(ನಿಮಗೆ ಖಗೋಳವಿಜ್ಞಾನ ಎಂದರೆ ಆಸಕ್ತಿಯೇ? ಹಾಗಿದ್ದರೆ ಈ ಲೇಖನ ಓದಿ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ಹಂಚಿಕೊಳ್ಳಿ)
ಒಂದು ನಿಮಿಷ ಕಣ್ಣು ಮುಚ್ಚಿಕೊಳ್ಳಿ. ಇದೀಗ ನೀವು ಎಚ್.ಜಿ. ವೆಲ್ಸನ ಕಾಲ್ಪನಿಕ 'ಕಾಲನೌಕೆ'ಯ (TIME MACHINE) ಮೇಲೆ ಕುಳಿತಿದ್ದೀರಿ. ಬೆಲ್ಟ್ ಸರಿಪಡಿಸಿಕೊಂಡು ಗಟ್ಟಿಯಾಗಿ ಕುಳಿತುಕೊಳ್ಳಿ. ನಮ್ಮ ಇಡೀ ಬ್ರಹ್ಮಾಂಡವನ್ನು ಅದರ ಕಾಲವ್ಯೋಮಗಳಲ್ಲಿ ಸುತ್ತಾಡುವ ಮನಸು ಮಾಡಿ ಯಂತ್ರದ ಗುಂಡಿ ಒತ್ತುತ್ತಿದ್ದಂತೆ ಅದು ನಿಧಾನ ತನ್ನ ಯಾನವನ್ನು ಆರಂಭಿಸುತ್ತದೆ. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಭೂಮಿಯ ಕಕ್ಷೆಯನ್ನೇ ದಾಟಿಬಿಟ್ಟಿದ್ದೀರಿ, ಅದೋ ನೋಡಿ ಮೊನ್ನೆಯಷ್ಟೆ ಇಸ್ರೋ ಹಾರಿ ಬಿಟ್ಟ ಮಂಗಳಯಾನ (Mars Orbiter) ನಿಮ್ಮ ಹಿಂದೆಯೇ ಉಳಿದುಕೊಂಡಿತಲ್ಲ... ಮಂಗಳ, ಗುರು, ಶನಿಗ್ರಹಗಳೆಲ್ಲ ಚುಕ್ಕೆಗಳಂತೆ ಮರೆಯಾಗುತ್ತಿವೆ. ಇಡೀ ಸೌರಮಂಡಲವೇ ನಿಮ್ಮಿಂದ ದೂರವಾಗಿಬಿಟ್ಟಿತು. ಓಹ್....ನೀವೀಗ ನಮ್ಮ ಮಿಲ್ಕಿವೇ ಗ್ಯಾಲಕ್ಸಿಯ ಕೋಟಿ ಕೋಟಿ ಸೂರ್ಯರ ನಟ್ಟ ನಡುವೆಯೇ ಹಾದು ಹೋಗುತ್ತಾ ಅದನ್ನೂ ತಪ್ಪಿಸಿಕೊಂಡು ಹೊರಟು ಬಿಟ್ಟಿರಿ! ಈ ಕ್ಷೀರಪಥದಲ್ಲಿರುವ ಕೋಟ್ಯಂತರ ಸೂರ್ಯಂದಿರು ದೂರ ದೂರ ಹೋಗುತ್ತಿದ್ದಾರೆ. ನಾವು ಇರುವ ನಮ್ಮ ಮಿಲ್ಕಿವೇ ಗ್ಯಾಲಕ್ಸಿಯ ಅಗಾಧತೆಯನ್ನು ಕಂಡು ಹೌಹಾರಿಬಿಟ್ಟಿರಾ? ಅದೋ ಅಲ್ಲಿ ನೋಡಿ ಸನಿಹದಲ್ಲೇ ಅಂಡ್ರೊಮಿಡಾ ಗ್ಯಾಲಕ್ಸಿ ಕೂಡಾ ಕಾಣಿಸಿಕೊಂಡು ಮರೆಯಾಯಿತು. ಇತ್ತ ಕಡೆ ನೋಡಿ ಮೊನ್ನೆಯಷ್ಟೇ ಸುದ್ದಿಯಾದ M87 ಗ್ಯಾಲಕ್ಸಿ ಕೊಂಚ ದೊಡ್ಡದಾಗಿ ಮೊಟ್ಟೆಯಾಕಾರದಲ್ಲಿ ಕಾಣುತ್ತಿದೆ. (ಈ ಗ್ಯಾಲಕ್ಸಿಯಿಂದ ಸಾವಿರಾರು ತಾರೆಗಳ ಗುಂಪುಂದು ವಿಚಿತ್ರ ರಭದಸಲ್ಲಿ ಹೊರ ಬಂದಿರುವುದು ಕಳೆದ ವಾರ ಪತ್ತೆಯಾಗಿದೆ). ನೀವು ಕುಳಿತ ಕಾಲನೌಕೆ ಮರು ಚಣದಲ್ಲಿ ನಿಮಗೆ ಇಡೀ ಬ್ರಹ್ಮಾಂಡದ ವಿಸ್ತಾರವನ್ನು ತೋರುತ್ತಿದೆ. ನೆನಪಿರಲಿ. ನೀವು ಬರೀ ಆಕಾಶದಲ್ಲಿ ಮಾತ್ರ ಚಲಿಸುತ್ತಿಲ್ಲ. ಕಾಲದಲ್ಲೂ ಹಿಂದಕ್ಕೆ, ಮುಂದಕ್ಕೆ ಚಲಿಸುತ್ತಿದ್ದೀರಿ. ನೀವು ಕಾಲ ಮತ್ತು ಆಕಾಶಗಳಲ್ಲಿ ಹಿಂದೆ ಹಿಂದೆ ಹೋಗುತ್ತಾ ಸೀದಾ 14 ಶತಕೋಟಿ ವರ್ಷಗಳ ಹಿಂದೆ ಹೋಗುತ್ತೀರಿ. ನಿಮಗೆ ಕೆಲವೇ ಮಿಲಿಯನ್ ವರ್ಷಗಳ ಹಿಂದೆ ಬಿಗ್ಬ್ಯಾಂಗ್ ಅಥವಾ ಮಹಾಸ್ಫೋಟವಾಗಿ ಇಡೀ ಬ್ರಹ್ಮಾಂಡದಲ್ಲಿ ಕಾಳಪದಾರ್ಥ (ಡಾರ್ಕ್ ಮ್ಯಾಟರ್) ಮತ್ತು ಸಹಜ ಪದಾರ್ಥಗಳು ಉಂಟಾಗಿ ವಿಶ್ವ ನಿಧಾನಕ್ಕೆ ವ್ಯಾಪಿಸತೊಡಗಿದಲ್ಲಿಗೆ ಬಂದು ನಿಂತಿದ್ದೀರಿ. ಈಗ ನಿಮ್ಮ ಕಾಲನೌಕೆಯಲ್ಲಿ ಮುಂದೆ ಚಲಿಸುವ ಬಟನ್ ಒತ್ತಿ. ಅಲ್ಲಿಂದ ಮತ್ತೆ ಮುಂದಕ್ಕೆ ಬನ್ನಿ. ಕಾಲವು ಮಿಲಿಯನ್ ವರ್ಷಗಳ ಲೆಕ್ಕದಲ್ಲಿ ಮುಂದೆ ಸರಿದಂತೆ ನಿಮ್ಮ ಸುತ್ತಲಿನ ವಿಶ್ವವೂ ರೂಪಾಂತರಗೊಂಡು ವಿಕಾಸ ಹೊಂದುತ್ತಿದೆ...
ನೋವಾ, ಸೂಪರ್ನೋವಾಗಳ ಭಯಂಕರ ಆಸ್ಫೋಟಗಳನ್ನು ದಿಟ್ಟಿಸುತ್ತಾ ವಿಶ್ವದೊಳಗೇ ಬಿಲಿಯಾಂತರ ವರುಷಗಳಿಂದ ಘಟಿಸಿರುವ ವಿದ್ಯಮಾನಗಳನ್ನು ಕ್ಷಣಗಳಲ್ಲಿ ನೋಡುತ್ತಾ ಮುನ್ನಡೆಯುತ್ತಿದ್ದೀರಿ. ಅದೊಂದು ಚೇತೋಹಾರಿ ದೃಶ್ಯ! ಮೂಲದಲ್ಲಿದ್ದ ಬರೀ ಜಲಜನಕ (H) ಮತ್ತು ಹೀಲಿಯಂ (He) ಅನಿಲಗಳು ವಿಪರೀತ ಶಾಖದಲ್ಲಿ ಹಲವು ಸಂಕೀರ್ಣ ಅನಿಲಗಳನ್ನು ಸೃಷ್ಟಿಸುತ್ತಿವೆ. ಕೃಷ್ಣ ರಂಧ್ರಗಳನ್ನು ಅಂದರೆ ಸರ್ವವನ್ನೂ ಸೂರೆಗೊಳ್ಳುವ ಬ್ಲ್ಯಾಕ್ ಹೋಲ್ ಗಳನ್ನು (Black Holes) ಕೇಂದ್ರಲ್ಲಿಟ್ಟುಕೊಂಡು ಕೋಟ್ಯಂತರ ನಕ್ಷತ್ರಗಳಿಂದ ರೂಪಿತಗೊಂಡ ಗ್ಯಾಲಕ್ಸಿಗಳು (Galaxies) ನಿಮ್ಮ ಕಣ್ಣ ಮುಂದೆಯೇ ರೂಪುಗೊಳ್ಳುತ್ತಿರುವ ದೃಶ್ಯವನ್ನು ನೋಡುತ್ತಿದ್ದೀರಿ. ಹಾಂ, ಅಲ್ಲೊಂದು ಕಡೆ ಹತ್ತಿರ ಹತ್ತಿರ ಹೋಗಿ ನೋಡುತ್ತೀರಿ. ಇನ್ನೂ ಹತ್ತಿರ ಹೋಗುತ್ತೀರಿ ಅದು ನೀವೀಗಾಗಲೇ ಬಿಟ್ಟು ಬಂದಿರುವ ಹಾಲು ಚೆಲ್ಲಿದ ಹಾದಿ ಅರ್ಥಾಥ್ ಕ್ಷೀರಪಥ ಗ್ಯಾಲಕ್ಸಿ (Milkyway Galaxy) ಅದು ೫ ಬಿಲಿಯನ್ ವರ್ಷಗಳ ಹಿಂದೆ ಹೇಗಿತ್ತು ಎಂದು ಹೋಗಿ ನೋಡುತ್ತೀರಿ. ಮತ್ತೆ ಈಗ ಹೇಗಿದೆ ಎಂದೂ ನೋಡುತ್ತೀರಿ...!
***
ಈಗ ಬನ್ನಿ. 2014 ನೇ ಇಸವಿಯಲ್ಲಿರುವ ಕಂಪ್ಯೂಟರ್ ತಂತ್ರಜ್ಞಾನದ ಲೋಕಕ್ಕೆ. ಮೇಲೆ ವಿವರಿಸಿರುವ ಒಂದು ಕಲ್ಪನೆಯ ದೃಶ್ಯವನ್ನು ನೀವೀಗ ಅದೇ ರೀತಿಯಲ್ಲಿ ಪರದೆಯ ನೋಡಬಹುದು. ನಿಜಕ್ಕೂ ಈ ಅನುಭವ ಪಡೆಯಬಹುದು, ಒಂದು ಬಗೆಯ ರೋಮಾಂಚನ ಅನುಭವಿಸಬಹುದು. ಅಂತಹ ಒಂದು ಯೋಜನೆ ಸಿದ್ಧವಾಗಿದೆ.
ಕೆಲವೇ ದಿನಗಳ ಹಿಂದೆ ಲೋಕಾರ್ಪಣೆಯಾಗಿರುವ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಅತ್ಯಂತ ಸಂಕೀರ್ಣವಾದ ಒಂದು ವರ್ಚುವಲ್ ಚಲನಶೀಲ ಅಣಕು ಬ್ರಹ್ಮಾಂಡ ದರ್ಶನದ ಯೋಜನೆ ಸಿದ್ಧವಾಗಿದೆ. ಅದರ ಹೆಸರು 'ಇಲ್ಲಸ್ಟ್ರಿಸ್’ ಸಿಮ್ಯುಲೇಶನ್ ಕೊಲಾಬರೇಶನ್ ಯೋಜನೆ. ಸಿಮ್ಯುಲೇಶನ್ ಎಂದರೆ ಒಂದು ವಿದ್ಯಮಾನವು ಅದು ಚಲನಶೀಲವಾಗಿರುಂತೆಯೇ ರಚಿಸುವ ಅದರಂತದೇ ಒಂದು ಅಣಕು ಮಾದರಿ. ಹಲವು ವಿಜ್ಞಾನಿಗಳು, ತಂತ್ರಜ್ಞರು ರೂಪಿಸಿರುವ "ಇಲ್ಲಸ್ಟ್ರಿಸ್' ಇಡೀ ಬ್ರಹ್ಮಾಂಡದ ವಿಕಾಸದ ಒಂದು ಅಣಕು ಮಾದರಿ.
