ಫೆಬ್ರವರಿ 22, 2010

Charles Darwin


ಜೀವ ವಿಜ್ಞಾನದ ಮಹಾನ್ ಚೇತನ ಚಾರ್ಲ್ಸ್ ಡಾರ್ವಿನ್ -200

ಕ್ರಿ.ಶ.1831ರ ಜನವರಿ ಮಾಸದ ಒಂದು ನಡುಹಗಲು. ಬಿರುಗಾಳಿ ಬಲವಾಗಿ ಬೀಸುತ್ತಿತ್ತು. ಮೈಕೊರೆವ ಚಳಿ. ಶಾಂತಸಾಗರದಲ್ಲಿ ಹಾಯ್ದು ಹೋಗುತ್ತಿದ್ದ ಹಡಗೊಂದು ಗಜಗಾತ್ರದ ಅಲೆಗಳ ಅಬ್ಬರಕ್ಕೆ ಸಿಕ್ಕು ಬುಗರಿಯಂತಾಡುತ್ತಾ ಮೇಲೆ ಕೆಳಗೆ ಏರುತ್ತಾ ಇಳಿಯುತ್ತಾ ಸಾಗತೊಡಗಿತ್ತು. ಆ ನೌಕೆಯೊಳಗಿದ್ದ 22ರ ಹರೆಯದ ಯುವಕ ತೀವ್ರವಾಗಿ ಬಳಲಿ ಬೆಂಡಾಗಿಹೋಗಿದ್ದ. ಪ್ರಾಣಸಂಕಟದಿಂದ ಅಸ್ವಸ್ಥಗೊಂಡಿದ್ದ ಆ ಯುವಕ ಇನ್ನು ತನ್ನಿಂದ ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಿದ್ದ. ಆದರೆ ಅದೆಲ್ಲಿತ್ತೋ ಹುಮ್ಮಸ್ಸು ಒತ್ತಟ್ಟಿಕೊಂಡು ಬಂದು "ಊಂ ಹೂಂ.. ಹಾಗಾಗಕೂಡದು. ನಾನು ಈ ಸಾಗರಯಾನವನ್ನು ಪೂರೈಸಲೇ ಬೇಕು. ಪ್ರಾಣಹೋದರೂ ಅಡ್ಡಿಯಿಲ್ಲ" ಎಂದು ಗಟ್ಟಿ ನಿರ್ಧಾರ ತಳೆದ. ಆ ಒಂದು ದಿಟ್ಟ ನಿರ್ಧಾರ ಇಡೀ ಮನುಕುಲಕ್ಕೇ ಒಬ್ಬ ಅದ್ವಿತೀಯ, ಅಪ್ರತಿಯ ಜೀವವಿಜ್ಞಾನಿಯನ್ನು ನೀಡಿತು. ಊ.ಒ.ಖ. ಬೀಗಲ್ ಎಂಬ ಹೆಸರಿನ ಬ್ರಿಟಿಷ್ ರಾಯಲ್ ನೌಕಾಪಡೆಯ ಹಡಗಿನಲ್ಲಿದ್ದ ಆ ಯುವಕನೇ ಚಾರ್ಲ್ಸ್ ರಾಬರ್ಟ್ ಡಾರ್ವಿನ್ . 'ವಿಕಾಸವಾದ ಸಿದ್ಧಾಂತ'ವನ್ನು ವಿಶ್ವಕ್ಕೆ ನೀಡಿದ ಡಾರ್ವಿನ್ .

