ ತುಂಬ ದೊಡ್ಡ ಮೊತ್ತವನ್ನೇ ವಿನಿಯೋಗಿಸಲು ಹೊರಟಿದೆ. ಈ ಚೀನೀಯರು ಮನಸ್ಸು ಮಾಡಿದರೆ ಜಗತ್ತಿನ ದಿಶೆಯನ್ನೇ ಬದಲಿಸುತ್ತಾರೆಒಳ್ಳೆಯದಕ್ಕೊ ಕೆಟ್ಟದ್ದಕ್ಕೊ’ ಎನ್ನುತ್ತಾರೆಚೀನಾದ ಅಭಿವೃದ್ಧಿಯ ಬ್ರಹ್ಮರೂಪವನ್ನು ಅಧ್ಯಯನ ಮಾಡುತ್ತಿರುವ ಪತ್ರಕರ್ತ ಜೋನಾಥನ್ ವಾಟ್ಸ್. ?
ಜಗತ್ತಿನ ಪರಿಸರದ ಅಸಮತೋಲನಗಳಿಗೆ ಮೂಲ ಕಾರಣಗಳೇನುಪರಿಸರ ರಕ್ಷಣೆ ಸಾಧ್ಯವಾಗುವ ಬಗೆ ಹೇಗೆ?
ಅಸಮತೋಲಕ್ಕೆ ಅನೇಕ ಕಾರಣಗಳಿವೆ. ವಿಕಾಸ ಮಾರ್ಗದಲ್ಲಿ ನಾವಿನ್ನೂ ಅಂಬೆಗಾಲಿನ ಬಚ್ಚಾಗಳು. ನಮಗಿಂತ ೨೫೦ ಕೋಟಿ ವರ್ಷಗಳ ಹಿಂದೆಯೇ ವಿಕಾಸಗೊಂಡು ಸಮತೋಲ ಸಾಧಿಸಿದ ಜೀವಿಗಳನ್ನು ನಾವು ಮೂಲೆಗುಂಪು ಮಾಡಿ ಮೇಲುಗೈ ಸಾಧಿಸಲು ಹೊರಟಿದ್ದೇವೆ. ಪ್ರಕೃತಿಯೇ ಹೂತು ಬಚ್ಚಿಟ್ಟಿದ್ದ ಅಪಾಯಕಾರಿ ದ್ರವ್ಯಗಳನ್ನು (ಪೆಟ್ರೊಲಿಯಂಪಾದರಸಕಲ್ನಾರುಕಲ್ಲಿದ್ದಲುಆರ್ಸೆನಿಕ್ಯುರೇನಿಯಂ ಇತ್ಯಾದಿಗಳನ್ನು) ಹೊರಕ್ಕೆಳೆದು ಅವಸರದಲ್ಲಿ ಸುಸ್ಥಿರವಲ್ಲದ ತಂತ್ರಜ್ಞಾನವನ್ನು ರೂಪಿಸಿ ಇಡೀ ಜಗತ್ತಿಗೆ ಹಂಚಿದ್ದೇವೆ. ಮೋಟಾರು ವಾಹನ ಇರಲಿವಿದ್ಯುತ್ ಉತ್ಪಾದನ ತಂತ್ರ ಇರಲಿಮನೆಬಳಕೆಯ ಬುರುಡೆ ಬಲ್ಬ್ ಇರಲಿಅದು ಅಪಾಯವೆಂದು ಗೊತ್ತಿದ್ದರೂಲಾಭಕೋರ ಬಂಡವಾಳಶಾಹಿ ಶಕ್ತಿಗಳು ಅದರಿಂದ ನಿರಂತರ ಲಾಭವನ್ನು ಮೊಗೆಯುತ್ತಲೇ ಇದ್ದಾರೆ. ಇಂದು ಇಡೀ ಮನುಕುಲವೇ ಪೆಟ್ರೊದೊರೆಗಳ ಬಿಗಿಮುಷ್ಟಿಯಲ್ಲಿ ಸಿಲುಕಿದೆ. ಡೀಸೆಲ್,ಪೆಟ್ರೊಲ್ಕಲ್ಲಿದ್ದಲು ಬಿಟ್ಟು ಯಾರೂ ಬದುಕಲು ಸಾಧ್ಯವೇ ಇಲ್ಲವೆಂಬಂಥ ಸ್ಥಿತಿಗೆ ನಾವೆಲ್ಲ ತಲುಪಿದ್ದೇವೆ. ಅದು ನಾನಾ ಬಗೆಯ ಅಸಮತೋಲಗಳನ್ನು ಸೃಷ್ಟಿ ಮಾಡುತ್ತಲೇ ಹೋಗುತ್ತದೆ. ಬದಲೀ ಶಕ್ತಿಮೂಲಗಳ ಅಭಿವೃದ್ಧಿಗೆ ಈ ದೊರೆಗಳೇ ಇನ್ನಿಲ್ಲದ ಅಡ್ಡಗಾಲು ಹಾಕುತ್ತಿದ್ದಾರೆ. ಅವರನ್ನು ಧಿಕ್ಕರಿಸಬಲ್ಲ ರಾಜಕೀಯ ಮುತ್ಸದ್ದಿಗಳು ನಮಗಿಂದು ಬೇಕಾಗಿದ್ದಾರೆ.

