ಆಗಸ್ಟ್ 05, 2011

ಇದು ಯಡಿಯೂರಪ್ಪನವರ ದುರಂತ ಹಾಗೂ ನಮ್ಮೆಲ್ಲರ ದುರಂತವೂ ಸಹ: ಪ್ರೊ.ಎನ್. ಮನು ಚಕ್ರವರ್ತಿ





ಸಿನಿಮಾ ಮತ್ತು ಸಾಹಿತ್ಯಕ್ಕಿರುವ ಸಂಬಂಧವನ್ನು ಹೇಗೆ ನೋಡುತ್ತೀರಿ?
ಮೂಲಭೂತವಾಗಿ ಸಿನಿಮಾಸಾಹಿತ್ಯದ ನಡುವೆ ಒಂದು ಸೃಜನಶೀಲ ಸಂಬಂಧ ಇದ್ದೇ ಇರುತ್ತದೆ. ಸಾಹಿತ್ಯ ಕೃತಿ ಒಂದು ಸಿನಿಮಾ ಆದಾಗಲೇ ಸಂಬಂಧ ಉಂಟಾಗುತ್ತದೆ ಎಂದು ನಾವು ನೋಡಬೇಕಾಗಿಲ್ಲ. ಅದೊಂದು ರೀತಿ ನೇರ ಸಂಬಂಧವಾದರೂ ಎರಡೂ ಕೂಡ ಪಠ್ಯಕೃತಿಗಳೇ ಎಂದು ನೋಡಬೇಕು. ಎರಡರಲ್ಲೂ ಒಂದೇ ರೀತಿಯಲ್ಲಿ ಪ್ರತಿಮೆಗಳಿರುತ್ತವೆ. ಸಿನಿಮಾವನ್ನು ಕೂಡ ಓದಬೇಕು ಎನ್ನುತ್ತೇನೆ.


ಆದರೆಸಾಮಾನ್ಯ ಜನರಿಗೆ ಓದುವ’ ಪರಿಕಲ್ಪನೆ ಬರುವುದು ಹೇಗೆ?
ಒಂದು ಪಠ್ಯವನ್ನು ಮೊದಲ ಬಾರಿ ಓದುವಾಗ ಎಲ್ಲರೂ ಸಮಾನ್ಯ ಓದುಗರೇ. ಅಸಾಮಾನ್ಯ ಓದುಗರು ಎಂಬುದು ಇರುವುದಿಲ್ಲ. ಈ ಅರ್ಥದಲ್ಲಿ ಸಿನಿಮಾ ನೋಡುಗರೂ ಅದನ್ನು ಓದುತ್ತಿರುತ್ತಾರೆ. ಸಿನಿಮಾ ನೋಡುತ್ತಾ,ಸಿನಿಮಾ ಮೀಮಾಂಸೆ ಓದುತ್ತಾಫಿಲಂ ಥಿಯರಿ ಓದುತ್ತಿರುವವರಿಗೆ ಕೆಲವೊಮ್ಮೆ ಕೆಲ ಸಂಗತಿಗಳು ಅರ್ಥವೇ ಆಗಿರುವುದಿಲ್ಲ. ಅನೇಕ ಶಿಬಿರಗಳಲ್ಲಿ ನನಗೆ ಅನುಭವವಾಗಿರುವುದೆಂದರೆ ಹಳ್ಳಿಯ ಜನರುಕಾರ್ಪೋರೇಷನ್ ಕೆಲಸ ಮಾಡುವವಂತವರೇ ಎಷ್ಟೋ ಸಲ ಬೌದ್ಧಿಕ ಎನ್ನುವ ಸಂಪ್ರದಾಯದಿಂದ ಬಂದವರಿಗಿಂತಲೂ ಚೆನ್ನಾಗಿ  ಸಿನಿಮಾವನ್ನು ಅನಾವರಣ ಮಾಡಿಬಿಡುತ್ತಾರೆ. ಕೆ.ವಿ. ಸುಬ್ಬಣ್ಣ ಅವರಿದ್ದಾಗ ಹೆಗ್ಗೋಡಿನಲ್ಲಿ ಬರ್ಗ್‌ಮನ್‌ರಸೆವೆನ್ ಸೀಲ್’ ತೋರಿಸಿದ್ದರು. ಹಳ್ಳಿಯವರು ಅಂದರೆ ನಾವು ಯಾರಿಗೆ ಇಲ್ಲಿಟರೇಟ್ಅನಕ್ಷರಸ್ತರುಫಿಲಂ ಥಿಯರಿ ಗೊತ್ತಿಲ್ಲದವರು ಅಂತೀವೋ ಅವರು ಇದು ಬದುಕು ಸಾವಿನ ಮಧ್ಯೆ ನಡೆಯುತ್ತಿರುವ ಘರ್ಷಣೆ. ಇದನ್ನು ಬರ್ಗ್‌ಮನ್ ಸೆವೆನ್ ಸೀಲ್ ನಲ್ಲಿ ಚಿತ್ರಿರಿಸಿದ್ದಾರೆ ಎಂದು ವ್ಯಾಖ್ಯಾನ ಮಾಡಿದ್ರಂತೆ. ನಮ್ಮ ಲಾವಣಿಕತೆಗಳುಹಾಡುಗಳನ್ನು ನೋಡಿ. ಅದು ನಿಜವಾದ ಜೀವಂತ ಪರಂಪರೆಯಾದ್ದರಿಂದ ಅದೆಷ್ಟು ರೂಪಕಪ್ರತಿಮೆಗಳಿರುತ್ತವೆ ಅದರಲ್ಲಿ. ನನ್ನ ಇನ್ನೊಂದು ವಾದ ಏನೆಂದರೆ ಈ ಮೌಖಿಕ ಸಂಪ್ರದಾಯದಲ್ಲಿ ಸಿನಿಮಾ ಎನ್ನುವುದು ಮೊದಲು ಅಭಿವ್ಯಕ್ತಿಗೊಳ್ಳುತ್ತೆ. ಸ್ವೀಕಾರ ಮಾಡಲ್ಪಡುತ್ತೆ. ಹೀಗಾಗಿ ನಮ್ಮಂತವರುವಿಶೇಷವಾಗಿ ಸಿನಿಮಾ ವಿಮರ್ಷೆ ಬರೆಯುವವರು ನಾವೇನೋ ಬಹಳ ಅಸಾಮಾನ್ಯ ವರ್ಗಕ್ಕೆ ಸೇರಿದವರು ಎಂದುಕೊಳ್ಳುವುದು ದುರಹಂಕಾರಮೂರ್ಖತನ. 


ಸಿನಿಮಾ ನೋಡುಗರಲ್ಲಿ ಅಥವಾ ಸಾಹಿತ್ಯ ಓದುಗರಲ್ಲಿ ದೃಷ್ಟಿಕೋನದ ಪಾತ್ರವೇನು?
ಒಂದು ದೃಷ್ಟಿಕೋನದಿಂದ ಎಲ್ಲರೂ ನೋಡುವುದಿಲ್ಲ. ಒಂದು ವೀಕ್ಷನೆಯಲ್ಲಿ ಹಲವಾರು ಜನರಿದ್ದರೆ ನಾನಾ ರೀತಿಯ ದೃಷ್ಟಿಕೋನಗಳು ಹುಟ್ಟುತ್ತವೆ. ನೋಡುವವರ ನೆಲೆಗಳು ತಮ್ಮಲ್ಲೇ ಮೌಲ್ಯಮಾಪನ ನಡೆಸುತ್ತವೆ. ಉದಾಹರಣೆಗೆ ಪುನೀತ್ ರಾಜ್‌ಕುಮಾರ್‌ರ ಪೃಥಿ’ ಬಂತು. ಪುನೀತ್‌ರ ಫ್ಯಾನ್‌ಗಳೇ ಇದ್ಯಾಕೋ ಸರಿ ಇಲ್ಲ ಎಂದು ತಿರಸ್ಕರಿಸಿದರು. ವಾಸ್ತವದಲ್ಲಿ ಜನಪ್ರಿಯ ಸಿನಿಮಾಗಳಲ್ಲಿ ಇದು ಅತ್ಯಂತ ಒಳ್ಳೆಯ ಸಿನಿಮಾವಾಗಿತ್ತು. ವ್ಯವಸ್ಥೆಯನ್ನುರೆಡ್ಡಿಗಳನ್ನು ಧೈರ್ಯವಾಗಿ ಎದುರು ಹಾಕಿಕೊಂಡ ಸಿನಿಮಾ ಅದು. ಸಿನಿಮಾದ ಉತ್ಪ್ರೇಕ್ಷಿತ ನುಡಿಗಟ್ಟನ್ನು ಆದಷ್ಟು ಕಡಿಮೆ ಮಾಡಿಕೊಂಡ ಹೊಸ ಶೈಲಿಯ ಸಿನೆಮಾ ಅದು. ಆದರೆ ಪ್ರೇಕ್ಷಕರು ಅದನ್ನು ಏಕೆ ತಿರಸ್ಕರಿಸಿದರುಅವರಲ್ಲೂ ಒಂದು ಮೌಲ್ಯಮಾಪನ ಇರುತ್ತೆಚಿಕಿತ್ಸಕ ವಿಶ್ಲೇಷಣೆಯ ಪ್ರಜ್ಞೆ ಕೆಲಸ ಮಾಡುತ್ತಿರುತ್ತವೆ. ಸರಿ ತಪ್ಪು ವಿಷಯ ಬೇರೆ. ಹೀಗೆ ಒಂದು ದೃಷ್ಟಿಕೋನ ಅಂತ ಇರಲ್ಲ. ದೃಷ್ಟಿಕೋನಗಳಿರುತ್ತೆ. ಇವರನ್ನು ನಾವು ಅಧ್ಯಯನ ಮಾಡಬೇಕು.

ಮತ್ತೆ ಏಕೆ ವಿಫಲವಾಯತು ಅಂತೀರಿ?
ಏಕೆಂದರೆ ಒಬ್ಬ ಸೂಪರ್ ಸ್ಟಾರ್‌ನ ಜನಪ್ರಿಯ ಇಮೇಜಿಗೆ ವಿರುದ್ಧವಾಗಿತ್ತು ಅದು. ಪೃಥ್ವಿಯಲ್ಲಿ ಪುನೀತ್‌ರ ಪಾತ್ರ ಅದನ್ನು ಪಲ್ಲಟಗೊಳಿಸಿದಾಗ ಅಭಿಮಾನಿಗಳು ಬಯಸುವ ರಂಜನೆಯ ಅಂಶ ಅವರಿಗೆ ಸಿಗಲಿಲ್ಲ. ಅವರ ಕನಸುಗಳನ್ನು ನುಚ್ಚುನೂರು ಮಾಡಿದ ಸಿನಿಮಾ ಅದು. ಹೀಗೆ ಒಂದೆಡೆ ಕನಸುಗಳೂ ಕೆಲಸ ಮಾಡುತ್ತಿರುತ್ತವೆಅವೂ ಒಂದು ದೃಷ್ಟಿಕೋನ ರೂಪಿಸುತ್ತಿರುತ್ತವೆಹಾಗಾಗಿ ಆ ಕನಸುಗಳನ್ನು ಮಾರುವವರೂ ಇರುತ್ತಾರೆ. ನನ್ನ ಪ್ರಕಾರ ಪೃಥ್ವಿಯ ಯಶಸ್ಸೇನೆಂದರೆ ಅದು ಹಾಗೆ ಕನಸ್ಸುಗಳನ್ನು ಮಾರದೇ ಇದ್ದ ಸಿನಿಮಾ ಆಗಿದ್ದು. ಹೀಗೆ ಕನಸುಗಳನ್ನು ಮಾರುತ್ತಾ ಸುಳ್ಳು ಹೇಳುತ್ತಾ ಒಂದು ದೃಷ್ಟಿಕೋನ ಬೆಳೆಸುವುದಿದೆಯಲ್ಲಾ ಅದನ್ನು ಮುರಿಯುವಂತಹ ದೃಷ್ಟಿಕೋನ ಹುಟ್ಟಿಸುವ ಸಿನಿಮಾ ಬರುತ್ತಲ್ಲಾ ಅದನ್ನು ನಾವು ಬೆಳೆಸಬೇಕು. ಕನ್ನಡ ಸಿನೆಮಾ ಉದ್ಧಾರ ಆಗುವುದಿದ್ದರೆ ಅದರಿಂದ ಮಾತ್ರ.

