ಡಿಸೆಂಬರ್ 31, 2011

ವೆಲ್ ಡನ್ 2011, ವೆಲ್ ಕಮ್ 2012!!



ಅಬ್ಬ!! ಹೇಗೆ ಮುಗಿದೋಯ್ತಲ್ಲಾ ಒಂದಿಡೀ ವರ್ಷ?? ಹೊಸ ವರ್ಷಕ್ಕೆ ಕಾಲಿಡುತ್ತಿರೋ ಕ್ಷಣ ಸುಮ್ಮನೇ ಒಂದು ಅವಲೋಕನಕ್ಕೆ ಕೂತಿದ್ದೇನೆ.
ವಯುಕ್ತಿಕವಾಗಿ 2011 ನನಗೆ ನೂರಾರು ವಿಶಿಷ್ಟ ಅನುಭವಗಳನ್ನು ನೀಡಿದ ವರ್ಷ. ಸಹಜವಾಗಿ ಒಳ್ಳೆಯ, ಕೆಟ್ಟ, ಖುಷಿ, ನೋವು, ಆಸೆ, ನಿರಾಸೆ, ನಿಟ್ಟುಸಿರು, ಎಲ್ಲಾ ರೀತಿಯ ಅನುಭವಗಳಲ್ಲಿ ಮುಳುಗಿಸಿಬಿಟ್ಟಿತ್ತಲ್ಲ! ಇರಲಿ ಎಲ್ಲರ ಜೀವನದಲ್ಲಾಗಿರುವುದೂ ಇದೇ ತಾನೇ? ರೂಪಗಳಷ್ಟೆ ಬೇರೆ ಬೇರೆಯಾಗಿರಬಹುದು. 

ಹೊರಪ್ರಪಂಚಕ್ಕೆ ಒಂದು ಕಣ್ಣು, ಕಿವಿಇಟ್ಟುಕೊಂಡೇ ಕೂತಿರುವವರಿಗೆ 2011 ನಿಜಕ್ಕೂ ಕೆಲವಾರು ವಿಷಯಗಳಲ್ಲಿ ಉತ್ಸಾಹ, ಕುತೂಹಲಗಳನ್ನು ತುಂಬಿ ಕಚಗುಳಿ ಇಟ್ಟ ವರುಷ. ಇದೇ ವೇಳೆಗೆ ಫುಕುಶಿಮಾದ, ಕೊಲ್ಕೋತಾದ ಆಸ್ಪತ್ರೆ ದುರಂತಗಳು ನಡೆದು ಬಹಳ ನೋವುಂಟು ಮಾಡಿದ್ದೂ ಇದೆ. ಅದೂ ಇಂತಹ ದುರಂತಗಳಿಗೆ ಮನುಷ್ಯನ ಮೂರ್ಖತನವೂ ಕಾರಣವೆಂದಾದಾಗ ಮನಸ್ಸಿಗೆ ಮತ್ತಷ್ಟು ಕಸಿವಿಸಿಯಾಗುತ್ತದೆ. ಅದಕ್ಕಿಂತ ದುರಂತವೆಂದರೆ ಫುಕುಶಿಮಾದಂತಹ ದುರಂತ ನಡೆದ ಮೇಲೂ ಎಚ್ಚೆತ್ತುಕೊಳ್ಳದ ನಮ್ಮ ಸರ್ಕಾರಗಳು ಮತ್ತೆ ಇಲ್ಲಿ ಹೊಸದಾಗಿ ಕುಂಬಕೋಣಂ ಪರಮಾಣು ರಿಯಾಕ್ಟರ್ಗಳನ್ನು ಸ್ಥಾಪಿಸಿದ್ದು. ಅದಕ್ಕೇ ಅಲ್ಲವಾ ಐನ್ಸ್ಟೀನ್ ಒಮ್ಮೆ  "ಎರಡು ವಿಷಯಗಳು ಅನಂತವಾಗಿವೆ. ಒಂದು ಬ್ರಹ್ಮಾಂಡವಾದರೆ ಮತ್ತೊಂದು ಮನುಷ್ಯನ ಮೂರ್ಖತನ. ಆದರೆ ಮೊದಲನೆಯದರ ಬಗ್ಗೆ ನನಗೆ ಅಷ್ಟು ಖಾತ್ರಿಯಿಲ್ಲ" ಎಂದು ಹೇಳಿದ್ದು?