ಕೆಲವೇ ದಿನಗಳ ಹಿಂದೆ ಲೋಕಾರ್ಪಣೆಯಾಗಿರುವ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಅತ್ಯಂತ ಸಂಕೀರ್ಣವಾದ ಒಂದು ವರ್ಚುವಲ್ ಚಲನಶೀಲ ಅಣಕು ಬ್ರಹ್ಮಾಂಡ ದರ್ಶನದ ಯೋಜನೆ ಸಿದ್ಧವಾಗಿದೆ. ಅದರ ಹೆಸರು 'ಇಲ್ಲಸ್ಟ್ರಿಸ್’ ಸಿಮ್ಯುಲೇಶನ್ ಕೊಲಾಬರೇಶನ್ ಯೋಜನೆ. ಸಿಮ್ಯುಲೇಶನ್ ಎಂದರೆ ಒಂದು ವಿದ್ಯಮಾನವು ಅದು ಚಲನಶೀಲವಾಗಿರುಂತೆಯೇ ರಚಿಸುವ ಅದರಂತದೇ ಒಂದು ಅಣಕು ಮಾದರಿ. ಹಲವು ವಿಜ್ಞಾನಿಗಳು, ತಂತ್ರಜ್ಞರು ರೂಪಿಸಿರುವ "ಇಲ್ಲಸ್ಟ್ರಿಸ್' ಇಡೀ ಬ್ರಹ್ಮಾಂಡದ ವಿಕಾಸದ ಒಂದು ಅಣಕು ಮಾದರಿ.
ಈ ಇಲ್ಲಸ್ಟ್ರಿಸ್ (ILLUSTRIS) ನಾನು ಮೇಲೆ ಹೇಳಿದ ಕಾಲನೌಕೆಯಂತೆಯೇ ಕೆಲಸ ಮಾಡುತ್ತದೆ. ನೀವು ದೊಡ್ಡ ಪರದೆಯೊಂದರ ಎದುರಿಗೆ ಕುಳಿತರೆ ಸಾಕು. ಇಡೀ ಬ್ರಹ್ಮಾಂಡವನ್ನು ಅದರ ಕಾಲ ಮತ್ತು ಆಕಾಶಗಳಲ್ಲಿ ನೋಡಿಕೊಂಡು ಬರಬಹುದು. ಅಂದರೆ ನಮ್ಮ ವಿಶ್ವದ 13.5 ಶತಕೋಟಿ ವರ್ಷಗಳಿಂದ ವಿಕಾಸಗೊಂಡ ದೃಶ್ಯವನ್ನು ನೀವು ಪರದೆ ಮೇಲೆ ನಿಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವಂತೆ ನೋಡಬಹುದು.
ನಮ್ಮ ಬ್ರಹ್ಮಾಂಡ ಹೇಗಿದೆ? ಇದು ರಚನೆಗೊಂಡದ್ದು ಹೇಗೆ? ವಿಸ್ತಾರಗೊಂಡದ್ದು ಹೇಗೆ? ಇದರೊಳಗೆ ಏನೇನಿದೆ? ಅದರ ವಿಸ್ತಾರ ಎಷ್ಟು? ಇಂತವೇ ಪ್ರಶ್ನೆಗಳು ಎಂದಾದರೂ ನಿಮ್ಮ ಮನಸ್ಸಿನಲ್ಲಿ ಬಂದಿದ್ದರೆ, ಅದನ್ನೆಲ್ಲಾ ನೀವು ನಿಮ್ಮ ಕಲ್ಪನೆಯ ಮೂಸೆಯೊಳಗೆ ತಂದುಕೊಳ್ಳಲು ಯತ್ನಿಸಿದ್ದರೆ ಈ ಇಲಸ್ಟ್ರಿಸ್ ನಿಮಗೆ ಬಹಳಷ್ಟು ಸಹಾಯಕವಾಗುತ್ತದೆ.
ನಮ್ಮ ಬ್ರಹ್ಮಾಂಡ ಹೇಗಿದೆ? ಇದು ರಚನೆಗೊಂಡದ್ದು ಹೇಗೆ? ವಿಸ್ತಾರಗೊಂಡದ್ದು ಹೇಗೆ? ಇದರೊಳಗೆ ಏನೇನಿದೆ? ಅದರ ವಿಸ್ತಾರ ಎಷ್ಟು? ಇಂತವೇ ಪ್ರಶ್ನೆಗಳು ಎಂದಾದರೂ ನಿಮ್ಮ ಮನಸ್ಸಿನಲ್ಲಿ ಬಂದಿದ್ದರೆ, ಅದನ್ನೆಲ್ಲಾ ನೀವು ನಿಮ್ಮ ಕಲ್ಪನೆಯ ಮೂಸೆಯೊಳಗೆ ತಂದುಕೊಳ್ಳಲು ಯತ್ನಿಸಿದ್ದರೆ ಈ ಇಲಸ್ಟ್ರಿಸ್ ನಿಮಗೆ ಬಹಳಷ್ಟು ಸಹಾಯಕವಾಗುತ್ತದೆ.