ಕಳೆದ ಎರಡು ದಶಕಗಳಲ್ಲಿ ವ್ಯಾಪಕವಾಗಿರುವ ಗ್ರಾಹಕ ಸಂಸ್ಕೃತಿ ಸಿನಿಮಾಗಳ ಮೇಲೆ ಬೀರಿರುವ ಪರಿಣಾಮ ಏನು?
ಕನ್ನಡವಿರಲಿ ಇನ್ನಾವುದೇ ಸಿನಿಮಾ ರಂಗವಿರಲಿ ಅಲ್ಲಿ ಜಾಗತೀಕರಣ ಬರುವವರೆಗೆ ಸ್ಥಳೀಯ ವಿಷಯಗಳು ಮುಖ್ಯವಾಗುತ್ತಿತ್ತು. ಸಿನಿಮಾಗಳು ಮಧ್ಯಮ ವರ್ಗದ ಸಮುದಾಯದ ಪ್ರಜ್ಞೆಯ ಚೌಕಟ್ಟಿನಲ್ಲಿರುತ್ತಿದ್ದವು. ಅವು ಸೂಪರ್ ಬಡ್ಜೆಟ್ ಸಿನಿಮಾಗಳಾಗಿರುತ್ತಿರಲಿಲ್ಲ. ತಂತ್ರಜ್ಞಾನ ಸಹ ಈ ಮಟ್ಟದಲ್ಲಿರಲಿಲ್ಲ. ಆದರೆ ಜಾಗತೀಕರಣ ಛಿದ್ರಗೊಂಡ ಸುಳ್ಳು ಸುಳ್ಳು ಬಿಡಿ ಬಿಡಿ ಪ್ರತಿಮೆಗಳನ್ನು ನಿರ್ಮಿಸತೊಡಗಿತು. ಸ್ಥಳೀಯತೆ ಮಾಯವಾಯಿತು. ಒಂದು ಹಂತದ ನಂತರ ಸ್ಥಳ ಕಾಲಕ್ಕೆ ಸಂಬಂಧಪಟ್ಟಂತೆ ಛಿದ್ರೀಕರಣ ಆರಂಭವಾಯಿತು. ಸಿನಿಮಾ ಒಂದು ನಿಧಾನಗತಿಯಲ್ಲಿ ನಮ್ಮ ಕತೆ ಹೇಳಿದರೆ ಅದು ನಮ್ಮದಲ್ಲ ಎನ್ನಿಸತೊಡಗಿತು. ಅವಾಸ್ತವಿಕವಾದುದನ್ನು ಸೂಪರ್‌ಸ್ಪೀಡ್‌ನಲ್ಲಿ ಹೇಳಿದಾಗ ಅದರ ಜೊತೆಗೆ ನಾವು ಗುರುತಿಸಿಕೊಳ್ಳತೊಡಗಿದೆವು. ಸಿನಿಮಾದಲ್ಲಾದ ಈ ಬದಲಾವಣೆ ಮಧ್ಯಮ ವರ್ಗವನ್ನೂ ಅಳಿಸಿಹಾಕಿತುಬಡವರನ್ನೂ ಶೋಷಿತರನ್ನೂ ಅಳಿಸಿ ಹಾಕಲು ಶುರು ಮಾಡಿತು. ಹೀಗೆ ನಿಜವಲ್ಲದ ಜಗತ್ತೇ ಜಗತ್ತು ಎಂಬುದನ್ನು ಹಾಗೂ ಅಲ್ಲಿ ತೋರಲ್ಪಡುವ ಪ್ರತಿಮೆಗಳು ನಮ್ಮ ಜೀವನದಲ್ಲಿ ಯಾವತ್ತೂ ಬರಲು ಸಾಧ್ಯವಿಲ್ಲವಾದರೂ ಅದೇ ನಿಜ ಎಂಬ ಭ್ರಮಾತ್ಮಕ ಒತ್ತಡವನ್ನು ಸೃಷ್ಟಿಮಾಡಲಾರಂಭಿಸಿತು. ಇದೆಲ್ಲದರ ಮೂಲವನ್ನು ಹುಡುಕಲು ನಾವು ತೊಡಗಬೆಕು. ಸಮಾಜದಲ್ಲಿ ಹೇಗೆ ಸಣ್ಣ ಪುಟ್ಟ ಅಂಗಡಿಗಳು ನಾಶವಾಗಿ ಮಾಲ್ ಸಂಸ್ಕೃತಿ ಶುರುವಾಯಿತೋ ಹಾಗೇ ಸಿನಿಮಾ ಪ್ರಪಂಚವೂ ಅದೇ ಬೆಳವಳಿಗೆಯನ್ನು ಸೂಚಿಸುತ್ತದೆ. ಇದನ್ನು ಚಿತ್ರರಂಗದ ತರ್ಕದೊಳಗೇ ಅರ್ಥೈಸಲಾಗುವುದಿಲ್ಲ.
ಈ ಸಾಂಸಕೃತಿಕ ಬದಲಾವಣೆಗೆ ಯಾವುದೇ ಪ್ರತಿರೋಧ ಸಿನಿಮಾ ರಂಗದಲ್ಲಿ ವ್ಯಕ್ತಗೊಂಡಿಲ್ಲವೇ?  ಖಂಡಿತಾ ಅಂತಹ ಪ್ರತಿರೋಧ ವ್ಯಕ್ತವಾಗಿದೆ. ಪೃಥ್ವಿ ಕೂಡಾ ಆ ಬಗೆಯದೇ. ಗಿರೀಶ್ ಕಾಸರವಳ್ಳಿ,ಪಿ.ಶೇಷಾದ್ರಿಯವರಂತವರು ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿದ್ದಾರೆ. ಹಾಗೆಯೇ ಮರಾಠಿಯಲ್ಲಿಭೋಜ್‌ಪುರಿಪಂಜಾಬಿಯಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಹಿಂದಿ ಸಿನಿಮಾರಂಗದಲ್ಲೂ ಕೂಡಾ ಇಂತಹ ದನಿಗಳು ಬರುತ್ತಿವೆ. ಇವೆಲ್ಲಾ ತಮ್ಮ ಭಾಷೆಸಂಸ್ಕೃತಿಗಳ ಪರವಾದ ಆಂದೋಲನಗಳ ಸೂಚನೆಯಾಗಿಯೂ ಬರುತ್ತಿವೆ.

ಇಂದು ಕಲಾತ್ಮಕ ಸಿನಿಮಾ ಕಮರ್ಷಿಯಲ್ ಸಿನಿಮಾ ಎಂದು ವಿಂಗಡನೆ ಮಾಡಿ ನೋಡಲಾಗುತ್ತಿದೆ. ಇದು ಎಷ್ಟು ಸರಿ?
ಈ ಪ್ರಶ್ನೆಯನ್ನು ಕೇಳಬೇಕಾದ ಕಾಲ ಬಂದಿದೆ. ಹೀಗೆ ವರ್ಗೀಕರಣ ಮಾಡಿದವರು ಯಾರುಹಾಗೆ ಮಾಡಬೇಕಾದ ಅನಿವಾರ್ಯತೆ ಯಾರಿಗೆ ಬಂತು ಯಾಕೆ ಬಂತುಸೊಕಾಲ್ಡ್ ಕಲಾತ್ಮಕ ಸಿನಿಮಾಗಳನ್ನು ಜನಗಳು ನೋಡುವುದಿಲ್ಲ ಎನ್ನುವ ಮಾತಿನ ಬದಲಾಗಿ ಅವು ರಿಲೀಸ್ ಆಗದೇನೇ ಜನಗಳ ಹತ್ತಿರ ಹೋಗದೇ ಇರುವಂತೆ ಮಾಡಿಬಿಡುವ ಶಕ್ತಿಗಳಾವುವು ಎಂದು ನೋಡಬೇಕುಕಾಸರವಳ್ಳಿ ಮಾಡಿದ್ದು ಒಳ್ಳೇ ಸಿನಿಮಾನೋ ಕೆಟ್ಟ ಸಿನಿಮಾನೋ ಎಂದು ಮಾತನಾಡಬೇಕೇ ಹೊರತು ಇದು ಆರ್ಟ್ ಸಿನಿಮಾಜನ ನೋಡಲ್ಲ ಎಂದು ಹೇಳುವುದರ ಮೂಲವನ್ನು ನೋಡದೇ ಒಪ್ಪಿಕೊಂಡುಬಿಡುವುದು ಸರಿಯಲ್ಲ. ಅಂತಹ ಮಾತುಗಳಲ್ಲಿ ಸಹ ಬಂಡವಾಳದ ಲಾಭಿ ಇದೆ. ನಿಜವಾಗಿಯೂ ಈ ಸಿನಿಮಾಗಳನ್ನು ಒಂದಕ್ಕೊಂದು ವಿರೋಧಿನೆಲೆಯಲ್ಲಿ ನೋಡಬೇಕಾದುದಿಲ್ಲ. ಜನಪ್ರಿಯ ಸಿನಿಮಾಗಳ ಅನೇಕ ಅಂಶಗಳನ್ನು ಒಪ್ಪಿಕೊಳ್ಳುವ ನೆಲೆಯಲ್ಲಿ ಗಿರೀಶ್ ಅಂಹವರಿದ್ದಾರೆ. ಹಾಗೆಯೇ ಜನಪ್ರಿಯ ಸಿನಿಮಾ ಮಾಡುವವರು ಕಾಸರವಳ್ಳಿಯಂತವರು ಮಾಡುವ ಸಿನಿಮಾಗಳಿಗೆ ತೆರೆದುಕೊಂಡರೆ ಅವರಿಗೆ ಕಲಿಯಲು ಬೇಕಾದಷ್ಟಿದೆ. ಹೀಗೆ ಎರಡರ ನಡುವೆ ಕೊಡುಕೊಳೆ ಸಂಬಂಧವನ್ನು ನಾವು ಕಟ್ಟಬೇಕಿದೆ. 

ಹೀಗೆಲ್ಲಾ ನಡೆಯುತ್ತಿರುವಾಗ ನಮ್ಮ ಚುನಾಯಿತ ಸರ್ಕಾರಗಳ ಹೊಣೆಗಾರಿಕೆ ಎನು?
ನಿಜವಾದಗಟ್ಟಿಯಾದ ರಾಜಕೀಯ ಪ್ರಜ್ಞೆಯ ಕೊರತೆ ನಮ್ಮ ಎಲ್ಲಾ ರಾಜಕೀಯ ಪಕ್ಷಗಳಿಗಿರುವುದರಿಂದ ಇಲ್ಲಿ ಸರ್ಕಾರಗಳಿವೆಯೇ ಹೊರತು ನಿಜವಾದ ಪ್ರಜಾಪ್ರಭುತ್ವವಾದಿ ನೆಲೆಯನ್ನಿಟ್ಟುಕೊಂಡು ಘನವಾದ ರಾಜಕೀಯ ನಡೆಸುವ ಪ್ರಭುತ್ವವೇ ನಾಶವಾಗಿದೆ. ಸೈದ್ಧಾಂತಿಕ ನೆಲೆಯ ರಾಜಕೀಯ ಇಲ್ಲಿಲ್ಲ. ರಾಜಕೀಯ ಪ್ರಜ್ಞೆ ಕುಸಿದಿದೆ. ಇದರಿಂದಾಗಿ ಇಲ್ಲಿ ಇಂದು ಶತ್ರುನಾಳೆ ಸ್ನೇಹಿತಹಣಲಾಭಿಲಿಕರ್ ಲಾಭಿಪವರ್ ಲಾಭಿಗ್ರಾನೈಟ್ ಲಾಭಿ,ಇವೆಲ್ಲದರಿಂದ ಸರ್ಕಾರದ ಅಧಿಕಾರ ಹಿಡಿದಿಡುವ ರಾಜಕೀಯ ಪಕ್ಷ ಮಾತ್ರವೆ ಇಲ್ಲಿದೆ. ಹಾಗೇನೇ ವಿರೋಧ ಪಕ್ಷಕ್ಕೂ ಕೂಡ ಪ್ರಗತಿಜನರ ಅಭಿವೃದ್ಧಿ ಇವ್ಯಾವೂ ಕಾಳಜಿಗಳಲ್ಲ. ಅವರ ಒಂದೇ ಕಾಳಜಿ ಆಳುತ್ತಿರುವ ಪಕ್ಷವನ್ನು ಉರುಳಿಸುವುದು ಅಷ್ಟೆ. ಹೀಗಾಗಿ ಇವರಿಂದ ಏನನ್ನೂ ನಿರೀಕ್ಷೆ ಮಾಡಲು ಆಗಲ್ಲ.


ತತ್ವಬದ್ಧ ರಾಜಕೀಯ ತಮ್ಮದು ಎಂದುಕೊಳ್ಳುತ್ತಿದ್ದ ಎಡಪಂಥೀಯರು ಬಂಗಾಳದಲ್ಲಿ ಸೋತಿರುವ ಬಗ್ಗೆ ಏನಂತೀರಿ?
ನಿಜವಾಗಿಯೂ ಸತ್ಯ ಬಯಲಿಗೆ ಬಂತು. ಅವರಿಗೆ ರಾಜಕೀಯವೂ ಇರಲಿಲ್ಲ. ಎಡಪಂಥೀಯತೆನೂ ಇಲ್ಲಸಮಾಜವಾದದ ಕಲ್ಪನೇನೂ ಇಲ್ಲ್ಲ. ಇದ್ದ ಕಾಲ ಒಂದಿತ್ತು. ಕಳೆದ ಮೂವತ್ತೈದು ವರ್ಷಗಳಲ್ಲಿ ನಾನಾ ರೀತಿಯ ಕುತಂತ್ರಗಳನ್ನುಷಡ್ಯಂತ್ರಗಳನ್ನು ಮಾಡಿಕೊಂಡು ಬಂದಿದ್ದೇ ಸಿಪಿಎಂ. ನೈಜ ರಾಜಕೀಯ ಅವರದ್ದಾಗಿದ್ದರೆ ಕೇರಳದಲ್ಲಿ ಅಚ್ಯುತಾನಂದನ್‌ನ್ನು ಇಳಿಸಲು ಹೊರಟಿದ್ದೇಕೆ?. ಸೋಕಾಲ್ಡ್ ಎಡಪಂಥೀಯ ಪಕ್ಷದೊಳಗೇ ಒಂದು ರೀತಿಯ ಸ್ಟಾಲಿನ್‌ವಾದವಿದೆ. ಪ್ರಕಾಶ್ ಕಾರಟ್ ಪ್ರತಿನಿಧಿಸುವುದು ಪ್ರಜಾತಾಂತ್ರಿಕ ರಾಜಕೀಯವನ್ನಲ್ಲ. ಬಲಪಕ್ಷಗಳು ಹೇಗಿವೆಯೋ ಹಾಗೇ ಇವೆ ಎಡಪಕ್ಷಗಳು.


ಜಾಗತೀಕರಣವು ಸಾಹಿತ್ಯದ ಸಂವೇದನೆಗಳನ್ನು ಯಾವ ರೀತಿಯಲ್ಲಿ ಪ್ರಭಾವಿಸಿದೆ?
ಕನ್ನಡವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಹೊಸ ಪೀಳಿಗೆಯ ಬರಹಗಾರರಲ್ಲಿ ಆಧುನಿಕತೆಪರಂಪರಸಂಪ್ರದಯಗಳ ಬಗೆಗೆ ದರ ಬಗ್ಗೆ ಗಂಬೀರವಾಗಿ ಯೋಚನೆ ಮಾಡುವ ಬೆಳವಣಿಗೆ ಇದೆ. ಜಗತ್ತಿನ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುತ್ತಲೇ ಕನ್ನಡದಲ್ಲಿ ತಮ್ಮ ಸಂವೇದನೆಯನ್ನು ರೂಪಿಸಿ ಅಭಿವ್ಯಕ್ತಿಗೊಳಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಜಯಂತ್ ಕಯ್ಕಿಣಿ ಇರಬಹುದುವಿವೇಕ್ ಶಾನಭಾಗ್ಮೊಗಳ್ಳಿ ಗಣೇಶ್,ವಸುದೇಂದ್ರ ಇರಬಹುದುಲೇಖಕಿಯರಿರಬಹುದು ಎಲ್ಲರಲ್ಲೂ ಆ ಪ್ರಯತ್ನ ಇದೆ. ಮೊಗಳ್ಳಿ ಗಣೇಶ್ ಅವರನ್ನೇ ನೋಡಿ. ಅವರು ಮೊದಲು ಜಾಗತೀಕರಣದ ಪರವಾಗಿದ್ದವರು. ಆದರೆ ಇಂದು ಅದರಲ್ಲೇನೋ ಕೆಟ್ಟದಿದೆ ಎಂದು ಅದರ ವಿರುದ್ಧ ತಿರುಗುತ್ತಿದ್ದಾರೆ.

ನವ್ಯಬಂಡಾಯಗಳ ನಂತರದಲ್ಲಿ ಇಂದಿನ ಸಾಹಿತ್ಯ ಚಳವಳಿಯ ದಿಕ್ಕುದೆಸೆ ಏನಾಗಿದೆ?
ಒಂದು ಅನುಕೂಲಕ್ಕಾಗಿ ಮಾತ್ರ ಆ ಬಗೆ ಮಾಡಿಕೊಂಡ ಚೌಕಟ್ಟುಗಳಷ್ಟೇ. ಹೊರತು ಒಂದು ಮಟ್ಟದ ನಂತರ ಅವೆಲ್ಲಾ ಕೃತಕವಾದವು. ನವ್ಯ ಎನ್ನುವವರಲ್ಲೇ ಹಲವಾರು ಭಿನ್ನತೆಗಳಿರಲಿಲ್ಲವೇಎಂದು ಯಾವುದರಲ್ಲೂ ಏಕರೂಪತೆ ಇರಲಿಲ್ಲ. ಇಂದಿನ ಕಾಲ ಅನೇಕ ಸ್ಥಿತ್ಯಂತರಗಳನ್ನುತವಕ ತಲ್ಲಣಗಳನ್ನು ಅಭಿವ್ಯಕ್ತಿಸುವಪ್ರತಿನಿಧಿಸುವವಿರೋಧಿಸುವ ಕಾಲ ಇದು ಎನ್ನಬಹದು. ಸಂಸ್ಕಾರದ ಅನಂತಮೂರ್ತಿಯವರಿಗೂ ದಿವ್ಯದ ಅನಂತಮೂರ್ತಿಯವರಿಗೂ ಬಹಳ ಪಲ್ಲಟವಾಗಿದೆ ಎನ್ನುವುದನ್ನು ನೋಡಬೇಕು. ಇಂದಿನ ಕನ್ನಡದ ಮನಸ್ಸು ವಿರೋಧಾಭಾಸವಿಪರ‍್ಯಾಸ ದ್ವಂದ್ವವಿರೋಧಿ ನೆಲೆಗಳನ್ನು ಪ್ರತಿನಿಧಿಸುತ್ತಿದೆ. ಇದು ಕನ್ನಡದ ನಿಜವಾದ ಗುಣ ಕೂಡಾ. ಒಂದೇ ಸಿದ್ಧಾಂತ ಸರಿ ಎಂದು ಹೇಳದಿರುವಂತದ್ದು ಇದು.

ಕನ್ನಡ ಸಾಹಿತ್ಯ ರಚನೆಯಲ್ಲಿ ಮಹಿಳೆಯರ ತೊಡಗುವಿಕೆ ಹೆಚ್ಚುತ್ತಿರುವಿಕೆ ಅದು ಸಾಹಿತ್ಯದಲ್ಲಿ ಬೀರುತ್ತಿರುವ ಗುಣಾತ್ಮಕ ಪರಿಣಾಮ ಏನು?
ಇದನ್ನು ನಾವು ಎಂ.ಕೆ. ಇಂದಿರಾತ್ರಿವೇಣಿ ಅವರಿಂದಲೂ ನೋಡುವುದಾದರೆ ಇಂದು ಬರೆಯುತ್ತಿರುವವರು ಹೊಸ ನುಡಿಗಟ್ಟು ಕಂಡಿಕೊಂಡವರು ಎಂದು ನಾನು ಹೇಳುವುದಿಲ್ಲ. ಇಲ್ಲಿ ವಿಮರ್ಷೆಯಲ್ಲೇ ಒಂದು ಲೋಪವಾಗಿರುವುದೇನೆಂದರೆ ಸ್ತ್ರೀ ಕೃತಿಗಳನ್ನು ಸ್ತ್ರೀವಾದಿ ವಿಮರ್ಷೆಸ್ತ್ರೀವಾದಿ ಮೀಮಾಂಸೆ ಬರುವ ತನಕವೂ ಗಂಭೀರವಾಗಿ ಓದುವ ಪರಂಪರೆಯೇ ಇಲ್ಲಲ್ಲೊತ್ತಡ ಸುರುವಾದ ಮೇಲೆಯೇ ಅದು ಶುರುವಾಗಿದ್ದು. ದೊಡ್ಡ ದೊಡ್ಡ ವಿಮರ್ಶಕರೂ ಕೂಡ ಸ್ತ್ರೀಯರ ಬರಹವನ್ನು ಗೌಣಗೊಳಿಸಿದ್ದಾರೆ. ಹೀಗಾಗಿ ನಮ್ಮ ಮಹಿಳೆಯರ ಕೃತಿಗಳ ಅಧ್ಯಯನ ಇಂದಿನಿಂದ ಆರಂಭವಾಗಬಾರದು. ಇದೇ ಕಾಲೇಜಿನಲ್ಲೇ ಆವಿಷ್ಕಾರಗೊಂಡ ೨೦ ನೇ ಶತಮಾನದ ಪ್ರಪ್ರಥಮ ಬರಹಗಾರ್ತಿ ನಂಜನಗೂಡು ತಿರುಮಲಾಂಬ ಕಾಲದಿಂದಲೂ ಬಂದ ಪರಂಪರೆಯನ್ನು ಗುರುತಿಸಬೇಕು. ಹೊಸ ಅಧ್ಯಯನ ಶುರುವಾಗಬೇಕು. ಗಟ್ಟಿಯಾಗಿ ಆಗಬೇಕು.


ದಲಿತ ಚಳವಳಿಯ ಛಿದ್ರಗೊಂಡ ನಂತರದಲ್ಲಿ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ ಯಾವ ಗತಿ ಪಡೆದುಕೊಂಡಿದೆ?
ಇಂತು ಚಳವಳಿಗಳ ಸ್ವರೂಪವೇ ಅನೇಕ ಒಳಪದರುಗಳನ್ನು ಹುಟ್ಟಿಸಿಕೊಂಡಿದೆ. ಅದೇ ರೀತಿ ದಲಿತ ಚಳವಳಿಯ ಒಳಗೆನೇ ಕವಲುಗಳು ಒಳದಾರಿಯನ್ನು ಕಂಡುಕೊಳ್ತಾ ಇದೆ. ಅದರಲ್ಲಿ ಸಂಕುಚಿತ ಸಣ್ಣ ಪುಟ್ಟ ಒಳಜಗಳಗಳಿರಬಹುದಾದರೂ ಅದನ್ನು ಮುಖ್ಯವಾಗಿ ನೋಡಬೇಕೆನ್ನಿಸುವುದಿಲ್ಲ. ಆದರೆ ಅಲ್ಲಿ ಪ್ರಾಮಾಣಿಕವಾಗಿಯೇ ಜಾತಿಗೆ ಸಂಬಂಧ ಪಟ್ಟಂತೆಜಾಗತೀಕರಣಒಳಮೀಸಲಾತಿದಲಿತ ಆದಿಮ ಪ್ರಜ್ಞೆಇತ್ಯಾದಿಗಳಿಗೆ ಸಂಬಂಧಿಸಿದಂತೆ ತಾತ್ವಿಕ ಜಗಳಗಳಿವೆ. ದೇವನೂರುಸಿದ್ದಲಿಂಗಯ್ಯಕೋಟಕಾನ ಹಳ್ಳಿ ರಾಮಯ್ಯಕೆ.ಬಿ.ಸಿದ್ದಯ್ಯ ಮುಂತಾರವರು ಇಂತಹ ತಾತ್ವಿಕ ಜಗಳಗಳ ನಾಯಕರು. ದಲಿತ ಚಳವಳಿಯನ್ನು  ಛಿದ್ರವಾಯ್ತುಮುಗಿದು ಹೋಯ್ತು ಎಂದೆಲ್ಲಾ ಸುಲಭವಾಗಿ ಹೇಳಿಬಿಡುವುದು ಅದರ ಬಗ್ಗೆ ಗೌರವ ಇಲ್ಲದವರು ಹೇಳುವ ಮಾತು. ಎಲ್ಲಾ ಕಡೆ ಆಗುವುದು ಅಲ್ಲಿಯೂ ಆಗ್ತಿದೆ. ಆದರೆ ಯಾಕೆ ಹೀಗೆ ಅನೇಕ ಪದರುಗಳಾಯ್ತು ಎಂದು ಅಧ್ಯಯನ ಮಾಡಬೇಕು. ಹೊರಗೆ ನಿಂತವರು ನಾವು ಅದಕ್ಕಿರುವ ತಾತ್ವಿಕ ಆಯಾಮವನ್ನೇ ಮುನ್ನೆಲೆಗೆ ತರಬೇಕು. ಒಳಜಗಳೇನೇ ಇರಲಿ ಅಲ್ಲಿರುವ ತಾತ್ವಿಕಸೈದ್ಧಾಂತಿಕ ನೆಲೆಯನ್ನೇ ಕಟ್ಟಿಕೊಡುವುದು ನಮ್ಮ ನೈತಿಕ ಜವಾಬ್ದಾರಿ. ದಲಿತ ಸಾಹಿತ್ಯದ ಬಗ್ಗೆ ಮಾತಾಡುವುದಾದರೆ ಅದರೊಳಗೆನೇ ಸಾಕಷ್ಟು ಒಳವಿಮರ್ಷೆ ಇದೆ. ದೇವನೂರರ ಕುಸುಮಬಾಲೆ ದಲಿತ ಚಳುವಳಿಗೆ ಪೂರಕವಾಗಿರದ ಕೃತಿ ಎಂಬ ವ್ಯಾಖ್ಯಾನವೂ ಹುಟ್ತಾ ಇದೆ.

ಜಾಗತೀಕರಣವನ್ನು ಕೇವಲ ದೇಸೀ ನೆಲೆಯಲ್ಲಿ ಬರೀ ಸಾಂಸಕೃತಿಕ ಪರಿಕರಗಳಿಂದ ಎದುರಿಸಬಹುದೆನ್ನುವ ಒಂದು ವಾದ ಇದೆಯಲ್ಲಾಇದು ಕಾರ್ಯ ಸಾದುವೇ?
ಇಲ್ಲ. ಇಂದು ಯಾವ ಪ್ರಶ್ನೆಯೂ ಅದು ಹುಟ್ಟುವ ಸೀಮಿತ ಮಟ್ಟಕ್ಕೆ ಇರುವುದಿಲ್ಲ. ಶುರುವಾಗುವಾಗ ಒಂದು ನೆಲೆಯಲ್ಲಿ ಶುರುವಾಗುವ ಒಂದು ಆಂದೋಲನಸಂಘರ್ಷ ಅದೇ ನೆಲೆಯಲ್ಲೇ ಸ್ಥಲೀಯವಾಗೇ ಇರುವುದಿಲ್ಲ. ಅಂತಹ ಜಾಗತಿಕ ಪ್ರಪಂಚಕ್ಕೆ ಬೇಕೋ ಬೇಡವೋ ನಾವು ನುಗ್ಗಿಯಾಗಿದೆ. ಸ್ಥಲೀಯ ಪ್ರಶ್ನೆ ಸ್ಥಳೀಯವಾಗಿ ಇತ್ಯರ್ಥವಾಗಲ್ಲ.ದೀ ರೀತಿ ಪ್ರಜ್ಞೆ ಮೂಎಉವ ಅನಿವಾರ್ಯತೆ ಎದುರಾಗಿದೆ. ಇದು ಸಾಧ್ಯವಾಗುವಂತಹ ಅನೇಕ ಚಿಕ್ಕಪುಟ್ಟ ಆಂದೋಲನಗಳು ಆಗುತ್ತಿವೆ. ಪರಿಸರ ಚಳವಳಿ ಇರಬಹುದುಡ್ಯಾಂ ವಿರೋಧ ಚಳವಳಿ ಇರಬುದುಕಾರ್ಪೊರೇಟ್ ಕ್ಷೇತ್ರದ ವಿರುದ್ಧದ ಚಳುವಳಿಗಳು ಹರಿದು ಹಂಚಿಹೋದ ನೂರಾರು ಆಂದೋಲನಗಳಾಗುತ್ತಿವೆ. ಜಗತ್ತಿನ ಎಲ್ಲಾ ಕಡೆಯೂ ಇಂತವು ಆಗುತ್ತಿವೆ. ಇವೆಲ್ಲಾ ಹೇಗೆ ಕೂಡಿಕೊಳ್ಳುತ್ತವೆಎನು ಸಕ್ತಿ ಪಡೆದುಕೊಳ್ಳುತ್ತಿವೆ ಎಂದು ನೋಡಬೇಕಿದೆ. ಒಂದು ಸಿದ್ಧಾಂತದ ಮೂಲಕ ಉತ್ತರ ಹುಡುಕುತ್ತೇವೆ ಎಂದರೆ ಅಕ್ಕಿಂತ ದೊಡ್ಡ ಭ್ರಮೆ ಯಾವುದೂ ಇರಲ್ಲ. ಅದು ಇನ್ನು ಸಾಧ್ಯವಿಲ್ಲ.


ನವ ಶಿಕ್ಷಣ ನೀತಿ ಜಾರಿಯಾದ ನಂತರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಾಗಿರುವ ಬದಲಾವಣೆಗಳನ್ನು ನೀವು ಹೇಗೆ ಗ್ರಹಿಸುತ್ತೀರಿಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಂದ ಪ್ರೊ.ಯಶ್‌ಪಾಲ್ ವರದಿಗಿರುವ ಪ್ರಾಮುಖ್ಯತೆ ಏನು?

