ಈಗಿನ ಸರ್ಕಾರಗಳೇ ವಿವೇಚನೆ ಕಳೆದುಕೊಂಡಿವೆ” - ಪ್ರೊ.ಲಿಂಗದೇವರು ಹಳೆಮನೆ
ಲಿಂಗದೇವರು ಹಳೆಮನೆ ಇನ್ನಿಲ್ಲ.... 'ಲಿಂಗದೇವರು ಹಳೆಮನೆ ಇನ್ನಿಲ್ಲ ’ ಎಂದು ಮೈಸೂರಿನ ಪ್ರಜಾವಾಣಿಯಲ್ಲಿರುವ ಗೆಳೆಯ ನಾಗರಾಜ ಬುರಡಿಕಟ್ಟಿ ಮುಂಜಾನೆ ೪ ಘಂಟೆಗೆ ಕಳಿಸಿದ್ದ ಮೆಸೇಜನ್ನು ಐದು ಗಂಟೆಗೆ ಎದ್ದು ನೋಡಿದ ನನಗೆ ನಂಬಿಕೆಯೇ ಬರಲಿಲ್ಲ. ಮತ್ತೆ ಕೂಡಲೇ ಕಾಲ್ ಮಾಡಿ ಕೇಳೀದೆ. ‘ ನಾಗು.. , ಅದು ನಿಜವೇನೋ ?’. ‘ ಹೌದು ಮಾರಾಯಾ , ರಾತ್ರಿ ಹನ್ನೆರಡೂ ಮುಕ್ಕಾಲಿನ ಸುಮಾರಿಗೆ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡು ಬಿಟ್ಟರು.... ’. ಆಘಾತವೇ ಆಯಿತು. ಇತರೆ ಗೆಳೆಯರಿಗೆ ಮೆಸೇಜ್ ಫಾರ್ವರ್ಡ್ ಮಾಡುತ್ತಾ , ಈ ಇದುವರಗೆ ನನಗೆ ಪ್ರೀತಿಪಾತ್ರರಾದವರು ಈ ಕ್ರೂರ ’ ಹೃದಯಾಘಾತ ’ ದ ದಾಳಿಗೆ ಈಡಾದವರ ಲೆಕ್ಕ ಹಾಕತೊಗಿದೆ. ದೊಡ್ಡಪ್ಪ- ಹನುಮಂತಪ್ಪ , ಮಾವ- ನಾರಾಯಣಪ್ಪ , ಗೆಳೆಯ ಶರತ್ , ಪ್ರೀತಿಯ ನೋಸಂತಿ ಮೇಸ್ಟ್ರು , ಅಚ್ಚುಮೆಚ್ಚಿನ ಗೆಳೆಯ , ರಂಗಕರ್ಮಿ , ಹಾಡುಗಾರ ಗೋಪಾಲಣ್ಣ , ಕಿರಂ ಮೇಸ್ಟ್ರು............ ಈಗ ಮತ್ತೆ......... ಶಿವಮೊಗ್ಗದಲ್ಲಿ ರಂಗಾಯಣದ ಘಟಕವನ್ನು ಆರಂಭಿಸುವುದಾಗಿ ಮೊನ್ನೆಯಷ್ಟೇ ಲಿಂಗದೇವರು ಹಳೆಮನೆಯವರು ನಡೆಸಿದ್ದ ಪತ್ರಿಕಾ ಗೋಷ್ಠಿಯನ್ನು ನೋಡಿ ಸಂತಸವಾಗಿತ್ತು. ಒಂದು ಕರೆ ಮಾಡಿ ಅವರಿಗೊಂದು ಥ್ಯಾಂಕ್ಸ್ ಹೇಳೋಣ ಎಂದು ಯೋಚಿಸುತ್ತಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಇರುವ ಹೆಗ್ಗೋಡಿನ ನೀನಾಸಂ , ತುಮರಿಯ ’ ಕಿನ್ನರ ಮ...