ಪೋಸ್ಟ್‌ಗಳು

2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಿಸೆಂಬರ್ 21ನ್ನು ಕುರಿತ ಮಿಥ್‌ಗಳು

ಇಮೇಜ್
(೨೦೧೨ರಲ್ಲಿ ಪ್ರಳಯವಾಗುತ್ತದೆ ಎಂಬ ಅಪಕಲ್ಪನೆ ಮತ್ತು ಅಪಪ್ರಚಾರಗಳು ೨೦೦೯ರಲ್ಲಿ ಆರಂಭವಾದ ಸಂದರ್ಭದಲ್ಲಿ ಈ ಲೇಖನವು 'ಗೈಡ್' ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು) ೨೦೧೨ರ ಡಿಸೆಂಬರ್ ೨೧ ರಂದು ಜಗತ್ತಿನ ಅಂತ್ಯವಾಗಲಿದೆ. ಭೂಗ್ರಹವು ಯಾವುದೋ ಒಂದು ರೀತಿಯಲ್ಲಿ ಭಾರೀ ಮಾರ್ಪಾಡಿಗೆ ಒಳಗಾಗಲಿದೆ. ಭೂಮಿಯ ಮೇಲಿನ ಬಹುಪಾಲು ಮನುಷ್ಯರು ನಾಶವಾಗಲಿದ್ದಾರೆ. ಭೂಖಂಡಗಳು ಪ್ರತ್ಯೇಕಗೊಳ್ಳಲಿವೆ, ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ. ಆ ದಿನವೇ ಡೂಮ್ಸ್ ಡೇ ೨೦೧೨. ಅದು ಭೂಮಂಡಲದ ಅಂತ್ಯದ ದಿನ..... ಈ ಬಗೆಯ ಊಹಾಪೋಹಗಳು ಈಗಾಗಲೇ ನಮ್ಮ ಇಡೀ ಜಗತ್ತಿನಾದ್ಯಂತ ವ್ಯಾಪಕವಾದ ಪ್ರಚಾರವನ್ನು ಪಡೆದುಕೊಂಡು ಬಿಟ್ಟಿವೆ. ಅದರ ಈ ಕುರಿತ ಸಾವಿರಾರು ಸಂಖ್ಯೆಯ ಅಂತರ್ಜಾಲ ತಾಣಗಳಿಂದ, ಟೀವಿ ಚಾನಲ್‌ಗಳ ಕಾರ್ಯಕ್ರಮಗಳ ಟಿಆರ್‌ಪಿ ಕಾರ್ಯಕ್ರಮಗಳಿಂದ, ಕೆಲವು ಧಾರ್ಮಿಕ ವ್ಯಕ್ತಿಗಳು ಬರೆದಿರುವ ಪುಸ್ತಕಗಳಿಂದ, ಹೀಗೆ ನಾನಾ ಮೂಲಗಳಿಂದ ಈ ತಥಾಕಥಿತ ಪ್ರಳಯದ ಕುರಿತ ವಿಷಯಗಳನ್ನು ಓದಿ, ಕೇಳಿ ಜನರು ತೀವ್ರ ಆತಂಕ, ಕುತೂಹಲಗಳಿಗೊಳಗಾಗಿದ್ದಾರೆ. ಬೆಂಗಳೂರಿನ ಹತ್ತಿರ ಚಿಕ್ಕಗುಬ್ಬಿಯಲ್ಲಿರುವ ಮಾನಸ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾಗಿರುವ ಕೃಷ್ಣಾನಂದ ಎಂಬ ಸ್ವಾಮಿ ೨೦೧೨ ನೇ ಇಸವಿಯಲ್ಲಿ ನಡೆಯಬಹುದಾದ ಘಟನೆಗಳನ್ನು ತಮ್ಮ ದಿವ್ಯದರ್ಶನದ ಸಹಾಯದಿಂದ, ೨೦೧೨-ಎಂಡ್ ಆರ್ ಬಿಗಿನಿಂಗ್ ಎಂಬ ಕೃತಿಯನ್ನು ಬರೆದಿದ್ದರು. ಉತ್ತರ ಕನ್ನಡ ಜಿಲ್ಲೆಯ ಜೋಯಿಡ ತಾ...

"ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿವೆ"- ಚಿದಂಬರರಾವ್ ಜಂಬೆ

ಇಮೇಜ್
ನಾಡಿನ ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯವರ ಕೊಡುಗೆ ಅಪಾರವಾದದ್ದು. ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ ಮತ್ತು ಸಾಣೆಹಳ್ಳಿಯ ಶಿವಸಂಚಾರ ಈ ಮೂರೂ ಪ್ರಮುಖ ರಂಗಶಾಲೆಗಳಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ರಂಗನಿರ್ದೇಶಕ ಮತ್ತು ಚಿಂತಕ ಚಿದಂಬರರಾವ್ ಜಂಬೆಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.  (ಚಿತ್ರಗಳು-ಹರ್ಷಕುಮಾರ್ ಕುಗ್ವೆ) ಆಧುನಿಕ ರಂಗಭೂಮಿಯ ಇಂದಿನ ಟ್ರೆಂಡ್ ಏನಾಗಿದೆ? ಈ ’ಆಧುನಿಕತೆ’ ಎನ್ನುವುದನ್ನೇ ಆಲೋಚನೆ ಮಾಡಬೇಕಾಗಿದೆ. ಏಕೆಂದರೆ ಇಂದು ಆಧುನಿಕತೆ ಎಂದು ಕರೆಯುವುದು ಕೇವಲ ತಾಂತ್ರಿಕವಾಗಿಯೇ ವಿನಃ ವಸ್ತುಸಂವಿಧಾನದಲ್ಲಿ ಆದಂತಹ ಬದಲಾವಣೆಗಳನ್ನು ಇಟ್ಟುಕೊಂಡು ನಾವು ಆಧುನಿಕತೆಯನ್ನು ನೋಡುತ್ತಿಲ್ಲ. ಈಗ ತಾಂತ್ರಿಕವಾಗಿ ಅಷ್ಟೇನು ಬದಲಾವಣೆಗಳು ಆಗಿಲ್ಲ ಎಂಬುದು ನನ್ನ ಅಭಿಪ್ರಾಯ. ವಸ್ತು ಸಂವಿಧಾನದಲ್ಲಿ ಕೂಡ ಹೇಳಿಕೊಳ್ಳುವಂತಹಾ ಬಹಳಷ್ಟು ಏನೂ ಬಂದಿಲ್ಲ. ಇಂದು ಆಧುನಿಕ ಅಂದರೆ ಜಾಗತಿಕರಣದ ವೇಗದಲ್ಲಿ ಹೋಗುತ್ತಿರುವುದರಿಂದ ಅದನ್ನೇ ಆಧುನಿಕತೆ ಎನ್ನುವ  ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ವಾಸ್ತವದಲ್ಲಿ ಅದು ಆಧುನಿಕತೆಯಲ್ಲ. ಅದರ ಹೊರತಾಗಿ ಜಾಗತಿಕರಣವನ್ನು ನಿರಾಕರಣೆ ಮಾಡುವಂತಾದ್ದು ಅಥವಾ ಆ ವೇಗಕ್ಕೆ ಸಿಲುಕಿಕೊಳ್ಳದೇ ಇರುವ ಯಾವುದಾದರೂ ಒಂದು ಮಾರ್ಗವಿದ್ದರೆ  ಅದನ್ನ ನಾವು ಆಧುನಿಕತೆ ಎಂದು ಕರೆಯಬಹುದು. ನಮ್ಮ ಪಾರಂಪರಿಕವಾದ ರಂಗಭೂಮಿಗೂ ಇಂದಿನ ರಂಗಭೂಮಿಗೂ ಭಿನ್ನತೆಗ...