ಡಾರ್ವಿನ್ ನ ಬಾಲ್ಯಜೀವನ
ಚಾರ್ಲ್ಸ್ ಡಾರ್ವಿನ್ 1809ರ ಫೆಬ್ರವರಿ 12ರಂದು ಇಂಗ್ಲೆಂಡಿನ ಶ್ರೂಸ್ಬೆರಿಯಲ್ಲಿ ಜನಿಸಿದ. ವಿಶೇಷವೆಂದರೆ ಅದೇ ದಿನವೇ ಅಮೆರಿಕದ ಮಹಾನ್ ನಾಯಕ ಅಬ್ರಹಾಂ ಲಿಂಕನ್ ಕೂಡ ಜನಿಸಿದ್ದ!. ಡಾವರ್ಿನನ್ನನ ತಂದೆ ರಾಬರ್ಟ್ ಡಾರ್ವಿನ್- ಒಬ್ಬ ವೈದ್ಯ. ತಾಯಿ ಸೂಸನ್ನ ಡಾರ್ವಿನ್. ಆತನ ತಾತ ಇರಾಸ್ಮಸ್ ಡಾರ್ವಿನ್; ಒಬ್ಬ ಪ್ರಕೃತಿ ವಿಜ್ಞಾನಿ. ಡಾರ್ವಿನ್ ತಂದೆಗೆ ತನ್ನ ಮಗ ಮುಂದೆ ಒಬ್ಬ ಕ್ರೈಸ್ತ ಧಾಮರ್ಿಕ ಮಠಾದಿಪತಿಯಾಬೇಕೆಂಬ ಬಯಕೆ. 1817ರಲ್ಲಿ ತನ್ನ ಹುಟ್ಟೂರಿನ ಶಾಲೆಯಲ್ಲಿ ಸೇರಿಕೊಂಡನಾದರೂ ಆ ಶಾಲೆಯ ನೀರಸ ಜೀವನ ಬಾಲಕ ಡಾರ್ವಿನ್ ಗೆ ಹಿಡಿಸಲಿಲ್ಲ. ಅಲ್ಲಿ ಅವನ ಕೂತೂಹಲದ ಪ್ರಶ್ನೆಗಳಿಗೆ ಉತ್ತರಿಸುವ ಶಿಕ್ಷಕರಿರಲಿಲ್ಲ. ತರಗತಿಯಲ್ಲಿ ಪೆಚ್ಚಾಗಿ ಕುಳಿತಿರುತ್ತಿದ್ದ ಡಾರ್ವಿನ್ ನನ್ನು ಎಲ್ಲರೂ 'ದಡ್ಡ', ಮಡ್ಡು' ಎಂದು ಮೂದಲಿಸುತ್ತಿದ್ದರು. ಆದರೆ ಡಾರ್ವಿನ್ ದು ಬೇರೆಯದೇ ಲೋಕವಾಗಿತ್ತು. ಅವನಿಗೆ ತನ್ನ ಸುತ್ತಮುತ್ತಲ ನಿಸರ್ಗ, ಕಾಡು, ಗುಡ್ಡ, ನದಿ, ಕಡಲತಡಿಗಳೆಂದರೆ ವಿಚಿತ್ರ ಕೂತೂಹಲ. ಹಕ್ಕಿ, ಪ್ರಾಣಿ, ಕೀಟಗಳನ್ನು ಕಂಡರೆ ಅವನ ಜೀವ ಕುಣಿಯುತ್ತಿತ್ತು. ಬಣ್ಣ ಬಣ್ಣದ ಚಿಟ್ಟೆಗಳನ್ನು ಹಿಡಿದು ಸಂಗ್ರಹಿಸುವ, ಹಕ್ಕಿಗಳನ್ನು ಬೇಟೆಯಾಡುವ, ತರತರದ ಕಲ್ಲುಚೂರು, ಲೋಹದ ಚೂರುಗಳನ್ನು ಹೆಕ್ಕಿ ಸಂಗ್ರಹಿಸಿ, ವಿಂಗಡಿಸುವ, ಮುಂತಾದ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ, ಆದಮ್ಯ ಉತ್ಸಾಹ ತೋರುತ್ತಿದ್ದ. ಬಾಲಕ ಡಾರ್ವಿನ್ ಪಾಲಿಗೆ ಪ್ರಕೃತಿಯೇ ಶಾಲೆ; ಶಾಲೆಯೇ ವಿಶ್ರಾಂತಿ ತಾಣವಾಗಿತ್ತು. ತನ್ನ ತಾಯಿಯನ್ನು ಕಳೆದುಕೊಂಡು