ಈ ಚಲನಶೀಲ ಅಣಕು ಬ್ರಹ್ಮಾಂಡ ಮಾದರಿಯನ್ನು ತಯಾರಿಸುವ ಯೋಜನೆ 5 ವರ್ಷಗಳ ಕಾಲ ಸುಮಾರು 8000 ಸೂಪರ್ಕಂಪ್ಯೂಟರ್ಗಳ ಸಹಾಯದಿಂದ ಸಾವಿರಾರು ತಂತ್ರಜ್ಞರು, ವಿಜ್ಞಾನಿಗಳು ಕೈಗೊಂಡು ಪೂರ್ಣಗೊಳಿಸಿರುವ ಯೋಜನೆ. ಈ ಅಣಕು ಬ್ರಹ್ಮಾಂಡದ ಮಾದರಿಯನ್ನು ಸುಮ್ಮನೇ ಕಾಲ್ಪನಿಕವಾಗಿ ಮಾಡಿರುವಂತದ್ದಲ್ಲ. ಇಡೀ ಬ್ರಹ್ಮಾಂಡವು ರೂಪುಗೊಂಡಿರುವ ವೈಜ್ಞಾನಿಕ ನಿಯಮಗಳನ್ನು ಆಧರಿಸಿ, ಸಾಕಷ್ಟು ಸಂಕೀರ್ಣ ಲೆಕ್ಕಾಚಾರಗಳನ್ನು ಹಾಕಿ ಆದಷ್ಟು ನೈಜತೆಗೆ ಪೂರಕವಾಗಿ ತಯಾರಿಸಿರುವ ಯೋಜನೆ ಇದು. ಈ ಲೆಕ್ಕಾಚಾರಗಳನ್ನು ಹಾಕಲು ನಾವು ಬಳಸುವ ಸಾಮಾನ್ಯ ಕಂಪ್ಯೂಟರ್ಗಳ ಮೂಲಕ ಮಾಡಿದ್ದೇ ಆದರೆ ಅದು ಏನಿಲ್ಲೆಂದರೂ 2000 ವರ್ಷಗಳನ್ನು ಹಿಡಿಯುತ್ತದೆ. ಆದರೆ ಅತ್ಯಂತ ಸಮರ್ಥ ಸೂಪರ್ ಕಂಪ್ಯೂಟರ್ಗಳನ್ನು ಬಳಸಿ ಕೇವಲ 6 ತಿಂಗಳಲ್ಲಿ ಈ ಕ್ಲಿಷ್ಟ ಲೆಕ್ಕಾಚಾರಗಳನ್ನು ಮಾಡಲಾಗಿದೆ!
ಇಡೀ ಯೋಜನೆಯಲ್ಲಿ ನೀವು ಏನಿಲ್ಲೆಂದರೂ 41,000 ಗೆಲಾಕ್ಸಿಗಳು ನೈಜ ವ್ಯೋಮದಲ್ಲಿ ಹೇಗಿವೆಯೋ ಹಾಗೆ ಅವು ರೂಪುಗೊಂಡ, ರೂಪಾಂತರಗೊಂಡ ಚಿಕ್ಕಚಿಕ್ಕ ವಿವರಗಳನ್ನೂ ಬಿಡದಂತೆ ಚಿತ್ರಿಸಿರುವುದನ್ನು ನೀವು ಕಾಣಬಹುದು. ಅಂದರೆ ಅವುಗಳಲ್ಲಿ ನೀವು ಯಾವುದೇ ಗ್ಯಾಲಕ್ಸಿಯನ್ನಾರಿಸಿಕೊಂಡು ZOOM IN ಮಾಡಿ ನೋಡಿದರೆ ಅದು ಕಳೆದ 14 ಶತಕೋಟಿ ವರ್ಷಗಳಲ್ಲಿ ಹೇಗೆಲ್ಲಾ ರೂಪುಗೊಳ್ಳುತ್ತಾ ಬಂದಿದೆಯೋ ಹಾಗೆ ನೋಡಬಹುದು! ಈ ಮಾದರಿ ರೂಪಿಸಲು ವಿಜ್ಞಾನಿಗಳು ಸಹಜ ಪದಾರ್ಥ ಹಾಗೂ ಡಾರ್ಕ್ಮ್ಯಾಟರ್ಗಳ ಇಮೇಜ್ಗಳ ಸುಮಾರು 12 ಶತಕೋಟಿಯಷ್ಟು 3-ಡಿ ಪಿಕ್ಸೆಲ್ಗಳನ್ನು ಇಲ್ಲಿ ಬಳಸಲಾಗಿದೆಯಂತೆ!
