ಪೋಸ್ಟ್‌ಗಳು

ನವೆಂಬರ್ 2, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎತ್ತ ಸಾಗಿದೆ ಮಾಹಿತಿ ಹಕ್ಕು

ಇಮೇಜ್
ಎತ್ತ ಸಾಗಿದೆ ಮಾಹಿತಿ ಹಕ್ಕು ಕರೇಗೌಡ ಎಂಬ ಆ ವಿಧ್ಯಾರ್ಥಿ ತನ್ನ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ತಾನು ಹುಟ್ಟಿದ ವರ್ಷ ತಪ್ಪಾಗಿ ದಾಖಲಾಗಿತ್ತೆಂಬ ಕಾರಣಕ್ಕೆ ಶಿಕ್ಷಣ ಇಲಾಖೆಯ ಕಛೇರಿಗೆ ಒಂದು ಅರ್ಜಿ ಬರೆದು ತನ್ನ ಮೂಲ ಅಂಕಪಟ್ಟಿಯನ್ನು ಕಳುಹಿಸಿಕೊಟ್ಟಿದ್ದ. ಯಥಾಪ್ರಕಾರ ಆ ಇಲಾಖೆಯ ಅಧಿಕಾರಿಗಳಿಂದ ಅದನ್ನು ಸರಿತಿದ್ದಿಕೊಡುವುದು ಹೋಗಲಿ, ಕನಿಷ್ಠ ಒಂದು ಪ್ರತಿಕ್ರಿಯೆಯೂ ಬರಲಿಲ್ಲ. ಆತಂಕಕ್ಕೊಳಗಾದ ಆ ಯುವಕ ಅನೇಕ ಬಾರಿ ಪತ್ರಗಳನ್ನೂ ಬರೆದ. ಆಗಲೂ ಉತ್ತರ ಬರಲಿಲ್ಲ. ಹೀಗೇ ನಾಲ್ಕುವರ್ಷಗಳು ಕಳೆದು ಹೋದವು. ತನ್ನ ಅಂಕಪಟ್ಟಿ ಇನ್ನು ತನಗೆ ಸಿಗುವುದೇ ಇಲ್ಲವೇನೋ ಎಂಬ ತೊಳಲಾಟಕ್ಕೆ ಬಿದ್ದ ಕರೇಗೌಡ ಕೊನೆಗೆ ಮಾಹಿತಿಹಕ್ಕು ಕಾರ್ಯಕರ್ತರೊಬ್ಬರ ಸಹಾಯ ಪಡೆದ. ತನ್ನ ಅಂಕಪಟ್ಟಿಯ ಕುರಿತು ಮಾಹಿತಿ ನೀಡಲು ಮಾಹಿತಿ ಹಕ್ಕು ಕಾಯ್ದೆ ಅಡಿ ಒಂದು ಅರ್ಜಿ  ಸಲ್ಲಿಸಿದ. ಅಷ್ಟೇ ನೋಡಿ. ಆ ಅರ್ಜಿ ತಲುಪಿದ ಮೂರೇ ದಿನಗಳಲ್ಲಿ ಕರೇಗೌಡನ ಅಂಕಪಟ್ಟಿ ತಿದ್ದುಪಡಿಯೂ ಆಗಿ ಅವನ ಮನೆಯ ವಿಳಾಸಕ್ಕೇ ತಲುಪಿತ್ತು!. ಇದು ನಡೆದಿದ್ದು ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರು ತಾಲ್ಲೂಕಿನ ಮೊಗಾವಿಯಲ್ಲಿ. ಈ ಒಂದು ಘಟನೆ ಮಾಹಿತಿ ಹಕ್ಕು ಕಾಯ್ದೆಯ ಪವರ್ ಏನು ಎಂದು ತೋರಿಸಿಕೊಡುತ್ತದೆ. ಮಾಹಿತಿ ಹಕ್ಕು ಕಾಯ್ದೆಯು ಈ ದೇಶದಲ್ಲಿ ಜಾರಿಗೆ ಬಂದು ಇದೇ ಅಕ್ಟೋಬರ್ 12 ಕ್ಕೆ ಐದನೇ ವರ್ಷಕ್ಕೆ ಕಲಿಡಲಿದೆ. ಇಂದು ಈ ಕಾಯ್ದೆ ಒಂದು ಕಾನೂನು ಮಾತ್ರ...