ಪೋಸ್ಟ್‌ಗಳು

ಜನವರಿ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೋಹಿತ್ ವೇಮುಲನಿಗೆ ಒಂದು ಪತ್ರ

ಇಮೇಜ್
ಪ್ರೀತಿಯ ರೋಹಿತ್ ವೇಮುಲ, ನಿನ್ನ ಒಂದು ಡೆತ್ ನೋಟ್ ಇಂದು ಸಾಮಾಜಿಕ ಮಾದ್ಯಮದಲ್ಲಿ ಕಾಣಿಸಿಕೊಳ್ಳುವವರೆಗೆ ನಿನ್ನ ಅರುಹೂ-ಕುರುಹೂ ತಿಳಿದಿರಲಿಲ್ಲ. ಆದರೆ ನೀನು ಬರೆದ ಅದೊಂದು ಪತ್ರ ನಿನ್ನನ್ನು ಅಪಾರವಾಗಿ ಹಾಗೂ ಅನಂತವಾಗಿ ಪ್ರೀತಿಸುವಂತೆ ಮಾಡಿದೆ. ಹಾಗೆಂದೇ ಈ ಪತ್ರದ ಮೊದಲಿಗೆ 'ಪ್ರೀತಿಯ' ಎಂದೇ ಸಂಬೋಧಿಸಿರುವೆ. ನಿಜ ಹೇಳಬೇಕೆಂದರೆ ನೀ ಬರೆದ ಅಕ್ಷರಗಳನ್ನು ಓದಿದಾಗಿನಿಂದಲೂ ಮನಸ್ಸಿಗೆ ಸಮಾಧಾನವೆನ್ನುವುದೇ ಇಲ್ಲವಾಗಿದೆ.  ನಿನ್ನ ಪತ್ರ ಓದಿದ ನಂತರ ನೀನು 'ಆತ್ಮಹತ್ಯೆ' ಮಾಡಿಕೊಳ್ಳುವ ಸನ್ನಿವೇಶ ಸೃಷ್ಠಿಯಾದ ಕುರಿತು ತಿಳಿದುಕೊಳ್ಳಲು ಯತ್ನಿಸಿದೆ. ನಿನ್ನ ಶವವನ್ನು ಅದೇ ಕೊಠಡಿಯಲ್ಲಿಟ್ಟು ನಿನ್ನ ಸಂಗಾತಿಗಳು ಪ್ರತಿಭಟನೆ ನಡೆಸುತ್ತಿದ್ದರೆ ಅಲ್ಲಿ ಸೆಕ್ಷನ್ 144 ಜಾರಿಗೊಳಿಸಿ ನಿನ್ನ ಮೃತ ದೇಹವನ್ನು ಕಸಿದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಿದ ಸನ್ನಿವೇಶ ಮತ್ತಷ್ಟು ಸಂಕಟ ತರಿಸಿತು.  ನನ್ನ ಹತ್ತಾರು ವರ್ಷಗಳ ಸಾಮಾಜಿಕ ಪ್ರಜ್ಞೆ ಮತ್ತು ಕ್ರಿಯೆಯ ಭಾಗವಾಗಿ ಎಷ್ಟೋ ಜನರು ಆತ್ಮೀಯರಾಗಿದ್ದಾರೆ. ಒಡನಾಟದಲ್ಲಿದ್ದಾರೆ. ಎಲ್ಲರೂ ಪರಸ್ಪರರ 'ಬದುಕಿನ' ಹಾದಿಯಲ್ಲಿ ಸಿಕ್ಕಿದವರು, ದಕ್ಕಿದವರು. ಆದರೆ ಪ್ರಾಣವೇ ಹೋದ ನಂತರ ಸಿಕ್ಕಿದ ಸಂಗಾತಿ ನೀನು ಮಾತ್ರ ನೋಡು. ನಿನ್ನ ಆ ಪತ್ರದಲ್ಲಿ ನೀನೇನೂ ಸಿದ್ದಾಂತ ಬರೆದಿಲ್ಲ, ಯಾರೊಂದಿಗೋ ಸಂಘರ್ಷ ನಡೆಸಿಲ್ಲ. ಯಾರ ಬಗ್ಗೆ ದೂರಿಲ್ಲ, ದ್ವೇಷ ಕಾರಿಲ್ಲ. ಆದರೆ ನಿನ್ನ ...