ಖಾಸಗೀಕರಣದ ನೀತಿಯನ್ನು ವರೋಧಿಸಲೇ ಬೇಕು. ಅದು ಬಂಡವಾಳಶಾಹಿಯ ನೀತಿ. ಶ್ರೇಷ್ಠತೆಯ ಹೆಸರಿನಲ್ಲಿ ಬಂಡವಾಳಶಾಹಿ ನೀತಿಯನ್ನು ತಂದಿಡುತ್ತಿದ್ದಿವಿ. ಸರ್ಕಾರ ತನ್ನ ಜವಾಬ್ದಾರಿ ಕಳಚಿಕೊಂಡಿದೆ. ಅಲ್ಲಿ ನಿಜವಾಗಿಯೂ ಸಾಮಾಜಿಕ ನ್ಯಾಯವೂ ಇರಲ್ಲಜ್ಞಾನದ ಶ್ರೇಷ್ಠತೆಯೂ ಇರಲ್ಲ. ಈ ನಿಟ್ಟಿನಲ್ಲಿ ಯಶಪಾಲ್ ವರದಿ ಪ್ರಗತಿಪರವಾದದ್ದುಆಶಾದಾಯಕವಾದದ್ದು. ಇದರಲ್ಲಿ ಪ್ರಭುತ್ವ ಎಷ್ಟು ಹಣ ನೀಡಬೇಕುಪ್ರಭುತ್ವದ ಪಾತ್ರ,ಖಾಸಗಿ ಸಂಸ್ಥೆಗಳ ಪಾತ್ರವೇನು ಎನ್ನುವುದರೀಮದ ಹಿಡಿದು ಪರೀಕ್ಷಾ ಯೋಜನೆಗಳವರೆಗೂ ಚರ್ಚೆಯಾದಮತಹ ವರದಿ ಇದು. ಪರೀಕ್ಷೆಗಳನ್ನು ತೆಗೆಯಬೆಕು ಎನ್ನುತ್ತದೆ ಅದು. ನಾವು ಶಿಕ್ಷಣಕೃಷಿಆರೋಗ್ಯಗಳಲ್ಲಿ ಖಾಸಗೀಕರಣಗಳನ್ನು ವಿರೋಧಿಸಲೇಬೇಕು. ಐಐಟಿಐಐಎಂಗಳ ಸ್ಥಾನಮಾನಅಂತರರಾಷ್ಟ್ರೀಯ ಸ್ಟಾಂಡರ್ಡ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನಾವು ನಿಜಕ್ಕೂ ಯಾವ ಸ್ಟಾಂಡರ್ಡ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲಿ ನ್ಯಾಯದ ಪರಿಕಲ್ಪನೆ ಏನು?, ಶ್ರೇಷ್ಠತೆಯ ಅಂದರೆ ಏನೆಂದುಕೊಳ್ತಿದೀವಿಇಲ್ಲಿ ಮಾರುಕಟ್ಟೆಯ ರೇಸ್‌ನಲ್ಲಿ ಯಾವುದು ಓಡುತ್ತದೆಯೋ ಅದು ಮಾತ್ರವೇ ಮಾರಾಟವಾಗುವಂತ ಕೋರ್ಸು. ಬಯೋಟೆಕ್ನಾಲಜಿಮೂಲ ವಿಜ್ಞಾನದ ಕೋರ್ಸುಗಳುಮಾನವಿಕ ಶಾಸ್ತ್ರಗಳು ಯಾಕೆ ಮುಚ್ಚುತಿವೆಕೇವಲ ಬಿಬಿಎಂಎಂಬಿಎಗಳು ಮಾತ್ರ ಓಡುತ್ತಿವೆ ಏಕೆ?. ಈ ಎಲ್ಲಾ ವಿಧ್ಯಾಕ್ಷೇತ್ರದ ಸಮಸ್ಯೆಗಳಿಗೆ ಹಿನ್ನೆಲೆಯಲ್ಲಿರುವ ಆರ್ಥಿಕಸಾಮಾಜಿಕ ವಿಷಯಗಳ ಅಧ್ಯಯನ ಆಗಬೇಕಿದೆ. ನಡೆಯುತ್ತಿದೆ ಕೂಡಾ. ಇದಾವುದೂ ಹೊಸ ವಿಷಯವಲ್ಲ.


ನಮ್ಮ ಸಮಾಜವನ್ನು ತೀವ್ರವಾದಿ ಬಾಧಿಸುತ್ತಿರುವ ಪ್ರಮುಖ ಸಮಸ್ಯೆ ಯಾವುದು ಎಂದು ನಿಮ್ಮ ಅನಿಸಿಕೆ? ಮತ್ತು ಅದರಿಂದ ಮುಕ್ತಿ ಹೇಗೆ?
ಆರೋಗ್ಯವಿದಾಭ್ಯಾಸಅನ್ನಾಹಾರ ಸಂಬಂಧಿಸಿದ್ದು. ಮತ್ತು ಅಷ್ಟೇ ಮುಖ್ಯವಾದದ್ದಯ ಮಾನವ ಹಕ್ಕುಗಳ ಉಲ್ಲಂಘನೆ. ಯಾವುದೇ ಪ್ರತಿರೋಧದ ದಮನವಾಗುತ್ತಿದರುವುದು ಇಂದಿನ ಪ್ರವೃತ್ತಿ ಇದೆ. ಅದು ಪರಿಸರ ಹೋರಾಟ ವಿರಲಿಬಿನಯಕ್ ಸೇನ್ ವಿಷಯವಿರಲಿಈಶಾನ್ಯಭಾರತವಿರಲಿಕಾಶ್ಮೀರವಿರಲಿ ನಡೆಯುತ್ತಿರುವುದಿ ಇದೇ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬಂದಿರುವ ಕರಾಳ ಕಾನೂನುಗಳ ಮೂಲಕ ಸಂವಿಧಾನ ಹಕ್ಕುಗಳನ್ನೇ ನಮ್ಮ ನ್ಯಾಯಾಂಗ ಎತ್ತಿ ಹಿಡಿಯದಿರುವಂತಹ ವ್ಯವಸ್ಥೇ ಕಟ್ಟುತ್ತಿರುವುದು ಅತ್ಯಂತ ಅಪಾಯ. ನಮ್ಮ ಸಮಾಜದ ಪ್ರಗತಿಗೆ ತೊಡಕಾಗಿರುವ ದೊಡ್ಡ ಸಮಸ್ಯೆ ಯಾವುದೆಂದರೆ ಎಲ್ಲಾ ವರ್ಗಗಳಲ್ಲಿ ಮಧ್ಯಮ ವರ್ಗವಾಗುವ ಕನಸು. ಅದನ್ನು ಅಳಿಸಿ ಹಾಕಿ ನ್ಯಾಯ ಸಮಾನತೆಯ ಪ್ರಶ್ನೆಯನ್ನು ಎದುರು ಹಾಕಿಕೊಳ್ಳದಿದ್ದರೆ ಎಲ್ಲರೂ ತಂತಮ್ಮ ಜಾತಿಗಳಕೋಮುಗಳಸಮುದಾಯಗಳ ಮಧ್ಯಮವರ್ಗದ ಅವಕಾಶವಾದಿತನವನ್ನೇ ಸೃಷ್ಟಿಸಿ ಪೋಷಿಸುತ್ತಿರುತ್ತಾರೆ. ಜಗತ್ತಿನ ಯಾವುದೇ ಕ್ರಾಂತಿಗಳು ಮಧ್ಯಮವರ್ಗದಿಂದ ಹುಟ್ಟಿದ ಪ್ರಜ್ಞೆಯೇ. ಅನುಷ್ಠಾನಕ್ಕೆ ತಂದಿರುವುದು ಬೇರೆಯವರಿರಬಹುದುಇಂದು ಮಧ್ಯಮ ವರ್ಗದ ಕನಸು ಎನ್ನುವುದು ಕೆಟ್ಟ ಕಾರ್ಪೊರೇಟ್ ಕ್ಷೇತ್ರದ ಕೆಟ್ಟ ಆಳ್ವಿಕೆಯನ್ನು ಪೋಷಿಸುವಂತದು. ಒಂದಕ್ಕೊಂದುಪೂರಕವಾಗಿದೆ. ಇಂದು ಅಣ್ಣಾ ಹಜಾರೆರಾಮದೇವರ ಪ್ರತಿಭಟನೆಗೆ ಸರ್ಕಾರ ಹೆದರುತ್ತಿರುವುದು ಯಾಕೆ ನೋಡಿ. ಸಮಗ್ರವಾಗಿ ನೋಡುವುದಾದರೆ ಮಧ್ಯಮ ವರ್ಗ ಭಾಗವಹಿಸುವಂತಿದ್ದರೆ ಇನ್ನೂ ಪ್ರಭುತ್ವಗಳು ಹೆದರಿಕೊಳ್ಳುವಂತಹ ರಜಕೀಯ ಪ್ರಜ್ಞೆಯಂತೂ ಇದೆ. ಇದನ್ನು ಪುನಶ್ಚೇತನಗೊಳಿಸಬೇಕು. ಎಲ್ಲರೂ ಅಣ್ಣಾ ಹಜಾರೆಯನ್ನು ಮೆರೆಸುತ್ತಿರಬಹುದು. ನನಗೆ ಅವರು ಬಹಳ ದೊಡ್ಡ ಸಂಕೇತ ಅನ್ನಿಸುತ್ತಿಲ್ಲ. ಅಣ್ಣಾ ಹಜಾರೆ ಮೂಲಕ ನಾನು ನೋಡುತ್ತಿರುವುದೇನೆಂದರೆ ಅವರ ಮೂಲಕ ನಾಗರೀಕ ಸಮಾಜ ಎಚ್ಚೆತ್ತುಇಕೊಂಡು ಬಾಗವಹಿಸುತ್ತದೆ ಎಂದರೆ ಇನ್ನೂ ಕೂಡ ವ್ಯವಸ್ಥೇ ಹೆದರುತ್ತದೆ ಎನ್ನುವುದು. ಒಂದು ಅಣ್ಣಾ ಹಜಾರೆ ಏನೂ ಮಾಡಲು ಸಾಧ್ಯವಿಲ್ಲ. ಅದು ದೊಡ್ಡ ಪರ್ಯಾಯವನ್ನೇನೋ ನೀಡಿದೆ ಎಂದು ನೋಡುವುದು ಮತ್ತೊಂದು ಭ್ರಮೆ. ಆದರೆ ಅಂತಹ ಸೂಚನೆ ಇದೆ. ಅದರಲ್ಲಿ ಸಕಾರಾತ್ಮಕ ಎಳೆಯನ್ನು ಕಾಣದಿರುವುದು ಸಿನಿಕತನ. ಆಶಯಗಳ ನಾಡಿಯನ್ನು ಹಿಡಿದುಕೊಳ್ಳಬೇಕು. ಇದರ ಬಗ್ಗೆ ನಮಗೆ ಅನುಮಾನಗಳಿರಲಿ ಆದರೆ ಸಿನಿಕತನ ಇರಬಾರದು. 

ಬಿ.ಜೆ.ಪಿ. ಸರ್ಕಾರ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಹೆಗೆ ಮೌಲೀಕರಣ ಮಾಡುತ್ತೀರಿ?
ಅಧಿಕಾರಕ್ಕಾಗಿ ತನ್ನ ಘನತೆ ಮಾನವನ್ನೇ ಕಳೆದುಕೊಂಡಿರುವ ಸರ್ಕಾರ ಇದು. ಬೇರೆ ಎನೇಕ ವಿಷಯಗಳಿದ್ದರೂ ಶೋಭಾ ಕರಂದ್ಲಾಜೆಯ ಸಚಿವ ಸ್ಥಾನ ಕಳೆಯಲು ಪಕ್ಷದೊಳಗೆಯೇ ಬಂದ ಒತ್ತಡಗಳನ್ನು ಯಡಿಯೂರಪ್ಪ ನಿಭಾಯಿಸಿದ ರೀತಿ ಅವರ ಅಧಪತನವನ್ನಷ್ಟೇ ಸೂಚಿಸುತ್ತದೆ. ಈ ಕುರಿತು ನನಗಂತೂ ತೀರಾ ಬೇಸರವಿದೆ. ಮುಂದಿನ ಎರಡಯ ವರ್ಷಗಳಲ್ಲಿ ಕೆಲವಾದರೂ ಪ್ರಾಥಮಿಕ ಸತ್ಯಗಳನ್ನು ಹೇಳಲು ಸುರುಮಾಡಬೇಕು. ಕುರ್ಚಿ ಹೋದರೂ ಚಿಂತೆ ಇಲ್ಲ ಯಾವುದೇ ರೀತಿ ಹಣದ ಬಲೆಯೊಳಗೆ ಸಿಲುಕುವುದಿಲ್ಲ ಎಂದು ಅವರು ಪ್ರಮಾಣ ಮಾಡಬೇಕು. ಕುರ್ಚಿ ಉಳಿಸಲು ಮಠಗಳಿಗೆ ದುದ್ದುಕೊಟ್ಟು ಓಲೈಸುವುದನ್ನು ಬಿಡಬೇಕು. ನರಹಂತಕ ಮೋದಿಯನ್ನು ಮಾದರಿ ಎನ್ನುವ ಮಾದರಿ ಎನ್ನುವ ಬಿಡಬೇಕು. ರಜ್ಯದ ಜನತೆ ನಿಜಕ್ಕೂ ಸಹಿಸಿಕೊಂಡಿದಾರೆ. ಜನರ ಸಹಾನುಭೂತಿಯನ್ನು ಸದುಪಯೋಗಪಟಿಸಿಕೊಂಡು ಜನಕಲ್ಯಾಣದ ಕಾರ್ಯಕ್ರಮಗಳಿಗೆ ಮುಂದಿನ ದಿನಗಳನ್ನು ಅವರು ಬಳಸಿಕೊಳ್ಳಲಿ. ಬೇರೆಯವರಿಗೆ ಹೋಲಿಸಿಕೊಂಡು ತಮ್ಮ ಭ್ರಷ್ಟಾಚಾರ‍್ನೂ ಸಮರ್ಥಿಸಿಕೊಳ್ಳುವುದಕ್ಕಿಮತ ದುರಂತ ಇಲ್ಲ. ಇದು ಯಡಿಯೂರಪ್ಪನವರ ದುರಂತ ಹಾಗೂ ನಮ್ಮೆಲ್ಲರ ದುರಂತವೂ ಸಹ.

ಈ ಕ್ಷಣದ ಇರವು ಇನ್ನೊಂದು ಕ್ಷಣದ ನೆನಪು ಮಾತ್ರ ಆಗಿರಲು ಸಾಧ್ಯವಿದೆ:ಕೋಟಗಾನಹಳ್ಳಿ ರಾಮಯ್ಯ








೭೦ರ ದಶಕದಲ್ಲಿ ಕುಡಿಯೊಡೆದು ಹಬ್ಬಿದ ದಲಿತ ಚಳುವಳಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೋಟಗಾನಹಳ್ಳಿ ರಾಮಯ್ಯನವರು ತಮ್ಮದೇ ಶೈಲಿಯ ವಿಶಿಷ್ಟ ಚಿಂತನೆಪ್ರಯೋಗಗಳಿಗೆ ಹೆಸರಾದವರು. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರು ಇತ್ತಿಚೆಗ ನಡೆದ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಮಕಾಲೀನ ಸಂದರ್ಭದ ಹಲವಾರು ಬಿಕ್ಕಟ್ಟುಗಳ ಬಗೆಗೆ ಅವರು ನಡೆಸಿದ ಮಾತುಕತೆ.

ನಮ್ಮ ಕನ್ನಡ ಸಾಹಿತ್ಯ ಇಂದು ಯಾವ ದಿಸೆಯಲ್ಲಿ ಸಾಗುತ್ತಿದೆ ಎಂದು ಭಾವಿಸುತ್ತೀರಿ?

