ಪೋಸ್ಟ್‌ಗಳು

ಡಿಸೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮ V/s ರಿಲಿಜನ್

ಇಮೇಜ್
ಧರ್ಮ ಎಂತರೆ ಒಳಿತು ಮಾಡುವುದು, ನೀತಿ ಮಾರ್ಗದಲ್ಲಿ ನಡೆಯುವುದು ಎಂದು ನೀವು ಭಾವಿಸುವುದಾದರೆ ಅಂತಹ ತತ್ವ ಹೇಳಿದ ಧರ್ಮಗಳು ಮೂರು. -  1. ಬೌದ್ಧ ಧರ್ಮ 2. ಜೈನ ಧರ್ಮ ಮತ್ತು 3.  ಲಿಂಗಾಯತ ಧರ್ಮ  - ಈ ಮೂರೂ ಧರ್ಮಗಳು ಹಲವಾರು ಸಮಾನ ಗುಣಗಳನ್ನು ಹೊಂದಿವೆ. ಬಹಳ ಮುಕ್ಯವಾಗಿ ಈ ಮೂರು ದರ್ಮಗಳು ವೇದಗಳನ್ನು, ಉಪನಿಷತ್ತುಗಳನ್ನು ಸಾರಾಗಟಾಗಿ ತಿರಸ್ಕರಿಸಿದವು. ಮನುಷ್ಯನ ಲೌಕಿಕ ಹಾಗೂ ಬೌದ್ಧಿಕ ಏಳಿಗೆಯ ಗುರಿಯನ್ನು ಶ್ರಮ- ಕಾಯಕದ ಮೂಲಕವೇ ಸಾಧಿಸುವ ದಾರಿ ಹೇಳಿದವು. ಲೋಕದ ಇರವು ಮತ್ತು ಮನುಷ್ಯನ ಅರಿವನ್ನು ವಸ್ತುನಿಷ್ಟವಾಗಿ ವಿವರಿಸಿಕೊಳ್ಳಲು ಯತ್ನಿಸಿದವು. ಪರಮಾತ್ಮನ ಅಗತ್ಯವನ್ನು ನಿರಾಕರಿಸಿದವು. ಒಳ್ಳೆಯ ನಡತೆಯನ್ನು ಬೋಧಿಸಿದವು.‌ ಹೀಗಾಗಿ ನಾನು ಇವುಗಳನ್ನು ಮಾತ್ರ ಧರ್ಮಗಳು ಎಂದು ಕರೆಯುತ್ತೇನೆ.‌  ಇನ್ನು, "ಹಿಂದೂ ಧರ್ಮ ಏನು?"  ಅಂತ ನೀವು ಕೇಳಿದರೆ ನನ್ನ ಸ್ಪಷ್ಟ ಉತ್ತರ ಇಷ್ಟೆ-  ಹಿಂದೂ ಧರ್ಮ ಎಂಬುದು ಇಲ್ಲ. ಆದರೆ ಬ್ರಾಹ್ಮಣ ರಿಲಿಜನ್ ಇದೆ. ಇದು ವೇದವನ್ನು ವ್ಯಾಖ್ಯಾನಿಸುತ್ತಾ ಆತ್ಮ - ಪರಮಾತ್ಮಗಳ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡ ರಿಲಿಜನ್. ದ್ವೈತ, ಅದ್ವೈತ, ಉಪನಿಷತ್ತು ಇತ್ಯಾದಿಗಳು ಈ ಬ್ರಾಹ್ಮಣ ರಿಲಿಜನ್ ಒಳಗೆ ಬರುತ್ತವೆ‌. ಇದರೊಂದಿಗೆ ಆರ್ಯ ಶ್ರೇಷ್ಟತೆಯ ವರ್ಣಾಶ್ರಮ ಸಿದ್ದಾಂತವಿದೆ. ಬ್ರಾಹ್ಮಣ ರಿಲಿಜನ್ ಮತ್ತು ವರ್ಣಾಶ್ರಮಗಳು ಸೇರಿಕೊಂಡು ಈ ದೇಶದ ವೈದಿಕ ರಿಲಿಜನ್ ಉಂಟಾಗಿದೆ. ಇ...