ವಿಜ್ಞಾನ-ತಂತ್ರಜ್ಞಾನ ಬೆಳೆದಂತೆಲ್ಲಾ ಮೂಢನಂಬಿಕೆ ಕಡಿಮೆಯಾಗಬೇಕಿತ್ತು. ಆದರೆಅದೇ ವಿಜ್ಞಾನ ತಂತ್ರಜ್ಞಾನಗಳನ್ನು ಬಳಸಿಕೊಂಡು ಮೂಢನಂಬಿಕೆಗಳು ಹಿಂದಿಗಿಂತ ಜೋರಾಗಿ ಹರಡುತ್ತಿವೆ. ಉದಾಹರಣೆಗೆ, ಜೋತಿಷ್ಯ,ವಾಸ್ತುಗಳಂತಹ ಕಾರ್ಯಕ್ರಮಗಳು ಪ್ರತೀದಿನ ಟಿವಿಯಲ್ಲಿ ಪ್ರಸಾರವಾಗುತ್ತಿರುವುದುಆನ್‌ಲೈನ್ ಮೂಲಕ ಪೂಜೆ ಸಲ್ಲಿಸುವುದು ಇತ್ಯಾದಿ. ಹಾಗಿದ್ದರೆ ಇದಕ್ಕೆ ಪರಿಹಾರವೇನುಹೀಗಾಗುತ್ತಿರುವುದು ವಿಜ್ಞಾನದ ವೈಫಲ್ಯವೇ?
ಮೂಢನಂಬಿಕೆ ದಿನದಿನಕ್ಕೆ ಹೆಚ್ಚುತ್ತಿರುವುದು ವಿಜ್ಞಾನದ ವೈಫಲ್ಯವಲ್ಲ. ಮಾಧ್ಯಮಗಳ ವೈಫಲ್ಯ.  ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳಲು ಚಾನೆಲ್‌ಗಳಲ್ಲಿ ಕೀಳುಪೈಪೋಟಿ ಹೆಚ್ಚುತ್ತಿದೆ. ಅದಕ್ಕೇ ಟಿವಿಯನ್ನು ಮೂರ್ಖರ ಪೆಟ್ಟಿಗೆಎಂದು ಕರೆದಿದ್ದು. ದೃಶ್ಯಮಾಧ್ಯಮದೊಂದಿಗೆ ಪಂದ್ಯಕ್ಕಿಳಿದಂತೆ ಮುದ್ರಣ ಮತ್ತು ಧ್ವನಿ ಮಾಧ್ಯಮಗಳೂ ಮೂಢನಂಬಿಕೆಗಳನ್ನು ಬಿತ್ತುತ್ತಿವೆ. ಅದು ದುರದೃಷ್ಟಕರ. 
ಪ್ಲಾಸ್ಟಿಕ್ ಮೇಲಿನ ನಮ್ಮ ಅವಲಂಬನೆ ವಿಪರೀತವಾಗಿರುವ ಸಂದರ್ಭದಲ್ಲಿ ನಿಜಕ್ಕೂ ಪ್ಲಾಸ್ಟಿಕ್ ಮುಕ್ತ ವಿಶ್ವ ಆಚರಣಾತ್ಮಕವಾಗಿ ಸಾಧ್ಯವೆಅಲ್ಲದೇದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಪರಿಸರದ ಮೇಲೆ ವ್ಯಾಪಕ ಅತ್ಯಾಚಾರ ಮಾಡುತ್ತಿರುವಾಗ ಪ್ಲಾಸ್ಟಿಕ್ ತ್ಯಜಿಸಿಯಂತಹ ಘೋಷಣೆಗಳು ಕ್ಲೀಷೆಯಲ್ಲವೇ?