ಇಂದು ಸಾಹಿತಿಗಳೆನಿಸಿಕೊಂಡವರು ಅದನ್ನು ಒಂದು ಮಾಹಿತಿಯಾಗಿ ಮಾತ್ರ ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ನೋಡುತ್ತಿಲ್ಲ. ಇವರಿಗೆ ಸಾಹಿತ್ಯ ರಚನೆ ಒಂದು ಚಟದ ಮಟ್ಟಕ್ಕೆ ಉಳಿದಿದೆಯೇ ಹೊರತು ಬದುಕಿಗೆ ಅನ್ವಯವಾಗುವ ನಿಟ್ಟಿನಲ್ಲಿ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಮೌಲಿಕ ಸಾಹಿತ್ಯ ರಚನೆಯಾಗಿದ್ದು ನನಗಂತೂ ಗೊತ್ತಿಲ್ಲ. ಬರೀ ಮಾತುಚರ್ಚೆಹಾಗೂ ಜ್ಞಾನವನ್ನು  ಹೆಚ್ಚಿಸಿಕೊಂಡರೆ ಉಪಯೋಗವಿಲ್ಲ. ಅಂಕ ಸಿಗಬಹುದುಪಿಎಚ್‌ಡಿ ಗೌರವ ಸಿಗಬಹುದಷ್ಟೆ. ಯಾವುದೇ ಸಾಹಿತ್ಯದ ಪ್ರಸ್ತುತತೆಯನ್ನು ನಿರ್ಧರಿಸುವುದು ಅದು ಆಯಾ ಕಾಲದಲ್ಲಿ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆ ಎನ್ನುವುದು. ಎಪ್ಪತ್ತರ ದಶಕದಲ್ಲಿ ಒಂದು ಅಂತಹ ಅರ್ಥಪೂರ್ಣ ಸಾಹಿತ್ಯ ಹೊರಹೊಮ್ಮಿದ್ದನ್ನು ನಾವು ಕಾಣಬಹುದು. ಅದಕ್ಕೊಂದು ಉದ್ದೇಶವಿತ್ತು. ಆಗ ನಮ್ಮ ಸಮಾಜವೇ ಒಂದು ಸ್ಫೋಟಕ್ಕೆ ಕಾಯ್ತಿದೆ ಎನ್ನುವ ರೀತಿ ಕುದಿಯುತ್ತಾ ಇತ್ತು. ಆದರೆ ಆ ಒತ್ತಡದ ಸ್ಥಿತಿ ಈಗ ಏರ್ಪಡುತ್ತಿಲ್ಲ. ಎಲ್ಲವೂ ವಿಭಜನೆಗೊಂಡು ಹೋಗುತ್ತಿದೆ. ಒಟ್ಟಾರೆಯಾಗಿ ನೋಡುತ್ತಿದ್ದ ದೃಷ್ಟಿಗಿಂತ ವ್ಯಕ್ತಿಗತ ನೆಲೆಯಲ್ಲಿ ಅವರವರದೇ ಆದ ಅನನ್ಯತೆಗಳಲ್ಲಿ ರಾಜಕಾರಣದ ಹುಡುಕಾಟದಲ್ಲಿದ್ದಾರೆ. ಒಬ್ಬೊಬ್ಬರೂ ಒಂದೊದು ರೀತಿ ನೋಡುತ್ತಾ ಅಂತಿಮವಾಗಿ ಎಲ್ಲಿ ತಲುಪಬೇಕೋ ಅಲ್ಲಿ ತಲುಪುವ ದಿಕ್ಕಿನಲ್ಲಿ ಸಂಘಟಿತ ರೀತಿಯಲ್ಲಿ ಚಲಿಸುತ್ತಿಲ್ಲ. ಹೀಗಾದಾಗ ರಾಜಕಾರಣಸಂಸ್ಕೃತಿಚಳವಳಿಗಳಲ್ಲಿ ಒಂದು ಪ್ರತಿರೋಧದ ನೆಲೆಯೆ ಇಲ್ಲವಾಗಿ ಬಿಡುತ್ತದೆ. ಅಂತಹ ಒಂದು ಶೂನ್ಯತೆಯನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯ ಸಾಂಸ್ಕೃತಿಕ ಅಜೆಂಡಾಗಳೂ ಇದಕ್ಕೆ ಕಾರಣವಾಗಿವೆ. ಇದು ಮನುಷ್ಯನನ್ನು ವ್ಯಕ್ತಿಯಲ್ಲಿ ಕೊನೆಗೊಳಿಸುತ್ತಿದೆ. ವ್ಯಕ್ತಿ ಹಾಗೂ ಸಮಷ್ಟಿ ನಡುವಿನ ಬಿಕ್ಕಟ್ಟನ್ನು ಪರಿಹಾರ ಮಾಡಿಕೊಳ್ಳಲು ನಾವು ಅಸಮರ್ಥರಾಗುತ್ತಿದ್ದೇವೆ. ನಮ್ಮ ಉಳಿವಿನ ಪ್ರಶ್ನೆಯನ್ನು ಕೇವಲ ವೈಯುಕ್ತಿಕ ನೆಲೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು ದುರಂತ.

ಮಂಟೇಸ್ವಾಮಿಮಲೆಮಾದೇಶ್ವರಜುಂಜಪಪ್ ಕಾವ್ಯಗಳಂತಹ ನಾಡಿನ ಮೌಖಿಕ ಕಾವ್ಯಗಳ ಪ್ರಾಮುಖ್ಯತೆಯನ್ನು ಹೇಗೆ ಗುರುತಿಸುತ್ತೀರಿ?

ಜನಪದರ ಸೃಷ್ಟಿಗಳಾಗಿರುವ ಮಹಾಕಾವ್ಯಗಳ ಕಡೆ ಗಮನ ಹರಿಸಬೇಕು ಎಂದು ಗೊತ್ತಾಗುತ್ತಿರುವುದು ಇರುವುದು ತೀರಾ ಇತ್ತೀಚೆಗೆ. ನಮ್ಮ  ಸಾಂಸ್ಕೃತಿಕ ಅಧ್ಯಯನಗಳು ಹಾಗೂ ಸಮಾಜಶಾಸ್ತ್ರೀಯ ಅಧ್ಯಯನಗಳು ಅಥವಾ ಜನಪದ ಆದ್ಯಯನಗಳು ಕಾಲಕಲಕ್ಕೆ ಬಿಕ್ಕಟ್ಟನ್ನು  ಸೃಷ್ಟಿಸಿದಾಗ ಅವಕ್ಕೆ ಉತ್ತರಗಳನ್ನು ಹುಡುಕುವ ಪ್ರಕ್ರಿಯೆಯಲ್ಲಿ ಇದುವರೆಗೆ ಕೇವಲ ಶಾಸ್ತ್ರೀಯ ಆಕರಗಳನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತಿತ್ತು. ಈಗ ಈ ಕ್ರಮಕ್ಕೆ ಹೊರತಾಗಿ ಮೌಖಿಕವನ್ನು ಪರಿಗಣಿಸುವ ಅನಿವಾರ್ಯತೆ ಸೃಷ್ಟಿಯಾಯ್ತು. ಲಾಗಾಯ್ತಿನಿಂದಲೂ ನಮ್ಮ ಸಾಂಸ್ಕೃತಿಕ ಆಧ್ಯಯನದ ತಳಹದಿ ಯಾವಾಗಲೂ ಶಾಸ್ತ್ರೀಯವಾದದ್ದೇ. ನಂತರ ಈ ನೆಲಕ್ಕೆ ಸಂಬಂಧಿಸಿದ್ದನ್ನು ನೋಡಿದಾಗ ಮಲೆಮಾದೇಶ್ವರಜುಂಜಪ್ಪ ಕಾವ್ಯಅಥವಾ ಧರೆಗೆ ದೊಡ್ಡವರು ಕಾವ್ಯಅಥವಾ ಜನಪದ ಮಹಾಭಾರತಇತ್ಯಾದಿಗಳೆಲ್ಲಾ ಸಿಕ್ಕಿವೆ. ಆದರೆ ವಿಶ್ವವಿದ್ಯಾನಿಲಯಗಳಲ್ಲಿರುವ ವಿದ್ವಾಂಸರು ತಮ್ಮ ವೈಯುಕ್ತಿಕವಾದ ವರ್ಚಸ್ಸುಅಥವಾ ಡಾಕ್ಟರೇಟ್‌ಗಳಿಗಾಗಿ ಇವುಗಳನ್ನು ನೋಡುತ್ತಿದ್ದಾರೆಯೇ ವಿನಃ ಅದರಾಚೆಗೆ ಅವುಗಳ ಸಾಧ್ಯತೆಯನ್ನು ನೋಡುವ ಪ್ರಯತ್ನ ಅಷ್ಟಾಗಿ ಇಲ್ಲ. ನಮ್ಮ ಪರಂಪರೆಯನ್ನು ಕಟ್ಟುವುದು ಅಥವಾ ಅರ್ಥಮಾಡಿಕೊಳ್ಳುವುದು ಎಂದರೆ ಇವನ್ನು ಶ್ರದ್ಧೆಯ ಮೂಲಕ ನೋಡುವ ಅಗತ್ಯ ಬೀಳುತ್ತದೆ. ನಮ್ಮ ಸಾಂಸ್ಕೃತಿಕಪರಂಪರೆಯಲ್ಲಿ ಪ್ರತಿರೋಧದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಇವುಗಳೇ ನಮಗಿರುವ ಪ್ರಮುಖ ಆಕರಗಳು. ಅವುಗಳ ಪ್ರತಿ ವಿವರಗಳನ್ನೂ ಸಹ ಬೇರೆ ಬೇರೆ ರೀತಿಯ ಜ್ಞಾನ ಶಿಸ್ತುಗಳ ಮೂಲಕ ಕಂಡುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಪ್ರಯತ್ನಿಸುತ್ತಿಲ್ಲ.

ನಮ್ಮಲ್ಲಿ ಜನಪದ ಅಧ್ಯಯನ ಉತ್ತಮ ಮಟ್ಟದಲ್ಲಿ ಇದೆಯಲ್ಲಾ?
ಜನಪದ ಕುರಿತಂತೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೆಚ್ಚಿನ ಕೆಲಸ ಆಗಿಲ್ಲ ಎಂದು ಹೇಳುತ್ತಾರೆ. ಸಂಗ್ರಹಸಂರಕ್ಷಣೆ ಹಾಗೂ ಮುಖ್ಯವಾಹಿನಿಗೆ ಅದನ್ನು ಮರುಪರಿಚಯ ಬಹಳ ದೊಡ್ಡ ಮಟ್ಟದಲ್ಲಿ ಆಗಿದೆ ಎನ್ನುತ್ತಾರೆ. ನಾನೂ ಸಹ ಗಮನಿಸಿದ್ದೇನೆ. ಸಂಖ್ಯೆಯ ಹಾಗೂ ಪ್ರಮಾಣದ ದೃಷ್ಟಿಯಿಂದ ಈ ಮಾತು ನಿಜ. ಆದರೆ ದೃಷ್ಟಿಕೋನದ ವಿಷಯಕ್ಕೆ ಬಂದರೆ ನಾನು ಗಮನಿಸಿರುವ ಯಾವುದೇ ಅಧ್ಯಯನದಲ್ಲಿ ಬಹಳ ಜವಾಬ್ದಾರಿಯುತ ಹುಡುಕಾಟ ಬಹಳ ಕಡಿಮೆ. ಅದು ತೀರಾ ಬೆರಳೆಣಿಕೆಯಷ್ಟಿದೆ. ಈ ಕಾವ್ಯಗಳು ನಮ್ಮ ಹಿಂದಿನ ಜನಪದರು ತಮ್ಮ ಉಳಿವಿಗೋಸ್ಕರ ತಾವೇ ಕಟ್ಟಿಕೊಂಡಿರುವ ಆಕರಗಳು. ಉಳಿವಿಗಾಗಿನ ಪಠ್ಯಗಳು’ ಎಂದು ನಾನವುಗಳನ್ನು ಕರೆಯುತ್ತೇನೆ. ನಮ್ಮ ಅಕಡೆಮಿಕ್ಸ್‌ನ ಮಿತಿಯಿಂದಾಗಿ ಅವು ಇಂದು ಬರೀ ಪಠ್ಯಗಳಾಗಿ ಕಾಣುತ್ತಿವೆ. ರಾಷ್ಟ್ರ ಮಟ್ಟದಲ್ಲಿ ಸಬಾಲ್ಟರ್ನ್ ಅಧ್ಯಯನ ಎಂದು ಶುರುವಾಯ್ತು. ರಾಜ್ಯದಲ್ಲೂ ಬರಗೂರು ರಾಮಚಂದ್ರಪ್ಪಹಂಪಿ ವಿವಿಗಳಂತಹ ಕಡೆ ಉಪಸಂಸ್ಕೃತಿಗಳ ಅಧ್ಯಯನ ಮುಂತಾಗಿ ಸಾಕಷ್ಟು ಕೃಷಿ ನಡೆಸುತ್ತಿದ್ದಾರೆ. ಆದರೆ ಈ ಸಾಕಷ್ಟು ಕೃಷಿಯಲ್ಲಿರುವ ತೊಡಕು ಏನಂದರೆ ಅವೂ ಕೂಡಾ ಒಂದು ರೀತಿ ಅಕಾಡೆಮಿಕ್ ಕಸರತ್ತಾಗಿ ನೋಡಲಾಗುತ್ತಿದೆ. ಅದು ಬಿಟ್ಟು ನಮ್ಮೆಲ್ಲರ ಉಳಿವಿಗೆ ಹಾಗೂ ಭವಿಷ್ಯರಾಜಕಾರಣಕ್ಕೆ ಇವುಗಳನ್ನು ನೋಡಬೇಕಾದ ದೃಷ್ಟಿಕೋನದ ಕೊರತೆ ಇದೆ. ಪರಿಣಾಮವಾಗಿ ಅವು ಮ್ಯೂಸಿಯಂನಲ್ಲಿಡುವ ಸ್ಮಾರಕಗಳಾಗಿ ಮಾತ್ರ ಆಗಿಬಿಡುತ್ತಿವೆ. 

