ಹೆಲ್ತ್ ಫಾರ್ Only rich!.
ಇದೆಲ್ಲಾ ಹೇಗಾಯ್ತು ಕೊಂಚ ನೋಡೋಣ.
ನಮ್ಮ ದೇಶವು ಪರಕೀಯರ ನೇರ ಮುಷ್ಠಿಯಿಂದ ಪಾರಾದ ಬಳಿಕ ಹಲವಾರು ಕ್ಷೇತ್ರಗಳಲ್ಲಿ ದಾಪುಗಾಲನ್ನಿಟ್ಟಿತ್ತು. ಔಷಧ ತಯಾರಿಕೆಯ ಉದ್ದಿಮೆಯಲ್ಲಿ ಸಹ ಅದು ಮುಂದುವರೆದ ದೇಶಗಳೂ ಹುಬ್ಬೇರಿಸಿ ನಿಲ್ಲುವಂತೆ ಅಭಿವೃದ್ಧಿ ಸಾಧಿಸಿತು. ನಮ್ಮ ಸಕರ್ಾರವು ಪಾಲಿಸಿದ ಕೆಲವಾರು ಉತ್ತಮ ಆರ್ಥಿಕ ನೀತಿಗಳಿಂದಾಗಿ ನಮ್ಮ ದೇಶದ ಔಷದೋದ್ಯಮವನ್ನು MNC ಸ್ಪರ್ಧೆಯಿಂದ ರಕ್ಷಿಸಿ ಅದು ಅಭೂತಪೂರ್ವ ಬೆಳವಣಿಗೆ ಸಾಧಿಸುವಂತೆ ಮಾಡಲಾಗಿತ್ತು. ಔಷದ್ಯುತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಿ ಇಡೀ ಪ್ರಪಂಚದಲ್ಲಿ ನಾವೇ ಮೂರನೇ ಸ್ಥಾನಪಡೆಯುವ ಹಂತಕ್ಕೆ ಈ ಬೆಳವಣಿಗೆ ತಲುಪಿತು. ಮಾತ್ರವಲ್ಲ ಜನರ ಅಗತ್ಯಕ್ಕನುಗುಣವಾಗಿ ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದೂ ನಮ್ಮ ಉದ್ದಿಮೆಯ ಹೆಗ್ಗಳಿಕೆ.
2105ರ ಸುಮಾರಿಗೆ ಭಾರತದ ಔಷಧಿ ಮಾರುಕಟ್ಟೆಯಲ್ಲಿ ಒಂದು ವರ್ಷಕ್ಕೆ ನಡೆಯುವ ವಹಿವಾಟು ಎಷ್ಟು ಗೊತ್ತೇ? ಬರೋಬ್ಬರಿ 90ಸಾವಿರ ಕೋಟಿ!
ಈಗ್ಗೆ ಎರಡು ವರ್ಷಗಳ ಹಿಂದೆ ಅಮೆರಿಕದಿಂದ ಶುರುವಾಗಿ ಹಲವಾರು ದೇಶಗಳ ಆರ್ಥಿಕತೆಗಳೇ ಕುಸಿಯತೊಡಗಿ ಅನೇಕ ಉದ್ದಿಮೆಗಳು ನಡುಗತೊಡಗಿದಾಗಲೂ ಭಾರತವನ್ನು ದೃಢವಾಗಿ ನಿಲ್ಲಿಸಿದ್ದು ಇಂತಹ ಉದ್ದಿಮೆಗಳೇ.
ದುರಾದೃಷ್ಟವಶಾತ್ ಇತ್ತೀಚಿನ ವರ್ಷಗಳಲ್ಲಿ ನಮ್ಮ ಔಷಧೋದ್ದಿಮೆಯ ದಿಕ್ಕು ಬೇರೆಯೇ ಹಾದಿ ಹಿಡಿದಿರುವುದನ್ನು ಇತ್ತೀಚಿನ ಬೆಳವಣಿಗೆಗಳು ತೋರಿಸಿವೆ.