ಇಡೀ ಬ್ರಹ್ಮಾಂಡವನ್ನು ಅಸಂಖ್ಯ ಗೆಲಾಕ್ಸಿಗಳ ಒಂದು ಕಾಸ್ಮಿಕ್ ಜಾಲ ಎಂದು ಕರೆಯಲಾಗುತ್ತದೆ. ಈ ಅಣಕು ಬ್ರಹ್ಮಾಂಡ ಪ್ರದರ್ಶನವೂ ಸಹ ಇದೇ ರೀತಿಯಲ್ಲೇ ಚಿತ್ರಿಸಿದೆ. ಇಲ್ಲಿ ನೀವು ಸುರುಳಿಯಾಕಾರದ, (Spiral galaxy) ಮೊಟ್ಟೆಯಾಕಾರದ (Elliptical) ಗೆಲಾಕ್ಸಿಗಳನ್ನು ಅವುಗಳ ಉಗಮದಿಂದಲೂ ವೀಕ್ಷಿಸಬಹುದು. ನಮ್ಮ ನಿಸರ್ಗ ನಿಯಮಗಳ ಆಧಾರದ ಮೇಲೆಯೇ -ಗುರುತ್ವ, ಸೂಪರ್ನೋವಾ ರಚನೆ, ಕೃಷ್ಣರಂಧ್ರ, ಮುಂತಾದವುಗಳ ರಚನೆಗಳಿಂದ ಇಂದಿನ ಬ್ರಹ್ಮಾಂಡದವರೆಗೂ ಸಂಭವಿಸಿರುವ ಸಂಗತಿಗಳನ್ನೆಲ್ಲಾ ನಮ್ಮ ಕಂಪ್ಯೂಟರ್ ಯೋಜನೆ ಒಳಗೊಂಡಿದೆ ಎನ್ನುತ್ತಾರೆ ಹಾರ್ವರ್ಡ್-ಸ್ಮಿತ್ಸೋನಿಯನ್ ಖಗೋಳ ಭೌತಶಾಸ್ತ್ರ ಕೇಂದ್ರದ ಶೈ ಜೆನೆಲ್.
ಸುಮ್ಮನೇ ಈ ಯೋಜನೆಯ ಕೆಲವು ವಿಡಿಯೋಗಳನ್ನು ವೀಕ್ಷಿಸಿದರೂ ಸಾಕು. ಇದರ ಒಂದು ಸಣ್ಣ ಥ್ರಿಲ್ಲಿಂಗ್ ಅನುಭವ ನಿಮಗಾಗುತ್ತದೆ. ಇಡೀ ಬ್ರಹ್ಮಾಂಡವೇ ನಮ್ಮ ಕಣ್ಣಮುಂದೆ ತೆರೆದುಕೊಳ್ಳುತ್ತದೆ.
ಇಲ್ಲಿ ರೂಪಿಸಿರುವ ಈ ವರ್ಚುವಲ್ ಸಿಮ್ಯುಲೇಶನ್ ಅಥವಾ ಬ್ರಹ್ಮಾಂಡದ ಚಲನಶೀಲ ಅಣಕು ಮಾದರಿಯನ್ನು 350 ಜ್ಯೋತಿರ್ವರ್ಷಗಳ ಅಂಚಿರುವ ಒಂದು ಘನಾಕೃತಿಯಲ್ಲಿ ರೂಪಿಸಲಾಗಿದೆ. ಇದರೊಳಗಿಂದ ನಮಗೆ ಏಕಕಾಲದಲ್ಲಿ ಡಾರ್ಕ್ ಮ್ಯಾಟರ್ನ ಜಾಲ ಹಾಗೂ ಅನಿಲಗಳ ಮೂಲಕ ಸಹಜ ಭೌತವಸ್ತು ರೂಪುಗೊಳ್ಳುವ ದೃಶ್ಯಗಳು ಏಕಕಾಲದಲ್ಲಿ ಕಾಣಿಸುತ್ತದೆ.
ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಇದುವರೆಗೆ ನಮ್ಮ ವಿಶ್ವದ ಹಲವಾರು ವಿದ್ಯಮಾನಗಳನ್ನು ಪರದೆಯ ಮೇಲೆ ಮರುಸೃಷ್ಟಿಸುವ ಅನೇಕ ಪ್ರಯತ್ನಗಳು ನಡೆದಿದ್ದವಾದರೂ ಇಷ್ಟು ಪರಿಣಾಮಕಾರಿಯಾಗಿ ಮತ್ತು ವಸ್ತುನಿಷ್ಟ ಬ್ರಹ್ಮಾಂಡದ ಚಲನೆ ಮತ್ತು ಸ್ಥಿತಿಗತಿಗೆ ಸರಿಯಾಗಿ ಬಿಂಬಿಸುವ ಪ್ರಯತ್ನಗಳು ನಡೆದಿರಲಿಲ್ಲ. ಈ ಯೋಜನೆ ಹಲವಾರು ವಿಡಿಯೋಗಳನ್ನು ಅಂತರ್ಜಾಲ ತಾಣದಲ್ಲಿ ವೀಕ್ಷಣೆಗೆ ಇಡಲಾಗಿದೆ. ಆದರೆ ಇಡೀ ಯೋಜನೆಯನ್ನು ನೀವು ನೋಡಬೇಕೆಂದರೆ ಅತ್ಯುತ್ತಮ ಕಂಪ್ಯೂಟರ್ ಮೂಲಕ ಕಾಪಿ ಮಾಡಿಕೊಳ್ಳಲು ಒಂದು ತಿಂಗಳು ಹಿಡಿಯುತ್ತದೆ! ಹೀಗಾಗಿ ನಾವು ಕೆಲವೆ ವಿಡಿಯೋಗಳಲ್ಲಿ ಇಡೀ ಯೋಜನೆಯನ್ನು ವೀಕ್ಷಿಸಲಾರೆವು.
ಈ 'ಇಲ್ಲಸ್ಟ್ರಿಸ್' ಯೋಜನೆ ಖಗೋಳಶಾಸ್ತ್ರಜ್ಞರಿಗೆ ಅತ್ಯಂತ ಉಪಕಾರಿಯಾಗಿ ಪರಿಣಮಿಸಲಿದೆ. ಒಂದೊಮ್ಮೆ ಹಬಲ್ ದೂರದರ್ಶಕದಂತಹ ದೂರದರ್ಶಕದಲ್ಲಿ ನಿಜವಾಗಿ ನೋಡಿದಾಗಲೂ ನಮಗೆ ಆಕಾಶದಲ್ಲಿ ಕಾಣುವ ಗ್ಯಾಲಕ್ಸಿಗಳು ಒಂದು ಅವಧಿಯವಾಗಿ ಮಾತ್ರ ತೋರುತ್ತವೆ. ಆದರೆ ಈ ಇಲ್ಲಸ್ಟ್ರಿಸ್ ಹಾಗಲ್ಲ. ಎಷ್ಟು ಬಿಲಿಯನ್ ವರ್ಷಗಳ ಹಿಂದೆಯಾದರೂ ಹೋಗಿ ಆ ಗ್ಯಾಲಕ್ಸಿ ಅಥವಾ ಒಂದು ಗ್ಯಾಲಕ್ಸಿಗಳ ಗುಂಪು ರೂಪುಗೊಂಡ ಬಗೆಯನ್ನು ತೋರಿಸುತ್ತದೆ. ಹೀಗಾಗಿ ತಾವು ಕಂಡಂತಹದ್ದನ್ನು ಈ ’ಇಲ್ಲಸ್ಟ್ರಿಸ್’ ಯಾನದ ಮೂಲಕ ತಾಳೆ ನೋಡಲು ವಿಜ್ಞಾನಿಗಳಿಗೆ ಸಹಾಯಕವಾಗಿದೆ.