ಇತ್ತೀಚೆಗೆ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ತೀರಾ ಕಡಿಮೆ ಜನರು ಪಾಲ್ಗೊಂಡಿದ್ದರಲ್ಲಾ
-ಸಂಖ್ಯೆ ಮುಖ್ಯ ಅಲ್ಲ. ಅಂದು ದಲಿತ ಲೇಖಕ ಯುವಕರ ಸಂಘದ ಸಮಾವೇಶ ಭದ್ರಾವತಿಯಲ್ಲಿ ಮೊದಲ ಬಾರಿಗೆ ನಡೆದಾಗ ಅಬ್ಬಬ್ಬಾ ಎಂದರೆ ನೂರು ಜನ ಸೇರಿದ್ದರು ಅಷ್ಟೆ. ಆದರೆ ಅಷ್ಟು ಜನ ಸೇರಿಕೊಂಡು ಏನು ಮಾಡುತ್ತಾರೆಏನು ಮಾತಾಡುತ್ತಾರೆ ಎಂಬುದು ಮುಖ್ಯ. ನನಗಂತೂ ಇವತ್ತಿನ ಈ ದಲಿತ ಸಾಹಿತ್ಯಚಳವಳಿ ಬಗ್ಗೆ ಆಸಕ್ತಿಯೂ ಉಳಿದಿಲ್ಲ. ಅದರ ಬಗ್ಗೆ ಮಾತಾಡಲಿಕ್ಕೇ ಹೋಗಲ್ಲ. ಆ ಆಧ್ಯಾಯವನ್ನು ನನ್ನ ನೆನಪಿನಿಂದಲೇ ಅಳಿಸಿ ಹಾಕಿಬಿಡಬೇಕು ಎಂದುಕೊಂಡಿದೀನಿ. ನನ್ನ ಪ್ರಕಾರ ಇಲ್ಲಿ ಮಾಡ್ತಿರೋದೆಲ್ಲ ಶವಸಂಸ್ಕಾರಕ್ಕೆ ಸಮಾನವಾದದ್ದು. ದಲಿತ ಸಂಘಟನೆ ಎಂದೋ ಸತ್ತು ಹೋಗಿದೆ. ಅದಕ್ಕೆ ಶ್ರಾದ್ಧದ ಮೂಲಕ ಉಳಿಸೋಕೆ ನೋಡುತ್ತಿದ್ದಾರೆ. ಅದನ್ನು ಹೂತು ಹಾಕಿ ಅದರ ಸ್ಫೂರ್ತಿಯಲ್ಲಿ ಬೇರೆ ಬೇರೆಯದನ್ನು ನೋಡಬೇಕಾದ ತಾಕತ್ತಾಗಲೀದೃಷ್ಟಿಕೋನವಾಗಲೀ ಅಥವಾ ಅದು ಮುಖ್ಯ ಎನ್ನುವ ಪ್ರಜ್ಞೆ ಅವರಿಗಿಲ್ಲ.  ಹೀಗಾಗಿ ಪ್ರಜ್ಞಾ ಹೀನರ ಜೊತೆಗೆ ಒಡನಾಟ ಬೇಡ ಎಂದು ನಿಲ್ಲಿಸಿ ಬಿಟ್ಟಿದ್ದೇನೆ. ಅವರು ನನ್ನನ್ನೇ ಪ್ರಜ್ಞಾಹೀನ ಎಂದು ಪರಿಗಣಿಸಿದರೂ ಚಿಂತೆಯಿಲ್ಲ. ಬಹುಪಾಲು ದಲಿತ ಜಗತ್ತು ನನ್ನನ್ನು ದೂರ ಇಟ್ಟಿದೆ. ನೀವು ಮಾತಾಡಬಾರದು’ ಎಂದು ಆಜ್ಞೆ ಮಾಡಿದೆ. ಇಂದು ದಲಿತ ನಾಯಕತ್ವ ಏನಿದೆಯಲ್ಲಾ ಅದು ನಾಯಕತ್ವ ಅಲ್ಲ. ಅದು ಡಕಾಯಿರ ತಂಡ. ಉತ್ತರ ಭಾರತದಲ್ಲಿರುವ ಪಂಡಾಗಳಂತೆ ಇವರು ದುಡ್ಡು ವಸೂಲಿಗೆ ಇಳಿದಿರುವಂತವರು. ಈ ಬಗ್ಗೆ ನನ್ನನ್ನು ಹೆಚ್ಚು ಕೇಳದಿರುವುದು ಒಳ್ಳೆಯದು. ನನಗೆ ಬಹಳ ಜಿಗುಪ್ಸೆಯಾಗಿದೆ.  ಅಂದಿನ ದಲಿತ ಚಳುವಳಿಯ ಪರಂಪರೆಯ ಮುಂದುವರಿಕೆಯಾಗಿ ಇಂದಿನ ಚಳವಳಿಗಾರರು ನನಗೆ ಕಾಣುತ್ತಿಲ್ಲ.

ಇಂದು ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಲೇ ಇವೆಯಲ್ಲಾ?

-ಸಹಜ ಅದು. ನವ ಆರ್ಥಿಕತೆಯ ಕ್ರೌರ್ಯ ವ್ಯಕ್ತಗೊಳ್ಳುವುದು ಇಬ್ಬರ ಮೇಲೆ. ಒಂದು ಹೆಣ್ಣು ಮತ್ತೊಂದು ದಲಿತ. ಇಂದು ನವ ಆರ್ಥಿಕತೆ ಮತ್ತು ದಲಿತ ಚಳುವಳಿಯ ನಾಯಕತ್ವ ಕೈ ಕೈ ಹಿಡಿದುಕೊಂಡು ಹೋಗುತ್ತಿದೆ. ದಲಿತರ ಬಿಡುಗಡೆ ಅಥವಾ ದಲಿತರ ನೋವುಗಳಿಗೆ ಸ್ಪಂದಿಸುವ ಕಾರ್ಯ ಅವರ ಅಜೆಂಡಾದಲ್ಲಿ ಇಲ್ಲ. ನೀವು ಕೇಳುವ ಪ್ರಶ್ನೆಯನ್ನೂ ಒಳಗೊಂಡಂತೆ ನನಗೆ ತಕರಾರಿದೆ. ದೌರ್ಜನ್ಯ ಎಂದರೆ ಏನುಅದೇನು ದೈಹಿಕ ಹಿಂಸೆಯೋಮಾನಸಿಕ ಹಿಂದೆಯೋಇಂದು ಆನಂದ್ ತೇಲ್ತುಂಬ್ಡೆಕಾಂಚಾ ಐಲಯ್ಯರಣತವರನ್ನೂ ಒಳಗೊಂಡಂತೆ ಅವರು ದಲಿತ ವಿಷಯವನ್ನು ನೋಡುವುದರಲ್ಲಿ ಮಿತಿಗಳಿವೆ. ಎಡಪಂಥೀಯರಿಗೆ ಈ ನೆಲವನ್ನು ನೋಡಲಿಕ್ಕೇ ಬರುವುದಿಲ್ಲ. ಮಾರ್ಕ್ಸ್‌ವಾದಿ ದೃಷಿಕೋನದಲ್ಲಿರುವ ಬೌದ್ಧಿಕ ದಾರಿದ್ರ್ಯವನ್ನು ನೀಗಿಕೊಂಡಿದ್ದರೆ ಇಂದಿನ ಈ ಬಿಕ್ಕಟ್ಟು ಇರುತ್ತಿರಲಿಲ್ಲ. ತಳಹದಿಮೇಲ್‌ರಚನೆ ಎನ್ನುವುದನ್ನು ಇಂಡಿಯಾ ದೇಶಕ್ಕೆ ಅನ್ವಯಿಸಲಿಕ್ಕೆ ಆಗುವುದೇ ಇಲ್ಲ. ಅವರು ತಮ್ಮ ಪಾತ್ರವನ್ನು ಅರಿಯಾಗಿ ನಿರ್ವಹಿಸದ್ದರೆ ಇಷ್ಟೆಲ್ಲಾ ಯಾಕಿರುತ್ತಿತ್ತು?

ನಾಡಿನ ಸಮಕಾಲೀನ ಸಾಂಸ್ಕೃತಿಕ ಲೋಕಕ್ಕೆ ನೀವು ನಡೆಸುತ್ತಿರುವ ಆದಿಮದ ಕೊಡುಗೆ ಏನು?


ಆದಿಮವನ್ನು ತುಂಬಾ ಆದರ್ಶವಾಗಿ ನೋಡುವ ಅಗತ್ಯ ಇಲ್ಲ. ಅದು ತನ್ನ ಅತ್ಯಂತ ಕಡಿಮೆ ಮಿತಿಯಲ್ಲೇ ನಮ್ಮ ನೆಲಪಠ್ಯಗಳನ್ನು ಆದರಿಸಿದರೆ ಒಂದು ತಿಳಿವಳಿಕೆ ಹೇಗೆ ವಿಸ್ತರಿಸಬಹುದು ಮತ್ತು ಅದೇ ಒಂದು ನಡೆಗೆ ಕಾರಣವಾಗಬಹುದಾ ಎಂಬ ಪ್ರಯೋಗದಲ್ಲಿದೆ. ಆ ಪ್ರಯೋಗ ಪರಿಪೂರ್ಣವಾಗಿ ಕೈಗೆ ಸಿಗುತ್ತದೆಯೋ ಇಲ್ಲವೋ ಎಂದು ಗೊತ್ತಿಲ್ಲ. ಆದರೆ ಈಗಿರುವಂತಹ ಎಲ್ಲ ಸಾಂಸ್ಕೃತಿಕ ನೆಲೆಗಟ್ಟುಗಳಿಗಿಂತಲೂಇಲ್ಲಿ ಸ್ಥಾಪಿತವಾಗಿರುವ ಬೆಂಚ್ ಮಾರ್ಕ್‌ಗಳೇನಿವೆ- ಎನ್‌ಎಸ್‌ಡಿನೀನಾಸಂಇತ್ಯಾದಿಗಳ ಬೌದ್ಧಿಕ ದಾರಿದ್ರ್ಯ ಮತ್ತು ಜನನಿಷ್ಠೆಯಿಲ್ಲದಿರುವ ಹಿಪಾಕ್ರಸಿಗೆ ಬದಲಾಗಿ ಸ್ವಲ್ಪವಾದರೂ ಜೀವಂತ ನೆಲಪಠ್ಯಗಳೆಡೆ ಕಣ್ಣಾಡಿಸುವ ಪ್ರಯೋಗ ಇದು. ಮುಂದಿನ ದಿನಗಳಲ್ಲಿ ಅದನ್ನು ಬೇಕಾದಂತವರು ಬೇಕಾದ ರೀತಿಯಲ್ಲಿ ನೋಡಬಹುದು. ಅದು ಒಂದು ಮುಕ್ತವಾದಂತಹ ಜಾಗ. ಯಾರು ಬೇಕಾದರೂ ಇಲ್ಲಿ ಪ್ರಯೋಗ ನಡೆಸಬಹುದು.


ಪತ್ರಕರ್ತರಾಗಿ ಹಲವಾರು ವರ್ಷ ಕೆಲಸ ಮಾಡಿದ್ದೀರಿ. ಅಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ತುಲನೆ ಮಾಡಿದಾಗ ಏನೆನ್ನಿಸುತ್ತದೆ?
ಇಂದು ಮುದ್ರಣ ಮಾಧ್ಯಮವಿದ್ಯುನ್ಮಾನ ಮಾಧ್ಯಮ ಎರಡೂ ಆರ್ಥಿಕ ಹಿತಾಸಕ್ತಿಗಳ ನಿರ್ದೇಶನದಲ್ಲಿರುವುದರಿಂದ ಅದರ ಎಲ್ಲ ಮೌಲ್ಯಗಳ ನೆಲೆಗಟ್ಟೂ ನಾಶವಾಗಿ ಹೋಗಿದೆ. ಹೀಗಾಗಿ ಮಾರುಕಟ್ಟೆಗೆ ಪೂರಕವಾದ ಸಂವಹನವನ್ನು ಮಾತ್ರ ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಇಂದು ಮಾಧ್ಯಮದ ಒಟ್ಟಾರೆ ಹಿತಾಸಕ್ತಿ ಜನಪರವಾದದ್ದಾಗಿಲ್ಲ. ಅದೇನಿದ್ದರೂ ವ್ಯಾಪಾರಿಬಂಡವಾಳಿಗರ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿ ಜನರ ಮನಸ್ಸುಗಳನ್ನು ಸಂವಹನಕ್ಕೆ ಸಿದ್ಧಪಡಿಸುತ್ತಿವೆ. ಇಂತಹ ದಲ್ಲಾಳಿ ಕೆಲಸಕ್ಕೆ ಪತ್ರಿಕೋದ್ಯಮ ಎಂದು ಕರೆಯಬೇಕಾದ ಅಗತ್ಯ ಇಲ್ಲ. ಇವರು ಹೊಸ ಆರ್ಥಿಕತೆಯ ಮಧ್ಯವರ್ತಿಗಳಾಗಿದ್ದಾರೆ. ಮನುಷ್ಯನ ಮನಸ್ಸು ಮತ್ತು  ಪಂಚೇಂದ್ರಿಯಗಳನ್ನು ಅದಕ್ಕೆ ಪೂರಕವಾಗಿ ಮಾರ್ಪಡಿಸುತ್ತಿದ್ದಾರೆ. ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗಿ ಜನರ ಮನಸ್ಸನ್ನು ಸಿದ್ಧಗೊಳಿಸುವುದು ಇಂದಿನ ಮಾಧ್ಯಮಗಳ ಉದ್ದೇಶ ಗುರಿಯಾಗಿದೆ. ಇಂದು ಸ್ಪರ್ಧೆ ಯಾವ ಮಟ್ಟಿಗೆ ಎಂದರೆ ಮುಂಬರುವ ಕೆಲವೇ ವರ್ಷಗಳಲ್ಲಿ ಇವರ ಎಲ್ಲ ತಳಹದಿಗಳೂ ನಿರ್ನಾಮವಾಗುವುದು ಖಚಿತ.  ಜನರ ಹಿತಾಸಕ್ತಿಯಾಗಲಿಜನರ ಸಾವು ಬದುಕಿನ ಹೋರಾಟಗಳಾಗಲೀಜನರ ಗುರುತುಗಳು ಅಳಿಸಿ ಹೋಗುತ್ತಿರುವುದಾಗಲೀ ಇವುಗಳಾವುದೂ ಮಾಧ್ಯಮಗಳಿಗೆ ಸುದ್ದಿಗಳಾಗಿ ಕಾಣಿಸುತ್ತಿಲ್ಲ. ಮಾರುಕಟ್ಟೆ ವಿಸ್ತರಣೆ ಏನಾದರೂ ಪ್ರೇರಣೆ ಇದ್ದರೆ ಮಾತ್ರ ಅದನ್ನು ಸುದ್ದಿಯಾಗಿ ಪರಿಗಣಿಸುತ್ತದೆ. ನಾವು ಪತ್ತಿಕೋದ್ಯಮದಲ್ಲಿ ಕೆಲಸ ಮಾಡುವಾಗ ಅದು ಒಂದು ಆದರ್ಶವಾಗಿತ್ತು. ಲಂಕೇಶ್ ಪತ್ರಿಕೆಸುದ್ದಿ ಸಂಗಾತಿಮುಂಗಾರು ಇವೆಲ್ಲವೂ ನಮಗೆ ಒಂದು ಆದರ್ಶವಾಗಿದ್ದವು. ಜೊತೆಗೆ ನಮ್ಮ ಸ್ಫೂರ್ತಿ ಎಲ್ಲವೂ ಅಂದಿನ ಚಾರಿತ್ರಿಕ ಹೋರಾಟಗಳಲ್ಲಿತ್ತು. ಆ ಕಾರಣಕ್ಕಾಗಿ ನಮ್ಮ ಹಿಂದೆ ಒಂದು ದೊಡ್ಡ ಭಿತ್ತಿ ಇತ್ತು. ಹೀಗಾಗಿ ಪತ್ರಿಕೋದ್ಯಮವೆ ಒಂದು ಪ್ರವಾಹದ ವಿರುದ್ಧದ ಈಜಾಗಿ ನಮಗೆ ಒಂದು ಚೈತನ್ಯ ನೀಡುತ್ತಿತ್ತು. ಇಂದು ಜನಪರ ಪತ್ರಿಕೋದ್ಯಮ ಎನ್ನುವುದೇ ಇಲ್ಲ. ಸಂವಹನ ಎಂಬುದೇ ಇಲ್ಲ. ಈ ನೆಲಕ್ಕೆ ಅನ್ಯ ಎಂದು ಯಾವುದನ್ನೆಲ್ಲಾ ಕರೆಯಬಹುದೋ ಆ ಅನ್ಯ ಪ್ರೇರಣೆಗಳನ್ನು ಗರ್ಭದಲ್ಲಿರುವ ಶಿಶುವಿನ ಮನಸ್ಸಿನೊಳಗೂ ಹೋಗುವ ರೀತಿಯಲ್ಲಿ ಗುರಿಪಡಿಸಿಕೊಂಡಿದೆ. ಎಲ್ಲೋ ಕೆಲವು ಪತ್ರಕರ್ತರನ್ನು ಇದರಿಂದ ಹೊರಗಿಡಬಹುದಾದರೂ ಒಟ್ಟಾರೆ ಪತ್ರಿಕೋದ್ಯಮದ ಇಂಗಿತ ಹೀಗಿದೆ ಎಂದು ನನ್ನ ಅಭಿಪ್ರಾಯ.