ಕಸದ ವಿಷಚಕ್ರದೊಳಗೆ

ಇಮೇಜ್
ಕೃಪೆ: ದ ಸಂಡೆ ಇಂಡಿಯನ್, ಕನ್ನಡ ಕಳೆದ ಆಗಸ್ಟ್ ೨೩ ರಂದು ಬೆಂಗಳೂರಿನ ಉತ್ತರ ಭಾಗದಲ್ಲಿರುವ ಹೆಸರಘಟ್ಟ ಹೋಬಳಿಯ ಮಾವಳ್ಳಿಪುರದಲ್ಲಿ ಏಕಾಏಕಿ ಸುಮಾರು ೬೦೦ ಪೊಲೀಸರು ಜಮಾಸಿದ್ದರು. ಯಾರೋ ಉಗ್ರಗಾ"ಗಳು ಆ ಹಳ್ಳಿಯಲ್ಲಿ ಅಡಗಿಕೊಂಡಿದ್ದರು ಎಂದಲ್ಲ. ಬದಲಾಗಿ ಹಾಗೆ ಜಮಾಸಿದ್ದ ಪೊಲೀಸರೇ ಎರಡು ದಿನಗಳ ಕಾಲ ಹಳ್ಳಿಯಲ್ಲಿ ಉಗ್ರ ವಾತಾವರಣ ಸೃಷ್ಟಿಸಿಬಿಟ್ಟಿದ್ದರು. ಅಂದು ಬೆಳಿಗ್ಗೆ ಊರಿನ ಮುಖಂಡರಿಗೆ ಕರೆಮಾಡಿದ ಡಿವೈಎಸ್‌ಪಿ ಶ್ರೀಧರ್ ಮಾವಳ್ಳಿಪುರ ಕಸದ ಗುಡ್ಡೆಯ ಬಳಿ ಬರಲು ತಿಳಿಸಿದ್ದರು. ಮಾವಳ್ಳಿಪುರದ ಮೂರು ನಾಲ್ಕು ಜನರು ಅಲ್ಲಿಗೆ ಹೋದೊಡನೆ ಆ ಪೊಲೀಸ್ ಅಧಿಕಾರಿ ಊರಿಗೆ ಬರುವ ಕಸದ ಲಾರಿಗಳನ್ನು ತಡೆಯುವುದೇಕೆ ಎಂದು ಧಮಕಿ ಹಾಕಿದರು. ಆಗ ಊರಿನವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದು ತಿಂಗಳ ಹಿಂದೆಯೇ ಅಲ್ಲಿ ಕಸವನ್ನು ಹಾಕುವುದನ್ನು ನಿಲ್ಲಿಸಲು ತಿಳಿಸಿದೆ ಎಂದು ಆದೇಶ ಪತ್ರ ತೋರಿಸಿದರು. ಆದರೆ ಅದಕ್ಕೆ ಗಮನ ನೀಡದ ಪೊಲೀಸರು ಬಲವಂತವಾಗಿ ಕಸ ತುಂಬಿದ ಲಾರಿಗಳಿಗೆ ಅವಕಾಶ ನೀಡಿದಾಗ ತಕ್ಷಣಕ್ಕೆ 25-30 ಜನರು ನೆರೆದು ಪೊಲೀಸರೊಂದಿಗೆ ಮಾತಿಗಿಳಿದರು. ಇಷ್ಟರಲ್ಲಿ ಏಕಾಏಕಿ ವಾಹನಗಳಲ್ಲಿ ಬಂದ ೬೦೦ ರಷ್ಟು ಪೊಲೀಸರು ಭಯಭೀತ ವಾತಾವರಣವನ್ನೇ ಹುಟ್ಟಿಸಿಬಿಟ್ಟರು.  ಆದರೆ ಕಳೆದೊಂದು ದಶಕದಿಂದಲೂ ಬೆಂಗಳೂರು ಬಿಸಾಡಿ ಕಳಿಸಿದ ಕಸವನ್ನು ಸುರಿಸಿಕೊಂಡು ಇನ್ನಿಲ್ಲದ ತೊಂದರೆಗಳನ್ನನುಭವಿಸಿರುವ ಗ್ರಾಮಸ್ಥರು ಸೋಲೊಪ್ಪಲು ಸಿ...

