ಪೋಸ್ಟ್‌ಗಳು

ಸೆಪ್ಟೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ISIS ಭಯೋತ್ಪಾದನೆ ಮತ್ತು ಮದ್ಯಪ್ರಾಚ್ಯದ ರಕ್ತಚರಿತ್ರೆ!

ಇಮೇಜ್
ಕಳೆದೆರಡು ತಿಂಗಳ ಹಿಂದೆ ಇರಾಕಿನ ಪಟ್ಟಣಗಳಲ್ಲಿ ಧರ್ಮಾಂಧರು ನಡೆಸಿರುವ ಕ್ರೌರ್ಯವನ್ನು ನೋಡಿ ಜಗತ್ತು ಹೌಹಾರಿದೆ. ಒಂದೇ ಧರ್ಮದ ಆದರೆ ಬೇರೆಯ ಪಥದವರೆಂಬ ಕಾರಣಕ್ಕಾಗಿ ಜನರನ್ನು ಕೈಕಟ್ಟಿ ಸಾಲಾಗಿ ನಿಲ್ಲಿಸಿ ತಲೆಗೇ ಗುಂಡಿಟ್ಟು ಹೊಡೆದು ಕೊಲ್ಲುವ ದೃಶ್ಯಗಳನ್ನು ಜಗತ್ತಿನ ವೀಕ್ಷಣೆಗೆ ಬಿಡುಗಡೆಗೊಳಿಸಿದ ಆ ಕ್ರೂರಿ ಧರ್ಮಾಂಧ ಪಡೆಯ ಹೆಸರು ISIS (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ). ಇರಾಕಿನಲ್ಲಿರುವ ಶಿಯಾ ಮುಸ್ಲಿಮರಿಗೆ ಸಂಬಂಧಿಸಿದ ಪುರಾತನ ಐತಿಹಾಸಿಕ ಸ್ಮಾರಕಗಳನ್ನೂ, ಕ್ರೈಸ್ತ ದೇಗುಲಗಳನ್ನೂ ಪುಡಿಗಟ್ಟುತ್ತಾ ಚರಿತ್ರೆಯ ನೆನಪನ್ನೇ ಧ್ವಂಸಗೊಳಿಸುತ್ತ ನಡೆದಿದೆ ಈ ವಿಧ್ವಂಸಕ ಜಿಹಾದಿ ಪಡೆ. ಇರಾಕ್‌ನ ಮುಖ್ಯ ನಗರವಾದ ಮೋಸುಲ್‌ನ್ನು ವಶಪಡಿಸಿಕೊಂಡು ಅಲ್ಲಿನ ಕೇಂದ್ರ ಬ್ಯಾಂಕ್‌ನಲ್ಲಿನ ಸು.500 ದಶಲಕ್ಷ ಡಾಲರ್ ಹಣ ಮತ್ತು ಬೃಹತ್ ಪ್ರಮಾಣದ ಬಂಗಾರವನ್ನು ವಶಪಡಿಸಿಕೊಂಡಿದೆ. ಈಗ ಅದು ಕಡಿಮೆಯೆಂದರೂ 1200 ಕೋಟಿರೂಗಳ ಆಸ್ತಿ ಹೊಂದಿದೆಯೆಂದು ಹೇಳಲಾಗುತ್ತಿದೆ. ಈ ಧರ್ಮಾಂಧ ಪಡೆಯ ನಾಯಕ ಅಬು ಬಕ್ರಲ್ ಬಾಗ್ದಾದಿ ಕ್ರೂರತೆ ಮತ್ತು ಸಂಘಟನೆಯಲ್ಲಿ ಒಸಾಮಾ ಬಿನ್ ಲಾಡೆನ್ನನನ್ನೂ ಮೀರಿಸುವವಂತಹ ಕಟುಕ. ಈ ಹಿಂದೆ  ಆಲ್ ಖೈದಾದಲ್ಲೇ ಇದ್ದು ಅದರಿಂದ ಸಿಡಿದು ಬಂದವನು. ಇದೀಗ ಆಲ್‌ಖೈದಾವನ್ನೇ ಟೀಕಿಸುತ್ತ ಅದು ಹಾದಿ ತಪ್ಪಿದೆ ಎಂದೂ ತಾನೇ ನಿಜವಾದ ಜಿಹಾದ್ ನಡೆಸುತ್ತಿರುವೆನೆಂದೂ ತಿಳಿಸುತ್ತಾ ಬಂದಿರುವ ಈತ ಇರಾಕ್ ಮೇಲೆ ನಡೆಸಿದ ದಾ...