ಪೋಸ್ಟ್‌ಗಳು

ಮೇ 28, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಫೇಸ್ ಥ್ರೀ ಫೇಸ್!

ಇಮೇಜ್
ಇದು ಮೂರು ವ್ಯಕ್ತಿಗಳ ಆರು ಮುಖಗಳ ಕತೆ. ಮೊನ್ನೆಯಷ್ಟೇ  ಶಾಂತಿನಗರದ 'ಗ್ಯಾಲರಿ ಸುಮುಖ’ದಲ್ಲಿ  ಮುಕ್ತಾಯವಾದ  ’ಫೇಸ್ ಟೂ ಫೇಸ್’ (Face 2 Face)  ಛಾಯಾಚಿತ್ರ ಹಾಗೂ ವಿಡಿಯೋ ಪ್ರದರ್ಶನದ ವೇಳೆ ಕಂಡ ಮುಖಗಳಿವು. ಫೇಸ್ ವನ್: ಆ ವ್ಯಕ್ತಿ ಹೆಸರು ಬಗಡೆ ಹಳ್ಳಿ ಬಸವರಾಜು. ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಗಾಂಧೀಜಿ. ಅದೇ ಮಹಾತ್ಮ ಗಾಂಧೀಜೀನೇ!. ಗಾಂಧೀಜಿಯವರ ತತ್ವಗಳಿಂದ ಪ್ರೇರಿತನಾಗಿದ್ದ ಈ ಯುವಕ ಅವನ್ನು ಜನಮಾನಸದಲ್ಲಿ ಮತ್ತಷ್ಟು ದಟ್ಟಗೊಳಿಸಲು ಆಯ್ಕೆ ಮಾಡಿಕೊಂಡ ದಾರಿ ವಿಶಿಷ್ಟವಾದದ್ದು. ಅದೆಂದರೆ ಗಾಂಧೀಜಿಯವರನ್ನು ಹೋಲುವಂತೆಯೇ ಮೈತುಂಬಾ ಬೆಳ್ಳಿಯ ಬಣ್ಣ ಬಳಿದುಕೊಂಡು ಗಾಂಧೀಜಿಯವರ ಜೀವಂತ ವಿಗ್ರಹದಂತೆ  ಕೋಲೊಂದನ್ನು ಹಿಡಿದು ಜನರ ಮಂದೆ ಓಡಾಡುವುದು. ಈ ವೇಶದಲ್ಲಿ ಬಸವರಾಜ್ ನಾನಾ ಸಾರ್ವಜನಿಕ ಸಮಾರಂಭಗಳಲ್ಲಿ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ’ಗಾಂಧೀ’ ಬಸವರಾಜ್‌ರನ್ನು ಕಂಡು ಜನರು ಗೌರವಿಸಿದ್ದಿದೆ, ಕೈ ಮುಗಿದಿದ್ದಿದೆ, ಅಪಹಾಸ್ಯ ಮಾಡಿ ಚುಡಾಯಿಸಿದ್ದಿದೆ, ವಿಚಿತ್ರವಾಗೊ ನೋಟ ಬೀರಿದ್ದೂ ಇದೆ. ಆದರೆ ಈ ಎಲ್ಲಾ ಪ್ರತಿಕ್ರಿಯೆಗಳಿಗೂ ಬಸವರಾಜ್‌ದು ಒಂದೇ ಉತ್ತರ. ಅದೇ ಗಾಂಧೀ ಸ್ಮೈಲು ಫೇಸ್ ಟೂ: ಈ ವ್ಯಕ್ತಿಯ ಹೆಸರು ವಿದ್ಯಾಸಾಗರ. ತಮ್ಮ ಯೌವನದಿಂದಲೂ ಇವರಿಗೆ ತಮಿಳು ನಟ ಎಂ.ಜಿ.ಆರ್ ಅವರನ್ನು ಕಂಡರೆ ವಿಚಿತ್ರ ಅಭಿಮಾನ. ತಮ್ಮ ಶಾಲಾ ಕಾಲೇಜು ದಿನಗಳಿಂದಲೇ ಎಂ.ಜಿ.ಆರ್‌ರನ್ನ...

