ಪೋಸ್ಟ್‌ಗಳು

ಡಿಸೆಂಬರ್ 2, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇರಬೇಕು ಇದ್ದರೆ ಇಂಥಾ ಶಾಲೆ

ಇಮೇಜ್
ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಸೇರಿಸೋದು ಇಂದು ಒಂದು ಬಗೆಯ ಮಾಸ್ ಹಿಸ್ಟೀರಿಯಾ ಆಗಿಬಿಟ್ಟಿದೆ. ಆದರೆ ಪ್ರಪಂಚದೆಲ್ಲೆಡೆ ಸಾಬೀತಾಗಿರುವ ವಾಸ್ತವ ಸತ್ಯ ಏನೆಂದರೆ ಯಾವುದೇ ಒಂದು ಮಗು ತನ್ನ ಪರಿಪೂರ್ಣ ಬೌದ್ಧಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗೋದು ಮಾತೃಭಾಷಾ ಶಿಕ್ಷಣದ ಮೂಲಕ ಮಾತ್ರ. ಪ್ರಪಂಚದಲ್ಲಿ ಯಾವ್ಯಾವ ದೇಶಗಳು ಮುಂದುವರೆದಿವೆಯೋ ಅಲ್ಲೆಲ್ಲಾ ಈ ವ್ಯವಸ್ಥೆ ಇದೆ. ಆದರೆ ಮೆಕಾಲೆಯ ವಾರಸುದಾರರಾಗಿರುವ ನಮ್ಮ ಆಳುವ ಮಂದಿಗೆ ಮಾತ್ರ ಈ ಸತ್ಯ ಅರಿವಾಗೋದೇ ಇಲ್ಲ. ಒಂದು ಕಡೆ ಶಿಕ್ಷಣವನ್ನು ದುಡ್ಡು ಮಾಡಲು ಒಂದು ದಂದೆಯಾಗಿ ಮಾತ್ರ ನೋಡುವ ಉದ್ಯಮಿಗಳು ನಾಯಿಕೊಡೆಗಳಂತೆ ಬೆಳೆಸುತ್ತಿರುವ ಕಾನ್ವೆಂಟುಗಳು ಇನ್ನೊಂದೆಡೆ ದರಿದ್ರ ಶಿಕ್ಷಕರಿಂದ ಮಕ್ಕಳ ಕ್ರಿಯೇಟಿವಿಟಿಯನ್ನೆಲ್ಲಾ ಹಾಳುಮಾಡುತ್ತಿರುವ ಸರ್ಕಾರಿ ಶಾಲೆಗಳು. ಇದರೆ ನಡುವೆ ನಮ್ಮಲ್ಲೂ ಒಂದಷ್ಟು ಮಂದಿ ಎಚ್ಚೆತ್ತಿದ್ದಾರೆ. ಹೊಸ ಬಗೆಯ ಮಾದರಿಯ ಶಾಲೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕನ್ನಡ ಮಾದ್ಯಮ ಶಿಕ್ಷಣದ ಬಗ್ಗೆ ಗಂಟೆಗಟ್ಟಲೆ ಉಪನ್ಯಾಸ ನೀಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಕಳುಹಿಸುವ ಸೋಗಲಾಡಿ ಮಂದಿಯಲ್ಲ ಇವರು... ಶಿಕ್ಷಣದ ವ್ಯಾಪಾರ ಮಾಡಲು ಇಳಿದವರೂ ಅಲ್ಲ... ಕನ್ನಡ ಮಿಡಿಯಂ ಶಾಲೆ ನಡೆಸುತ್ತಿರುವ ತಮ್ಮನ್ನು ಯಾರಾದರೂ ಗುರುತಿಸಬೇಕು, ಪ್ರಶಸ್ತಿ, ಪದವಿ ನೀಡಬೇಕು ಎಂಬ ಹಪಹಪಿಕೆಯೂ ಇವರಿಗಿಲ್ಲ. ಆದರೆ ಈ ನಾಡಿನ ಮುಂದಿನ ಪ್ರಜೆಗಳಾ...