ಪೋಸ್ಟ್‌ಗಳು

ತವಕ-ತಲ್ಲಣ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರೋಹಿತ್ ವೇಮುಲನಿಗೆ ಒಂದು ಪತ್ರ

ಇಮೇಜ್
ಪ್ರೀತಿಯ ರೋಹಿತ್ ವೇಮುಲ, ನಿನ್ನ ಒಂದು ಡೆತ್ ನೋಟ್ ಇಂದು ಸಾಮಾಜಿಕ ಮಾದ್ಯಮದಲ್ಲಿ ಕಾಣಿಸಿಕೊಳ್ಳುವವರೆಗೆ ನಿನ್ನ ಅರುಹೂ-ಕುರುಹೂ ತಿಳಿದಿರಲಿಲ್ಲ. ಆದರೆ ನೀನು ಬರೆದ ಅದೊಂದು ಪತ್ರ ನಿನ್ನನ್ನು ಅಪಾರವಾಗಿ ಹಾಗೂ ಅನಂತವಾಗಿ ಪ್ರೀತಿಸುವಂತೆ ಮಾಡಿದೆ. ಹಾಗೆಂದೇ ಈ ಪತ್ರದ ಮೊದಲಿಗೆ 'ಪ್ರೀತಿಯ' ಎಂದೇ ಸಂಬೋಧಿಸಿರುವೆ. ನಿಜ ಹೇಳಬೇಕೆಂದರೆ ನೀ ಬರೆದ ಅಕ್ಷರಗಳನ್ನು ಓದಿದಾಗಿನಿಂದಲೂ ಮನಸ್ಸಿಗೆ ಸಮಾಧಾನವೆನ್ನುವುದೇ ಇಲ್ಲವಾಗಿದೆ.  ನಿನ್ನ ಪತ್ರ ಓದಿದ ನಂತರ ನೀನು 'ಆತ್ಮಹತ್ಯೆ' ಮಾಡಿಕೊಳ್ಳುವ ಸನ್ನಿವೇಶ ಸೃಷ್ಠಿಯಾದ ಕುರಿತು ತಿಳಿದುಕೊಳ್ಳಲು ಯತ್ನಿಸಿದೆ. ನಿನ್ನ ಶವವನ್ನು ಅದೇ ಕೊಠಡಿಯಲ್ಲಿಟ್ಟು ನಿನ್ನ ಸಂಗಾತಿಗಳು ಪ್ರತಿಭಟನೆ ನಡೆಸುತ್ತಿದ್ದರೆ ಅಲ್ಲಿ ಸೆಕ್ಷನ್ 144 ಜಾರಿಗೊಳಿಸಿ ನಿನ್ನ ಮೃತ ದೇಹವನ್ನು ಕಸಿದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಿದ ಸನ್ನಿವೇಶ ಮತ್ತಷ್ಟು ಸಂಕಟ ತರಿಸಿತು.  ನನ್ನ ಹತ್ತಾರು ವರ್ಷಗಳ ಸಾಮಾಜಿಕ ಪ್ರಜ್ಞೆ ಮತ್ತು ಕ್ರಿಯೆಯ ಭಾಗವಾಗಿ ಎಷ್ಟೋ ಜನರು ಆತ್ಮೀಯರಾಗಿದ್ದಾರೆ. ಒಡನಾಟದಲ್ಲಿದ್ದಾರೆ. ಎಲ್ಲರೂ ಪರಸ್ಪರರ 'ಬದುಕಿನ' ಹಾದಿಯಲ್ಲಿ ಸಿಕ್ಕಿದವರು, ದಕ್ಕಿದವರು. ಆದರೆ ಪ್ರಾಣವೇ ಹೋದ ನಂತರ ಸಿಕ್ಕಿದ ಸಂಗಾತಿ ನೀನು ಮಾತ್ರ ನೋಡು. ನಿನ್ನ ಆ ಪತ್ರದಲ್ಲಿ ನೀನೇನೂ ಸಿದ್ದಾಂತ ಬರೆದಿಲ್ಲ, ಯಾರೊಂದಿಗೋ ಸಂಘರ್ಷ ನಡೆಸಿಲ್ಲ. ಯಾರ ಬಗ್ಗೆ ದೂರಿಲ್ಲ, ದ್ವೇಷ ಕಾರಿಲ್ಲ. ಆದರೆ ನಿನ್ನ ...

