ನೆನೆಪುಗಳ ’ಮಾಯಾಚಾಪೆ’ಯಲ್ಲಿ ಕೂರಿಸುವ ಡೋರ್ ನಂಬರ್ 142
ನೆನಪುಗಳು, ಅದರಲ್ಲೂ ಬಾಲ್ಯದ ನೆನಪುಗಳು ಪ್ರತಿಯೊಬ್ಬರಿಗೂ ಮುದನೀಡುವಂತವವು. ದೊಡ್ಡವರಾಗುತ್ತಾ ಹೋದಂತೆಲ್ಲಾ ಆ ನೆನಪುಗಳು ನಮಗೆ ಹೆಚ್ಚು ಕಾಡುತ್ತಾ ಹೋಗುವುತ್ತವೆ. ಹೀಗೆ ದಿನನಿತ್ಯದ ಬದುಕಿನಲ್ಲಿ ಇಣುಕುವ, ಕಾಡುವ ನೆನಪುಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುತ್ತದೆ ಅಂಕಿತ ಪ್ರಕಾಶನ ಪ್ರಕಟಿಸಿರುವ ಜಿ.ಎನ್.ಮೋಹನ್ ಅವರ ಡೋರ್ ನಂಬರ್ ೧೪೨. ’ಡೋರ್ ನಂಬರ್ ೧೪೨’ರ ಒಳಕ್ಕೆ ಪ್ರವೇಶಿಸಿದಂತೆ, ಲೇಖಕರು ತಮ್ಮ ಬದುಕಿನ ನೆನಪುಗಳನನ್ನು ಒಂದಿಒಂದಾಗಿ ಹೇಳುತ್ತಾ ಹೋದಂತೆ ನಮ ಒಂದೊಂದಾಗಿ ನಮ್ಮವೇ ನೆನಪುಗಳು ಬಿಚ್ಚಿಕೊಳ್ಳುತ್ತವೆ. ವ್ಯಕ್ತಿ, ಸನ್ನಿವೇಶ ಬೇರೆ. ಅನುಭವ ಒಂದೇ ಎನ್ನಿಸುವಂತೆ. ಈ ಕೃತಿಯ ವೈಶಿಷ್ಟ್ಯವೆಂದರೆ ಲೇಖಕರು ಅವರು ಬಾಲ್ಯದ ನೆನಪುಗಳನ್ನು ಬಿಚ್ಚುವಾಗ ಬಾಲ್ಯದಲ್ಲೇ ಮುಳುಗಿ ಬರೆಯುವುದಿಲ್ಲ. ಬದಲಾಗಿ ಅವರ ಒಂದೊಂದು ನೆನಪುಗಳ ಹಿಂದೆಯೂ ವರ್ತಮಾನದ ಯಾವುದೋ ಒಂದು ಘಟನೆಯಿದೆ. ಗೆಳೆಯನೊಬ್ಬನ ಮಾತು ನೆನಪಿಸಿದ ನಂಜನಗೂಡು ಟೂತ್ ಪೌಡರ್, ಚೀತಾಫೈಟ್ ಬೆಂಕಿಪೊಟ್ಟಣ, ಎಂಜಿ ರೋಡಿನ ಬುಕ್ ಸ್ಟಾಲ್‌ನಲ್ಲಿರೋ ಪುಸ್ತಕ ನೆನಪಿಸಿದ ಡಾಕ್ಟರ್ ಆಂಟಿಯ ಡೈಲಾಗ್, ಟೈಮ್ಸ್ ಆಫ್ ಇಂಡಿಯಾದ ಶಾರೂಕ್ ಜಾಹೀರಾತು ನೆನಪಿಸಿದ ಅಂಟವಾಳ ಸಿಪ್ಪೆ.... ಹೀಗೆ ಪ್ರತಿಯೊಂದು ನೆನಪೂ ಇಂದಿನ ಯಾವುದೋ ಸಂದರ್ಭದ ಹಿನ್ನೆಲೆಯಲ್ಲಿ ಮೂಡುತ್ತಾ ಹೋಗುವುದು ವಿಶಿಷ್ಟವಾಗಿದೆ. ಎಲ್ಲರಿಗೂ ನೆನಪುಗಳಿರುತ್ತವಾದರೂ ಮೋಹನ್‌ರ ರೀತಿ ದಟ್ಟವಾಗಿ ದಾಖಲಿಸುವು...