ಸಸ್ಯಮೂಲಗಳಿಂದಲೂ ಪ್ಲಾಸ್ಟಿಕ್ ತಯಾರಿಸಬಹುದು. ಜೋಳದ ಹಿಟ್ಟಿನ ಪ್ಲಾಸ್ಟಿಕ್‌ನಿಂದ ತಯಾರಿಸಿದ ರೀಫಿಲ್ ಪೆನ್ನೊಂದನ್ನು ೨೦ ವರ್ಷಗಳ ಹಿಂದೆಯೇ ಬ್ರಝಿಲ್‌ಗೆ ಹೋಗಿದ್ದಾಗ ನನಗೊಬ್ಬರು ಕೊಟ್ಟಿದ್ದರು (ಅದನ್ನು ಜಿರಲೆಗಳು ತಿಂದು ಮುಗಿಸಿದವು ಆ ಮಾತು ಬೇರೆ). ಸಸ್ಯಮೂಲದಿಂದ ಪ್ಲಾಸ್ಟಿಕ್ ತಯಾರಿಕೆಗೆ ಉತ್ತೇಜನ ಕೊಟ್ಟರೆಅದಕ್ಕೆಂದೇ ನಾವು ದೇಶದ ಬಂಜರುಭೂಮಿಗಳಲ್ಲಿ ವನಗಳನ್ನು ಸೃಷ್ಟಿಸಬಹುದು. ಈಗಿರುವ ವಿದೇಶೀ ಕಚ್ಚಾವಸ್ತುವನ್ನೂ ತಂತ್ರಜ್ಞಾನವನ್ನೂ ಆಧರಿಸಿದ ದೊಡ್ಡ ಫ್ಯಾಕ್ಟರಿಗಳ ಬದಲು ಗ್ರಾಮಮಟ್ಟದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಆರಂಭಿಸಬಹುದು. ಅಂಥ ಪ್ಲಾಸ್ಟಿಕ್ ಬಿಸಾಕಿದಲ್ಲೇ ಕ್ರಮೇಣ ಕೊಳೆಯುವುದರಿಂದ ಸಸ್ಯಗಳಿಗೆ ಉತ್ತಮ ಗೊಬ್ಬರವೂ ಆಗುತ್ತದೆ. ಈ ಹಿಂದೆ ಹೇಳಿದ ಪೆಟ್ರೊದೊರೆಗಳ ಬಿಗಿಮುಷ್ಟಿಯನ್ನು ಧಿಕ್ಕರಿಸಿ ಅಂಥ ಕ್ರಾಂತಿಕಾರಿ ತಂತ್ರಜ್ಞಾನಕ್ಕೆ ನೀರೆರೆದು ಪೋಷಿಸಬಲ್ಲ ಮುತ್ಸದ್ದಿಗಳು ನಮಗೆ ಬೇಕಿದ್ದಾರೆ. 
ಇಂದು ತಂತ್ರಜ್ಞಾನದ ಪ್ರಗತಿಯೊಂದಿಗೆ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚುತ್ತಿರುವುದರ ಪರಿಣಾಮಗಳೇನು?
-ಗಾಂಧೀಜಿಯವರು ಸಾಕಾರಗೊಳಿಸಿದ್ದ ಸರಳ ಬದುಕುಸಂಪನ್ನ ಚಿಂತನೆಯ ಮಾರ್ಗವನ್ನು ಗಾಂಧೀವಾದಿಗಳೂ ಅನುಸರಿಸುವುದು ಕಷ್ಟಕರವಾಗಿದೆ.  ಆದಷ್ಟು ಬೇಗಆದಷ್ಟು ಹೆಚ್ಚು ಹಣ ಗಳಿಸಬೇಕೆಂಬ ಭೋಗಪಿಪಾಸು ಸಮಾಜವನ್ನು ನಾವು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಆರ್ಥಿಕ ಅಸಮಾನತೆ ಇರುವ ನಮ್ಮ ದೇಶದಲ್ಲಿ ಕೆಲವರ ಶೋಕಿ ಬದುಕು ಇನ್ನುಳಿದವರ ಮನೋವಿಕಾರಗಳನ್ನು ಉಗ್ರಗೊಳಿಸುತ್ತದೆ ವಿನಾ ಸಮಾಜದಲ್ಲಿ ಶಾಂತಿ ನೆಲೆಸಲು ಬಿಡುವುದಿಲ್ಲ. ಪಾಶ್ಚಿಮಾತ್ಯ ಸಮಾಜದಲ್ಲಿ ತಂತ್ರಜ್ಞಾನದ ಆಗಮನ ನಿಧಾನವಾಗಿತ್ತು. ಜನರು ಅದರೊಂದಿಗೆ ಏಗುವುದನ್ನು ಕಲಿಯಲು ಸಾಕಷ್ಟು ಸಮಯವಿತ್ತು. ಅದಕ್ಕೆ ಹೊಂದುವಂಥ ಆರ್ಥಿಕತೆಯನ್ನುಸಂಸ್ಕೃತಿಯನ್ನು ರೂಪಸಿಕೊಳ್ಳಲು ಸಾಧ್ಯವಿತ್ತು. ಆದ್ದರಿಂದಲೇ ಇಂದು ಪಾಶ್ಚಾತ್ಯ ಪ್ರಪಂಚದಲ್ಲಿ ಸುಖ’ ’ಸೌಂದರ್ಯ’ ಮತ್ತು ನೆಮ್ಮದಿಯ ವ್ಯಾಪ್ತಿ ತುಂಬಾ ವಿಶಾಲವಾಗಿದೆ. ಅದು ಕೇವಲ ಮನೆಯೊಳಗಿನ ಸೌಕರ್ಯಗಳಿಗೆ ಸೀಮಿತವಾಗಿಲ್ಲ. ಮನೆಯಾಚಿನ ಫುಟ್‌ಪಾತ್ರಸ್ತೆಅದರಂಚಿನ ವಿದ್ಯುತ್ ಕಂಬಅದರಾಚಿನ ಉದ್ಯಾನಅದರಾಚಿನ ಹಳ್ಳಕೊಳ್ಳಗುಡ್ಡ ಬೆಟ್ಟಗಳನ್ನೂ ಕಲ್ಮಶರಹಿತವಾಗಿಸುಂದರವಾಗಿಉಲ್ಲಾಸದ ಸೆಲೆಯಾಗಿ ಇಟ್ಟುಕೊಳ್ಳಬೇಕೆಂಬ ತುಡಿತ ಅಲ್ಲಿ ಕಾಣುತ್ತದೆ. ನಮ್ಮಲ್ಲಿ ಹಾಗೆ ಆಗುತ್ತಿಲ್ಲ. ತಂತ್ರಜ್ಞಾನ ಆಧರಿತ ಪ್ರಗತಿ ನಮ್ಮತ್ತ ತೀರಾ ಅವಸರದಲ್ಲಿ ನುಗ್ಗಿದೆ. ಸಾಮಗ್ರಿಗಳನ್ನು ಖರೀದಿಸಿದ ವೇಗದಲ್ಲೇ ಬಿಸಾಕುವ ಪ್ರವೃತ್ತಿ ಹೆಚ್ಚುತ್ತಿದೆ. ನೀರುಖನಿಜಕಲ್ಲುಮರಳು,ದಿಮ್ಮಿರಬ್ಬರ್ಪ್ಲಾಸ್ಟಿಕ್ಗಾಜುಕಾಗದರಟ್ಟುಪಿಂಗಾಣಿಕುರಿಕೋಳಿಹಂದಿ ಎಲ್ಲವೂ ನಗರಗಳತ್ತ ಬೆಟ್ಟದೋಪಾದಿಯಲ್ಲಿ ಸಾಗಿ ಬರುತ್ತಿವೆ. ಅಷ್ಟೇ ಬೆಟ್ಟದೋಪಾದಿಯಲ್ಲಿ ತ್ಯಾಜ್ಯವಸ್ತುಗಳು ನಗರದಾಚಿನ ತಗ್ಗುಗುಂಡಿಗಳನ್ನು ಸೇರುತ್ತಿವೆ. 
ಪ್ರತಿಭಾನ್ವಿತರೆಲ್ಲಾ ವೃತ್ತಿಪರ ಕೋರ್ಸುಗಳ ಬೆನ್ನುಹತ್ತಿರುವುದರಿಂದಲಕ್ಷಾಂತರ ರೂಪಾಯಿ ಸಂಬಳ ಕೊಡುವ ವೃತ್ತಿಗಳ ಹಿಂದೆ ಬಿದ್ದಿರುವುದರಿಂದ ಮೂಲ ವಿಜ್ಞಾನದ ಬೆಳವಣಿಗೆ ಕುಂಠಿತವಾಗಿದೆ ಅನ್ನಿಸುವುದಿಲ್ಲವೆ?
- (ಈ ಪ್ರಶ್ನೆಗೆ ಚಿಕ್ಕ ಉತ್ತರ ಕೊಡಲು ಸಾಧ್ಯವಿಲ್ಲಬೇರೆ ಪ್ರಶ್ನೆ ಕೇಳಿ)
ನಮ್ಮಲ್ಲಿ ವಿಜ್ಞಾನ ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಂಡಿಸುವವರು ತೀರಾ ವಿರಳ. ಈ ಪರಿಸ್ಥಿತಿ ಏಕಿದೆ ಹಾಗೂ ಪರಿಹಾರವೇನು?
-ವಿಜ್ಞಾನ ತೀರಾ ವೇಗದಲ್ಲಿ ಬಹು ಆಯಾಮಗಳಲ್ಲಿ ಬೆಳೆಯುತ್ತಿದೆ. ಬೆಳೆಯುತ್ತ ಹೋದಂತೆ ಅದು ತನ್ನದೇ ತಾಂತ್ರಿಕ ಪರಿಭಾಷೆಗಳನ್ನು ಸೃಷ್ಟಿಸಿಕೊಳ್ಳುತ್ತ ಹೋಗುತದೆ. ಜನಸಾಮಾನ್ಯರಿಗೆ ಅಷ್ಟೇ ಅಲ್ಲಭೌತ ವಿಜ್ಞಾನದ ಹೊಸ ಸಂಶೋಧನೆಗಳನ್ನು ಸಸ್ಯವಿಜ್ಞಾನಿಗೆ ಅರ್ಥವಾಗುವಂತೆ ವಿವರಿಸುವುದು ಕಷ್ಟವಾಗುತ್ತಿದೆ. ಹೃದಯದ ಬಗ್ಗೆ ಮಾತಾಡುವಾಗ ನಾವು ರಕ್ತನಾಳ’ ’ಕವಾಟ’ ಎರಡು ಪದಗಳನ್ನಷ್ಟೇ ಬಳಸುತ್ತೇವೆ. ಹತ್ತನೆಯ ತರಗತಿಯ ವಿದ್ಯಾರ್ಥಿ ಕಷ್ಟಪಟ್ಟು ಅಭಿಧಮನಿ’, ’ಅಪಧಮನಿ’, ’ಹೃತ್‌ಕುಕ್ಷಿ’ ಮುಂತಾದ ಹತ್ತೆಂಟು ಪದಗಳನ್ನು ಉರುಹಾಕಿ ಆಮೇಲೆ ಮರೆತುಬಿಡುತ್ತಾನೆ. ಇಬ್ಬರು