ಆದರೇನಂತೆ, ನಾನೆದ್ದು ಬರುವೆ

ಇಮೇಜ್
ಆದರೇನಂತೆ, ನಾನೆದ್ದು ಬರುವೆ ನೀ ಬರೆವ ಚರಿತ್ರೆಯಲ್ಲಿ ನನ್ನ ಹಂಗಿಸಬಹುದು ನೀನು ನಿನ್ನ ತಿರುಚಿದ ಕಹಿಸುಳ್ಳುಗಳಿಂದ ನನ್ನ ತುಳಿದು ಕೆಡವಬಹುದು ನೀನು ಆದರೇನಂತೆ, ಆಗಲೂ ನೆಲದಿಂದ ಪುಟಿವ ಗೋಧೂಳಿಯಂತೆ  ನಾನೆದ್ದು ಬರುವೆ ನನ್ನ ಅಹಂಕಾರ ನಿನ್ನ ನಿದ್ದೆಗೆಡಿಸುವುದೇ? 'ನನ್ನ ಜೀವಂತ ಕೋಣೆಯಯೊಳಗೆ ತೈಲಬಾವಿಗಳಿರುವಂತೆ ನಾ ನಡೆಯುವುದ ನೋಡಿ ನಿನಗೆ ಅಮರಿಕೊಂಡಿತೆ ಮಬ್ಬು? ಕೇಳು ಚಂದಿರರಂತೆ, ಸೂರ್ಯರಂತೆ ಏಳುವ ಅಲೆಗಳ ನಿಖರತೆಯಂತೆ ಹೊಸ ಭರವಸೆ ಬಾನೆತ್ತರಕೆ ಚಿಮ್ಮುವಂತೆ ಈಗಲೂ ನಾನೆದ್ದು ಬರುವೆ ತಲೆತಗ್ಗಿಸಿ ಕೆಳಗಣ್ಣು ಮಾಡಿ ನೆಲ ನೋಡುತ್ತಾ ನಿಲ್ಲಬಹುದೆಂದು ಕಣ್ಣೀರ ಹನಿಗಳಂತೆ ನನ್ನ ಭುಜಗಳು ಕೆಳ ಜೋಲುವುವೆಂದು ನನ್ನಾತ್ಮದ ಯಾತನೆಯಿಂದ ನಿತ್ರಾಣಳಾಗುವೆನೆಂದು ಕುಸಿದು ಕೂರುವೆನೆಂದು ನಿರುಕಿಸಿದ್ದೆಯಾ ನೀನು? ನನ್ನ ದರ್ಪ ನಿನ್ನ ಕೋಪವ ನೆತ್ತಿಗೇರಿಸುವುದೇ? ನನ್ನದೇ ಆದ ಹಿತ್ತಿಲಲ್ಲಿ ಚಿನ್ನದ ಗಣಿಯ ಅಗೆಯುವಂತೆ ನಗುವ ನನ್ನ ನಗುವ ನೋಡಿ ನಿನ್ನೆದೆ ಝಲ್ ಎಂದಿಲ್ಲವೇ? ಕೇಳಿಲ್ಲಿ, ನಿನ್ನ ಮಾತಿನ ಬುಲೆಟ್ಟುಗಳು ನನ್ನೆದೆ ಬಗೆಯಲಿ ನಿನ್ನ ದುರುಗುಡವ ಕಣ್ಣುಗಳು ನನ್ನ ಕತ್ತರಿಸಲಿ ನಿನ್ನ ದ್ವೇಷದ ಜ್ವಾಲೆ ನನ್ನ ಕೊಲ್ಲಲಿ ಆದರೇನಂತೆ ಆಗಲೂ ಸುಳಿಗಾಳಿಯಂತೆ ಬರುವೆ ನಾನೆದ್ದು ಬರುವೆ ನನ್ನ ಅಂಗಾಂಗಗಳ ಸೆಳೆತ ನಿನ್ನ ವಿಚಲಿತಗೊಳಿಸಿತೆ ನನ್ನ ತೊಡೆಗಳು ಸಂಧಿಸುವೆಡೆ ವಜ್ರವೈಢೂರ್ಯಗಳನಿಟ್ಟುಕೊಂಡವಳಂತೆ ನಾ ಮೈದುಂಬಿ ಕುಣಿವುದ ಕ...

