ಪೋಸ್ಟ್‌ಗಳು

ಫೆಬ್ರವರಿ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Charles Darwin

ಇಮೇಜ್
ಜೀವ ವಿಜ್ಞಾನದ ಮಹಾನ್ ಚೇತನ ಚಾರ್ಲ್ಸ್ ಡಾರ್ವಿನ್ -200 ಕ್ರಿ.ಶ.1831ರ ಜನವರಿ ಮಾಸದ ಒಂದು ನಡುಹಗಲು. ಬಿರುಗಾಳಿ ಬಲವಾಗಿ ಬೀಸುತ್ತಿತ್ತು. ಮೈಕೊರೆವ ಚಳಿ. ಶಾಂತಸಾಗರದಲ್ಲಿ ಹಾಯ್ದು ಹೋಗುತ್ತಿದ್ದ ಹಡಗೊಂದು ಗಜಗಾತ್ರದ ಅಲೆಗಳ ಅಬ್ಬರಕ್ಕೆ ಸಿಕ್ಕು ಬುಗರಿಯಂತಾಡುತ್ತಾ ಮೇಲೆ ಕೆಳಗೆ ಏರುತ್ತಾ ಇಳಿಯುತ್ತಾ ಸಾಗತೊಡಗಿತ್ತು. ಆ ನೌಕೆಯೊಳಗಿದ್ದ 22ರ ಹರೆಯದ ಯುವಕ ತೀವ್ರವಾಗಿ ಬಳಲಿ ಬೆಂಡಾಗಿಹೋಗಿದ್ದ. ಪ್ರಾಣಸಂಕಟದಿಂದ ಅಸ್ವಸ್ಥಗೊಂಡಿದ್ದ ಆ ಯುವಕ ಇನ್ನು ತನ್ನಿಂದ ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಿದ್ದ. ಆದರೆ ಅದೆಲ್ಲಿತ್ತೋ ಹುಮ್ಮಸ್ಸು ಒತ್ತಟ್ಟಿಕೊಂಡು ಬಂದು "ಊಂ ಹೂಂ.. ಹಾಗಾಗಕೂಡದು. ನಾನು ಈ ಸಾಗರಯಾನವನ್ನು ಪೂರೈಸಲೇ ಬೇಕು. ಪ್ರಾಣಹೋದರೂ ಅಡ್ಡಿಯಿಲ್ಲ" ಎಂದು ಗಟ್ಟಿ ನಿರ್ಧಾರ ತಳೆದ. ಆ ಒಂದು ದಿಟ್ಟ ನಿರ್ಧಾರ ಇಡೀ ಮನುಕುಲಕ್ಕೇ ಒಬ್ಬ ಅದ್ವಿತೀಯ, ಅಪ್ರತಿಯ ಜೀವವಿಜ್ಞಾನಿಯನ್ನು ನೀಡಿತು. ಊ.ಒ.ಖ. ಬೀಗಲ್ ಎಂಬ ಹೆಸರಿನ ಬ್ರಿಟಿಷ್ ರಾಯಲ್ ನೌಕಾಪಡೆಯ ಹಡಗಿನಲ್ಲಿದ್ದ ಆ ಯುವಕನೇ ಚಾರ್ಲ್ಸ್ ರಾಬರ್ಟ್ ಡಾರ್ವಿನ್ . 'ವಿಕಾಸವಾದ ಸಿದ್ಧಾಂತ'ವನ್ನು ವಿಶ್ವಕ್ಕೆ ನೀಡಿದ ಡಾರ್ವಿನ್ . ಡಾರ್ವಿನ್ ನ ಬಾಲ್ಯಜೀವನ ಚಾರ್ಲ್ಸ್ ಡಾರ್ವಿನ್ 1809ರ ಫೆಬ್ರವರಿ 12ರಂದು ಇಂಗ್ಲೆಂಡಿನ ಶ್ರೂಸ್ಬೆರಿಯಲ್ಲಿ ಜನಿಸಿದ. ವಿಶೇಷವೆಂದರೆ ಅದೇ ದಿನವೇ ಅಮೆರಿಕದ ಮಹಾನ್ ನಾಯಕ ಅಬ್ರಹಾಂ ಲಿಂಕನ್ ಕೂಡ ಜನಿಸಿದ...