ಸಹೋದರ ಇರಾಸ್ಮಸ್ನೊಂದಿಗೆ ಹತ್ತಿರದ ವಸತಿ ಶಾಲೆಯೊಂದನ್ನು ಸೇರಿದ್ದ ಡಾರ್ವಿನ್ 1825ರಲ್ಲಿ ತಂದೆಯ ಅಣತಿಯ ಮೇರೆಗೆ ವೈದ್ಯ ತರಬೇತಿಗೆಂದು ಎಡಿನ್ ಬರ್ಗ್ ವಿಶ್ವವಿದ್ಯಾಲಯ ಸೇರಿದ. ಆದರೆ ಅಲ್ಲಿ ಆತ ಮಾಡಿದ್ದೆಂದರೆ ಸಮುದ್ರ ಕಿನಾರೆಗಳಲ್ಲಿ ಪ್ರಾಣಿಗಳನ್ನು ಸಂಗ್ರಹಿಸುವುದು; ಬೆಸ್ತರೊಂದಿಗೆ ಚಿಪ್ಪುಮೀನು (ಔಥಿಣಜಡಿ)ಗಳನ್ನು ಹಿಡಿಯುವುದು. ಇತ್ಯಾದಿ. ಆ ಹೊತ್ತಿಗೆ ಜಾನ್ ಎಡ್ಮಂಡ್ ಸ್ಟೋನ್ ಎಂಬ ನೀಗ್ರೋಯುವಕನ ಸಖ್ಯ ಬೆಳೆಸಿ, ಸತ್ತ ಪ್ರಾಣಿಪಕ್ಷಿಗಳ ಚರ್ಮದೊಳಗೆ ಹತ್ತಿ, ಹುಲ್ಲು ತುಂಬಿ ಅವುಗಳು ಸಾಕ್ಷಾತ್ ಜೀವಂತವಾದವುಗಳೆಂಬಂತೆ ಮಾಡುವ ಕಲೆ (ಣಚಿಥಜಜಡಿಟಥಿ) ಯನ್ನೂ ಕಲಿತುಕೊಂಡ. 1827ರಲ್ಲಿ ವೈದ್ಯ ತರಬೇತಿಗೆ ಗುಡ್ ಬೈ ಹೇಳಿ ಬಂದ ಡಾರ್ವಿನ್ ನನ್ನು ಆತನ ತಂದೆ ಗದರಿಸಿ 1828ರಲ್ಲಿ ಕೇಂಬ್ರಿಜ್ ವಿ.ವಿ.ಯಲ್ಲಿ ಮತಧರ್ಮಶಾಸ್ತ್ರವನ್ನು ಕಲಿಯಲು ಕಳುಹಿಸಿದರು. ಅಲ್ಲೂ ಅಷ್ಟೇ, ಕ್ಲಾಸಿಗೆ ಚಕ್ಕರ್ ಬೇಟೆಗೆ ಹಾಜರ್ ಎಂಬ ಹಾಡಾಯಿತು. ಅಲ್ಲಿ ಜಾನ್ ಸ್ಟೀವನ್ ಹೆನ್ಸ್ ಲೋ ಎಂಬ ಸಸ್ಯಶಾಸ್ತ್ರ ಪ್ರಾದ್ಯಾಪಕರ ಪರಿಚಯ ಡಾರ್ವಿನ್ ಗಾದದ್ದು ಆತನ ಜೀವನಗತಿಯನ್ನೇ ಬದಲಿಸಿತು. ಚಾರ್ಲ್ಸ್ ಡಾರ್ವಿನ್ ಒಳಗಿದ್ದ ಪ್ರಕೃತಿ ಇತಿಹಾಸದ ಬಗೆಗಿನ ಕುತೂಹಲ, ಪರೀಶೀಲನಾ ಶೀಲತೆ, ನಿಷ್ಠೆಗಳಿಗೆ ನೀರೆರೆದು ಪೋಷಿಸಿದ ಹೆನ್ಸ್ಲೋ ತಮ್ಮ ಜ್ಞಾನವನ್ನೇಲ್ಲಾ ಧಾರೆಯೆರೆದು ಆತನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕಾರಣರಾದರು. ಡಾರ್ವಿನ್ ಜೀವನದಲ್ಲಿ ಮೊದಲಬಾರಿಗೆ ಒಬ್ಬ ನಿಜವಾದ ಗುರುವನ್ನು ಕಂಡುಕೊಂಡಿದ್ದ. ಅಂತೂ 1831ರಲ್ಲಿ ಡಾರ್ವಿನ್ ಬಿ.ಎ.ಪದವಿ ಪಡೆದನು.