ಸ್ವಾತಂತ್ರ್ಯಾನಂತರದಲ್ಲಿ ನಮಗೆ ಬೇಕಾದ ಔಷಧಿ ಸರಕುಗಳಿಗಾಗಿ ನಾವು ಬೇರೆಯವರನ್ನೇ ಅವಲಂಬಿಸಬೆಕಾಗಿದ್ದುದನ್ನು ಕಂಡು ಅಂದಿನ ಸರ್ಕಾರಗಳು ನಮ್ಮವೇ ಆದ ಔಷಧಿ ಕಂಪನಿಗಳನ್ನು ಪೋಷಿಸಿದವು. ಅದರಲ್ಲೂ 1970ರ ನಮ್ಮ ಪೇಟೆಂಟ್ ಕಾಯ್ದೆ ದೈತ್ಯ ಬಹುರಾಷ್ಟ್ರೀಯ ಕಂಪನಿಗಳ ಎದುರು ಭಾರತೀಯ ಕಂಪನಿಗಳು ಬೆಳೆಯಲು ಅನುವು ಮಾಡಿಕೊಟ್ಟಿತ್ತು. ಅದರ ಪ್ರಕಾರ ಯಾವುದೇ ಕಂಪನಿ ಒಂದು ಔಷಧಿ ಕಂಡು ಹಿಡಿದರೆ ಅದು ಅದನ್ನು ತಯಾರು ಮಾಡುವ `ಪ್ರಕ್ರಿಯೆ'ಗೆ(process) ಮಾತ್ರ ಪೇಟೆಂಟ್ ಮಾಡಿಸಿಕೊಳ್ಳಬಹುದಿತ್ತು. ಇದರ ಉಪಯೋಗವನ್ನು ಪಡೆದ ನಮ್ಮ ವಿಜ್ಞಾನಿಗಳು ಅದೇ ಔಷಧಿಯನ್ನು ನಮ್ಮದೇ ರೀತಿಯಲ್ಲಿ ಕಂಡುಹಿಡಿದ ಪರಿಣಾಮವಾಗಿ ಆ ಔಷಧಿಗಳು ನಮಗೆ ಅಗ್ಗದ ದರದಲ್ಲಿ ದೊರೆಯುವಂತಾದವು. ಇಂತಹ ನೂರಾರು ಬಗೆಯ ಔಷಧಿಗಳನ್ನು ನಮ್ಮ ವಿಜ್ಞಾನಿಗಳು ಕಂಡುಹಿಡಿದು ನಮ್ಮ ಔಷಧೋದ್ದಿಮೆ ಬೃಹತ್ ಗಾತ್ರದಲ್ಲಿ ಬೆಳೆಯಲು ಕಾರಣರಾಗಿದ್ದರು. ಇದರೊಂದಿಗೆ ಭಾರತದ `1978ರ ಡ್ರಗ್ ಪಾಲಿಸಿ' ವಿದೇಶದ ಕಂಪನಿಗಳಿಗೆ ಔಷಧಿ ತಯಾರಿಕೆಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿಬಿಟ್ಟಿತ್ತು. ಹೀಗಾಗಿ ಔಷಧೋದ್ದಿಮೆಯಲ್ಲಿ ಶೇ75ರಷ್ಟಿದ್ದ ಎಂಎನ್ಸಿಗಳ ಪಾಲು ಕ್ರಮೇಣ ಕೇವಲ ಶೇ.25ಕ್ಕೆ ಇಳಿಯಿತು. ನಾವು ಸ್ವಾವಲಂಬಿಗಳಾಗಿದ್ದು ಮಾತ್ರವಲ್ಲ ಇತರ ದೇಶಗಳಿಗೂ ರಫ್ತು ಮಾಡಬಲ್ಲಷ್ಟು ಸಾಮರ್ಥ್ಯವನ್ನೂ ಪಡೆದವು.