ಚಳವಳಿಗಳು ಕ್ಷೀಣವಾಗಿರುವ ಇಂದಿನ ಸಾಮಾಜಿಕ ಸಂದರ್ಭ ತೀರಾ ನಿರಾಶದಾಯಕವಾಗಿದೆಯಲ್ಲಾ?
ನಮ್ಮ ಹಿಂದಿನ ಗುರುತುಗಳು ಅಳಿಸಿ ಹೋಗುತ್ತಿರುವ ವೇಗ ಅದೆಷ್ಟು ಭಯಾನಕವಾಗಿದೆ ಎಂದರೆ ಈ ಕ್ಷಣದ ಇರವು ಇನ್ನೊಂದು ಕ್ಷಣದ ನೆನಪು ಮಾತ್ರ ಆಗಿರಲು ಸಾಧ್ಯವಿದೆ. ನೆಲಗುರುತುಗಳು ಅಷ್ಟು ಕ್ಷಿಪ್ರಗತಿಯಲ್ಲಿ ಅಳಿಸಿ ಹೋಗುವಂತಹ ಕಾಲಘಟ್ಟದಲ್ಲಿ ಮುಂದಿನ ಭವಿಷ್ಯಕ್ಕೆ ಬೇಕಾದ ನೆಲನಿಷ್ಠ ರಾಜಕಾರಣವನ್ನು ಕಟ್ಟುವುದು ದುಸ್ತರವಾಗಿದೆ. ನಮ್ಮ ಕುರುಹುಗಳು ಮಹತ್ವದ್ದಾಗಿ ಕಾಣಿಸದಿದ್ದಾಗ ಅವು ಬರೀ ಸಂಪನ್ಮೂಲವಾಗಿ ಕಾಣಿಸತೊಡಗುತ್ತವೆ. ಹಾಗಾದಾಗ ಅವನ್ನು ದೋಚಬೇಕುಅದನ್ನು ವ್ಯಾಪಾರೀ ಹಿತಾಸಕ್ತಿಗೆ ಕೊಡಬೇಕುಅದರ ಮೂಲಕ ಲಾಭದ ಆರ್ಥಿಕತೆಯನ್ನು ಸೃಷ್ಟಿಸಬೇಕು ಎನ್ನುವುದನ್ನು ವಸಾಹತುಶಾಹಿ ಆಳ್ವಿಕೆ ನಮಗೆ ಹೇಳಿಕೊಟ್ಟಿದೆ. ನಮ್ಮೆಲ್ಲಾ ಜ್ಞಾನಶಿಸ್ತುಗಳು ಕೈಗಾರಿಕಾ ಕ್ರಾಂತಿಯಿಂದಾದವು. ದರೋಡೆಗಳ ಫಲವೇ ಕೈಗಾರಿಕಾ ಕ್ರಾಂತಿ. ಪ್ರಪಂಚದ ಸಂಪನ್ಮೂಲಗಳ ದರೋಡೆಗೆ ನಾವು ಆ ಹೆಸರಿಟ್ಟಿದ್ದೆವಷ್ಟೆ. ನಾವು ಅದನ್ನು ಪ್ರಶ್ನೆಯನ್ನೇ ಹಾಕದೇ ಅದನ್ನು ಸಾರಾಸಗಟಾಗಿ ಒಪ್ಪೊಕೊಂಡು ಅದರ ಆಧಾರದ ಮೇಲೆ ನಮ್ಮ ಪ್ರಜ್ಞೆಯನ್ನು ರೂಪಿಸಿಕೊಂಡಿದ್ದೇವೆ. ಇಂತಹ ರೂಪಿತ ಪ್ರಜ್ಞೆಯಲ್ಲಿ ನೆಲದ ಸತ್ಯ ಗೋಚರಿಸುವುದಿಲ್ಲ. ಹೀಗಾಗಿ ನಮ್ಮ ಆಲೋಚನೆಗಳ ಚೌಕಟ್ಟಿನಲ್ಲೇ ಲೋಪವಿದೆ. ನಮ್ಮ ಬೌದ್ಧಿಕ ಮಟ್ಟದ ಈ ಬಿಕ್ಕಟ್ಟಿನಿಂದ ಹೊರಬರಬೇಕೆಂದರೆ ನಾವು ಡಿಲರ್ನಿಂಗ್ಅಪವರ್ಗೀಕರಣಕ್ಕೆ ಒಳಗಾಗಬೇಕಾಗುತ್ತದೆ. ಅಥವಾ ಸಂಪೂರ್ಣ ಯೂಟರ್ನ್ ತೆಗೆದುಕೊಳ್ಳಬೇಕಾಗುತ್ತದೆ. ಜಗತ್ತಿನಲ್ಲಿ ಈ ಬಗೆಯ ಪ್ರಕ್ರಿಯೆಗೆ ಒಳಗಾದ ಮಹಾನುಭಾವರಿದ್ದಾರೆ. ಉದಾಹರಣೆಗೆ ಗೂಗಿ ವಾ ಥಿಯಾಂಗೋನಂತವರು ಇಂಗ್ಲಿಷ್ ಬಿಟ್ಟು ಸ್ವಾಹಿಲಿಯಲ್ಲಿ ಬರೆಯಲು ಆರಂಭಿಸಿದ್ದು. ನಾಲಗೆಯನ್ನೇ ಕತ್ತರಿಸಿಕೊಂಡವರಿದ್ದಾರೆ. ಭಾರತದಲ್ಲಿ ಇಂತಹುದು ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ಭಾರತೀಯ ಚಿಂತನೆಯಲ್ಲೇ ಇಬ್ಬಂತಿತನವಿದೆ. ಅದರ ಚಿಂತನೆ ಒಂದಿರುತ್ತದೆನಡೆ ಇನ್ನೊಂದು ಇರುತ್ತದೆ. ನಡೆಯಲ್ಲಿ ಒಪ್ಪಿಒತವಾದ್ದು ಚಿಂತನೆಯಲ್ಲಿರುವುದಿಲ್ಲ. ಚಿಂತನೆಯಲ್ಲಿ ಒಪ್ಪಿತವಾದದ್ದು ನಡೆಯಲ್ಲಿರುವುದಿಲ್ಲ. ಅದರಿಂದಾಗಿಯೇ ಇಷ್ಟೆಲ್ಲಾ ಎದ್ದು ಕಾಣುವ ಸಾಮಾಜಿಕ ಅಸಮಾನತೆಗಳುಭೇಧಗಳು ಕಣ್ಣಿಗೆ ಕಾಣುತ್ತಿದ್ದರೂ ಸಹ ಅವೆಲ್ಲಾ ಏನೂ ಅಲ್ಲ ಎನ್ನುವ ರೀತಿ ಇರುತ್ತೇವೆ. ಅಂತವು ನಡೆದಾಗ ಒಂದು ಘಟನೆಯ ಮಟ್ಟಿಗೆ ಮಾತ್ರ ನೋಡುತ್ತೇವೆ. ಕ್ರಿಕೆಟ್ ಪಂದ್ಯಕ್ಕೆ ಪ್ರತಿಕ್ರಿಯಿಸುತ್ತೇವಲ್ಲಾ ಹಾಗೆ. ಅಸಹಜವಾದದ್ದನ್ನೂಕೊಳಕಾದದ್ದನ್ನೂ ಸಹಜ ಎನ್ನುವಂತೆ ಒಪ್ಪಿಕೊಂಡುನಮ್ಮ ಪ್ರಜ್ಞೆಗೆ ಒಗ್ಗಿಸಿಕೊಂಡು ಬಿಡುತ್ತಿದ್ದೇವೆ.

ಆದರೆ ಈ ಮಾತನ್ನು ಎಲ್ಲಾ ಕಾಲ ಸಂದರ್ಭಕ್ಕೂ ಅನ್ವಯಿಸಲು ಸಾಧ್ಯವೇ?
ಎಲ್ಲಾ ಸಂದರ್ಭದಲೂ ಹಾಗೆಂದು ಹೇಳಲಾಗಲ್ಲ. ಚರಿತ್ರೆ ಎಂತೆಂತಹ ಸಂದರ್ಭಗಳನ್ನು ಒಳಗೆ ಸೃಷ್ಟಿ ಮಾಡುತ್ತದೆ ಹೇಳಲಾಗಲ್ಲ. ಸಧ್ಯದ ಸ್ಥಿತಿಯಿರುವುದಂತೂ ಹಾಗೆಯೇ. ಇದರೊಳಗೆನೇ ಒಂದು ಸ್ಫೋಟ ಸಂಭವಿಸಬಹುದು.

ನಮ್ಮ ರಾಜಕೀಯ ಆಣೆ ಪ್ರಮಾಣದವರೆಗೆ ಬಂದು ಇಂತಿದೆಯಲ್ಲಾ?
ನನಗೆ ಕರ್ನಾಟಕದ ರಾಜಕೀಯದಷ್ಟು ಇಂದಿನ ಅಧೋಗತಿ ಎಂದೂ ಕಂಡಿಲ್ಲ. ಆ ಮಟ್ಟಿಗಿನ ಅಧಃಪತನವಾಗಿದೆ. ಅದು ಯಾವ ಪಕ್ಷವೇ ಇರಲಿ. ಒಂದೇ ಒಂದು ಕಣದಷ್ಟೂ ನಾಚಿಕೆಮಾನಮರ್ಯಾದೆವಿವೇಕತಿಳಿವಳಿಕೆ,ಈ ನೆಲದ ನೀರು ಕುಡಿದಿದ್ದೇವೆಈ ನೆಲದ ಮಣ್ಣಿನಲ್ಲಿ ಬೆಳೆದಿರುವುದನ್ನು ತಿಂದಿದ್ದೇವೆಈ ಗಾಳಿಯಲ್ಲಿ ಉಸಿರಾಡುತ್ತಿದ್ದೇವೆಅದನ್ನೆಲ್ಲಾ ಶುದ್ದವಾಗಿಡುವುದು ನಮ್ಮ ಕತವ್ಯ ಎಂಬ ಸಾಮಾನ್ಯ ಜ್ಞಾನದ ಲವಲೇಶವೂ ಅವರ ಪ್ರಜ್ಞೆಯಲ್ಲಿ ಇಲ್ಲವೇ ಇಲ್ಲ. ಇಡೀ ಕರ್ನಾಟಕವನ್ನು ಎಷ್ಟು ಬೇಗ ಹರಾಜಿಗೆ ಹಾಕಿದರೆಎಷ್ಟು ಬೇಗ ಮಾರಿಬಿಟ್ಟರೆ ಒಟ್ಟಾರೆಯಾಗಿಅದರ ಮೂಲಕ ಸಿಗುವ ಲಾಭಗಳನ್ನು ತೆಗೆದುಕೊಂಡು ಹೋಗಿ ವೈಯುಕ್ತಿಕ ಬಂಡವಾಳ ಮಾಡಿಕೊಳ್ಳುವುದು ಹೇಗೆ ಎಂದು ಲೆಕ್ಕ ಹಾಕುತ್ತಿರುವ ರಾಜಕಾರಣ ಇದು. ಅತ್ಯಂತ ವಿಕೃತವಾದ ನಾಟಕಗಳು ವೇದಿಕೆ ಮೇಲೆ ನಡೆಯುತ್ತಿವೆ. ಇದು ನಿಜಕ್ಕೂ ಈ ನೆಲದ ಘನತೆಗೆ ಗೌರವ ತರುವಂತಾದ್ದಲ್ಲವೇ ಅಲ್ಲ. ಇನ್ನು ಈ ಮಠಾದೀಶರಿಗಂತೂ ಮಾನಮರ್ಯಾದೆಯೇ ಇಲ್ಲ. ಈ ಮಾತನ್ನು ಹೇಳಲೇಬೇಕಾಗುತ್ತದೆ. ಅವರು ಸಣ್ಣವರಿರಲೀದೊಟ್ಟವರಿರಲೀ ಕಣ್ಣುಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ. ಒಂದು ಪ್ರಜಾಪ್ರಭುತ್ವಕ್ಕೆ ಸಲಹೆ ಕೊಡಲು ಇವರ‍್ಯಾರ್ರೀಇವರೇನು ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಾಇದೇನು ರಾಜಪ್ರಭುತ್ವವಾಇವರೇರು ರಾಜಪುರೋಹಿತರಾನಾವೇನು ಧರ್ಮ ಪ್ರಭುತ್ವ ಒಪ್ಪಿಕೊಂಡಿದ್ದೇವಾಇವರು ಮಠಗಳನ್ನು ಕಟ್ಟಿಕೊಂಡಿರಬೇಕಷ್ಟೆ. ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲಿಕ್ಕೆ ಇವರಿಗೇನು ಹಕ್ಕಿದೆಇದೆಲ್ಲಾ ಪ್ರಜಾಪ್ರಭುತ್ವಕ್ಕೇ ಮಾಡುವ ಅಪಮಾನ. ಒಂದು ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಲು ಇವರ‍್ಯಾರುಓಟು ಹಾಕಿದವನು ಸರ್ಟಿಫಿಕೇಟ್ ಕೊಡಬೇಕು. ಅದನ್ನು ಬಿಟ್ಟು ನೀವೇ ಒಂದು ಸರ್ಕಾರವನ್ನು ಪುರಸ್ಕರಿಸಲು ನೀವು ಯಾರುಎಂಬ ಪ್ರಶ್ನೆಯನ್ನು ಕೇಳಬೇಕು. ಅದನ್ನು ಕೇಳಿದರೆ ಜಾತಿಗಳು ಎದ್ದು ನಿಲ್ಲುತ್ತವೆ. ನಮ್ಮ ಜಾತಿ ಮಠಕ್ಕೆ ಯಾಕೆ ಕೇಳಿದ್ರಿ ಅಂತ. ಒಂದು ಜಾತಿಗೆ ಒಂದು ಮಠ ಸೀಮಿತವಾಗಿಯೆಂದಾದರೆ ಇನ್ನೇನು?