ಬೀಗಲ್ ಮೇಲಿನ ಪ್ರವಾಸ ಯಾತ್ರೆ
ಇಂಗ್ಲೆಂಡಿನ ರಾಣಿಯು ಭೂಗೋಳದ ಸುತ್ತಲೂ ಕಾಲಮಾಪಕ ಯಂತ್ರಗಳ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದೊಂದಿಗೆ 1831ರಲ್ಲಿ ಊ.ಒ.ಖ. ಬೀಗಲ್ ಹಡಗನ್ನು ಚಿಲಿ, ಪೆರು, ಪಟಗಾನಿಯ, ಟಿಯೆರಾಡೆಲ್ಪಿಗೋ ಹಾಗೂ ಕೆಲವು ಪೆಸಿಫಿಕ್ ದ್ವೀಪಗಳ ಕರಾವಳಿಗಳಲ್ಲಿ ವರ್ವೇಕ್ಷಣೆ ನಡೆಸಲು ಕಳಿಸುವವಳಿದ್ದಳು. ಅದರಲ್ಲಿ ರಾಯಲ್ ನೌಕಾಪಡೆಯ ಕ್ಯಾಪ್ಟನ್ ರಾಬರ್ಟ್ ಫಿಜ್ರಾಯ್ನೊಂದಿಗೆ ಒಬ್ಬ ಪ್ರಕೃತಿ ವಿಜ್ಞಾನಿಗೂ ಕರೆ ನೀಡಲಾಯ್ತು. ಆಗ ಪ್ರೊ|| ಹೆನ್ಸ್ಲೋ ಯುವಕ ಡಾರ್ವಿನ್ ನ್ನನ್ನು ಕರೆದೊಯ್ಯಲು, ಶಿಫಾರಸು ಮಾಡಿ ಒಪ್ಪಿಸಿದರು ಆದರೆ, ಇದಕ್ಕೆ ಒಪ್ಪದ ಅವನ ತಂದೆಯನ್ನು ಆತನ ಚಿಕ್ಕಪ್ಪನ ಮೂಲಕ ಮನವೊಲಿಸಲಾಯ್ತು. 1831ರ ಡಿಸೆಂಬರ್ 27ರಮದು ಬೀಗಲ್ ನೌಕೆಯು ಇಂಗ್ಲೆಂಡಿನ ದೇವನ್ ಪೋರ್ಟ್ ಎಂಬಲ್ಲಿಂದ ತನ್ನ ಯಾನವನ್ನು ಆರಂಭಿಸಿತು. ಅಲ್ಲಿಂದ ಅವಿರತವಾಗಿ ಐದು ವರ್ಷಗಳಕಾಲ ಅದು ಸಾಗಿತು. ಪೃಥ್ವಿಯ ದಕ್ಷಿಣಾರ್ಧಗೋಳವನ್ನೆಲ್ಲಾ ಪರ್ಯಟನೆ ನಡೆಸಿದ ಬೀಗಲ್, ವದರ್ಿ ದ್ವೀಪಗಳ ಭೂಶಿಖರಗಳನ್ನು ಮೊದಲು ತಲುಪಿ ಅಲ್ಲಿನ ಜ್ವಾಲಾಮುಖಿಗಳಿಂದಾದ ಅಗ್ನಿಪರ್ವತಗಳನ್ನು ಅಧ್ಯಯನ ನಡೆಸಿ, ಬ್ರೆಜಿಲ್, ಟಿಯೆರಾ, ಚಿಲಿ, ಅರ್ಜೆಂಟೀನಾ, ಆಂಡೀಸ್, ಗ್ಯಾಲಪಾಗಾಸ್ ದ್ವೀಪ ಸಮಚ್ಛಯ, ತಾಹಿತಿ, ನ್ಯೂಝೀಲ್ಯಾಂಡ್, ಆಸ್ವ್ರೇಲಿಯ, ಕಾಕಸ್, ದಕ್ಷಿಣ ಆಫ್ರಿಕಾ, ಸೆಂಟ್ ಹೆಲೆನಾ, ಮತ್ತೆ ಬ್ರೆಜಿಲ್ ಮುಖಾಂತರ ತಾಯ್ನಾಡನ್ನು 1836ರ ಅಕ್ಟೋಬರ್ 2 ರಂದು ಫಾಲ್ವತಾಲ್ ಎಂಬಲ್ಲಿ ತಲುಪಿತು.