1995ರಲ್ಲಿ ವಿಶ್ವ ವ್ಯಾಪಾರ ಒಪ್ಪಂದಕ್ಕೆ (ಡಬ್ಲ್ಯೂಟಿಓ) ಸಹಿ ಹಾಕಿದ ತರುವಾಯ ನಮ್ಮ ದಿಕ್ಕು ಬೇರೆಯಾಯಿತು. ಹಲವಾರು ಕ್ಷೇತ್ರಗಳಲ್ಲಿ ನಮ್ಮ ನೀತಿಗಳನ್ನು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಯ್ತು. ಅಂತೆಯೇ ಅದು ತೀವ್ರವಾಗಿ ಪ್ರಭಾವಿಸಿದ ಮತ್ತೊಂದು ಕ್ಷೇತ್ರ ಔಷಧಿ ಉದ್ದಿಮೆ ಕೂಡಾ. ಅದು ಪೇಟೆಂಟ್ ನೀತಿಯ ಬದಲಾವಣೆಯ ಮೂಲಕ. ಅದರಂತೆ 2005ರಲ್ಲಿ ಆ ಕೆಲಸವೂ ಮುಗಿಯಿತು. ನಂತರ ಏನಿದ್ದರೂ `Product Patent'ನ ಆಳ್ವಿಕೆಯೇ. ಅಂದರೆ ಯಾವುದೇ ರೋಗಕ್ಕೆ ಅಮರಿಕದಲ್ಲೋ, ಜಪಾನ್ನಲ್ಲೋ ಒಂದು ದುಬಾರಿ ಔಷಧಿಯನ್ನು ಕಂಡು ಹಿಡಿದರೆ ಅದನ್ನು ನಮ್ಮದೇ `ಪ್ರಕ್ರಿಯೆ'ಯಲ್ಲಿ ನಾವು ಜನಸಾಮಾನ್ಯರಿಗೆ ಎಟಕುವಂತೆ ಕಡಿಮೆ ಬೆಲೆಯಲ್ಲಿ ನೀಡಲು ಸಾಧ್ಯವಿಲ್ಲದಾಯ್ತು. ಏಕೆಂದರೆ ಈ ಡಬ್ಲೂಟಿಓ ಪ್ರೇರಿತ ಪೇಟೆಂಟ್ ತಿದ್ದುಪಡಿಯ ಪ್ರಕಾರ ಆ ಔಷಧಿಯ ಮರು ಉತ್ಪಾದನೆ ಮಾಡುವಂತೆಯೇ ಇಲ್ಲ! ಆ ಉತ್ಪನ್ನದ ಮೇಲೆಯೇ ಆ ದೈತ್ಯ ಕಂಪನಿ ಪೇಟೆಂಟ್ ಮಾಡಿಕೊಂಡುಬಿಟ್ಟಿರುತ್ತಲ್ಲ. ಜೊತೆಗೆ ಈ ಮೊದಲು 354 ಔಷಧಿಗಳು `ಬೆಲೆ ನಿಯಂತ್ರಣ'ಕ್ಕೆ ಒಳಪಟ್ಟಿದ್ದರೆ ಕ್ರಮೇಣ ಈ ಮೂಗುದಾರವನ್ನೂ ಸಡಿಲ ಬಿಟ್ಟಿದ್ದಾಯಿತು. ಈಗ ಬೆಲೆನಿತಂತ್ರಣಕ್ಕೊಳಡುವ ಔಷಧಗಳು ಮೂರು ಮತ್ತೊಂದು. ಹೀಗಾಗಿ ನಾವು ಅನಿವಾರ್ಯವಾಗಿ ಬಹುರಾಷ್ಟ್ರೀಯ ಕಂಪನಿಗಳು ಹೇಳಿದ ದುಬಾರಿ ಬೆಲೆಯನ್ನೇ ತೆರಬೇಕಾಗಿ ಬಂದಿತು. ಅಷ್ಟು ಮಾತ್ರವಲ್ಲ. ಈಗ ಎಂಎನ್ಸಿಗಳು ನಮ್ಮ ಹೊಲಗಳನ್ನು ನುಗ್ಗಿ ಮನಸೋಯಿಚ್ಛೆ ಮೇಯಲು ನಡುವೆ ಯಾವ ಬೇಲಿಯೂ ಇಲ್ಲ. ಇದರಿಂದಾಗಿ ಮತ್ತಷ್ಟು ಪೋತ್ಸಾಹಗೊಂಡ ವಿದೇಶೀ ಕಂಪನಿಗಳು ಈಗ ನಮ್ಮ ಔಷಧೋದ್ಯಮವನ್ನು ಪೂರಾ ಆಪೋಷನ ತೆಗೆದುಕೊಳ್ಳ ಹತ್ತಿವೆ.
