ಕನ್ನಡಕ್ಕೆ ಬಂದ ಮತ್ತಷ್ಟು ಫ್ರೆಂಚ್ ಕತೆಗಳು
ಕೃತಿ: ಕಡಲಾಚೆಯ ಚೆಲುವೆ: ಫ್ರೆಂಚ್ ಕಥಾ ಸಾಹಿತ್ಯ. ಅನುವಾದಕರು: ಕೇಶವ ಮಳಗಿ ಪ್ರಕಾಶಕರು: ಕಥನ ಪ್ರಕಾಶನ ಪುಟಗಳು: ೨೦೮ ಬೆಲೆ’ ೧೨೦ ರೂಪಾಯಿ 'ಕಥನ ಪ್ರಕಾಶನ’ವು ಪ್ರಕಟಿಸಿರುವ, ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೇಶವ ಮಳಗಿಯವರ ’ಕಡಲಾಚೆಯ ಚೆಲು’ ಮತ್ತು ’ಸಂಕಥನ’ ಎಂಬ ಎರಡು ಕೃತಿಗಳು ಅವುಗಳ ವಿಷಯ ವಸ್ತುವಿನ ಕಾರಣಕ್ಕೆ ಅತ್ಯಂತ ಪ್ರಾಮುಖ್ಯತೆ ಇರುವಂತವು. ಎರಡೂ ಕೃತಿಗಳು ಫ್ರೆಂಚ್ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳನ್ನು ಕನ್ನಡಕ್ಕೆ ಪರಿಚಯಿಸುವಲ್ಲಿ ಮಹತ್ವದ ಕೊಡುಗೆ ನೀಡಿವೆ. ಇದರಲ್ಲಿ ’ಸಂಕಥನ’ವು ಫ್ರೆಂಚ್ ನೆಲದ ವೈಚಾರಿಕ ಧಾರೆಯನ್ನು, ಸಿದ್ದಾಂತಿಗಳನ್ನು ಅವರ ತಾತ್ವಿಕ ಬರೆಹಗಳ ಸಮೇತ ಪರಿಚಯಿಸಿಕೊಟ್ಟರೆ ’ಕಡಲಾಚೆಯ ಚೆಲುವೆ’ ಕೃತಿಯು ಫ್ರೆಂಚ್ ಕಥೆಗಳನ್ನು ಅವುಗಳೆಲ್ಲಾ ಸತ್ವದೊಂದಿಗೆ ಕನ್ನಡದ ಓದುಗರಿಗೆ ದಾಟಿಸುತ್ತದೆ. ಫ್ರೆಂಚ್ ಸಾಹಿತ್ಯಲೋಕವನ್ನು ಕನ್ನಡ ಓದುಗರಿಗೆ ತೆರೆದಿಡುವ ಪ್ರಯತ್ನವನ್ನು ಈ ಹಿಂದೆ ಅನೇಕರು ಮಾಡುತ್ತಲೇ ಬಂದಿದ್ದಾರೆ. ಡಾ. ಡಿ.ಎ.ಶಂಕರ್ ಅನುವಾದಿಸಿದ್ದ ಅಲ್ಬರ್ಟ್ ಕಮುವಿನ ’ಅನ್ಯ’ ಲಂಕೇಶರ ಅನೇಕ ಬರಹಗಳು ಮತ್ತು ಎಸ್. ದಿವಾಕರ್, ಬಸವರಾಜ ರಾಯ್ಕರ್, ಕೆ.ವಿ.ತಿರುಮಲೇಶ್, ಚಂದ್ರಶೇಖರ್ ಆಲೂರು, ಮುಂತಾದವರು ಅನುವಾದಿಸಿರುವ ಹಲವಾರು ಬಿಡಿಬಿಡಿ ಕಥೆಗಳು ಕನ್ನಡಿಗರಿಗೆ ಫ್ರೆಂಚ್ ಮಣ್ಣಿನ ಸೊಗಡನ್ನು ಅನುಭವಿಸುವ ಅವಕಾಶ ಒದಗಿಸಿವೆ. ಆದರೆ ಫ್ರೆಂಚ್ ಕಥಾ ಸಾಹಿತ್ಯವನ್ನು ಹಾಗೂ ವಿಚಾ...