ಇದು ಯಡಿಯೂರಪ್ಪನವರ ದುರಂತ ಹಾಗೂ ನಮ್ಮೆಲ್ಲರ ದುರಂತವೂ ಸಹ: ಪ್ರೊ.ಎನ್. ಮನು ಚಕ್ರವರ್ತಿ
ಸಿನಿಮಾ ಮತ್ತು ಸಾಹಿತ್ಯಕ್ಕಿರುವ ಸಂಬಂಧವನ್ನು ಹೇಗೆ ನೋಡುತ್ತೀರಿ ? ಮೂಲಭೂತವಾಗಿ ಸಿನಿಮಾ , ಸಾಹಿತ್ಯದ ನಡುವೆ ಒಂದು ಸೃಜನಶೀಲ ಸಂಬಂಧ ಇದ್ದೇ ಇರುತ್ತದೆ. ಸಾಹಿತ್ಯ ಕೃತಿ ಒಂದು ಸಿನಿಮಾ ಆದಾಗಲೇ ಸಂಬಂಧ ಉಂಟಾಗುತ್ತದೆ ಎಂದು ನಾವು ನೋಡಬೇಕಾಗಿಲ್ಲ. ಅದೊಂದು ರೀತಿ ನೇರ ಸಂಬಂಧವಾದರೂ ಎರಡೂ ಕೂಡ ಪಠ್ಯಕೃತಿಗಳೇ ಎಂದು ನೋಡಬೇಕು. ಎರಡರಲ್ಲೂ ಒಂದೇ ರೀತಿಯಲ್ಲಿ ಪ್ರತಿಮೆಗಳಿರುತ್ತವೆ. ಸಿನಿಮಾವನ್ನು ಕೂಡ ಓದಬೇಕು ಎನ್ನುತ್ತೇನೆ. ಆದರೆ , ಸಾಮಾನ್ಯ ಜನರಿಗೆ ’ ಓದುವ ’ ಪರಿಕಲ್ಪನೆ ಬರುವುದು ಹೇಗೆ ? ಒಂದು ಪಠ್ಯವನ್ನು ಮೊದಲ ಬಾರಿ ಓದುವಾಗ ಎಲ್ಲರೂ ಸಮಾನ್ಯ ಓದುಗರೇ. ಅಸಾಮಾನ್ಯ ಓದುಗರು ಎಂಬುದು ಇರುವುದಿಲ್ಲ. ಈ ಅರ್ಥದಲ್ಲಿ ಸಿನಿಮಾ ನೋಡುಗರೂ ಅದನ್ನು ಓದುತ್ತಿರುತ್ತಾರೆ. ಸಿನಿಮಾ ನೋಡುತ್ತಾ , ಸಿನಿಮಾ ಮೀಮಾಂಸೆ ಓದುತ್ತಾ , ಫಿಲಂ ಥಿಯರಿ ಓದುತ್ತಿರುವವರಿಗೆ ಕೆಲವೊಮ್ಮೆ ಕೆಲ ಸಂಗತಿಗಳು ಅರ್ಥವೇ ಆಗಿರುವುದಿಲ್ಲ. ಅನೇಕ ಶಿಬಿರಗಳಲ್ಲಿ ನನಗೆ ಅನುಭವವಾಗಿರುವುದೆಂದರೆ ಹಳ್ಳಿಯ ಜನರು , ಕಾರ್ಪೋರೇಷನ್ ಕೆಲಸ ಮಾಡುವವಂತವರೇ ಎಷ್ಟೋ ಸಲ ಬೌದ್ಧಿಕ ಎನ್ನುವ ಸಂಪ್ರದಾಯದಿಂದ ಬಂದವರಿಗಿಂತಲೂ ಚೆನ್ನಾಗಿ ಸಿನಿಮಾವನ್ನು ಅನಾವರಣ ಮಾಡಿಬಿಡುತ್ತಾರೆ. ಕೆ.ವಿ. ಸುಬ್ಬಣ್ಣ ಅವರಿದ್ದಾಗ ಹೆಗ್ಗೋಡಿನಲ್ಲಿ ಬರ್ಗ್‌ಮನ್‌ರ ’ ಸೆವೆನ್ ಸೀಲ್ ’ ತೋರಿಸಿದ್ದರು. ಹಳ್ಳಿಯವರು ಅಂದರೆ ನಾವು ಯಾರಿಗೆ ಇಲ...