ಔಷಧ ಉದ್ದಿಮೆಯಲ್ಲಿರುವ ಎಂಎನ್ಸಿಗಳಿಗೂ ಸಹ ಇಂದು ಇಂದು ತಮ್ಮ ಮಾರುಕಟ್ಟೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕೆಂದರೆ ಅವು ಭಾರತೀಯ ಕಂಪನಿಗಳೆದುರು ತೀವ್ರ ಪೈಪೋಟಿಯನ್ನೆದುರುಸುವುದು ಅನಿವಾರ್ಯವಾಗಿದೆ. ಈ ಪೈಪೋಟಿಯಲ್ಲಿ ಸಹಜವಾಗಿ ಅವರ ಕೈಯೇ ಮೇಲಾಗುತ್ತಿದೆ. ಕಳೆದ ಮೂರು ವರ್ಷಗಳ ಬೆಳವಣಿಗೆಯನ್ನೇ ನೋಡಿ. ಇಲ್ಲಿ ಹಲವಾರು ಭಾರತೀಯ ಎಂಎನ್ಸಿಗಳೊಂದಿಗೆ ಸ್ಪರ್ಧಿಸಲಾಗದೇ ಕೊನೆಗೂ ತಮ್ಮನ್ನು ತಾವು ಎಂಎನ್ಸಿಗಳೊಂದಿಗೆ ವಿಲೀನಗೊಳಿಸಿಕೊಂಡಿವೆ ಇಲ್ಲವೇ ಪರಭಾರೆಯಾಗಿವೆ. ಉದಾಹರಣೆಗೆ ದೇಶದ ಅತಿದೊಡ್ಡ ಔಷಧಿ ತಯಾರಿಕಾ ಕಂಪನಿಯಾಗಿದ್ದ ರಾನ್ಬಾಕ್ಸಿ ಲ್ಯಾಬೊರೇಟರೀಸ್ ನ್ನು 2008ರ ಜುಲೈ ನಲ್ಲಿ ಜಪಾನ್ನ ದಯೀಚಿ ಸಂಕ್ಯೋ 20ಸಾವಿರ ಕೋಟಿ ರೂಗಳಿಗೆ ಕೊಂಡುಕೊಂಡಿತು. (ಬಾಕ್ಸ್ ನೋಡಿ.) ದೇಶದ ಮತ್ತೊಂದು ದೊಡ್ಡ ಕಂಪನಿ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಬ್ರಿಟನ್ನ ಗ್ಲಾಕ್ಸೋ ಸ್ಮಿತ್ಕೈನ್(ಜಿಎಸ್ಕೆ) ಕಂಪನಿಯೊಂದಿಗೆ ವಿಲೀನಗೊಂಡಿತು. ಕಳೆದ 2000ನೇ ಇಸವಿ ಏಪ್ರಿಲ್ ನಿಂದ 2008ರ ಡಿಸೆಂಬರ್ ನಡುವಿನ ಅವಧಿಯಲ್ಲಿ ನಮ್ಮ ದೇಶದ ಔಷಧಿ ಉದ್ದಮೆಯೊಂದರಲ್ಲೇ ಹರಿದು ಬಂದಿರುವ ಬಂಡವಾಳ 6750 ಕೋಟಿರೂ.ಗಿಂತ ಹೆಚ್ಚು ಎಂದು ಒಂದು ಅಂಕಿಂಶ ಹೇಳುತ್ತದೆ.
