ಪೋಸ್ಟ್‌ಗಳು

ಜೂನ್ 11, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಳ್ಳೀಮುಕ್ಕ..... ಬಿದ್‌ಬಿದ್ ನಕ್ಕ!

ಇಮೇಜ್
ಕೃತಿ: ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ ಲೇಖಕರು: ನಾಗೇಶ ಹೆಗಡೆ ಪುಟಗಳು: ೯೨ ಬೆಲೆ: ೭೫ ರೂಪಾಯಿ ಪ್ರಕಾಶನ: ಭೂಮಿ ಪ್ರಕಾಶನ ಮೊದಲ ಮುದ್ರಣ: ೨೦೧೧ ನಾಗೇಶ್ ಹೆಗಡೆಯವರ ’ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ’ ಅವರ ಹಿಂದಿನ ಎಲ್ಲ ಗಂಭೀರ ವಸ್ತು ವಿಷಯಗಳ ಕುರಿತ ಬರಹಗಳಿಗಿಂತ ಭಿನ್ನವಾಗಿ ತಮ್ಮ ಹಳ್ಳಿ, ಮನೆ ಮತ್ತು ಅವರ ತೋಟದ ಪರಿಸರದೊಂದಿಗಿನ ದಿನದಿನದ ಒಡನಾಟವನ್ನು ಹಾಸ್ಯಭರಿತವಾಗಿ ತೆರೆದಿಡುವ ಪುಸ್ತಕ. ವಿಜ್ಞಾನದ ಅದೆಂತಹ ಕಬ್ಬಿಣದಂತಹ ವಿಷಯವನ್ನೂ ಕಡಲೆಯಾಗಿಸಿ ಕನ್ನಡಿಗರು ಸುಲಲಿತವಾಗಿ ಓದಲು ಅನುವಾಗುವಂತೆ ಬರೆದುಕೊಂಡು ಬರುತ್ತಿರುವವರು ನಾಗೇಶ್ ಹೆಗಡೆ. ಈಗ ಈ ಕೃತಿಯಲ್ಲಿ ತಮ್ಮದೇ ಪ್ರಯೋಗ ಜೀವನದ ಅನುಭವಗಳನ್ನು ಮತ್ತೂ ಸೊಗಸಾಗಿ ಓದುಗರ ಮನಸ್ಸು ಮುದಗೊಳ್ಳುವಂತೆ ಬರೆದಿದ್ದಾರೆ.  ತಮ್ಮ ಪತ್ರಿಕಾ ವ್ಯವಸಾಯದಿಂದ ನಿವೃತ್ತಿ ಪಡೆದ ನಂತರ ಬೆಂಗಳೂರಿನ ಕೆಂಗೇರಿ ಬಳಿಯಲ್ಲಿ ಕೆಲವರು ಸಮಾನಾಸಕ್ತರು ಸೇರಿ ನಿರ್ಮಿಸಿಕೊಂಡ ಮೈತ್ರಿ ಗ್ರಾಮದಲ್ಲಿ ಲೇಖಕರ ಮನೆ ಮತ್ತು ಕೈತೋಟಗಳಲ್ಲಿನ ಕೈಕಾರ್ಯಗಳ ಕುರಿತಾಗಿ ಈ ಕೃತಿಯ ಹದಿನಾಲ್ಕು ಲೇಖನಗಳಿವೆ. ಕೃತಿಯ ಮೊದಲ ಲೇಖನ ’ದೈತೋಟರ ಮನೆಯ ಪಕ್ಕ ನಮ್ಮ ಕೈದೋಟ’ ನಮಗೆ ಹೊಸ ಬಗೆಯ ವಿಸಿಟಿಂಗ್ ಕಾರ್ಡನ್ನು ಪರಿಚಯಿಸುತ್ತದೆ. ಹೆಸರಾಂತ ಪರಿಸರವಾದಿ ಶ್ರೀಪಡ್ರೆಯವರು ಲೇಖಕರಿಗೆ ನೀಡುವ ಆ ವಿಸಿಟಿಂಗ್ ಕಾರ್ಡು ಬೇರೇನಲ್ಲ. ಒಂದು ಪಾರದರ್ಶಕ ಪ್ಯಾಕೆಟ್ ಒಳಗಿನ ನಾಲ್ಕು ಬಾಂಗ್ಲಾ ಬಸಳೆ ಬೀಜಗಳು! ದ...