2011ರಲ್ಲಿ ನಿಜಕ್ಕೂ ಪ್ರಪಂಚಕ್ಕೆ ಹೊಸ ಹವೆ ನೀಡಿದ ವಿದ್ಯಮಾನಗಳೆಂದರೆ ಜಾಗತಿಕ ಮಟ್ಟದಲ್ಲಿ ನಡೆದ ನೂರಾರುಪ್ರತಿಭಟನೆಗಳು. ಹೀಗಾಗಿ ಕಳೆದ ೮೦ ವರ್ಷಗಳಿಂದಲೂವರ್ಷದ ವ್ಯಕ್ತಿಯನ್ನು ಗುರುತಿಸಿಕೊಂಡು ಬರುತ್ತಿರುವಟೈಂ ಮ್ಯಾಗಜೀನ್’ 2011ರವರ್ಷದ ವ್ಯಕಿಯನ್ನಾಗಿ ಗುರುತಿಸಿರುವುದು ಯಾರನ್ನು ಗೊತ್ತೇ? ಪ್ರತಿಭಟನೆಕಾರ’ನನ್ನು ( ಪ್ರೊಟೆಸ್ಟರ್)!! ಪ್ರತಿಭಟನೆಕಾರ’  ಅನ್ಯಾಯದ ವಿರುದ್ಧ ಬರೀ ದನಿ ಎತ್ತಿರುವುದು ಮಾತ್ರ ಅಲ್ಲ ಜಗತ್ತಿನ ಬದಲಾವಣೆಗೂ ಮುಂದಾಗಿದ್ದಾನೆ ಎಂದು ಬಣ್ಣಿಸಿದೆ ಪತ್ರಿಕೆ. ಮೊದಲು ಟುನೀಷಿಯಾ, ನಂತರ ಈಜಿಪ್ಟ್, ಸಿರಿಯಾ, ಯೆಮೆನ್, ಬಹ್ರೈನ್, ಗ್ರೀಸ್, ಇಸ್ರೇಲ್, ಫ್ರಾನ್ಸ್, ಭಾರತ, ಬ್ರಿಟನ್, ಅಮೆರಿಕ, ಚೀನಾ, ಹೀಗೆ ಯಾವ ದೇಶದ ಸರ್ವಾಧಿಕಾರಿಗಳನ್ನೂ, ಪ್ರಜಾಪ್ರಭುತ್ವ ಪ್ರಭುತ್ವವಿರೋಧೀಗಳನ್ನೂ ಬಿಟ್ಟಿಲ್ಲ ಆತ. ಎಲ್ಲರನ್ನೂ ಒಂದಿಲ್ಲೊಂದು ತರದಲ್ಲಿ ಅಟ್ಟಾಡಿಸಿದ್ದಾನೆ. ಕೆಲವು ಕಡೆ ವಿಜಯಿಯಾಗಿದ್ದಾನೆ, ಕೆಲ ಕಡೆ ಸೋತಿದ್ದಾನೆ, ಮತ್ತೆ ಕೆಲವು ಕಡೆ ಎಡವಿದ್ದಾನೆ, ಇನ್ನೂ ಕೆಲವು ಕಡೆ ಬಸವಳಿದಿದ್ದಾನೆ