ಡಬ್ಬಿಂಗ್ : ‘ಗುಮ್ಮ’ನೂ ಅಲ್ಲ ‘ಅಮ್ಮ’ನೂ ಅಲ್ಲ

ಇಮೇಜ್
( ದ ಸಂಡೆ ಇಂಡಿಯನ್ ಪಾಕ್ಷಿಕ ದಲ್ಲಿ ಪ್ರಕಟವಾದ ಮುಖಪುಟ ಲೇಖನ) ಡಬ್ಬಿಂಗ್ ‘ಗುಮ್ಮ’ ಮತ್ತೆ ಎದುರಾಗಿದೆ. ಡಬ್ಬಿಂಗ್ ಪರವಾಗಿ ವಾದಗಳು, ಮಾತುಗಳು ಹಾಗೂ ‘ಡಬ್ಬಿಂಗ್ ಗುಮ್ಮನ’ ವಿರುದ್ಧವಾದ ವಾದಗಳು ಮತ್ತು ಬೆದರಿಕೆಗಳು ಟೀವಿ, ಪತ್ರಿಕೆ ಮತ್ತು ಸಾಮಾಜಿಕ ತಾಣಗಳಲ್ಲಿ ರಾರಾಜಿಸುತ್ತಿವೆ. ಅದರಲ್ಲೂ ಅಮಿರ್ ಖಾನ್ ಅವರ ಸಾಮಾಜಿಕ ಕಳಕಳಿಯ ‘ಸತ್ಯ ಮೇವ ಜಯತೇ’ ಕಾರ್ಯಕ್ರಮದ ಡಬ್ ಮಾಡಲಾದ ಕನ್ನಡ ಅವತರಣಿಕೆಯನ್ನು  ಸುವರ್ಣ ವಾಹಿನಿಯವರು ಪ್ರಸಾರ ಮಾಡದಂತೆ ನಿರ್ಬಂಧಿಸುವ ಪ್ರಯತ್ನಗಳು ಆರಂಭವಾಗುತ್ತಿದ್ದಂತೆ ಈ ಡಬ್ಬಿಂಗ್ ಬೇಕು-ಬೇಡ ಚರ್ಚೆಗಳು ಜೋರಾಗಿ ನಡೆದಿವೆ. ಇಡೀ ಚರ್ಚೆಯಲ್ಲಿ ಒಂದೋ ಡಬ್ಬಿಂಗ್ ಎಂದರೆ ಕನ್ನಡ ಚಿತ್ರರಂಗವನ್ನು, ಕನ್ನಡ ಭಾಷೆ - ಸಂಸ್ಕೃತಿಗಳನ್ನು ಕ್ಷಣಾರ್ಧದಲ್ಲಿ ತಿಂದು ತೇಗಿ ನೀರು ಕುಡಿದು ಬಿಡುವ ಭಯಂಕರ ಗುಮ್ಮನಂತೆ ತೋರಿಸಲಾಗುತ್ತಿದೆ ಇಲ್ಲವೇ ‘ಗುಮ್ಮನಿಗೆ ಬೆದರಿ ಅಮ್ಮನಿಗೂ ಬಾಗಿಲು ತೆರೆಯದಂತಾಗಿದೆ’ ಎಂದು ಹೇಳುತ್ತಾ ಕನ್ನಡವನ್ನು ಉಳಿಸಿ ಬೆಳೆಸಲು ಇರುವ ಏಕೈಕ ‘ಅಮ್ಮ’ ಈ ಡಬ್ಬಿಂಗ್‌ನ್ನು ಎಂಬಂತೆ ತೋರಿಸಲಾಗುತ್ತಿದೆ. ಇದೆರಡರಲ್ಲಿ ಯಾವುದು ಎಷ್ಟು ಸತ್ಯ? ಯಾವುದು ಎಷ್ಟು ಮಿಥ್ಯ? ಈ ಡಬ್ಬಿಂಗ್ ‘ಬೇಕು- ಬೇಡ’ದ ವಾದ-ವಿವಾದಗಳಲ್ಲಿ ಹೊರಬರುತ್ತಿರುವ ಸತ್ಯಸಂಗತಿಗಳಾದರೂ ಏನು ಎಂದು ಪರಾಂಬರಿಸಲು ಇದು ಸಕಾಲ ಎಂದೆನಿಸುತ್ತದೆ. ಡಬ್ಬಿಂಗ್ ಪರವಾಗಿ ಮಾತುಬಂದೊಡನೆ ನಮ್ಮ ಚಿತ್ರರಂಗ ಹಿಂದಿನಿಂದಲೂ ಯಾವ ರೀತ...