ಪೋಸ್ಟ್‌ಗಳು

ಏಪ್ರಿಲ್ 16, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

'ಪ್ರಾಮಾಣಿಕತೆ ಎಂಬುದು ನಾವು ನಂಬಿದ ಮೌಲ್ಯದ ಪ್ರಶ್ನೆ’- ಚಿರಂಜೀವಿ ಸಿಂಗ್

ಇಮೇಜ್
ಚಿರಂಜೀವಿ ಸಿಂಗ್ ಅವರನ್ನು ನಾನು ಮೊದಲು ನೋಡಿದ್ದು, ಅವರ ಮಾತು ಕೇಳಿದ್ದು ಕೆಲವು ವರ್ಷಗಳ ಹಿಂದೆ, ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ.  'ಹಿಂಸೆಯ ಎಡ -ಬಲ’ ಎಂಬ ಕುರಿತ ಚರ್ಚೆಗಳನ್ನು ಅಂದು ಉದ್ಘಾಟಿಸಿದ್ದ ಚಿರಂಜೀವಿ ಸಿಂಗ್ ಮಾತುಗಳು ಎಲ್ಲರನ್ನು ಪ್ರಭಾವಿಸಿದ್ದವು. ನಂತರದಲ್ಲಿ ಅವರ ಕುರಿತು ಇತರೆ ಸ್ನೇಹಿತರು ಹೇಳಿದ್ದನ್ನು ಕೇಳಿದ್ದೇನೆ. ಅದರಲ್ಲೂ  ಹಿರಿಯ ಸ್ನೇಹಿತೆ ಹಾಗೂ ದಕ್ಷ ಅಧಿಕಾರಿ ವಿ. ಭಾಗ್ಯಲಕ್ಷ್ಮಿಯವರು ಚಿರಂಜೀವಿ ಸಿಂಗ್ ಅವರ ಬಗೆಗೆ ಅದೆಷ್ಟು ಭಾವುಕರಾಗಿ ಮಾತನಾಡಿದ್ದರಂದರೆ ಅವರ ಮಾತು ಕೇಳಿದಾಗಿನಿಂದಲೂ ನನಗೆ ಚಿರಂಜೀವಿ ಸಿಂಗ್ ಅವರ ಜೊತೆ ಸ್ವಲ್ಪ ಹೊತ್ತು ಕಳೆಯುವ ಇಚ್ಛೆಯಾಗಿತ್ತು.  ನಮ್ಮ ’ದ ಸಂಡೆ ಇಂಡಿಯನ್’ನ 'ಸಾಕ್ಷಿಪ್ರಜ್ಞೆ'ಗಾಗಿ ನಾನು ಮತ್ತು ನನ್ನ ಸಹೋದ್ಯೋಗಿ ಅಹೋಬಲಪತಿ ಚಿರಂಜೀವಿ ಸಿಂಗ್ ಅವರ ಮನೆಗೆ ಹೋಗಿ ಸಂದರ್ಶನ ನಡೆಸಿಕೊಂಡು ಬಂದೆವು. ಅವರ ಬದುಕಿನ ಸರಳತೆ, ನಡೆ ನುಡಿಯ ಮಿದುತನಗಳು   ನಿಜಕ್ಕೂ ನಮ್ಮನ್ನು ತೀರಾ ಕುಬ್ಜರನ್ನಾಗಿಸಿದವು. ಹೀಗೇ ಮಾತು ಆರಂಭಿಸಿ 'ಸರ್, ನೀವು ಅಷ್ಟು ದೂರದಿಂದ ಬಂದು ಇಲ್ಲಿನವರೇ ಆಗಿಬಿಟ್ಟಿದ್ದೀರಿ. ನೀವು ವಾಪಾಸು ಹೋಗುವ ಆಲೋಚನೆ ಇದೆಯಾ? ನಿಮ್ಮ ಹುಟ್ಟೂರು ಯಾವುದು' ಎಂದೆಲ್ಲಾ ಕೇಳಿದೆ. 'ನಾನು ಹುಟ್ಟಿದ್ದು ಈಗಿನ ಪಾಕಿಸ್ತಾನದಲ್ಲಿ. ಎಂದು ಹೇಳಿದ ಅವರ ಮುಖದಲ್ಲಿ ಒಂದು ಬಗೆಯ ನೋವಿನ ಭಾವ ಮೂಡಿತು. ಈ ಕುರಿತು ಮತ್ತೆ ...