ಹೃದ್ರೋಗತಜ್ಞರ ಸಂಭಾಷಣೆಯಲ್ಲಿ ಅದೇ ಮುಷ್ಟಿಗಾತ್ರದ ಹೃದಯದ ಬಗ್ಗೆ ೨೮-೩೦ ಪದಗಳ ಬಳಕೆಯಾಗುತ್ತದೆ. ಅದು ಭಾಷೆಯ ಪ್ರಶ್ನೆಯಲ್ಲ. ಜ್ಞಾನರಂಗದಲ್ಲಿ ನಮ್ಮ ಒಡನಾಟದ ಪ್ರಶ್ನೆ. ನನಗೆ ಈಗಲೂ ಆಯುರ್ವೇದ ತಜ್ಞರು ಬಳಸುವ ವಾಯು’ ’ಶೀತ’, ’ಧಾತು’ ಮುಂತಾದ ಪದಗಳು ಅರ್ಥವಾಗುವುದಿಲ್ಲ. ಹಾಗೆಯೇ ಕುಂಡಲಿ ಬರೆಯುವವರ ಕುಜ’, ’ಅಂಗಾರಕ’, ’ಶನಿಗಳು ಅರ್ಥವಾಗುವುದಿಲ್ಲ. ಅದರಿಂದ ನನಗೆ ಹಾನಿಯೇನೂ ಇಲ್ಲವಲ್ಲ!
ವೈದ್ಯಕೀಯಎಂಜಿನಿಯರಿಂಗ್ ಮತ್ತು ಇನ್ನಿತರ ಉನ್ನತ ವಿಷಯಗಳನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಬೋಧಿಸುವುದು ಸಾದ್ಯವಿಲ್ಲ ಎಂಬ ವಾದವಿದೆಯಲ್ಲನಿವೇನಂತೀರಾ?
-ಪ್ರಾದೇಶಿಕ ಪದಗಳನ್ನು ಬಳಸುವುದು ಸಾಧ್ಯವಿಲ್ಲಒಪ್ಪುತ್ತೇನೆ. ಇಂದು ತಾಂತ್ರಿಕ ರಂಗದಲ್ಲಿ ಬಲುಶೀಘ್ರವಾಗಿ ಹೊಸ ಹೊಸ ಪದಗಳು ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿ ತ್ವರಿತವಾಗಿ ಎಲ್ಲೆಡೆ ಬಳಕೆಗೆ ಬರುತ್ತಿದೆ. ಅದನ್ನು ಬದಿಗಿಟ್ಟು ಮಾತೃಭಾಷೆಯಲ್ಲಿ ಪದಗಳನ್ನು ಟಂಕಿಸುತ್ತ ಕೂರುವಷ್ಟು ವ್ಯವಧಾನ ಇಲ್ಲ. ಜಪಾನೀ ಭಾಷೆಯಲ್ಲೂ ಅದು ಸಾಧ್ಯವಿಲ್ಲರಷ್ಯನ್ ಭಾಷೆಯಲ್ಲೂ ಸಾಧ್ಯವಿಲ್ಲ. ಉದಾಹರಣೆಗೆ ಕ್ರಯೊಜೆನಿಕ್ಸ್’ ಎಂಬ ಪದವನ್ನು ಜಪಾನೀ ಭಾಷೆಯಲ್ಲೂ ರಷ್ಯನ್ ಭಾಷೆಯಲ್ಲೂ ಬಳಸುತ್ತಾರೆ. ವೈದ್ಯಕೀಯ ಮತ್ತು ತಂತ್ರಜ್ಞಾನ ಎರಡೂ ರಾಜ್ಯ-ರಾಷ್ಟ್ರಗಳ ಗಡಿಯನ್ನು ಮೀರಿ ತಮ್ಮದೇ ಜ್ಞಾನವಲಯವನ್ನು ನಿರ್ಮಿಸಿಕೊಂಡು ಬೆಳೆಯುತ್ತಿವೆ. ಹೀಗಾಗಿ ವೃತ್ತಿಪರ ಕಾಲೇಜ್‌ಗಳಲ್ಲಿ ಕನ್ನಡ ನಶಿಸುತ್ತದೆ ಎಂದು ಅಳುತ್ತ ಕೂರುವುದು ಸರಿಯಲ್ಲ. ಕನ್ನಡ ನಮ್ಮ ನಮ್ಮ ಮನೆಯಲ್ಲೇಟಿವಿ ಇರುವ ಹಾಲ್‌ನಲ್ಲಿಮೊಬೈಲ್ ಇರುವ ಕೈಯಲ್ಲಿ ಸೋಲುತ್ತಿದೆ. ಅದರ ಬಗ್ಗೆ ನಮಗೆ ಆತಂಕ ಇರಬೇಕು. ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕನ್ನಡ ಭಾಷೆಲಿಪಿ ಸಲೀಸಾಗಿ ಸಂವಹನ ಆಗುತ್ತಿಲ್ಲ. ಗೂಗಲ್‌ನಲ್ಲಿ ತಮಿಳು ತೆಲುಗು ಓಡಾಡಿದಷ್ಟು ಸರಾಗವಾಗಿ ಕನ್ನಡ ಓಡಾಡುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಕ್ರಿಯಾಶೀಲತೆ ಹೆಚ್ಚಬೇಕು.   
