ಅವರಲ್ಲಿ ಸಿದ್ದರಾಮಯ್ಯ ಸಹ ಸಂಪೂರ್ಣ ವಿಶ್ವಾಸ ಇರಿಸಿದ್ದರು...
ಡಾ. ವೆಂಕಟೇಶಯ್ಯ ನೆಲ್ಲುಕುಂಟೆ ಮೊನ್ನೆ ಸೋಷಲ್ ಮೀಡಿಯಾದಲ್ಲಿ ಸಿ ಎಂ ಸಿದ್ದರಾಮಯ್ಯ ಅವರು ವಿದಾನಸಭೆಯಲ್ಲಿ ಮಾಡಿದ್ದ ಭಾಷಣದ ತುಣುಕೊಂದು ವೈರಲ್ ಆಗಿದ್ದನ್ನು ಗಮನಿಸಿದೆ . ಬಿಜೆಪಿ ಸರ್ಕಾರ ತರಲು ಹೊರಟಿದ್ದ ಮತಾಂತರ ಕಾಯ್ದೆಯನ್ನು ವಿರೋಧಿಸುತ್ತಾ ಸಿದ್ದರಾಮಯ್ಯ ಅವರು ಬಿಡುತ್ತಿದ್ದ ಒಂದೊಂದೇ ಮಾತಿನ ಬಾಣಗಳನ್ನು ಕೇಳಿ ಅಂದಿನ ಬಿಜೆಪಿ ಸರ್ಕಾರದ ಮಹಾಮಹಿಮರೆಲ್ಲಾ ಗರಬಡಿದಂತೆ ಕುಳಿತ ದೃಶ್ಯ ಅದು . ʼ ರನ್ನ ಯಾವ ಧರ್ಮದಲ್ಲಿ ಹುಟ್ಟಿದ್ದ ? ಯಾವ ಧರ್ಮಕ್ಕೆ ಸೇರಿದ್ದ ? ಪಂಪ ಯಾವ ಜಾತಿ , ಸೇರಿದ್ದು ಯಾವ ಧರ್ಮ ? ಸಾಮ್ರಾಟ ಅಶೋಕ ಯಾವ ಧರ್ಮದಲ್ಲಿದ್ದ ಯಾವ ಧರ್ಮ ಸೇರಿದ್ದ ? ಅಂಬೇಡ್ಕರ್ ಯಾವ ಧರ್ಮಕ್ಕೆ ಸೇರಿದ್ದರು ? ನಮ್ಮ ದೇಶದಲ್ಲಿ ಯಾರೆಲ್ಲಾ ಯಾಕಾಗಿ ಮತಾಂತರ ಆಗಿದ್ದರು ?” ಬಹಳ ಜನಕ್ಕೆ ತಿಳಿದಿರಲಿಕ್ಕಿಲ್ಲ . ಆ ಬೆಂಕಿಯಂತ ಭಾಷಣವನ್ನು ಅಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಿದ್ಧಪಡಿಸಿದ್ದು ಬೇರಾರೂ ಅಲ್ಲ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಡಾ . ನೆಲ್ಲುಕುಂಟೆ ವೆಂಕಟೇಶಯ್ಯನವರು . ಸಿದ್ದರಾಮಯ್ಯನವರು ಎರಡನೇ ಸಲಕ್ಕೆ ಮುಖ್ಯಮಂತ್ರಿಯಾದ ನಂತರ ತಮ್ಮ ಆಪ್ತ ಕಾರ್ಯದರ್ಶಿಯಾಗಿ ಡಾ . ನೆಲ್ಲುಕುಂಟೆ ವೆಂಕಟೇಶಯ್ಯ ಅವರನ್ನೇ ನೇಮಿಸಿಕೊಂಡಾಗ ಕೆಲವರಿಗೆ ಅಚ್ಚರಿಯಾಗಿದ್ದಿರಬಹುದು . ಆದರೆ ವೆಂಕಟೇಶಯ್ಯ ಅವರಿಗ...