ಈ ಯಾನದಲ್ಲಿ ಭೇಟಿ ನೀಡಿದ ಪ್ರತಿಯೊಂದು ಕಡೆಯಲ್ಲಿಯೂ ಡಾರ್ವಿನ್ ಪ್ರಕೃತಿಯ ಪ್ರತಿವಿವರವನ್ನೂ ಅಭ್ಯಸಿಸಿದ. ತಾನು ಗಮನಿಸಿದ್ದನ್ನೆಲ್ಲಾ ನಮೂದಿಸಿಕೊಂಡ. ಅಗ್ನಿಪರ್ವತಗಳ ವಿನ್ಯಾಸ, ತೀರ ಪ್ರದೇಶಗಳ ಭೂಲಕ್ಷಣ, ಕೀಟ ಮತ್ತು ಸಸ್ಯ ಪ್ರಬೇಧಗಳು, ಹವಳದ ದಂಡೆಗಳು, ವಿವಿಧ ಪ್ರಾಣಿ-ಪಕ್ಷಿ ಪ್ರಬೇಧಗಳ ಸಹಜೀವನ ಹಾಗೂ ಸಂಘರ್ಷ, ಹೀಗೆ ಎಲ್ಲವನ್ನೂ ಒಳಗಣ್ಣಿನಿಂದ ವೀಕ್ಷಿಸಿದ. ಉಷ್ಣವಲಯದ ಜೀವಜಾತಿಗಳ ಅಸಂಖ್ಯ ಶಾಖೆಗಳನ್ನು ಕಂಡು ಬೆಕ್ಕಸಬೆರಗಾದ. ಹಾದಿಮದ್ಯದಲ್ಲಿ ಸಿಕ್ಕ ಸಸ್ಯ, ಪಕ್ಷಿ, ಪ್ರಾಣಿಗಳ ಮಾದರಿಗಳನ್ನು; ಪಳೆಯುಳಿಕೆಗಳನ್ನು; ಶಿಲಾಮಾದರಿಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಕೊಂಡ. ಈ ನೌಕಾಯಾನದ ಶುರುವಿಗೆ ಕೇವಲ ಕುತೂಹಲ, ಆಸಕ್ತಿಗಳನ್ನು ಮಾತ್ರವೇ ಹೊಂದಿ ಹೊರಟಿದ್ದ ಯುವಕ ಡಾರ್ವಿನ್ ಯಾನದ ಅಂತ್ಯದ ವೇಳೆಗೆ ಇಡೀ ಜಗತ್ತು ನಂಬಿಕೊಂಡು ಬಂದಿದ್ದ ನಂಬಿಕೆಗಳನ್ನೇ ಬುಡಮೇಲು ಮಾಡುವ ಸಿದ್ಧಾಂತವೊಂದನ್ನು ವಿಜ್ಞಾನಿಯ ಮನೋಬಲವನ್ನು ಪಡೆದುಕೊಂಡು ಬಿಟ್ಟಿದ್ದ!.
ಡಾರ್ವಿನ್ ವಿಕಾಸವಾದ ಸಿದ್ಧಾಂತ
ಆ ಕಾಲದಲ್ಲಿ ಇದ್ದ ನಂಬಿಕೆ ಎಂದರೆ ಜಗತ್ತಿನ ಸಕಲ ಜೀವಚರಗಳೂ ಸಹ ಆರುದಿನಗಳಲ್ಲಿ ದೇವರಿಂದ ಸೃಷ್ಟಿಯಾಗಿವೆ ಮತ್ತು ಸಕಲ ಜೀವಜಾತಿಗಳೂ ಬದಲಾಗದಂತವು ಎಂಬುದು. ಡಾರ್ವಿನ್ ಕೂಡಾ ಈ ನಂಬಿಕೆಗೆ ಹೊರತಾಗಿರಲಿಲ್ಲ. ಆದರೆ ಬೀಗಲ್ ಯಾನವು ಡಾರ್ವಿನ್ ನನ್ನು ಹೊಸ ಸತ್ಯಗಳೊಂದಿಗೆ ಮುಖಾಮುಖಿಯಾಗಿಸಿತು. ಏಕೆ ದೂರದೂರದ ಭೂಪ್ರದೇಶಗಳ ಪ್ರಾಣಿಗಳು ಒಂದೇ ರೂಪ ಹೊಂದಿವೆ? ಉದಾ: ದ. ಅಮೆರಿಕದ ರಿಯಾ ಜಾತಿಯ ಪಕ್ಷಿಯು ಆಫ್ರಿಕಾದ ಆಸ್ಟ್ರಿಚ್ ಪಕ್ಷಿಯನ್ನೇಕೆ ಹೋಲುತ್ತದೆ?. ಇನ್ರ್ನೊಂದೆಡೆ ಒಂದೇ ಭೂಪ್ರದೇಶದಲ್ಲಿದ್ದರೂ ಭಿನ್ನ ರೂಪದ ಪ್ರಾಣಿಗಳೇಕಿವೆ? ಉದಾ: ಗ್ಯಾಲಪಾಗಾಸ್ ನ ಒಂದೇ ಪರಿಸರದಲ್ಲಿನ ಹಕ್ಕಿಗಳೂ, ಆಮೆಗಳೂ ಸಂಪೂರ್ಣ ಭಿನ್ನ ಏಕೆ?. ಎದುರಾದ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಆಳವಾದ ಅದ್ಯಯನದಲ್ಲಿ ತೊಡಗಿದ ಡಾವರ್ಿನ್ ಅಂತಿಮವಾಗಿ ಒಂದು ಸ್ಪಷ್ಟನಿಲುವಿಗೆ ಬಂದ. ಜಗತ್ತಿನ ಜೀವ ಪ್ರಬೇಧಗಳು ನಿರಂತರವಾಗಿ ಮಾರ್ಪಾಡಾಗುತ್ತಿವೆ ಹಾಗೂ ಹಲವು ಜೀವಿ ಪ್ರಬೇಧಗಳು ಒಂದೇ ಪೂರ್ವಜರನ್ನು ಹೊಂದಿವೆ ಎಂಬುದೇ ಆ ನಿಲುವಾಗಿತ್ತು. ಈ ತೆರನಾದ ಜೀವಿಗಳ ಮಾರ್ಪಾಡು ಪ್ರಾಕೃತಿಕ ಆಯ್ಕೆ (ಓಚಿಣಣಡಿಚಿಟ ಜಟಜಛಿಣಠಟಿ)ಯ ಮೂಲಕ ನಡೆಯುತ್ತದೆ. ಬದುಕಿಗಾಗಿನ ಸಂಘರ್ಷದಲ್ಲಿ ಕಾಲಾನು ಕ್ರಮದಲ್ಲಿ ಜೀವಸಂಕುಲಗಳು ಮಾರ್ಪಾಡಾಗುತ್ತಾ ವಿಕಾಸ ಹೊಂದುತ್ತವೆ. ಅದರಲ್ಲಿ ಹೊಂದಾಣಿಕೆ ಪರತೆಯನ್ನು ಪ್ರದರ್ಶಿಸುವ ಜೀವಿಗಳು ಉಳಿಯುತ್ತವೆ ಉಳಿದವು ನಶಿಸುತ್ತವೆ. ಎಂದು ಪ್ರತಿಪಾದಿಸಿದ. 1839ರ ನವೆಂಬರ್ 24ರಂದು ಪ್ರಕಟಗೊಂಡ 'ಜೀವಸಂಕುಲಗಳ ಉಗಮ' ಎಂಬ ಕೃತಿಯು ವಿಕಾಸವಾದದ ಈ ತತ್ವಗಳನ್ನು ವಿವರಿಸಿತು. ಪ್ರಕಟಗೊಂಡ ದಿನವೇ ಅದರ ಎಲ್ಲಾ ಪ್ರತಿಗಳೂ ಖರ್ಚಾಗಿ ಬಿಟ್ಟಿದ್ದವು!. ಚಾರ್ಲ್ಸ್ ಡಾರ್ವಿನ್ ಸಿದ್ಧಾಂತದ ಪ್ರಖರ ವಿಚಾರಗಳು ಅಂದಿನ ಬೌದ್ಧಿಕ ವಲಯದಲ್ಲಿ ಕ್ರಾಂತಿಯನ್ನೇ ಎಬ್ಬಿಸಿದವು. ಹಲವು ಡಾರ್ವಿನ್ ವಿರೋಧಿಗಳು ಹಾಗೂ ಚರ್ಚ್ ನ ಆಡಳಿತವು ಚಾರ್ಲ್ಸ್ ಡಾರ್ವಿನ್ ಸಿದ್ಧಾಂತದ ಮೇಲೆ ದಾಳಿ ನಡೆಸಿದತು. ಆದರೆ ಥಾಮಸ್ ಹಸ್ಲೆ ಯಂತಹ ಮೇಧಾವಿಗಳು ಡಾರ್ವಿನ್ ಪರವಾಗಿ ನಿಂತು ವಿರೋಧಿಗಳ ಬಾಯಿ ಮುಚ್ಚಿಸಿದರು. ಮುಂದೆ ಡಾರ್ವಿನ್ ಮತ್ತಷ್ಟು ಅಧ್ಯಯನ, ಬರವಣಿಗೆಗಳ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಲೇ ಹೋದರು. ಜೀವ ವಿಜ್ಞಾನದ ಹತ್ತು ಹಲವು ವಿಚಾರಗಳ ಕುರಿತು ಹಲವಾರು ಕೃತಿಗಳನ್ನು ರಚಿಸಿದರು.