ಇಂದು ಶ್ರೀಮಂತ ದೇಶಗಳು ಭಾರತವನ್ನು ಸುರಿಹೊಂಡ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳೇನು?
-ಬರಡು ದನಗಳನ್ನು ಡೇರಿಪತಿಗಳು ಕಸಾಯಿಖಾನೆಗೆ ಸಾಗಿಸಿ ಕೈತೊಳೆದುಕೊಳ್ಳುವುದಿಲ್ಲವೆಅದೇರೀತಿ ಶ್ರೀಮಂತ ದೇಶಗಳು ತಮ್ಮಲ್ಲಿರುವ ಹಳೇ ಹಡಗುಗಳನ್ನುಹಳೇ ಯಂತ್ರಗಳನ್ನುಹಳಸಲು ತಿಪ್ಪೆಗಳನ್ನು ನಮ್ಮತ್ತ ತಳ್ಳುತ್ತಾರೆ. ನಮ್ಮದೇ ಬೆಟ್ಟದೆತ್ತರ ಕಚಡಾವಸ್ತುಗಳ ಜತೆಗೆ ವಿದೇಶೀ ತ್ಯಾಜ್ಯಗಳೂ ಸೇರಿ ಇಡೀ ಭಾರತವೇ ಒಂದು ದೊಡ್ಡ ಕಸಾಯಿಖಾನೆ ಆಗುತ್ತಿದೆ. ನಮ್ಮಲ್ಲಿ ಉದ್ಯೋಗದ ಅಭಾವವಿದೆಎಂಥ ತುಚ್ಛ ಕೆಲಸವನ್ನೂ ಮಾಡಲು ತಯಾರಿರುವ ಅಶಿಕ್ಷಿತ ಬಡಜನರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಅಪಾಯಕಾರಿ ತ್ಯಾಜ್ಯಗಳು ಬಾರದಂತೆ ತಡೆಯಬಲ್ಲ ಅಧಿಕಾರಿಗಳಲ್ಲಿ ಭ್ರಷ್ಟರ ಸಂಖ್ಯೆಯೂ ದೊಡ್ಡದಿದೆ. ತ್ಯಾಜ್ಯ ಸಂಸ್ಕರಣೆ ಮಾಡುವಲ್ಲಿ ಸುರಕ್ಷಾ ಕ್ರಮಗಳನ್ನು ಬಿಗಿ ಇಡಲು ಬೇಕಾದ ಕಾನೂನುಗಳು ಬಲಿಷ್ಠವಾಗಿವೆ. ಆದರೆ ಕಾನೂನು ಪಾಲನೆಯಲ್ಲಿ ನಾವು ಸೋಲುತ್ತಿದ್ದೇವೆ. ಇದರಿಂದ ಉಂಟಾಗುವ ಸಮಸ್ಯೆಗಳು ಎಲ್ಲೋ ಹಳ್ಳಕೊಳ್ಳದಿಂದೆದ್ದು ನಮ್ಮ ಬಾಗಿಲನ್ನೂ ಬಡಿಯುತ್ತಿವೆ. ನಾವು ನಿತ್ಯಬಳಸುವ ಅದೆಷ್ಟೊ ಸರಕು ಸಾಮಗ್ರಿಗಳುಆಹಾರ ಧಾನ್ಯಗಳು ಯಾವ ದೇಶದ ತ್ಯಾಜ್ಯಗಳೊ ನಮಗಂತೂ ಗೊತ್ತಾಗುವುದಿಲ್ಲಆದರೆ ಸಕ್ಕರೆ ಕಾಯಿಲೆಹೃದ್ರೋಗರಕ್ತದೊತ್ತಡಕಿಡ್ನಿ ವೈಫಲ್ಯವೇ ಮುಂತಾದ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದೆ. ಸಕ್ಕರೆ ಕಾಯಿಲೆ ಮತ್ತು ಹೃದ್ರೋಗಿಗಳ ಸಂಖ್ಯೆಯಲ್ಲಿ ನಾವು ಈಗಾಗಲೇ ಜಗತ್ತಿನ ಮೊದಲ ಸ್ಥಾನವನ್ನು ಅಲಂಕರಿಸಿದ್ದೇವೆ.

