ಪೋಸ್ಟ್‌ಗಳು

ಹೊಸತು - ಹಳತು : ಬುದ್ದ ತತ್ವ

ಇಮೇಜ್
ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ, ಕಲ್ಲಿನ ಗುಂಡು ಎಲ್ಲದರಲ್ಲಿ ಆಂತಕರಿಕ ಚಲನೆಯಿದೆ. ಹಾಗೆಯೇ ನಮ್ಮ ದೇಹ ಮನಸ್ಸುಗಳೂ ಚಲನೆಯ ರೂಪಗಳು. ಈ ಚಲನೆಯ ಸ್ವರೂಪವಾದರೂ ಎಂತಹದು? ಇದನ್ನು ಬುದ್ದಗುರು ಎರಡು ಪರಿಕಲ್ಪನೆಗಳ ಮೂಲಕ ತಿಳಿಸಿದ. ಒಂದು ಅನಿತ್ತ/ಅನಿತ್ಯ. (Impermanence) ಮತ್ತೊಂದು ಪತಿಚ್ಚ ಸಮುಪ್ಪಾದ (law of dependent origination). ಅನಿತ್ತ (ಅನಿಚ್ಚ) ʼಅನಿತ್ತʼ ನಿಯಮದ ಪ್ರಕಾರ ಲೋಕದಲ್ಲಿ ಚಲನೆಯಲ್ಲಿರುವ ಯಾವದೂ ಈ ಕ್ಷಣದಲ್ಲಿದ್ದಂತೆ ಮುಂದಿನ ಕ್ಷಣದಲ್ಲಿ ಇರುವುದಿಲ್ಲ. ಯಾವುದಕ್ಕೂ ಶಾಶ್ವತ ಗುಣ ಎಂಬುದಿಲ್ಲ. ಯಾವ ವಸ್ತುವೂ ʼಇರುʼವುದಿಲ್ಲ, ಎಲ್ಲವೂ ʼಆಗುʼತ್ತಿರುತ್ತದೆ. ಅಲ್ಲಿ ಇದೆ ಎಂದು ಮೇಲುನೋಟಕ್ಕೆ ಕಾಣುತ್ತಿರುವುದೂ ಆಗುತ್ತಿರುತ್ತದೆ. ಹೀಗಾಗಿ ಪ್ರತಿಯೊಂದೂ ಅಶಾಶ್ವತವಾದದ್ದು ಅತವಾ ಕ್ಷಣಿಕವಾದದ್ದು. ಹೀಗಾಗಿ ಪ್ರತಿ ವಸ್ತು ಪ್ರತಿ ಜೀವಿಯೂ ಪ್ರತಿ ಜೀವಿಯೊಳಗಿನ ಚಿಂತನೆಯೂ ಪ್ರತಿಕ್ಷಣವೂ ಹಳತರಿಂದ ಹೊಸದಾಗುತ್ತಿರುತ್ತಲೇ ಇರುತ್ತದೆ. ಇಂದು ಕ್ವಾಂಟಂ ವಿಜ್ಞಾನದ ತತ್ವಗಳು ಹೇಳುತ್ತಿರುವುದೂ ಇದನ್ನೇ. ಈ ಜಗತ್ತನ್ನು ನಿರ್ಮಿಸಿರುವ ಕಣ್ಣಿಗೆ ಕಾಣದ, ಅತಿ ಚಿಕ್ಕ ʼಪಾರ್ಟಿಕಲ್‌ʼ (ಕಣ)ಗಳ ಅನಿಶ್ಚಿತ ಗುಣಸ್ವಭಾವವೇ ಈ ಪ್ರಪಂಚನ್ನು ಆಗುಮಾಡುತ್ತಿರುವುದು. ಜಗತ್ತಿನ ಈ ವಾಸ್ತವತೆ...

ಧರ್ಮ V/s ರಿಲಿಜನ್

ಇಮೇಜ್
ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್ಮ 2. ಜೈನ ಧರ್ಮ ಮತ್ತು 3.  ಲಿಂಗಾಯತ ಧರ್ಮ  - ಈ ಮೂರೂ ಧರ್ಮಗಳು ಹಲವಾರು ಸಮಾನ ಗುಣಗಳನ್ನು ಹೊಂದಿವೆ. ಬಹಳ ಮುಕ್ಯವಾಗಿ ಈ ಮೂರು ದರ್ಮಗಳು ವೇದಗಳನ್ನು, ಉಪನಿಷತ್ತುಗಳನ್ನು ಸಾರಾಗಟಾಗಿ ತಿರಸ್ಕರಿಸಿದವು. ಮನುಷ್ಯನ ಲೌಕಿಕ ಹಾಗೂ ಬೌದ್ಧಿಕ ಏಳಿಗೆಯ ಗುರಿಯನ್ನು ಶ್ರಮ- ಕಾಯಕದ ಮೂಲಕವೇ ಸಾಧಿಸುವ ದಾರಿ ಹೇಳಿದವು. ಲೋಕದ ಇರವು ಮತ್ತು ಮನುಷ್ಯನ ಅರಿವನ್ನು ವಸ್ತುನಿಷ್ಟವಾಗಿ ವಿವರಿಸಿಕೊಳ್ಳಲು ಯತ್ನಿಸಿದವು. ಪರಮಾತ್ಮನ ಅಗತ್ಯವನ್ನು ನಿರಾಕರಿಸಿದವು. ಒಳ್ಳೆಯ ನಡತೆಯನ್ನು ಬೋಧಿಸಿದವು.‌ ಹೀಗಾಗಿ ನಾನು ಇವುಗಳನ್ನು ಮಾತ್ರ ಧರ್ಮಗಳು ಎಂದು ಕರೆಯುತ್ತೇನೆ.‌  ಇನ್ನು, "ಹಿಂದೂ ಧರ್ಮ ಏನು?"  ಅಂತ ನೀವು ಕೇಳಿದರೆ ನನ್ನ ಸ್ಪಷ್ಟ ಉತ್ತರ ಇಷ್ಟೆ-  ಹಿಂದೂ ಧರ್ಮ ಎಂಬುದು ಇಲ್ಲ. ಆದರೆ ಬ್ರಾಹ್ಮಣ ರಿಲಿಜನ್ ಇದೆ. ಇದು ವೇದವನ್ನು ವ್ಯಾಖ್ಯಾನಿಸುತ್ತಾ ಆತ್ಮ - ಪರಮಾತ್ಮಗಳ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡ ರಿಲಿಜನ್. ದ್ವೈತ, ಅದ್ವೈತ, ಉಪನಿಷತ್ತು ಇತ್ಯಾದಿಗಳು ಈ ಬ್ರಾಹ್ಮಣ ರಿಲಿಜನ್ ಒಳಗೆ ಬರುತ್ತವೆ‌. ಇದರೊಂದಿಗೆ ಆರ್ಯ ಶ್ರೇಷ್ಟತೆಯ ವರ್ಣಾಶ್ರಮ ಸಿದ್ದಾಂತವಿದೆ. ಬ್ರಾಹ್ಮಣ ರಿಲಿಜನ್ ಮತ್ತು ವರ್ಣಾಶ್ರಮಗಳು ಸೇರಿಕೊಂಡು ಈ ದೇಶದ ವೈದಿಕ ರಿಲಿಜನ್ ಉಂಟಾಗಿದೆ. ಇ...

ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

ಇಮೇಜ್
  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದು ನಮ್ಮಾಸೆ.‌ ಮಾನ್ಯ ಸ್ಪೀಕರ್ ಅವರೆ, ಶಾಸಕರಿಗಾಗಿ ಶಿಬಿರ ನಡೆಸುವುದು ಬೇಡ ಎಂದು ಯಾರೂ ಹೇಳಿಲ್ಲ. ಶಾಸಕರಿಗೆ ಕಲಾಪ ನಡೆಯುವ ರೀತಿ ರಿವಾಜುಗಳ ಕುರಿತು, ಪ್ರಜಾಪ್ರಬುತ್ವದ ತತ್ವಗಳ ಕುರಿತು ಶಿಬಿರ ಪ್ರತಿ ಸಲ ನಡೆಯುತ್ತದೆ. ಅದು ಅಗತ್ಯ ಕೂಡಾ. ಈ ಬಗ್ಗೆ ಯಾವ ತಕರಾರೂ ಯಾರಿಗೂ ಇಲ್ಲ. ಸಮಸ್ಯೆ ಆಗಿದ್ದು ಈ ಸಲ ನೀವು ಹೊಸದಾಗಿ ಅದೇನೋ ಮೋಟಿವೇಶನ್ ಕೊಡಿಸೋಕೆ ಅಂತ ಕೆಲವರು ಮಹಾಮಹಿಮರ ಹೆಸರು ಹೇಳಿದ್ರಲ್ಲ... ಅದು. ನಿಮ್ಮ ಹೇಳಿಕೆಯಿಂದ ಎಲ್ಲರಿಗೂ ಸಿಕ್ಕಿದ ಸ್ಪಷ್ಟತೆ ಏನು ಎಂದರೆ ವೀರೇಂದ್ರ ಹೆಗ್ಗಡೆ, ರವಿಶಂಕರ ಗುರೂಜಿ, ಗುರುರಾಜ ಕರ್ಜಗಿ ಇವರ ಬಗ್ಗೆ ನಿಮಗೆ ಯಾವ ಸ್ಪಷ್ಟತೆ ಇಲ್ಲ ಎನ್ನುವುದು. ಅದೇನೋ ಒತ್ತಡ ರಹಿತ ಕೆಲಸದ ನಿರ್ವಹಣೆ ಬಗ್ಗೆ ಆದ್ಯಾತ್ಮ ತರಬೇತಿ ಎಂದಿದ್ದೀರಿ. ನಿಮ್ಮ ಮಾತು ಹೇಗಿದೆ ಎಂದರೆ ಹೆಬ್ಬಾವನ್ನ ಕರೆದು ಕೋಳಿಮರಿಗಳಿಗೆ ಒತ್ತಡ ನಿರ್ವಹಣೆ ಹೇಗೆ ಎಂದು ತರಬೇತಿ ಕೊಡಿಸಿದಂತೆ. ನೀವು ಕರಾವಳಿಯ ಒಬ್ಬ ಶಾಸಕರಾಗಿ ಆತ್ಮಸಾಕ್ಷಿ ಇಟ್ಟುಕೊಂಡು ಹೇಳಿ. ಒಬ್ಬ ಶಾಸಕ ಯಾವಾಗ ಒತ್ತಡವಿಲ್ಲದೆ ಶಾಂತಿ ಸಮಾದಾನದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ? ಇಡೀ ರಾಜ್ಯದಲ್ಲಿ, ದೇಶದಲ್ಲಿ ಮತ್ತು ನಿಮ್ಮ ಕ್ಷೇತ್ರದಲ್ಲಿ ವಿವಿದ ದರ್ಮಗಳ ಜನರ ನಡುವೆ ಶಾಂತಿ ಸ...

