ಪೋಸ್ಟ್‌ಗಳು

ಸೆಪ್ಟೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾಚಿಕೆಯಾಗಬೇಕು!

ಇಮೇಜ್
ನಾವು ಇಪ್ಪಂತೊಂದನೇ ಶತಮಾನಕ್ಕೆ ಕಾಲಿಟ್ಟಾಗಿದೆ. ಮನುಷ್ಯ ಕುಲ ಹಿಂದೆಂದೂ ಕಂಡರಿಯದ ತಂತ್ರಜ್ಞಾನದ ಏಳಿಗೆಯನ್ನು ಈ ಪೀಳಿಗೆ ಕಾಣುತ್ತಿದೆ. ನಮ್ಮ ಪಿಎಸ್‌ಎಲ್‌ವಿ ಉಡಾವಣಾ ವಾಹನಗಳು ಒಂದರ ಮೇಲೆ ಮತ್ತೊಂದರಂತೆ ಜಿಸ್ಯಾಟ್ ಕೃತಕ ಉಪಗ್ರಹಗಳನ್ನು ನಭೋಮಂಡಲಕ್ಕೆ ಚಿಮ್ಮಿಸಿ ಬರುತ್ತಿವೆ. ಮಾತ್ರವಲ್ಲ, ಇಸ್ರೋದ ಉಪಗ್ರಹಗಳು ಚಂದ್ರಯಾನ ಕೈಗೊಂಡು ಚಂದ್ರನಲ್ಲಿ ನೀರಿದೆಯೇ ಎಂಬುದನ್ನು ಹುಡುಕಾಡುತ್ತಿವೆ. ನಾವು ಅಂಗೈಯಗಲದ ಬ್ಲಾಕ್‌ಬೆರಿ ಉಪಯೋಗಿಸುತ್ತಾ ಜಗತ್ತನ್ನೇ ಬೆರಳ ತುದಿಯಲ್ಲಿಟ್ಟುಕೊಂಡಿದ್ದೇವೆ. ಇಡೀ ದೇಶ ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯನಾಗುವುದಕ್ಕೆ ಪೈಪೋಟಿ ನಡೆಸುವಷ್ಟು ಪ್ರಭಲ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಗಳ ವಿಶ್ವದ ರಾಜಧಾನಿಯಾಗಿ ಹೊರಹೊಮ್ಮುತ್ತಿದೆ. ಅಬ್ದುಲ್ ಕಲಾಮ್‌ರ ’ಕನಸಿನ ೨೦೨೦’ಕ್ಕೆ ಈಗ ಉಳಿದಿರುವುದು ಕೇವಲ ಎಂಟೇ ವರ್ಷಗಳು! ಹೀಗೆ ನಮ್ಮನ್ನು ನಾವು ಬೆನ್ನುತಟ್ಟಿಕೊಳ್ಳಲು ಈ ದೇಶದಲ್ಲಿ ಬಹಳಷ್ಟು ವಿಚಾರಗಳು ಸಿಗುತ್ತವೆ. ಆದರೆ ಇವೆಲ್ಲಾ ಸಾಧನೆಗಳ ಹಿರಿಮೆಯನ್ನೂ ಕ್ಷಣಾರ್ಧದಲ್ಲಿ ಮರೆಮಾಡಿಬಿಡುವ ಅತ್ಯಂತ ಅಮಾನವೀಯ ಪದ್ಧತಿಯೊಂದು ನಮ್ಮ ದೇಶದಲ್ಲಿ ಎಲ್ಲೆಡೆ ಅಸ್ತಿತ್ವದಲ್ಲಿದೆ. ಅದೇ ಮನುಷ್ಯರ ಮಲವನ್ನು ಮನುಷ್ಯರೇ ಹೊರುವ ಪದ್ಧತಿ! ದುರಾದೃಷ್ವಶಾತ್ ನಾವು ವಿಸರ್ಜಿಸುವ ಅಮೇಧ್ಯವನ್ನು ತಮ್ಮ ...