ಇದು ಹೀಗೇ ಮುಂದುವರೆದರೆ, ಮುಂದೊಮ್ಮೆ ಔಷದಿ ಉದ್ದಿಮೆಯ ದಿಕ್ಕನ್ನು ಎಂಎನ್ಸಿಗಳೇ ನಿರ್ಧರಿಸುವಂತಾದರೆ ಮಾತ್ರೆ, ಔಷಧಿಗಳ ಮೇಲೆ ಅವರು ವಿಧಿಸುವ ಬೆಲೆಯನ್ನು ಬಡಭಾರತೀಯರು ಭರಿಸಲು ಶಕ್ಯವಿದ್ದಾರೆಯೇ ಎಂಬುದೇ ಈಗ ಕೇಳಿಕೊಳ್ಳಬೆಕಾದ ಪ್ರಶ್ನೆ. ಈಗಾಗಲೇ ದೇಶದ ಶೇ65ರಷ್ಟು ಜನರಿಗೆ ತಮಗೆ ಬೇಕಾದ ಔಷಧೋಪಚಾರಗಳ ಲಭ್ಯತೆ ಇಲ್ಲದಿರುವುದು ಮತ್ತೊಂದು ವಾಸ್ತವ. ದೇಶದಲ್ಲಿ ಒಟ್ಟು ಆರೋಗ್ಯದ ಮೇಲೆ ಭರಿಸುವ ಒಟ್ಟಾರೆ ಖರ್ಚಿನಲ್ಲಿ ಶೇ.75ರಷ್ಟನ್ನು ಜನರು ತಾವೇ ಭರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ತಾವು ಆರೋಗ್ಯಕ್ಕೆ ಖರ್ಚು ಮಾಡುವ ಹಣದಲ್ಲಿ ಶೇ.80 ರಷ್ಟನ್ನು ಮಾತ್ರೆ, ಇಂಜೆಕ್ಷನ್, ಟಾನಿಕ್್ಗಳಿಗಾಗಿಯೇ ವ್ಯಯಿಸಬೇಕಾಗಿರುವಾಗ ಔಷಧಿ ಉದ್ದಿಮೆಯಲ್ಲಿನ ಈ ಹೊಸ ಬೆಳವಣಿಗೆ ಜನಸಾಮಾನ್ಯರ ಮೇಲೆ ಎಂತಹ ಪರಿಣಾಮ ಬೀರಬಹುದು?!
*****
ಭಾರತದ ದೊಡ್ಡ ಕಂಪನಿಗಳನ್ನು ನುಂಗಿದ ಎಂಎನ್ಸಿಗಳು
ವರ್ಷ ಭಾರತದ ಕಂ ಎಂಎನ್ಸಿ ಯಾವ ದೇಶದ್ದು
ಆ.2006 ಮ್ಯಾಟ್ರಿಕ್ಸ್ ಲ್ಯಾಬ್ ಮೈಲಾನ್ ಇಂಕ್ ಅಮೆರಿಕ
ಏ.2008 ಡಾಬರ್ ಫಾರ್ಮಾ ಫ್ರೆಸೆನಿಯಸ್ ಕಬಿ ಸಿಂಗಪುರ
ಜೂ.2008 ರಾನ್ಬಾಕ್ಸಿ ಲ್ಯಾಬ್ ದಯೀಚಿ ಸಂಕ್ಯೋ ಜಪಾನ್
ಡಿ.2009 ಆರ್ಕಿಡ್ ಕೆಮಿಕಲ್ಸ್ ಹೊಸ್ಪಿರಾ ಅಮೆರಿಕ
ಮೇ.2010 ಪಿರಾಮಲ್ ಹೆಲ್ತ್ ಕೇರ್ ಅಬ್ಬಾಟ್ ಲ್ಯಾಬೊರೆಟರಿ ಅಮೆರಿಕ
****
ಒಂದು ದೇಶದಲ್ಲಿ ತಯಾರಿಸಲಾಗುವ ಔಷಧ ಮಾತ್ರೆಗಳು ಆ ದೇಶದ ಜನರ ಆರೋಗ್ಯಕ್ಕಾಗಿ ಅಲ್ಲದೇ ಕೇವಲ ಬಿಸಿನೆಸ್ ಕಂಪನಿಗಳ, ಅಥವಾ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ತಯಾರಿಸಲ್ಪಟ್ಟರೆ ಏನಾಗುತ್ತದೆ??
ಇದು ಸಧ್ಯದ ನಮ್ಮ ಭಾರತದ ಸ್ಥಿತಿ. ಇದಕ್ಕೆ ನಮ್ಮ ರಾಜಕಾರಣಿಗಳ, ಉದ್ಯಮಿಗಳ ದುರಾಸೆ ಒಂದೆಡೆ ಕಾರಣವಾದರೆ ವಿದೇಶೀ ದೈತ್ಯ ಕಂಪನಿಗಳ ಹಸಿವು ಮತ್ತೊಂದು ಕಾರಣ.. ಇದೆಲ್ಲಾ ಹೇಗಾಯ್ತು ಕೊಂಚ ನೋಡೋಣ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