ಜಾಗತೀಕರಣದ ಮೂರನೆಯ ಹಂತದ ಸುಧಾರಣೆಗಳ ಈ ದಿನಗಳಲ್ಲಿ ನಮ್ಮ ಗ್ರಾಮಗಳಲ್ಲಿನ ಕೃಷಿಬದುಕು ಯಾವ ಬಗೆಯ ಪರಿಣಾಮಗಳನ್ನು ಎದುರಿಸುತ್ತಿದೆ.

-ನಮ್ಮ ಅಶಿಕ್ಷಿತಅಸ್ವಸ್ಥಗರೀಬ ಕೃಷಿಕರನ್ನು ಹಠಾತ್ತಾಗಿ ಜರ್ಮನಿಯ ಅಥವಾ ಇಸ್ರೇಲಿನ ಕೃಷಿ ಕಂಪನಿಗಳ ಜತೆ ಕುಸ್ತಿಗೆ ಇಳಿಸುತ್ತಿದ್ದೇವೆ. ನಮ್ಮ ಕೃಷಿಕರು ಜಗತ್ತಿನ ಯಾವುದೇ ದೇಶದ ಕೃಷಿಕರ ಜತೆಗೆ ಪೈಪೋಟಿಗೆ ಇಳಿದುಧಾನ್ಯ ಉತ್ಪಾದಿಸಿಮಾರುಕಟ್ಟೆಯಲ್ಲಿ ಸೆಣಸಿ ತಮ್ಮ ಉತ್ಪಾದನೆಯನ್ನು ಮಾರಬೇಕಾಗಿ ಬಂದಿದೆ. ಸಹಜವಾಗಿ ನಮ್ಮವರ ಸೋಲು ಹೆಜ್ಜೆ ಹೆಜ್ಜೆಗೂ ಕಾಣುತ್ತಿದೆ.  ಕೃಷಿಕರು ಸಾಲು ಸಾಲಾಗಿ ಕೂಲಿಗಳಾಗಿಪರಿಸರ ನಿರಾಶ್ರಿತರಾಗಿ ನಗರಗಳತ್ತ ಸಾಗಿ ಬರುತ್ತಿದ್ದಾರೆ. ಕೃಷಿಕರ ಸಾಲ ಮನ್ನಾ ಬೇರೆ, ’ಸಬಲೀಕರಣ’ ಬೇರೆ. ನಮ್ಮಲ್ಲಿ ಸಬಲೀಕರಣ ಆಗುತ್ತಿಲ್ಲ.
ಕೃಷಿ ಕ್ಷೇತ್ರ ಇಂದು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲಯಲ್ಲಿ ನಮ್ಮ ಕೃಷಿ ವಿಶ್ವ ವಿದ್ಯಾಲಯಗಳು ಯಾವ ಬಗೆಯಲ್ಲಿ ನೆರವಾಗುತ್ತಿವೆ?
-ಕೃಷಿ ವಿಶ್ವವಿದ್ಯಾಲಯಗಳು ಹಿಂದೆಯೂ ಕೃಷಿಕರಿಗೆ ಹೊಸ ದಾರಿ ತೋರಿಸಿದ್ದು ತೀರ ಕಡಿಮೆ. ಅಲ್ಲಿನ ಸಂಶೋಧಕರ ಹಾಗೂ ಉಪನ್ಯಾಸಕರ ಪದೋನ್ನತಿಗೂ ಕೃಷಿಕರ ಕಲ್ಯಾಣಕ್ಕೂ ನಾವು ಸಂಬಂಧ ಕಲ್ಪಿಸಲೇ ಇಲ್ಲ. ಸಂಶೋಧನ ಪ್ರಬಂಧಗಳನ್ನುಡಾಕ್ಟರೇಟ್‌ಗಳನ್ನು ಉತ್ಪಾದಿಸುತ್ತಲೇ ಅವರು ಎತ್ತರೆತ್ತರದ ಸ್ಥಾನಕ್ಕೇರಿ ನಿವೃತ್ತರಾಗುವವರೇ ವಿನಾ ಅಸಲೀ ಕಳಕಳಿಯಿಂದ ಕೃಷಿಕರಿಗೆ ಪೂರಕವಾದ ಕೆಲಸ ಮಾಡಿದವರ ಸಂಖ್ಯೆ ಬೆರಳೆಣಿಕೆಯಷ್ಟೆ. ಕೃಷಿರಂಗದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಸಾರ್ವಜನಿಕರು ಹುಯಿಲೆಬ್ಬಿಸಿದಾಗ ಅವರೂ ದನಿ ಸೇರಿಸಿ ಹೌದುಹೌದುಅತಿಯಾದ ಒಳಸುರಿ ಅಪಾಯಎಂಡೊಸಲ್ಫಾನ್ ಅಪಾಯಕುಲಾಂತರಿ ಅಪಾಯ’ ಎಂದೆಲ್ಲ ಹೇಳುತ್ತಿದ್ದಾರೆ. ಇಷ್ಟು ವರ್ಷ ಕಾರ್ಪೊರೇಟ್ ಸಂಸ್ಥೆಗಳ ಸೇವೆಗೆಂದು ಕೃಷಿ ಪದವೀಧರರನ್ನು ಸೃಷ್ಟಿಸುತ್ತಿದ್ದ ಅವರಿಗೆ ಈಗಂತೂ ನೇರವಾಗಿ  ವಿದೇಶೀ ಕಂಪನಿಗಳ ಜತೆ ಕೈಜೋಡಿಸಲು ಅನುಮತಿ ಸಿಕ್ಕಿದೆ. ಅಸಲೀ ರೈತರ ಹಿತಾಸಕ್ತಿ ಈಗಲೂ ದೂರದ ವಿಷಯವೇ ಆಗಿದೆ.