ಈಜಿಪ್ಟ್ ಮುಬಾರಕ್ ವಿರೋಧಿ ಪ್ರತಿಭಟನೆಕಾರ ತಾತ್ಕಾಲಿಕ ಜಯ ಪಡೆದ. ಅಮೆರಿಕದವಾಲ್ಸ್ಟ್ರೀಟ್ ಮುತ್ತಿಗೆ ಪ್ರತಿಭಟನೆಕಾರ ಅಮೆರಿಕದ ರಾಜಕೀಯ ಚರ್ಚೆಗೆ ಹೊಸ ದಿಕ್ಕು ನೀಡಿದ ಮಾತ್ರವಲ್ಲ ಪ್ರಪಂಚದ ಎಲ್ಲಾ ಆರ್ಥಿಕ ಸಮಸ್ಯೆಗಳ ಆಳಕ್ಕಿಳಿದು ಬುಡಕ್ಕೇ ಕೈಹಾಕಿ ಬೇರುಗಳನ್ನೇ ಅಲುಗಾಡಿಸಲು ನೋಡಿದ. ಭಾರತದನಾನೇ ಅಣ್ಣಾಪ್ರತಿಭಟನೆಕಾರ’ ಜಡ್ಡು ಹಿಡಿದು ಕೂತಿದ ಮಧ್ಯಮವರ್ಗದಲ್ಲಿ ಹೊಸ ಸಂಚಲನವನ್ನೇನೋ ತುಂಬಿದ. ಆದರೆ ಕೊನೆ ಕೊನೆಗೆ ಭಯಂಕರ ಎಡವಟ್ಟು ಮಾಡಿಕೊಂಡ. ಇತ್ತೀಚೆಗೆ ಚೀನಾದ ಹಳ್ಳಿಯೊಂದರಲ್ಲಿ ದಂಗೆಯೆದ್ದಿರುವಪ್ರತಿಭಟನೆಕಾರ ಕೂಡ ಅಲ್ಲಿಯ ಸರ್ವಾಧಿಕಾರಕ್ಕೇ ಸೆಡ್ಡುಹೊಡೆದಿದ್ದಾನೆ.

ಇನ್ನು ಕರ್ನಾಟಕದಲ್ಲಿ ಮೂಗುದಾಣ ಹರಿದ ಕೆಲವಾರು ರಾಜಕಾರಣಿಗಳನ್ನುನ್ಯಾಯಾಂಗ ನಿಯಂತ್ರಣಕ್ಕೆ ತೆಗೆದುಕೊಂಡು ಜೈಲಿಗಟ್ಟಿದ್ದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಯಿತು. ರೆಡ್ಡಿಗಳ ಮೈನಿಂಗ್ ಮಷೀನ್ ಸವಂಡು ಕಡಿಮೆ ಆಗಿ ಬಳ್ಳಾರಿಯ ಪೃಕೃತಿ ನಿಟ್ಟುಸಿರು ಬಿಟ್ಟಿತು.   
ಮಾಹಿತಿ ತಂತ್ರಜ್ಞಾನದ ಅವಕಾಶಗಳನ್ನು ಬಳಸಿಕೊಂಡು ಕಳೆದ ವರ್ಷ ವಿಕಿಲೀಕ್ಸ್ ಮೂಲಕ ಸುದ್ದಿ ಮಾಡಿದ ಜೂಲಿಯನ್ ಅಸ್ಸಾಂಜ್ ಸಲ ಭಾರತದಲ್ಲಿ ಹಿಂದೂ ಪತ್ರಿಕೆಯ ‘’ಇಂಡಿಯಾ ಲೀಕ್ಸ್ ಮೂಲಕ ಒಂದಷ್ಟು ಸಂಚಲನ ಸೃಷ್ಟಿಸಿದ್ದ. ಆದರೆ 2011ರ ವ್ಯಕ್ತಿಪ್ರತಿಭಟನೆಕಾರ ಬೆನ್ನಿಗೆ ಬಲವಾಗಿ ಕೆಲಸ ಮಾಡಿದ್ದು ಮಾರ್ಕ್ ಝೂಕರ್ಬರ್ಗ್ ಫೇಸ್ಬುಕ್ ತಾಣ ಎಂಬುದನ್ನೂ ಮರೆಯೋ ಹಾಗಿಲ್ಲ. ‘ಪ್ರತಿಭಟನೆಕಾರನನ್ನವರ್ಲ್ಡ್ ಫೇಮಸ್ ಮಾಡಿದ್ದೇ ಸಾಮಾಜಿಕ ಜಾಲತಾಣಗಳು. ಹಾಗೆ ನೋಡಿದರೆ ಅಮೆರಿಕದ ಅಕ್ಯುಪೈ ಹೋರಾಟವನ್ನು ಮುಖ್ಯವಾಹಿನಿ ಕಾರ್ಪೊರೇಟ್ ಮಾಧ್ಯಮಗಳು ಕಡೆಗಣಿಸಿದ್ದೂ ಅಲ್ಲದೆ ಅದರ ಬಗ್ಗೆ ಅಪಪ್ರಚಾರವನ್ನೂ ಮಾಡಿದ್ದವು. ಆದರೆ ಚಳವಳಿ ನಂತರ ಸುಮಾರು 80 ದೇಶಗಳಲ್ಲಿ ನಡೆದಿದ್ದು ಇದೇ ಸಾಮಾಜಿಕ ತಾಣಗಳ ಮೂಲಕ. ಸಾಮಾಜಿಕ ತಾಣಗಳ ಶಕ್ತಿಯನ್ನು ಬಿಂಬಿಸಿದ ಮತ್ತೊಂದು ಇತ್ತೀಚಿನ ಉದಾಹರಣೆವೈ ದಿಸ್ಕೊಲಾವರಿ ಡಿ ಹಾಡಿನ ಯೂಟ್ಯೂಬ್ ಆವೃತ್ತಿ. ಪ್ರಾಯಶಃ ಪ್ರತಿಯೊಬ್ಬ ಯುವಕನ ಮೊಬೈಲ್ನಲ್ಲೂಕೋಲಾವರಿ ಡಿ  ಹಾಡು ಇದ್ದೇ ಇರುತ್ತದೆ.


