ಆದರೇನಂತೆ, ನಾನೆದ್ದು ಬರುವೆ

ಆದರೇನಂತೆ, ನಾನೆದ್ದು ಬರುವೆ ನೀ ಬರೆವ ಚರಿತ್ರೆಯಲ್ಲಿ ನನ್ನ ಹಂಗಿಸಬಹುದು ನೀನು ನಿನ್ನ ತಿರುಚಿದ ಕಹಿಸುಳ್ಳುಗಳಿಂದ ನನ್ನ ತುಳಿದು ಕೆಡವಬಹುದು ನೀನು ಆದರೇನಂತೆ, ಆಗಲೂ ನೆಲದಿಂದ ಪುಟಿವ ಗೋಧೂಳಿಯಂತೆ ನಾನೆದ್ದು ಬರುವೆ ನನ್ನ ಅಹಂಕಾರ ನಿನ್ನ ನಿದ್ದೆಗೆಡಿಸುವುದೇ? 'ನನ್ನ ಜೀವಂತ ಕೋಣೆಯಯೊಳಗೆ ತೈಲಬಾವಿಗಳಿರುವಂತೆ ನಾ ನಡೆಯುವುದ ನೋಡಿ ನಿನಗೆ ಅಮರಿಕೊಂಡಿತೆ ಮಬ್ಬು? ಕೇಳು ಚಂದಿರರಂತೆ, ಸೂರ್ಯರಂತೆ ಏಳುವ ಅಲೆಗಳ ನಿಖರತೆಯಂತೆ ಹೊಸ ಭರವಸೆ ಬಾನೆತ್ತರಕೆ ಚಿಮ್ಮುವಂತೆ ಈಗಲೂ ನಾನೆದ್ದು ಬರುವೆ ತಲೆತಗ್ಗಿಸಿ ಕೆಳಗಣ್ಣು ಮಾಡಿ ನೆಲ ನೋಡುತ್ತಾ ನಿಲ್ಲಬಹುದೆಂದು ಕಣ್ಣೀರ ಹನಿಗಳಂತೆ ನನ್ನ ಭುಜಗಳು ಕೆಳ ಜೋಲುವುವೆಂದು ನನ್ನಾತ್ಮದ ಯಾತನೆಯಿಂದ ನಿತ್ರಾಣಳಾಗುವೆನೆಂದು ಕುಸಿದು ಕೂರುವೆನೆಂದು ನಿರುಕಿಸಿದ್ದೆಯಾ ನೀನು? ನನ್ನ ದರ್ಪ ನಿನ್ನ ಕೋಪವ ನೆತ್ತಿಗೇರಿಸುವುದೇ? ನನ್ನದೇ ಆದ ಹಿತ್ತಿಲಲ್ಲಿ ಚಿನ್ನದ ಗಣಿಯ ಅಗೆಯುವಂತೆ ನಗುವ ನನ್ನ ನಗುವ ನೋಡಿ ನಿನ್ನೆದೆ ಝಲ್ ಎಂದಿಲ್ಲವೇ? ಕೇಳಿಲ್ಲಿ, ನಿನ್ನ ಮಾತಿನ ಬುಲೆಟ್ಟುಗಳು ನನ್ನೆದೆ ಬಗೆಯಲಿ ನಿನ್ನ ದುರುಗುಡವ ಕಣ್ಣುಗಳು ನನ್ನ ಕತ್ತರಿಸಲಿ ನಿನ್ನ ದ್ವೇಷದ ಜ್ವಾಲೆ ನನ್ನ ಕೊಲ್ಲಲಿ ಆದರೇನಂತೆ ಆಗಲೂ ಸುಳಿಗಾಳಿಯಂತೆ ಬರುವೆ ನಾನೆದ್ದು ಬರುವೆ ನನ್ನ ಅಂಗಾಂಗಗಳ ಸೆಳೆತ ನಿನ್ನ ವಿಚಲಿತಗೊಳಿಸಿತೆ ನನ್ನ ತೊಡೆಗಳು ಸಂಧಿಸುವೆಡೆ ವಜ್ರವೈಢೂರ್ಯಗಳನಿಟ್ಟುಕೊಂಡವಳಂತೆ ನಾ ಮೈದುಂಬಿ ಕುಣಿವುದ ಕ...