ಸುಪ್ರೀಂ ಕೋರ್ಟು ಎಂಡೋಸಲ್ಫಾನ್ ನಿಷೇಧಿಸಿದ್ದು ಸರಿಯೇಭಾರತ ಸರ್ಕಾರ ಈ ನಿಷೇಧಕ್ಕೆ ಅರೆಮನಸ್ಸು ಮಾಡುತ್ತಿದೆಯಲ್ಲಾ?
-ಎಂಡೋಸಲ್ಫಾನ್‌ಗೆ ಎಂದೋ ನಿಷೇಧ ಹಾಕಬೇಕಿತ್ತು. ಆದರೆ ನ್ಯಾಯಾಂಗ ತಾನಾಗಿ ಮಧ್ಯ ಪ್ರವೇಶ ಮಾಡುವವರೆಗೆ ನಮ್ಮ  ಕಾರ್ಯಾಂಗಶಾಸನಾಂಗಗಳು ಕೈಕಟ್ಟಿ ಕೂತಿರಬಾರದಿತ್ತು.  ನ್ಯಾಯಾಂಗ ಪ್ರತಿ ಬಾರಿಯೂ ಹೀಗೆ ಸ್ವಯಂಪ್ರೇರಿತವಾಗಿ ಪ್ರಜೆಗಳ ರಕ್ಷಣೆಗೆ ಬರುವುದು ಸಂತಸದ ಸಂಗತಿಯೇ ಹೌದಾದರೂ ಪ್ರಜಾಪ್ರಭುತ್ವದ ಇತರ ಸ್ತಂಭಗಳು ಹೀಗೆ ಕೆಸರಲ್ಲಿ ಹೂತ ಕಂಬಗಳಾಗುವುದು ರಾಷ್ಟ್ರಕ್ಕೆ ಒಳ್ಳೆಯದೇನಲ್ಲ. 
ಭ್ರಷ್ಟಾಚಾರ ಸರ್ವವ್ಯಾಪಿಯಾಗಿರುವ ಹೊತ್ತಿನಲ್ಲಿ ಅಣ್ಣಾ ಹಜಾರೆಯಂತವರ ಜನಲೋಕಪಾಲ ಮಸೂದೆ ಪರ ಚಳವಳಿ’ ಆರಂಭವಾಗಿದೆ. ಇದು ನಮಗೆ ಎಷ್ಟರಮಟ್ಟಿಗೆ ಭರವಸೆಯಾಗಬಲ್ಲದೆಂಬುದು?
-ಏನು ಮಾಡಲೂ ಸಾಧ್ಯವಿಲ್ಲವೆಂಬಂತೆ ಎಲ್ಲರೂ ಹತಾಶರಾಗಿದ್ದಾಗ ಏನೋ ಸಂಚಲನ ಆರಂಭವಾಗಿದೆ. ಆದರೆ ನಮ್ಮದು ಎಲ್ಲ ರಂಗಗಳಲ್ಲೂ ಉಲ್ಟಾ ಪಿರಮಿಡ್’ ತಾನೆರಾಷ್ಟ್ರಮಟ್ಟದ ಈ ಚಳವಳಿ ಗ್ರಾಮ ಲೆಕ್ಕಿಗರಿಗೆ,ಕಂದಾಯ ಇಲಾಖೆಯ ಬಿಲ್ ಕಲೆಕ್ಟರ್‌ಗಳಿಗೆ ಬಿಸಿ ಮುಟ್ಟಿಸುವಷ್ಟು ತಳಮಟ್ಟಕ್ಕೆ ಇಳಿದೀತೆ
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮೂರು ವರ್ಷಗಳನ್ನು ಪೂರೈಸುತ್ತಿದೆ. ಇದರ ಕಾರ್ಯವೈಖರಿ ಕುರಿತು ನೂರಕ್ಕೆ ಎಷ್ಟು ಅಂಕ ಕೊಡುತ್ತೀರಿ?
 ಮೂವತ್ತು.


1 ಕಾಮೆಂಟ್‌:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ನಾಗೇಶ ಹೆಗಡೆಯವರ ನೇರ ನುಡಿ ಮತ್ತೂ ಇಷ್ಟವಾಗುತ್ತದೆ..

ಚಂದದ ಸಂದರ್ಶನಕ್ಕೆ ಧನ್ಯವಾದಗಳು..

ಅಪರೂಪದ ಫೋಟೊಗಳು.. ಇಷ್ಟವಾದವು...