ಹಾಲಿವುಡ್ ನಟಿಯ ಅಂತರಂಗದ ಮಾತುಗಳು

ಇಮೇಜ್
ಹಾಲಿವುಡ್ ನಟಿ ಲುಪಿತಾ ನ್ಯೋಂಗೊಗೆ ಮೊನ್ನೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಸ್ಟೀವ್ ಮಕೀನ್ ನಿರ್ದೇಶನದ  12 Years a Slave    ಚಿತ್ರದಲ್ಲಿ ಪಾಟ್ಸಿ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ ಈಕೆಗೆ ’ಅತ್ಯುತ್ತಮ ಪೋಷಕನಟಿ’ ಪ್ರಶಸ್ತಿ ಲಭಿಸಿದೆ. ಈ ಕೀನ್ಯಾ ಮೂಲತ ಪೋಷಕರನ್ನು ಹೊಂದಿರುವ ಮೆಕ್ಸಿಕನ್ ಕಪ್ಪು ವರ್ಣದ ತಾರೆಗೆ ಆಸ್ಕರ್ ಪ್ರಶಸ್ತಿ ಲಭಿಸುವ ಮುನ್ನ 'ಎಸೆನ್ಸ್ ಮ್ಯಾಗಜೀನ್’  ಎಂಬ ಪ್ರಸಿದ್ಧ ಸಿನಿಮಾ ಪತ್ರಿಕೆ ’ಬ್ಲಾಕ್ "ಮೆನ್ ಇನ್ ಹಾಲಿವುಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆ ಪ್ರಶಸ್ತಿ ಆಕೆ ಸ್ವೀಕರಿಸುವಾಗ ಮಾಡಿದ ಭಾಷಣದಲ್ಲಿ ತನ್ನ ಅಂತರಂಗದ ಸೌಂದರ್ಯವನ್ನು ಬಿಚ್ಚಿಟ್ಟಳು. ಅವಳಾಡಿದ ಮಾತುಗಳನ್ನು ಅನುವಾದಿಸಿ ಬರಹ ರೂಪದಲ್ಲಿರಿಸಿದ್ದೇನೆ.                                                        *****    " ಹುಡುಗಿಯೊಬ್ಬಳು ನನಗೆ ಬರೆದಿದ್ದ ಪತ್ರದ ಒಂದೆರಡು ಸಾಲುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ' ಪ್ರಿಯ ಲುಪೀಟಾ, ರಾತ್ರೋ ರಾತ್ತಿ ಹಾಲಿವುಡ್‌ನಲ್ಲಿ ಯಶಸ್ಸು ಕಂಡ ನೀನು ಇಷ್ಟು ಕಪ್ಪಗಿರಲಿಕ್ಕೆ ನಿಜಕ್ಕೂ ಅದೃಷ್ಟ ಮಾಡಿದ್ದೆ ಅನ್ನಿಸುತ್ತ್ತಿದೆ. ನಾನು ನನ್ನ ಚರ್ಮವನ...

ವೆಲ್ ಡನ್ 2011, ವೆಲ್ ಕಮ್ 2012!!