2011ನ್ನು ಇಡೀ ಜಗತ್ತು ನೆನಪಿಟ್ಟುಕೊಳ್ಳಲು ಇರುವ ಮತ್ತೊಂದು ಮಹತ್ತರ ಕಾರಣ ಅದು ಇಟಲಿಯ ಜಿನಿವಾದ  ಸರ್ನ್ ವಿಜ್ಞಾನಿಗಳ ಪ್ರಯೋಗ. ಕಳೆದ ಸೆಪ್ಟೆಂಬರ್ನಲ್ಲಿ ಅವರು ನಡೆಸಿದ ಪ್ರಯೋಗದಲ್ಲಿಪರಮಾಣುವಿನಲ್ಲಿರುವ ನ್ಯೂಟ್ರಿನೋ ಕಣಗಳುಬೆಳಕಿನ ವೇಗಕ್ಕಿಂತಲೂ (ಒಂದು ಸೆಕೆಂಡಿಗೆ ,೯೯,೭೯೨ ಕಿಲೋಮೀಟರ್) ಕೊಂಚ ವೇಗವಾಗಿ ಚಲಿಸುತ್ತವೆ ಎನ್ನುವುದು ಕಂಡುಬಂದಿದೆ ಎಂದು ಘೋಷಿಸಿದರಲ್ಲ. ಅಲ್ಲಿಗೆ ವಿಜ್ಞಾನ ಲೋಕದಲ್ಲಿ ಆಟಂ ಬಾಂಬ್ ಬಿದ್ದಂಗಾಯಿತು! ಅಯ್ಯೋ ಕತೆಯೇ? ಇದು ನಿಜವೇ ಆದರೆ ಏನ್ ಕತೆ? ಎಂದು ವಿಜ್ಞಾನಿಗಳೆಲ್ಲಾ ಆವಾಕ್ಕಾಗಿದ್ದಾರೆ. ಒಬ್ಬ ವಿಜ್ಞಾನಿಯಂತೂ ಇದು ದೃಢಪಟ್ಟರೆನಾನು ನನ್ನ ಚಡ್ಡಿಯನ್ನು  ಟೀವಿಗಳೆದುರು ತಿನ್ನುತ್ತೇನೆ’ ಎಂದು ಘೋಷಿಸಿದ್ದಾನೆ. ಅಷ್ಟು ತಲೆಕೆಟ್ಟಿದೆ ಈಗ ವಿಜ್ಞಾನಿಗಳಿಗೆ. ಇದು ನಿಜವೇ ಆದರೆ ಕಳೆದ ನೂರು ವರ್ಷಗಳಿಂದ ನಂಬಿಕೊಂಡು ಬಂದ ಹಲವಾರು ವೈಜ್ಞಾನಿಕ ನಂಬಿಕೆಗಳು ತಲೆಕಳಗಾಗಿ ಬಿಡುತ್ತವಲ್ಲ ಹಾಗಾಗಿಯೇ ಆಘಾತ. ಐನ್ಸ್ಟೀನ್ ಸಾಪೇಕ್ಷತಾ ಸಿದ್ಧಾಂತಗಳು ವಿಶ್ವದಲ್ಲಿಬೆಳಕಿನ ವೇಗವನ್ನು ಯಾವುದೂ ಮೀರುವುದು ಸಾಧ್ಯವಿಲ್ಲ ಎಂದು ಘಂಟಾಘೋಷವಾಗಿ ಹೇಳಿವೆ. ಈಗ ಇಲ್ಲೊಂದುಅನಾಮಲಿ (ಅನಿರೀಕ್ಷಿತ ಅಪವಾದ) ಎದುರಾಗಿದೆ. ಇದು ನಿಜವಾದರೆ ಐನ್ಸ್ಟೀನ್ ಹೇಗೆ ನ್ಯೂಟನ್ ಸಿದ್ಧಾಂತಗಳು ತಪ್ಪು ಎಂದು ಎತ್ತಿ ತೋರಿಸಿ ಅವುಗಳನ್ನು ಸರಿಪಡಿಸಿದ್ದರೋ ಹಾಗೇಯೇ ಮತ್ಯಾರಾದರೂಐನ್ಸ್ಟೀನ್ ಕೂಡಾ ಹೀಗೆ ಹೀಗೆ ತಪ್ಪಿದ್ದರು ಎಂದು ಹೇಳಲು ಬರಬೇಕಾಗುತ್ತದೆ. ವ್ಯಕ್ತಿ ಯಾರು? ಎಲ್ಲಕ್ಕಿಂತ ನ್ಯೂಟ್ರಿನೋ ಕಣಗಳು ಬೆಳಕಿನ ವೇಗಕ್ಕಿಂತ ಸ್ಪೀಡಾಗಿದ್ದುದೇ ನಿಜವಾದರೆ ನಮ್ಮ ಅನೇಕ ತಾತ್ವಿಕ ತಿಳಿವಳಿಕೆಗಳು ಉಲ್ಟಾಪಲ್ಟಾ ಆಗುತ್ತವೆ. ಕಾರ್ಯ-ಕಾರಣ ಸಂಬಂಧವನ್ನು ಬೇರೆ ತರಾನೇ ನೋಡುವ ಸ್ಥತಿ ಬರುತ್ತದೆ. ಪ್ರತಿ ಪರಿಣಾಮಕ್ಕೂ ಮೊದಲು ಕಾರಣವಿರುತ್ತದೆ ಎಂಬುದೇ ಸುಳ್ಳಾಗಿ ಬಿಡುತ್ತದಲ್ಲ. ಏನು ಮಾಡೋದು? ಹಾಗೆಯೇ ಇದು ನಿಜವಾದರೆ ಎಚ್.ಜಿ.ವೆಲ್ಸ್ ಕಾಲ್ಪನಿಕಕಾಲ ಯಂತ್ರ ಅರ್ಥಾತ್ ಟೈಂ ಮಷೀನ್ ಮೇಲೆ ಕುಳಿತು ತ್ರಿಕಾಲ ಯಾನ (ಟೈಂ ಟ್ರಾವೆಲ್) ಮಾಡುವುದು ತಾತ್ವಿಕವಾಗಿ ಸಾಧ್ಯ ಎಂದಾಗಿಬಿಡುತ್ತದೆ!.