ಕೊಲೆಯ ಹಿಂದಿನ ರಾತ್ರಿ II ರಚನೆ: ಸಿದ್ದಲಿಂಗಯ್ಯ II ಹಾಡಿದವರು: ಚಿಂತನ್ ವಿಕಾಸ್ II...

ಇಮೇಜ್

ಗೌರಿ ಮೇಡಂ ಜೊತೆಗಿನ ಒಡನಾಟದ ನೆನಪುಗಳು

ಇಮೇಜ್
    ಅದು 2008 ನೇ ಇಸವಿ . ಶಿವಮೊಗ್ಗದಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಪೂರ್ಣಾವಧಿ ಹೋರಾಟಗಾರನಾಗಿ ಕೆಲಸ ಮಾಡುತ್ತಿದ್ದ ನನಗೆ ಜೀವನದಲ್ಲಿ ದೊಡ್ಡ ಆಘಾತವೊಂದು ಎದುರಾಗಿತ್ತು . ನನ್ನ ಅವ್ವನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು . ಅದುವರೆಗೆ ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಮನೆ , ಮಠ , ತಮ್ಮ , ತಂಗಿ , ಅಪ್ಪ , ಅಮ್ಮ ಎಲ್ಲರನ್ನೂ ಬಹುತೇಕ ತೊರೆದು ಸಮಾಜದಲ್ಲಿ ಬದಲಾವಣೆ ತರಬೇಕು ಎಂದುಕೊಂಡು ಕೆಲಸ ಮಾಡುತ್ತಿದ್ದ ನನ್ನ ಜಂಘಾಬಲ ಉಡುಗಿಸಿತ್ತು ಈ ಘಟನೆ . ಅವ್ವನನ್ನು ಆಸ್ಪತ್ರೆಗೆ ಸೇರಿಸಿ ಒಂದು ವಾರ ಅಡ್ಮಿಟ್ ಮಾಡಿಕೊಂಡರೆ ಡಿಸ್ಚಾರ್ಜ್ ಮಾಡಿಸುವಾಗ ಕೈಯಲ್ಲಿ ನಯಾಪೈಸೆ ಕಾಸಿಲ್ಲ . ಮನೆಯಲ್ಲಿ ಸಹ ಇದೇ ಸ್ಥಿತಿ . ಅವ್ವನ ಅನಾರೋಗ್ಯಕ್ಕೂ ಒಂದು ರೀತಿಯಲ್ಲಿ ನಾನೇ ಕಾರಣನಾಗಿದ್ದೆ . ನನ್ನ ಬಗ್ಗೆ ದೊಡ್ಡ ಕನಸುಗಳಿಟ್ಟುಕೊಂಡಿದ್ದ ಅವ್ವ ಒಂದು ರೀತಿ ಭ್ರಮನಿರಸನಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದಳು . ಕೊನೆಗೆ ಆಸ್ಪತ್ರೆಗೆ ಕಟ್ಟಲು ಬೇಕಾಗಿದ್ದ 12 ಸಾವಿರ ರೂಪಾಯಿಗೆ ಶಿವಮೊಗ್ಗದ ಹಿರಿಯ ಕಿರಿಯ ಗೆಳೆಯರ ಬಳಿ ನಾಲ್ಕೈದು ದಿನ ಸೈಕಲ್ ಹೊಡೆದು ಸಾಲ ಮಾಡಿ ಆಸ್ಪತ್ರಗೆ ಕಟ್ಟಿ ಮನೆಗೆ ಕರೆದುಕೊಂಡು ಹೋಗಿದ್ದೆ . ಅಮ್ಮ ಪೂರ್ತಿ ಹುಷಾರಾಗಬೇಕಾದರೆ ತಂಗಿ ಮದುವೆಯ ಜವಾಬ್ದಾರಿಯನ್ನು ನಾನೇ ಹೊತ್ತು ನೆರವೇರಿಸು...