ಫೇಸ್ ಥ್ರೀ ಫೇಸ್!
ಇದು ಮೂರು ವ್ಯಕ್ತಿಗಳ ಆರು ಮುಖಗಳ ಕತೆ. ಮೊನ್ನೆಯಷ್ಟೇ ಶಾಂತಿನಗರದ 'ಗ್ಯಾಲರಿ ಸುಮುಖ’ದಲ್ಲಿ ಮುಕ್ತಾಯವಾದ ’ಫೇಸ್ ಟೂ ಫೇಸ್’ (Face 2 Face) ಛಾಯಾಚಿತ್ರ ಹಾಗೂ ವಿಡಿಯೋ ಪ್ರದರ್ಶನದ ವೇಳೆ ಕಂಡ ಮುಖಗಳಿವು. ಫೇಸ್ ವನ್: ಆ ವ್ಯಕ್ತಿ ಹೆಸರು ಬಗಡೆ ಹಳ್ಳಿ ಬಸವರಾಜು. ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಗಾಂಧೀಜಿ. ಅದೇ ಮಹಾತ್ಮ ಗಾಂಧೀಜೀನೇ!. ಗಾಂಧೀಜಿಯವರ ತತ್ವಗಳಿಂದ ಪ್ರೇರಿತನಾಗಿದ್ದ ಈ ಯುವಕ ಅವನ್ನು ಜನಮಾನಸದಲ್ಲಿ ಮತ್ತಷ್ಟು ದಟ್ಟಗೊಳಿಸಲು ಆಯ್ಕೆ ಮಾಡಿಕೊಂಡ ದಾರಿ ವಿಶಿಷ್ಟವಾದದ್ದು. ಅದೆಂದರೆ ಗಾಂಧೀಜಿಯವರನ್ನು ಹೋಲುವಂತೆಯೇ ಮೈತುಂಬಾ ಬೆಳ್ಳಿಯ ಬಣ್ಣ ಬಳಿದುಕೊಂಡು ಗಾಂಧೀಜಿಯವರ ಜೀವಂತ ವಿಗ್ರಹದಂತೆ ಕೋಲೊಂದನ್ನು ಹಿಡಿದು ಜನರ ಮಂದೆ ಓಡಾಡುವುದು. ಈ ವೇಶದಲ್ಲಿ ಬಸವರಾಜ್ ನಾನಾ ಸಾರ್ವಜನಿಕ ಸಮಾರಂಭಗಳಲ್ಲಿ ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ’ಗಾಂಧೀ’ ಬಸವರಾಜ್‌ರನ್ನು ಕಂಡು ಜನರು ಗೌರವಿಸಿದ್ದಿದೆ, ಕೈ ಮುಗಿದಿದ್ದಿದೆ, ಅಪಹಾಸ್ಯ ಮಾಡಿ ಚುಡಾಯಿಸಿದ್ದಿದೆ, ವಿಚಿತ್ರವಾಗೊ ನೋಟ ಬೀರಿದ್ದೂ ಇದೆ. ಆದರೆ ಈ ಎಲ್ಲಾ ಪ್ರತಿಕ್ರಿಯೆಗಳಿಗೂ ಬಸವರಾಜ್‌ದು ಒಂದೇ ಉತ್ತರ. ಅದೇ ಗಾಂಧೀ ಸ್ಮೈಲು ಫೇಸ್ ಟೂ: ಈ ವ್ಯಕ್ತಿಯ ಹೆಸರು ವಿದ್ಯಾಸಾಗರ. ತಮ್ಮ ಯೌವನದಿಂದಲೂ ಇವರಿಗೆ ತಮಿಳು ನಟ ಎಂ.ಜಿ.ಆರ್ ಅವರನ್ನು ಕಂಡರೆ ವಿಚಿತ್ರ ಅಭಿಮಾನ. ತಮ್ಮ ಶಾಲಾ ಕಾಲೇಜು ದಿನಗಳಿಂದಲೇ ಎಂ.ಜಿ.ಆರ್‌ರನ್ನ...