ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸತು - ಹಳತು : ಬುದ್ದ ತತ್ವ

ಇಮೇಜ್
ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ, ಕಲ್ಲಿನ ಗುಂಡು ಎಲ್ಲದರಲ್ಲಿ ಆಂತಕರಿಕ ಚಲನೆಯಿದೆ. ಹಾಗೆಯೇ ನಮ್ಮ ದೇಹ ಮನಸ್ಸುಗಳೂ ಚಲನೆಯ ರೂಪಗಳು. ಈ ಚಲನೆಯ ಸ್ವರೂಪವಾದರೂ ಎಂತಹದು? ಇದನ್ನು ಬುದ್ದಗುರು ಎರಡು ಪರಿಕಲ್ಪನೆಗಳ ಮೂಲಕ ತಿಳಿಸಿದ. ಒಂದು ಅನಿತ್ತ/ಅನಿತ್ಯ. (Impermanence) ಮತ್ತೊಂದು ಪತಿಚ್ಚ ಸಮುಪ್ಪಾದ (law of dependent origination). ಅನಿತ್ತ (ಅನಿಚ್ಚ) ʼಅನಿತ್ತʼ ನಿಯಮದ ಪ್ರಕಾರ ಲೋಕದಲ್ಲಿ ಚಲನೆಯಲ್ಲಿರುವ ಯಾವದೂ ಈ ಕ್ಷಣದಲ್ಲಿದ್ದಂತೆ ಮುಂದಿನ ಕ್ಷಣದಲ್ಲಿ ಇರುವುದಿಲ್ಲ. ಯಾವುದಕ್ಕೂ ಶಾಶ್ವತ ಗುಣ ಎಂಬುದಿಲ್ಲ. ಯಾವ ವಸ್ತುವೂ ʼಇರುʼವುದಿಲ್ಲ, ಎಲ್ಲವೂ ʼಆಗುʼತ್ತಿರುತ್ತದೆ. ಅಲ್ಲಿ ಇದೆ ಎಂದು ಮೇಲುನೋಟಕ್ಕೆ ಕಾಣುತ್ತಿರುವುದೂ ಆಗುತ್ತಿರುತ್ತದೆ. ಹೀಗಾಗಿ ಪ್ರತಿಯೊಂದೂ ಅಶಾಶ್ವತವಾದದ್ದು ಅತವಾ ಕ್ಷಣಿಕವಾದದ್ದು. ಹೀಗಾಗಿ ಪ್ರತಿ ವಸ್ತು ಪ್ರತಿ ಜೀವಿಯೂ ಪ್ರತಿ ಜೀವಿಯೊಳಗಿನ ಚಿಂತನೆಯೂ ಪ್ರತಿಕ್ಷಣವೂ ಹಳತರಿಂದ ಹೊಸದಾಗುತ್ತಿರುತ್ತಲೇ ಇರುತ್ತದೆ. ಇಂದು ಕ್ವಾಂಟಂ ವಿಜ್ಞಾನದ ತತ್ವಗಳು ಹೇಳುತ್ತಿರುವುದೂ ಇದನ್ನೇ. ಈ ಜಗತ್ತನ್ನು ನಿರ್ಮಿಸಿರುವ ಕಣ್ಣಿಗೆ ಕಾಣದ, ಅತಿ ಚಿಕ್ಕ ʼಪಾರ್ಟಿಕಲ್‌ʼ (ಕಣ)ಗಳ ಅನಿಶ್ಚಿತ ಗುಣಸ್ವಭಾವವೇ ಈ ಪ್ರಪಂಚನ್ನು ಆಗುಮಾಡುತ್ತಿರುವುದು. ಜಗತ್ತಿನ ಈ ವಾಸ್ತವತೆ...