ಮಾನವತಾವಾದಿ ಡಾರ್ವಿನ್
ಡಾರ್ವಿನ್, ಜೀವಿಗಳ ಉಳಿವಿಗಾಗಿನ ಹೋರಾಟ ಹಾಗೂ ಪ್ರಾಕೃತಿಕ ಆಯ್ಕೆಯ ತತ್ವಗಳನ್ನು ಸಾಮಾಜಿಕ ನೀತಿಗಳಲ್ಲಿ ಅಳವಡಿಸಬಾರದು ಎಂದು ಪ್ರತಿಪಾದಿಸಿದರು. ಜೀತಗಾರಿಕೆಯ ಪದ್ಧತಿ, ಜನಾಂಗೀಯವಾದ, ಕಪ್ಪು ಜನರ ಮೇಲಿನ ಮೃಗೀಯ ದಬ್ಬಾಳಿಕೆಗಳನ್ನು ಡಾರ್ವಿನ್ ಖಡಾಖಂಡಿತವಾಗಿ ಖಂಡಿಸಿದ್ದರು. ಮೂಲನಿವಾಸಿಗಳ ಮೇಲಿನ ವಸಾಹತುಶಾಹಿ ದಬ್ಬಾಳಿಕೆಯನ್ನೂ ವಿರೋಧಿಸಿದ್ದರು. ಹಾಗೆಯೇ 'ಕೆಲವು ಜನಾಂಗಗಳು ಮುಂದುವರೆದಿರುತ್ತವೆ' ಎಂಬ ವಾದವನ್ನೂ ವಿರೋಧಿಸಿದ್ದರು. ಆದರೆ ಹಲವಾರು ಮಂದಿ ಡಾರ್ವಿನ್ ವಿಚಾರಗಳನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದು ನಡೆದಿದೆ. 'ಸಾಮಾಜಿಕ ಡಾರ್ವಿನ್ ವಾದ' ಎಂಬ ಎಡವಟ್ಟು ಸಿದ್ಧಾಂತವನ್ನು ಇದೇ ರೀತಿ ಚಾಲ್ತಿಯಲ್ಲಿ ತರಲಾಗಿದೆ. ಚಾರ್ಲ್ಸ್ ಡಾರ್ವಿನ್ ನಾಸ್ತಿಕವಾದಿಯಾಗಿರಲಿಲ್ಲ. ಆದರೆ, ಜೀವಸೃಷ್ಟಿಯ ಕುರಿತ ಅವರ ಚಿಂತನೆಗಳು ಅದುವರೆಗೂ ಪ್ರಚಲಿತದಲ್ಲಿದ್ದ ಬೈಬಲ್ನ ನಂಬಿಕೆಯನ್ನು ನುಚ್ಚುನೂರು ಮಾಡಿತು. ದೇವರು-ಧರ್ಮಗಳ ಹೆಸರಿನಲ್ಲಿ ಜನರನ್ನು ನಿಯಂತ್ರಣದಲ್ಲಿಟ್ಟುಕೊಂಡವರಿಗೆ ಅಷ್ಟರ ಮಟ್ಟಕ್ಕೆ ಪೆಟ್ಟು ಬಿದ್ದಿದ್ದಂತೂ ನಿಜ. ಕಾರ್ಲ್ ಮಾರ್ಕ್ಸ್ ರಂತಹ ಸಮತಾವಾದಿ ಚಿಂತಕರ ಚಿಂತನೆಗಳಿಗೆ ಡಾರ್ವಿನ್ ಸಿದ್ಧಾಂತವು ಖಂಡಿತವಾಗಿಯೂ ಖಚಿತತೆಯನ್ನೂ, ಪ್ರೇರಣೆಯನ್ನೂ ನೀಡಿತು.