ವಿಶ್ವದ ಸಕಲ ಸಮಸ್ಯೆಗಳಿಗೂ ಉತ್ತರ ಬುದ್ಧನ ಚಿಂತನೆಯಲ್ಲಿದೆ- ಪ್ರೊ. ಕಾಳೇಗೌಡ ನಾಗವಾರ

ಇಮೇಜ್
ಬಂಡಾಯ ಸಾಹಿತ್ಯದಲ್ಲಿ ಗುರುತಿಸಿಕೊಂಡು ಅತ್ಯಂತ ಮೌಲ್ಯಯುತವಾದ ಸಾಹಿತ್ಯವನ್ನು ರಚಿಸಿರುವ ಪ್ರೊ. ಕಾಳೇಔಡ ನಾಡಿನ ಪ್ರಮುಖ ಸಾಹಿತಿ, ವಿಚಾರವಾದಿ ಮತ್ತು ಹೋರಾಟಗಾರರು. ಟಿಎಸ್‌ಐಗಾಗಿ ಹರ್ಷಕುಮಾರ್ ಕುಗ್ವೆ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.  ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿಕೊಂಡಿರುವ ನಾವು ಜಾನಪದ ಅಧ್ಯಯನದ ವಿಷಯದಲ್ಲಿ ಏನನ್ನು ನಿರೀಕ್ಷಿಸಬಹುದು? ಜಾನಪದ ಅಧ್ಯಯನ ಅನ್ನುವುದು ವಾಸ್ತವವಾಗಿ ಇಡೀ ಜನಸಮುದಾಯದ ಅನುಭವದ ಇತಿಹಾಸವನ್ನೇ ಹೇಳುತ್ತದೆ. ಅಲ್ಲಿ ಅಪರೂಪದ ಪ್ರಯೋಗಗಳಿವೆ; ಅಲ್ಲಿ ವ್ಯಕ್ತಿಗಿಂತ ಹೆಚ್ಚಾಗಿ ಸಮುದಾಯದ ಅನುಭವಗಳಿರುತ್ತವೆ. ನಮ್ಮ ಸಾಂಸ್ಕೃತಿಕ ಇತಿಹಾಸ, ಆಚರಣೆ, ಸಂಗೀತ ಇತ್ಯಾದಿ ಸಕಲ ವೈವಿಧ್ಯಗಳ ಆಗರವೇ ಜಾನಪದ. ಹೀಗಾಗಿಯೇ ಆಯಾಯಾ ದೇಶಗಳಲ್ಲಿ ವಿವಿಧ ಕಾಲಮಾನ, ಹವಾಗುಣಕ್ಕನುಗುಣವಾಗಿ, ಆಹಾರ ಪದ್ಧತಿ, ನಡೆನುಡಿ ವಿಚಾರಗಳಲ್ಲಿ ಪ್ರಯೋಗಶೀಲವಾಗಿ ಯಾವುದು ಹೆಚ್ಚು ಅರ್ಥಪೂರ್ಣ ಎಂದು ಮನುಷ್ಯ ಸದಾ ಹುಡುಕುತ್ತಿರುತ್ತಾನೆ. ಅದು ಅಕ್ಷರಸ್ತರ ಲೋಕಕ್ಕಿಂತ ಭಿನ್ನವಾದ ಪ್ರಾಮಾಣಿಕವಾದ ಅನುಭವ ಲೋಕ. ಆ ದೃಷ್ಟಿಯಿಂದ ಆಯಾ ದೇಶಗಳಲ್ಲಿ ತಜ್ಞರಾದವರು ಆ ಸಮಾಜವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಜಾನಪದವನ್ನು ಜ್ಞಾನದ ಕಾರಣಕ್ಕಾಗಿ ಅಧ್ಯಯನಮಾಡುತ್ತಾರೆ. ಹಾಗೆಯೇ ನಮ್ಮ ಭಾರತದ ಸಂದರ್ಭದಲ್ಲಿ ಅಕ್ಷರಜ್ಞಾನ ಇರದಿದ್ದಾಗಲೂ ಸಮಾಜದ ಏಳಿಗೆಯನ್ನು ನಿರಂತರವಾಗಿ ಬಯಸುತ್ತಿದ್ದ ದೊಡ್ಡ...

Sign Petition For Democracy

Change.org | The Proven Petition Site

ಸಾಮಾಜಿಕ ನ್ಯಾಯವನ್ನು ಬಲಿಪಶು ಮಾಡುವುದು ಸಲ್ಲದು- ಡಾ. ಎಚ್. ಎಸ್. ರಾಘವೇಂದ್ರ ರಾವ್

ಇಮೇಜ್
  ನಮ್ಮಲ್ಲಿ ಹಿಂದೆಂದಿಗಿಂತ ಅಪಾರ ಪ್ರಮಾಣದ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇದರಲ್ಲಿ ಮೌಲ್ಯಯುತ ಸಾಹಿತ್ಯ ಎಷ್ಟರ ಮಟ್ಟಿಗೆ ಬರುತ್ತಿದೆ?  ಇದಕ್ಕೆ ನಾಲ್ಕೇ ಪುಸ್ತಕಗಳು ಪ್ರಕಟವಾಗುತ್ತಿದ್ದಾಗ ಸುಲಭವಾಗಿ ಹೇಳಬಹುದಿತ್ತು. ಆದರೆ ನಾನ್ನೂರು ಪುಸ್ತಕಗಳು ಬರುತ್ತಿರುವಾಗ ಕಷ್ಟ. ಅನೇಕ ಸಲ ಓದದೆಯೇ ತೀರ್ಮಾನ ಕೊಡುತ್ತೇವೆ. ವಯಸ್ಸಾಗುತ್ತಾ ಹೋದ ಹಾಗೆ ಇತ್ತೀಚಿನ ಬರೆಹಗಳ ಬಗ್ಗೆ ಒಂದು ಬಗೆಯ ಅಸಹನೆಯನ್ನು ಕೆಲವರು ವ್ಯಕ್ತಪಡಿಸುತ್ತಾರೆ. 70ರ ದಶಕದಲ್ಲಿ ವಿಮರ್ಶೆ ಬರೆಯಲು ಆರಂಭಿಸಿದ್ದವರಿಗೆ ೨೦೧೦ರಲ್ಲಿ ಬಂದ ಸಾಹಿತ್ಯವೂ ಅಷ್ಟೇ ಮುಖ್ಯ ಎಂಬ ಮುಕ್ತ ಮನಸ್ಸು ಇರದಿದ್ದರೆ ಈಗಿನದೇನನ್ನೂ ಓದದೇ ಆದೇ ಕುವೆಂಪು ಅದೇ ಬೆಂದ್ರೆ ಎಂದುಕೊಂಡು ಕೂತಿರಬೇಕಾಗುತ್ತದೆ.  ಬದಲಿಗೆ ನಮ್ಮ ಕಾಲದಲ್ಲಿ ಬರುತ್ತಿರುವುದರಲ್ಲಿಯೂ ಒಳ್ಳೆಯದಿರುತ್ತದೆ ಎಂಬ ತಿಳುವಳಿಕೆ ಬೇಕು. ಕಸಕಡ್ಡಿ ಎನ್ನುವುದು ಎಲ್ಲಾ ಕಾಲದಲ್ಲಿಯೂ ಇದ್ದೇ ಇರುತ್ತದೆ. ಹಿಂದೆಯೂ ಇತ್ತು. ನಾಗವೇಣಿಯವರ ’ಗಾಂಧಿ ಬಂದ’, ಮೊಗಳ್ಳಿಯವರ ಬುಗುರಿ ಇಂತವೆಲ್ಲ ಎಷ್ಟೊಂದು ಶ್ರೇಷ್ಟವಾದವುಗಳಿವೆಯಲ್ಲ. ಅಮರೇಶ ನುಗಡೋಣಿ, ಎಚ್.ಎಸ್.ಶಿವಪ್ರಕಾಶ್, ನಾರಾಯಣಸ್ವಾಮಿ ಮುಂತಾದವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಇದೇ ಹೊತ್ತಿಗೆ ಬರೆದಿದ್ದೆಲ್ಲವೂ ಸಾಹಿತ್ಯ ಎಂದು ಹೇಳಲೂ ಬರುವುದಿಲ್ಲ. ಇಂದು ಇರುವ ಒಂದು ದೊಡ್ಡ ಅಪಾಯ ಎಂದರೆ ಕೀರ್ತಿ ಅಥವಾ ಗುರುತಿಸುವಿಕೆ ಬಹಳ ಬೇಗ ಸಿಗುತ್ತಿರುವುದ...