ಪೋಸ್ಟ್‌ಗಳು

ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ

ಇಮೇಜ್
ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ -  ಹರ್ಷಕುಮಾರ್ ಕುಗ್ವೆ ಭರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಸರ್ಕಾರವು ಆಚರಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮಹಾನ್ ಧಾರ್ಮಿಕ ಚಿಂತಕ, ಸಮಾಜ ಸುಧಾರಕರಿಗೆ ಖಂಡಿತವಾಗಿಯೂ ಇದು ಗೌರವ ಸಲ್ಲಿಸುವ ಕೆಲಸ. ಆದರೆ ದುರದೃಷ್ಟವಶಾತ್ ಪರಿಸ್ಥಿತಿ ಹೇಗಾಗಿದೆಯೆಂದರೆ ಸರ್ಕಾರಗಳು ಜಯಂತಿಗಳನ್ನು ಆಚರಿಸುವುದು ಎಂದರೆ ಆಯಾ ಮಹಾನ್ ವ್ಯಕ್ತಿಗಳು ಹುಟ್ಟಿದ ಜಾತಿಗಳನ್ನು ತುಷ್ಟೀಕರಣ ಮಾಡಲು ಮಾತ್ರ ಎಂಬಂತಾಗಿದೆ. ಬಸವ ಜಯಂತಿ ಲಿಂಗಾಯತರಿಗೆ, ವಾಲ್ಮೀಕಿ ಜಯಂತಿ ವಾಲ್ಮೀಕಿ ನಾಯಕರಿಗೆ, ಕನಕ ಜಯಂತಿ ಕುರುಬರಿಗೆ, ಕೆಂಪೇಗೌಡ ಜಯಂತಿ ಒಕ್ಕಲಿಗ ಗೌಡರಿಗೆ, ಅಂಬೇಡ್ಕರ್ ಜಯಂತಿ ದಲಿತರಿಗೆ, ಟಿಪ್ಪೂ ಜಯಂತಿ ಮುಸ್ಲಿಮರಿಗೆ ಹಾಗೂ ನಾರಾಯಣ ಗುರುಗಳ ಜಯಂತಿ ಈಡಿಗ, ಬಿಲ್ಲವ ದೀವರಿಗೆ... ಹೀಗೆ ಜಯಂತಿಗಳು ಜಾತಿಗಳಿಗೆ ಸೀಮಿತಗೊಂಡಿರುವುದು ನಾವಿರುವ ಕಾಲದ ವಿಪರ‍್ಯಾಸವೂ ಹೌದು ನಮ್ಮ  ಸಮಾಜದ ಅನಾರೋಗ್ಯದ ಸ್ಥಿತಿಯೂ ಹೌದು. ಯಾಕೆ ಈ ಮಾತನ್ನು ಹೇಳಬೇಕಾಯಿತೆಂದರೆ ಮೇಲೆ ಹೇಳಿದ ಮಹಾನ್ ವ್ಯಕ್ತಿಗಳೆಲ್ಲರೂ ತಮ್ಮ ಬದುಕಿನಲ್ಲಿ ಶ್ರಮಿಸಿದ್ದು ಜಾತಿ-ಮತ-ಲಿಂಗ ಬೇಧಗಳನ್ನು ದೂರ ಮಾಡಿ ಮನುಷ್ಯರೆಲ್ಲರೂ ಒಂದೇ ಆಗಿ ಬಾಳಬೇಕಾದ ಒಂದು ಸಮಾಜದ ಸಾಕಾರಕ್ಕಾಗಿ ಎಂಬುದು ಎಲ್ಲರೂ ಬಲ್ಲ ಸಂಗತಿ. ಇದಕ್ಕೆ ನಾರಾಯಣ ಗುರ...

ನಕ್ಷತ್ರದ ಧೂಳು

ಇಮೇಜ್
( ರೋಹಿತ್ ವೇಮುಲ ಬದುಕು - ಹೋರಾಟ ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ ನಾಟಕ ಕೃತಿ ) ನಕ್ಷತ್ರದ ಧೂಳು   ರಚನೆ : ಹರ್ಷಕುಮಾರ್ ಕುಗ್ವೆ ( ಪರದೆಯಲ್ಲಿ ಕಾರ್ಲ್ ಸೇಗನ್ ಜಗತ್ತನ್ನು , ಭೂಮಿಯ ಮತ್ತು ಮನುಷ್ಯನ ಕುರಿತು ಹೇಳುವ ವಿಡಿಯೋ . ಎದುರಿಗೆ ರೋಹಿತ್ ಕುರ್ಚಿಯ ಮೇಲೆ ಅದನ್ನು ವೀಕ್ಷಿಸುತ್ತಾ ಕುಳಿತಿದ್ದಾನೆ . ವಿಡಿಯೋ ಕೊನೆಯಾಗುತ್ತಿದ್ದಂತೆ ಎದ್ದು ಮುಂದೆ ಬಂದು ) ರೋಹಿತ್ : ವಾಹ್ , ಎಂತಹ ಅದ್ಭುತವಾದ ಒಳನೋಟ ! ಈ ಬ್ರಹ್ಮಾಂಡದ ಬಗೆ , ್ಗ ನಕ್ಷತ್ರಗಳ ಬಗ್ಗೆ , ಬದುಕಿನ ಬಗ್ಗೆ !! ಮನುಷ್ಯ ಎಷ್ಟು ಸಣ್ಣವನು ಅಂತ ನಿಜಕ್ಕೂ ಅರಿವಿಗೆ ಬರಬೇಕಾದ್ರೆ ಕಾರ್ಲ್ ಸೇಗನ್ ವಿಚಾರಗಳನ್ನ ತಿಳ್ಕೋಬೇಕು . ನಂಗಂತೂ ಹುಚ್ಚು ಹಿಡಿಸಿದ ಬರಹಗಾರ ಈತ . ನಂಗೆ ದೊಡ್ಡ ಬರಹಗಾರ ಆಗ್ಬೇಕು ಅನ್ನೋ ಕನಸು . ಎಂತಹ ಬರಹಗಾರ ಅಂದ್ರೆ ಈ ಕಾರ್ಲ್ ಸೇಗನ್ ತರದ ಬರಹಗಾರ . ವಿಜ್ಞಾನ , ಖಗೋಳ ಜ್ಞಾನವನ್ನ ತಿಳ್ಕೊಂಡು ಅದರ ಆಧಾರದ ಮೇಲೆ ಇಡೀ ವಿಶ್ವದ ಭವಿಷ್ಯವನ್ನ ಹೇಳ್ಬೇಕು , ಹಾಗೆ . ಓಹ್ , ನಿಮಗೆ ನನ್ನ ಪರಿಚಯಾನೇ ಇನ್ನೂ ಆಗಿಲ್ಲ ಅಲ್ವಾ ? ನನ್ನ ಹೆಸರು ರೋಹಿತ್ . ವೇಮುಲ ರೋಹಿತ್ ಚಕ್ರವರ್ತಿ . ನಾನು ಹುಟ್ಟಿ ಬೆಳೆದಿದ್ದೆಲ್ಲಾ ಆಂಧ್ರ ಪ್ರದೇಶದ ಗುಂಟೂರಲ್ಲಿ . ಈಗ ನಾನು ಹೈದರಾಬಾದ್ ವ...