ಅನಾರೋಗ್ಯದ ನಡುವೆ ಡಾರ್ವಿನ್
ಡಾರ್ವಿನ್ ನ ಆರೋಗ್ಯವು ಬೀಗಲ್ ಪ್ರವಾಸದಿಂದಲೇ ಕೈಕೊಟ್ಟಿತ್ತು. ಆಂಡೀಸ್ನ ಕಾಡುಗಳ ಕೂರೆಗಳು ಅವರಿಗೆ ವಿಲಕ್ಷಣವಾದ ರೋಗವೊಂದನ್ನು ಉಂಟುಮಾಡಿದ್ದವು. ಕರುಳಿನ ತೊಂದರೆ, ನಿದ್ರಾಹೀನತೆ, ನರರೋಗಗಳು ಡಾರ್ವಿನ್ ರನ್ನು ಹಿಂಡಿ, ಹೀರಿ, ಹಿಪ್ಪೆಮಾಡಿದ್ದವು. 1873ರಲ್ಲಿ ಮೊದಲ ಬಾರಿಗೆ ಹೃದಯಾಘಾತ ಕಾಣಿಸಿಕೊಂಡಿತು. ಇಂತಹ ಅನಾರೋಗ್ಯದ ಪರಿಸ್ಥಿತಿಯಲ್ಲೂ ದಣಿವರಿಯದೆ ಅಧ್ಯಯನವನ್ನು ಮುಂದುವರೆಸಿದ ಡಾರ್ವಿನ್ ಗೆ ಪತ್ನಿ ಎಮ್ಮಾ ಬಹು ವಿಧದಲ್ಲಿ ನೆರವಾದಳು. ಡಾರ್ವಿನ್ ದಂಪತಿಗಳ ಹತ್ತು ಮಕ್ಕಳಲ್ಲಿ ಮೂವರು ಚಿಕ್ಕಂದಿನಲ್ಲೇ ತೀರಿಕೊಂಡರೆ. ಇತರರು ಖಗೋಳಶಾಸ್ತ್ರ, ಸಸ್ಯಶಾಸ್ತ್ರ, ಸಿವಿಲ್ ಇಂಜಿನಿಯರಿಂಗ್, ಅರ್ಥಶಾಸ್ತ್ರ ಮುಂತಾದ ಶಾಖೆಗಳಲ್ಲಿ ಅಪಾರ ಸಾಧನೆ ಗೈದಿದ್ದಾರೆ.
ಮನುಕುಲದ ಚಿಂತನಾಕ್ರಮವನ್ನೇ ಬದಲಿಸಿದ ಸಿದ್ಧಾಂತವೊಂದನ್ನು ತನ್ನ ಅವಿರತ ಶ್ರಮ, 25 ವರ್ಷಗಳ ಆಳ ಅಧ್ಯಯನ, ಬದ್ಧತೆಗಳ ಮೂಲಕ ವಿಶ್ವಕ್ಕೆ ಸಲ್ಲಿಸಿದ ಚಾರ್ಲ್ಸ್ ಡಾರ್ವಿನ್ 1882ರ ಏಪ್ರಿಲ್ 19ರಂದು ತಮ್ಮ 73ನೆಯ ವಯಸ್ಸಿನಲ್ಲಿ ಎರಡನೆಯ ಬಾರಿಗೆ ಉಂಟಾದ ಹೃದಯಾಘಾತದಿಂದ ನಿಧನರಾದರು. ತಮ್ಮ ಅನನ್ಯವಾದ ಸಾಧನೆಗಳಿಂದಾಗಿ ಡಾರ್ವಿನ್ ಎಂದೆಂದಿಗೂ ಅಜರಾಮರರಾಗಿದ್ದಾರೆ.

ಡಾರ್ವಿನ್ ರಚಿಸಿದ ಮುಖ್ಯ ಕೃತಿಗಳು
ದಿ ವೋಯೇಜ್ ಆಫ್ ಬೀಗಲ್ (1839)
ಜೀವ ಸಂಕುಲಗಳ ಉಗಮ (1859)

The Structure & Distribution of Coral Reefs (1842)

The Descent of Man & Selection in relation to sex (1871)

The Expression of the Emotions in man and Animals (1872)

The Insectivorous Plants (1875)

The Formation of mould through the Action of worms (1881)

ಕಾಮೆಂಟ್‌ಗಳಿಲ್ಲ: