Seeking the Island -'ದ್ವೀಪವ ಬಯಸಿ' ಓದಿದ ಮೇಲೆ

'ಆಧುನಿಕ' ಬಿಕ್ಕಟ್ಟುಗಳಿಗೆ ಹಿಡಿದ ಕನ್ನಡಿ- 'ದ್ವೀಪವ ಬಯಸಿ' ನಾನು ಪುಸ್ತಕವೊಂದನ್ನು ಓದಲು ಹಿಡಿದು ಅದು ಮುಗಿದ ಮೇಲೆಯೇ ಏಳುವಂತೆ ಮಾಡಿದ್ದು ಇತ್ತೀಚೆಗೆ ಈ ಕಾದಂಬರಿಯೇ. ಓದಲು ಆರಂಭಿಸುವವಾಗ ಅದು ಹೀಗಾಗಬಹದೆಂಬ ನಿರೀಕ್ಷೆಯೂ ನನಗಿರಲಿಲ್ಲ. ' ದ್ವೀಪವ ಬಯಸಿ ' ಕಾದಂಬರಿ ಚಿಕ್ಕಮಗಳೂರು ಸೀಮೆಯ ಗೊಲ್ಲರಹಳ್ಳಿಯಲ್ಲಿ ಹುಟ್ಟಿ ಬೆಳೆದ ಜೋಯಿಸರ ಹುಡುಗ ಶ್ರೀಕಾಂತ್ ರಾವ್ ಊರು ಬಿಟ್ಟು ಬೆಂಗಳೂರು ಅಮೆರಿಕಾ ಸೇರಿ ಬದುಕು ರೂಪಿಸಿಕೊಳ್ಳುವ ಕತೆ. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಆರೈಕೆಯಲ್ಲಿ ಕಿರಿಯ ಸಹೋದರ ಕೃಷ್ಣನೊಂದಿಗೆ ಬೆಳೆದ ಶ್ರೀಕಾಂತನ ಆತ್ಮಕಥೆಯ ರೂಪದಲ್ಲಿರುವ ಇದು ಪ್ರಾಯಶಃ ಇತ್ತೀಚಿನ ಮಹತ್ವದ ಕಾದಂಬರಿಗಳಲ್ಲೊಂದು ಎಂದು ನನ್ನ ಭಾವನೆ. ಗೊಲ್ಲರಹಳ್ಳಿಗೆ ಸಮೀಪದ ಯಗಚಿ ನದಿಗೆ ಡ್ಯಾಂ ಕಟ್ಟುವ ಸಲುವಾಗಿ ಒಕ್ಕಲೆಬಿಸುವ ಕಾರ್ಯ ಆರಂಭವಾದಾಗ ಇವರ ಮನೆಯೇನೂ ಮುಳುಗಡೆಯಾಗದಿದ್ದರೂ ಊರಿನ ಜನರೆಲ್ಲಾ ಬಂದಷ್ಟು ಪರಿಹಾರ ಪಡೆದು ಗುಳೇ ಹೊರಡುತ್ತಾರೆ. ಶ್ರೀಕಾಂತನ ಅಪ್ಪ ಮಾತ್ರ ಹೊರಡುವುದಿಲ್ಲ. ಬೆಂಗಳೂರಿಗೆ ಬಂದು ಹಾಸ್ಟೆಲ್ನಲ್ಲುಳಿದು, ಇಂಜಿನಿಯರಿಂಗ್ ಓದುವ ಶ್ರೀಕಾಂತ ರಜೆಗೊಮ್ಮೆ ಮನೆಗೆ ಬಂದಾಗ ಶಾಲೆಯಲ್ಲಿ ಶತದಡ್ಡಾಗಿದ್ದ ಕೃಷ್ಣ ತನ್ನನ್ನೂ ನಗರಕ್ಕೆ ಕರೆದುಕೊಂಡು ಹೋಗಲು ಕಾಡಿ ಬೇಡುತ್ತಾನೆ. ಆದರೆ ಅದು ಕಷ್ಟವೆಂದು ತಳ್ಳಿಹಾಕಿಬಿಡುತ್ತಾನೆ ಶ್ರೀಕ...