ನಾನು ಏಳನೆಯ ತರಗತಿಯಲ್ಲಿ ಟೈಂ ಮಷೀನ್ ಕಾದಂಬರಿಯ ಕನ್ನಡಾನುವಾದ ಓದುವಾಗ ಆಗಿದ್ದ ಥ್ರಿಲ್ಲಿಂಗ್ ಅನುಭವ ಇನ್ನೂ ಮರೆತಿಲ್ಲ
ಬಹುಶಃ 2012 ವಿಜ್ಞಾನ ಲೋಕದಲ್ಲಿ ನಡೆದಿರುವ ಹೊಸ ಬೆಳವಣಿಗೆ  ಕುರಿತು ಮತ್ತಷ್ಟು ಹೊಳಹುಗಳಿಗೆ ಕಾರಣವಾಗಿ ನಮ್ಮೆಲ್ಲರನ್ನೂ, ಜಗತ್ತನ್ನೂ ರಚಿಸಿರುವ ಕಣ್ಣಿಗೆ ಕಾಣದ ಪ್ರತಿಕಣ ಬಗೆಗೆ, ಮತ್ತು ಕ್ಷಣ ಕ್ಷಣಕ್ಕೂ ಕೋಟ್ಯಾಂತರ ಮೈಲುಗಳಷ್ಟು ವಿಸ್ತಾರವಾಗುತ್ತಲೇ ನಡೆದಿರುವ ಬ್ರಹ್ಮಾಂಡದ ಬಗೆಗೆ ನಮ್ಮ ಅರಿವನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂದು ಆಶಿಸೋಣ.
ಅದೇ ಹೊತ್ತಿಗೆ ಮೊನ್ನೆ ನಾಗೇಶ್ ಹೆಗಡೆಯವರು ವಿಜ್ಞಾನ ವಿಶೇಷ ಅಂಕಣದಲ್ಲಿ ಗಮನಕ್ಕೆ ತಂದಬಯೋ ವೈರಸ್ ಕೃತಕ ಸೃಷ್ಟಿ ಕೂಡಾ ಒಂದು ಕಡೆ ಆತಂಕವನ್ನೇ  ಸೃಷ್ಟಿಸಿದೆ.
ಒಟ್ಟಲ್ಲಿ 2011 ಸಾಮಾಜಿಕವಾಗಿಯೂ, ವೈಜ್ಞಾನಿಕವಾಗಿಯೂದಂಗೆಗಳನ್ನೇ ಸೃಷ್ಟಿಸಿದೆ

ಜೈಹೋ 2011!!

2011ರಲ್ಲಿ ಏನೇನು ದಂಗೆಗಳು ಆರಂಭವಾಗಿಯೋ ಅವೆಲ್ಲವೂ 2012ರಲ್ಲಿ ಒಂದಲ್ಲಾ ಒಂದು ರೀತಿ ಮುಂದುವರೆಯಲಿವೆ. ಜಗತ್ತನ್ನು ಬೇರೆಯದೇ ದಿಕ್ಕಿಗೆ ಕೊಂಡೊಯ್ಯುವ ಶಕ್ತಿ ಅವಕ್ಕಿದೆ ಎನ್ನುವುದಂತೂ ಸುಳ್ಳಲ್ಲ.
ಈಗ 2012 ಪ್ರಳಯಾಂತಕರ ವರ್ಷ ಬೇರೆ. 2012 ಡಿಸೆಂಬರ್ 21ಕ್ಕೆ ಪ್ರಳಯ ಆಗುತ್ತದೆ ಅಂತ ಬೊಂಬಡಾ ಬಜಾಯಿಸಿದ್ದಾರಲ್ಲಾ. ಅವರನ್ನೂ ಒಂದು ಕೈ ನೋಡಿಕೊಳ್ಳಬೇಕು. ಡಿಸೆಂಬರ್ 22ರ ನಂತರವೂ ಬದುಕಿಯೇ ಇರುತ್ತೇನೆ ಎಂಬ ವಿಶ್ವಾಸ ನನಗಂತೂ ಇದೆ. ಹಾಗಾಗಿ ಯಾರೆಲ್ಲಾ ಪ್ರಳಯ ಆಗಿಯೇ ತೀರುತ್ತದೆ ಎಂದು ಗುಲ್ಲೆಬ್ಬಿಸಿದರೋ ಅಂತವರನ್ನು ಅರಬ್ಬಿ ಸಮುದ್ರಕ್ಕೆ ಎಸೆಯುವ ಒಂದು ಯೋಜನೆ ಎಲ್ಲಾದರೂ ಆರಂಭವಾದರೆ ಖುಷಿಯಾಗಿ ಅದರಲ್ಲಿ ಸೇರಿಕೊಳ್ಳುತ್ತೇನೆ.

ಮಧ್ಯೆ ಚಾರಿತ್ರಿಕ ಟೈಟಾನಿಕ್ ಹಡಗು ಮುಳುಗಿ 2012ಕ್ಕೆ ನೂರು ವರ್ಷವಾಗುತ್ತದೆ. ಇದೇ ನೆನಪಿಗೆ ಟೈಟಾನಿಕ್ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಸಿನಿಮಾವನ್ನೇ ಥ್ರೀ- ಡಿ ಆಗಿ ಮಾರ್ಪಡಿಸಿ ಏಪ್ರಿಲ್ಗೆ ಬಿಡುಗಡೆ ಮಾಡ್ತಾ ಇದ್ದಾರೆಡಿಕಾಪ್ರಿಯೋ ಮತ್ತು ಕೇಟ್ ವಿನ್ಸ್ಲೆಟ್ ಅದ್ಭುತ ಅಭಿನಯ ಹಾಗೂ ಟೈಟಾನಿಕ್ ದುರಂತವನ್ನು ಈಗ ತ್ರೀ- ಡಿಯಲ್ಲಿ ನೋಡುವ ಸದವಕಾಶ
ಹೊಸವರ್ಷ 2012ನ್ನು ಹೃತ್ಪೂರ್ವಕವಾಗಿ, ಉತ್ಸಾಹದಿಂದ ಬರಮಾಡಿಕೊಳ್ಳೋಣ. ನಾನಂತೂ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೀನಿ. ವಯುಕ್ತಿಕವಾಗಿಯೂ ಬಹಳಷ್ಟು ಸೊಕಾಲ್ಡ್ ಸಾಧನೆ ಸಲ ಮಾಡಬೇಕಿದೆ. ಜೊತೆಗೆ 2011 ನನಗೆ ನನ್ನ ಜೀವನದ ಹಲವಾರು ಒಳ್ಳೆಯ ಗೆಳೆಯ, ಗೆಳತಿಯರನ್ನು ನೀಡಿದ ವರ್ಷ. 2012ರಲ್ಲಿ ಸ್ನೇಹ ಸಂಬಂಧಮತ್ತಷ್ಟು ಗಟ್ಟಿಗೊಳಿಸುತ್ತಲೇ ಮತ್ತಷ್ಟು ಸಮಾನ ಮನಸ್ಕ ಒಡನಾಡಿಗಳನ್ನು ಜೊತೆಮಾಡಿಕೊಳ್ಳುವ ಇರಾದೆ ಇದೆ.

ಎಲ್ಲರಿಗೂ ಹೊಸವರ್ಷದ ಶುಭ ಹಾರೈಕೆಗಳುಚಿಯರ್ಸ್!!

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.