ಈ ಯೋಜನೆಗಿರುವ ಒಂದು ಮಿತಿ ಎಂದರೆ ಇಲ್ಲಸ್ಟ್ರಿಸ್ ನಲ್ಲಿ ಅತ್ಯಂತ ಚಿಕ್ಕ ಘಟಕೆವೆಂದರೆ ಅದು ಗ್ಯಾಲಕ್ಸಿಯೇ. ಅದರಿಂದಾಚೆಗೆ ಒಂದು ಗ್ಯಾಲಕ್ಸಿಯೊಳಗಿನ ತಾರೆಗಳ ವಿವರಗಳನ್ನು ಅದು ಒಳಗೊಂಡಿಲ್ಲ. ಅದನ್ನೂ ಒಳಗೊಳ್ಳಬೇಕಾದರೆ ಮತ್ತಷ್ಟು ಸಂಕೀರ್ಣ ಲೆಕ್ಕಾಚಾರಗಳು ಬೇಕಾಗುತ್ತದೆ. ಮುಂದಿನ ವರ್ಷಗಳಲ್ಲಿ ಇದೇನೂ ಅಸಾದ್ಯವಲ್ಲ! ಪ್ರತಿ ನಕ್ಷತ್ರ, ಆ ನಕ್ಷತ್ರಗಳ ಸುತ್ತಲಿರುವ ಗ್ರಹಗಳು ಇವೆಲ್ಲವನ್ನೂ ಒಳಗೊಳ್ಳಬಹುದು. ವಿಶ್ವದ ಬಗೆಗಿನ ಅರಿವು ಹೆಚ್ಚಾದಂತೆಲ್ಲಾ ಅದು ಕೂಡ ಸಾಧ್ಯವಾಗುತ್ತದೆ.
ಈಗಾಗಲೇ ಪ್ರಚಲಿತದಲ್ಲಿರು ಬಹುವಿಶ್ವ ಸಿದ್ದಾಂತವನ್ನೂ ಮುಂದೆ ಸೇರಿಸಬಹುದು!
ಈ ಯೋಜನೆಗಿರುವ ಒಂದು ಮಿತಿ ಎಂದರೆ ಇಲ್ಲಸ್ಟ್ರಿಸ್ ನಲ್ಲಿ ಅತ್ಯಂತ ಚಿಕ್ಕ ಘಟಕೆವೆಂದರೆ ಅದು ಗ್ಯಾಲಕ್ಸಿಯೇ. ಅದರಿಂದಾಚೆಗೆ ಒಂದು ಗ್ಯಾಲಕ್ಸಿಯೊಳಗಿನ ತಾರೆಗಳ ವಿವರಗಳನ್ನು ಅದು ಒಳಗೊಂಡಿಲ್ಲ. ಅದನ್ನೂ ಒಳಗೊಳ್ಳಬೇಕಾದರೆ ಮತ್ತಷ್ಟು ಸಂಕೀರ್ಣ ಲೆಕ್ಕಾಚಾರಗಳು ಬೇಕಾಗುತ್ತದೆ. ಮುಂದಿನ ವರ್ಷಗಳಲ್ಲಿ ಇದೇನೂ ಅಸಾದ್ಯವಲ್ಲ! ಪ್ರತಿ ನಕ್ಷತ್ರ, ಆ ನಕ್ಷತ್ರಗಳ ಸುತ್ತಲಿರುವ ಗ್ರಹಗಳು ಇವೆಲ್ಲವನ್ನೂ ಒಳಗೊಳ್ಳಬಹುದು. ವಿಶ್ವದ ಬಗೆಗಿನ ಅರಿವು ಹೆಚ್ಚಾದಂತೆಲ್ಲಾ ಅದು ಕೂಡ ಸಾಧ್ಯವಾಗುತ್ತದೆ.
ಈಗಾಗಲೇ ಪ್ರಚಲಿತದಲ್ಲಿರು ಬಹುವಿಶ್ವ ಸಿದ್ದಾಂತವನ್ನೂ ಮುಂದೆ ಸೇರಿಸಬಹುದು!
ಮೊನ್ನೆ ಎಂದರೆ ಮೇ 5ನೇ ತಾರೀಖಿನಂದು 'ಇಲ್ಲಸ್ಟ್ರಿಸ್’ ಮಹಾಯೋಜನೆಯ ಅಂತರ್ಜಾಲ ತಾಣ (ವೆಬ್ಸೈಟ್) ಲೋಕಾರ್ಪಣೆಯಾಗಿದೆ.ಇಡೀ ಯೋಜನೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ವಿಡಿಯೋಗಳನ್ನು ನೀವು ಅದರಲ್ಲಿ ವೀಕ್ಷಿಸಿಬಹುದಾಗಿದೆ. ಮಾತ್ರವಲ್ಲ ಯೂಟ್ಯೂಬ್ನಲ್ಲೂ ಸಂಬಂಧಿತ ವಿಡಿಯೋಗಳನ್ನು ವೀಕ್ಷಿಸಬಹುದು.
ಈ ಇಲ್ಲಸ್ಟ್ರಿಸ್ ಯೋಜನೆಯ ಒಂದು ವಿಡಿಯೋ ಇಲ್ಲಿದೆ ನೋಡಿ.