ಇಮೇಜ್
ಅಬ್ಬ !! ಹೇಗೆ ಮುಗಿದೋಯ್ತಲ್ಲಾ ಒಂದಿಡೀ ವರ್ಷ ?? ಹೊಸ ವರ್ಷಕ್ಕೆ ಕಾಲಿಡುತ್ತಿರೋ ಈ ಕ್ಷಣ ಸುಮ್ಮನೇ ಒಂದು ಅವಲೋಕನಕ್ಕೆ ಕೂತಿದ್ದೇನೆ . ವಯುಕ್ತಿಕವಾಗಿ 2011 ನನಗೆ ನೂರಾರು ವಿಶಿಷ್ಟ ಅನುಭವಗಳನ್ನು ನೀಡಿದ ವರ್ಷ . ಸಹಜವಾಗಿ ಒಳ್ಳೆಯ , ಕೆಟ್ಟ , ಖುಷಿ , ನೋವು , ಆಸೆ , ನಿರಾಸೆ , ನಿಟ್ಟುಸಿರು , ಎಲ್ಲಾ ರೀತಿಯ ಅನುಭವಗಳಲ್ಲಿ ಮುಳುಗಿಸಿಬಿಟ್ಟಿತ್ತಲ್ಲ ! ಇರಲಿ ಎಲ್ಲರ ಜೀವನದಲ್ಲಾಗಿರುವುದೂ ಇದೇ ತಾನೇ ? ರೂಪಗಳಷ್ಟೆ ಬೇರೆ ಬೇರೆಯಾಗಿರಬಹುದು .   ಹೊರಪ್ರಪಂಚಕ್ಕೆ ಒಂದು ಕಣ್ಣು , ಕಿವಿಇಟ್ಟುಕೊಂಡೇ ಕೂತಿರುವವರಿಗೆ 2011 ನಿಜಕ್ಕೂ ಕೆಲವಾರು ವಿಷಯಗಳಲ್ಲಿ ಉತ್ಸಾಹ , ಕುತೂಹಲಗಳನ್ನು ತುಂಬಿ ಕಚಗುಳಿ ಇಟ್ಟ ವರುಷ . ಇದೇ ವೇಳೆಗೆ ಫುಕುಶಿಮಾದ , ಕೊಲ್ಕೋತಾದ ಆಸ್ಪತ್ರೆ ದುರಂತಗಳು ನಡೆದು ಬಹಳ ನೋವುಂಟು ಮಾಡಿದ್ದೂ ಇದೆ . ಅದೂ ಇಂತಹ ದುರಂತಗಳಿಗೆ ಮನುಷ್ಯನ ಮೂರ್ಖತನವೂ ಕಾರಣವೆಂದಾದಾಗ ಮನಸ್ಸಿಗೆ ಮತ್ತಷ್ಟು ಕಸಿವಿಸಿಯಾಗುತ್ತದೆ . ಅದಕ್ಕಿಂತ ದುರಂತವೆಂದರೆ ಫುಕುಶಿಮಾದಂತಹ ದುರಂತ ನಡೆದ ಮೇಲೂ ಎಚ್ಚೆತ್ತುಕೊಳ್ಳದ ನಮ್ಮ ಸರ್ಕಾರಗಳು ಮತ್ತೆ ಇಲ್ಲಿ ಹೊಸದಾಗಿ ಕುಂಬಕೋಣಂ ಪರಮಾಣು ರಿಯಾಕ್ಟರ್ ‌ ಗಳನ್ನು ಸ್ಥಾಪಿಸಿದ್ದು . ಅದಕ್ಕೇ ಅಲ್ಲವಾ ಐನ್ ‌ ಸ್ಟೀನ್ ಒಮ್ಮೆ   " ಎರಡು ವಿಷಯಗಳು ಅನಂತವಾಗಿವೆ . ಒಂದು ಈ ಬ್ರಹ್ಮಾಂಡವಾದರೆ ಮತ್...