ರಾಜ್ಯದಲ್ಲಿ ಇಂಗ್ಲಿಷ್ ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರ ತೀರ್ಮಾನ ಕೈಗೊಂಡಿದೆ. ಇದು ಶಿಕ್ಷಣ ಮತ್ತು ಭಾಷೆಯ ಮೇಲೆ ಯಾವ ಪರಿಣಾಮ ಬೀರಬಲ್ಲದು?
ಇಂದು ಶಿಕ್ಷಣ ಎನ್ನುವುದು ದೊಡ್ಡ ಅನೈತಿಕ ದಂದೆಯಾಗಿದೆ. ಅದು ಪೂರ್ತಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾಗಿಖಾಸಗಿ ವಲಯಗಳನ್ನು ಭದ್ರ ಮಾಡಲು ಬಳಕೆಯಾಗಿದೆ. ಇಂದು ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವುದರ ಪರಿಣಾಮವೆನೆಂದರೆ ಸರ್ಕಾರಿ ಶಾಲೆಯಲ್ಲಿ ನಾಲ್ಕಕ್ಷರ ಕಲಿಯುವ ಅವಕಾಶ ಕೂಡಾ ಕೈತಪ್ಪಿ ಹೋಗುತ್ತದೆ. ಇಂದು ಪ್ರಾಥಮಿಕ ಶಿಕ್ಷಣ ನೀಡುವ ಕರ್ತವ್ಯದಿಂದ ನುಣುಚಿಕೊಳ್ಳಲು ಏನು ಬೇಕೋ ಅದನ್ನು ಸರ್ಕಾರ ಮಾಡುತ್ತಿದೆ. ಇಂದು ಶಾಲೆಗಳನ್ನು ಮುಚ್ಚುತ್ತಿರುವ ವೇಗ ಹಾಗೂ ಅಲ್ಲಿನ ಗುಣಮಟ್ಟ ನೋಡಿದರೆ ಅರ್ಥವಾಗುತ್ತದೆ. ಅಲ್ಲೆಲ್ಲಾ ಬಡವರ ಮಕ್ಕಳೇ ಇರುವುದು. ಅದರಲ್ಲಿ ದಲಿತರ ಸಂಖ್ಯೆ ಜಾಸ್ತಿ ಇರುತ್ತದೆ. ಕನ್ನಡದಲ್ಲೂ ಕಲಿಯುವ ಅವಕಾಶದಿಂದ ವಂಚಿಸಿದಾಗ ಅನಿವಾರ್ಯವಾಗಿ ದುಡ್ಡುಕೊಟ್ಟೇ ಶಿಕ್ಷಣ ಪಡೆಯಬೇಕು. ಯಾರಿಂದ ಸಾಧ್ಯ ಇದುಪ್ರಾಥಮಿಕ ಶಾಲೆಯ ನೀತಿಗಳನ್ನು ಮಾಡಲು ವಿಪ್ರೋಗೆ ಬಿಟ್ಟಿದ್ದಾರೆ. ಸರ್ಕಾರ ತಲುಪಿರುವ ಮಟ್ಟ ಇದು.

ನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ :ಡಾ. ಎಚ್. ಗಣಪತಿಯಪ್ಪ


ನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ ಡಾ. ಎಚ್. ಗಣಪತಿಯಪ್ಪ






ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಆಂದೋಲನದಲ್ಲಿ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿನಂತರ ೫೦ರ ದಶಕದಲ್ಲಿ ಭೂಮಾಲೀಕರಿಂದ ರೈತಾಪಿಯ ಸ್ವಾತಂತ್ರ್ಯಕ್ಕಾಗಿ ಟೊಂಕ ಕಟ್ಟಿ ನಿಂತು ಚಾರಿತ್ರಿಕ ಕಾಗೋಡು ರೈತ ಚಳವಳಿಯ ಮುಂದಾಳತ್ವ ವಹಿಸಿದ್ದವರು ಹಿರಿಯ ಗಾಂಧೀವಾದಿ ಡಾ.ಎಚ್. ಗಣಪತಿಯಪ್ಪನವರು. ಅವರು ತಮ್ಮ ಈ ೮೮ನೆಯ ವಯಸ್ಸಿನಲ್ಲೂ ವೈಚಾರಿಕ ಎಚ್ಚರಿಕೆಯಲ್ಲಿ ಬದುಕುತ್ತಿರುವವರು. ಇವರೊಂದಿಗೆ ಹರ್ಷಕುಮಾರ್ ಕುಗ್ವೆ ನಡೆಸಿದ ಸಂದರ್ಶನ. 

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ನಿಮಗೆ ಇಂದು ನಮ್ಮ ದೇಶ ಪ್ರಗತಿಯ ಹಂತದಲ್ಲಿದೆ ಅನ್ನಿಸಿದೆಯೇ?
            -ಎಲ್ಲಿಯ ಪ್ರಗತಿಒಂದರಲ್ಲಿ ಪ್ರಗತಿ ಇದ್ದರೆ ಮತ್ತೊಂದು ಊನಗೊಂಡಿರುವ ಸ್ಥಿತಿ ನಮ್ಮದು.  ನಾವು ಅಂದು ಹೊಂದಿದ್ದ ನಿರೀಕ್ಷೆಯ ಮಟ್ಟದಲ್ಲಿ ಯಾವುದೂ ಇಲ್ಲ. ದೇಶದ ತಳಹದಿಯಾಗಿರುವ ಹಳ್ಳಿಗಳೇ ಸೊರಗಿ ಹೋಗ್ತಾ ಇವೆ. ಇಂದು ನಮ್ಮ ಹಳ್ಳಿಗಳು ನಿವೃತ್ತಿ ಪಡೆದವರ ಆಶ್ರಮಗಳಂತಾಗಿಬಿಟ್ಟಿವೆ. ಹಳ್ಳಿಗಳ ಪ್ರಗತಿಯನ್ನು ಬಿಟ್ಟು ದೇಶದ ಪ್ರಗತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಮಹಾತ್ಮಾ ಗಾಂಧೀಜೀಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಅರ್ಥ ಮಾಡಿಕೊಂಡು ಅದನ್ನು ಜಾರಿಗೆ ತರಲು ತುಂಬಾ ಹಿಂದೆ ಬಿದ್ದಿದೀವಿ ಅನ್ನಿಸಿದೆ. ಭಾರತದ ಅಭಿವೃದ್ಧಿ ಮಾಡುವಾಗ ದೇಶದ ಮೂಲ ಉದ್ಯೋಗಗಳಾದ ವ್ಯವಸಾಯನೇಕಾರಿಕೆಗೃಹ ಕೈಗಾರಿಕೆಗಳನ್ನು ಅಲುಗಾಡಿಸಬಾರದಿತ್ತು. ಅವನ್ನು ಅಲ್ಲಲ್ಲೇ ಗಟ್ಟಿಗೊಳಿಸಬೇಕಿತ್ತು. ಎಲ್ಲಾ ಉದ್ಯೋಗ ಪಟ್ಟಣಗಳಿಗೆ ಹೋಗಿಟ್ಟಿತು. ಹಾಗಾಗದಂತೆ ನೋಡಿಕೊಳ್ಳಬೇಕಿತ್ತು. ಅಂದು ಯಾವ ಪ್ರಮಾಣದಲ್ಲಿ ಬಡತನವಿತ್ತೋ ಇಂದೂ ಅದೇ ಪ್ರಮಾಣದಲ್ಲಿದೆ. ಯಾಕೆ ಅಂತ ಕೇಳಿಕೊಂಡಿಲ್ಲ. ಮೊದಲು ಹಳ್ಳಿಗಳನ್ನು ಕಟ್ಟುವ ಬದಲು ಡಿಲ್ಲಿ ಕಟ್ಟಲು ಹೋಗಿದ್ದಕ್ಕಲ್ಲವಾ?


*ನೀವು ಚಾರಿತ್ರಿಕ ಕಾಗೋಡು ಸತ್ಯಾಗ್ರಹದ ಮುಂದಾಳತ್ವ ವಹಿಸಿದ್ದಿರಿ. ಇದಕ್ಕೆ ನಿಮಗೆ ಅಂದು ಸಿಕ್ಕಿದ ಪ್ರೇರಣೆ ಏನಾಗಿತ್ತು?
            ಸ್ವಾತಂತ್ರ್ಯ ಎಂದರೆ ಅದು ಈ ದೇಶದ ರೈತರ ಸ್ವಾತಂತ್ರ್ಯ ಅನ್ನುವುದು ನನ್ನ ಬಲವಾದ ನಂಬಿಕೆ. ಆದರೆ ಸ್ವಾತಂತ್ರ್ಯ ಪಡೆದು ದಶಕವಾದ ಮೇಲೂ ನಮ್ಮ ಭಾಗದಲ್ಲಿ ಭೂಮಾಲೀಕತ್ವ ಹಾಗೇ ಇತ್ತು. ಮುಖ್ಯವಾಗಿ ಉಳುವವನೇ ಹೊಲದೊಡೆಯನಾಗಬೇಕು ಎಂಬುದು ನನ್ನ ತಿಳಿವಳಿಕೆಯಲ್ಲಿ ಮೊದಲಿಂದಲೂ ಇತ್ತು. ನಾನೂ ರೈತಾಪಿ ಕುಟುಂಬದಿಂದಲೇ ಬಂದು ಗೇಳಿದಾರ ಕುಟುಂಬದಲ್ಲಿದ್ದವನು. ಅಂದು ಧ್ವನಿಯಿಲ್ಲದೆ ಇದ್ದ ನಮ್ಮ ಹಳ್ಳಿಗಳ ರೈತರಿಗೆ ನಮ್ಮಂತ ವಿದ್ಯಾವಂತರೇ ಜಾಗೃತಿ ಮೂಡಿಸಿ ಹೋರಾಟಕ್ಕೆ ಹುರಿದುಂಬಿಸಿವುದು ನಮ್ಮ ಕರ್ತವ್ಯವೆಂಬ ಅರಿವೂ ಇತ್ತು. ಹೇಗೂ ಗಾಂಧೀಜೀಯವರ ಆದರ್ಶಗಳು ಇದ್ದಿದ್ದರಿಂದ ಆ ಹೋರಾಟ ನಡೆಯಿತು.

ಭೂಸುಧಾರಣೆ ತೃಪ್ತಿಕರವಾಗಿ ನಡೆದಿದೆಯೇ?
ನಾವು ಚಳವಳಿ ನಡೆಸಿ ಮೂರು ದಶಕಗಳು ಕಾಯಬೇಕಾಯ್ತು ಅದರ ಪ್ರತಿಫಲವನ್ನು ನಮ್ಮ ಜನತೆ ನೋಡಲು. ಆದರೆ ಭೂಮಿ ಸಮಸ್ಯೆ ಇಂದು ಬೇರೆಯದೇ ರೀತಿಯಲ್ಲಿ ನಮ್ಮ ರೈತರಿಗೆ ಎದುರಾಗಿರುವುದನ್ನೂ ನಾವು ಗಮನಿಸಬೇಕು. ಈ ಹಿಂದೆ ಒಂದು ಕುಟುಂಬದಲ್ಲಿ ಐದು ಜನರಿದ್ದರೆ ಇಂದು ಆ ಸಂಖ್ಯೆ ೨೫ ಆಗಿದೆ. ಭೂಹಿಡುವಳಿಗಳು ಸಂಕುಚಿತವಾಗಿತ್ತಿವೆ. ಆ ಭೂಮಿ ಇಂದು ಸಾಕಾಗುವುದಿಲ್ಲ. ಆಗ ಪಕ್ಕದ ಭೂಮಿಯನ್ನು ಉಳುಮೆ ಮಾಡುತ್ತಾರೆ. ಹೀಗೆ ಕಾನೂನನ್ನು ಮೀರಿಯಾದರೂ ಬಗರ್‌ಹುಕುಂ ಸಾಗುವಳಿ ಮಾಡುವುದು ಜನರಿಗೆ ಅನಿವಾರ್ಯವಾಗಿದೆ. ಆದರೆ ಸರ್ಕಾರಹಾಗೂ ಕುರ್ಚಿಯ ಮೇಲೆ ಕುಳಿತ ಅಧಿಕಾರಿಗಳು ಕಾಗದದ ಮೇಲೆ ಗರೆ ಎಳೆದು,ಒತ್ತುವರಿ ಮಾಡಿದ ಜನರನ್ನು ಅವರನ್ನು ಅಪರಾಧಿಗಳಾಗಿ ನೋಡುತ್ತಿದ್ದಾರೆ. ಅವರು ಹೇಗೆ ಅಪರಾಧಿಗಳಾಗುತ್ತಾರೆಕುರ್ಚಿ ಮೇಲೆ ಕುಳಿತುಕೊಂಡು ಜನರಿಗೆ ನೋಟೀಸು ಕುಡುತ್ತಾರಲ್ಲಾ ಅಧಿಕಾರಿಗಳು ಅವರು ಇದಕ್ಕೆ ಜವಾಬು ಕೊಡಲಿ.

ಈ ಸಮಸ್ಯೆಗಳನ್ನೆಲ್ಲಾ ಗ್ರಹಿಸಲು ನಮ್ಮ ಸರ್ಕಾರಗಳಿಗೆ ಏಕೆ ಆಗುತ್ತಿಲ್ಲ?
ಏಕೆಂದರೆ ಆಳುತ್ತಿರುವವರಿಗೆ ಸೇವಾ ಮನೋಭಾವನೆ ಇಲ್ಲ. ಅವರು ತಂತಮ್ಮ ಸೇವೆಯಲ್ಲೇ ಮುಂದಾಗಿದ್ದಾರೆಯೇ ವಿನಃ ತ್ಯಾಗ ಮನೋಭಾವನೆಯಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದಲೇ ನಮ್ಮ ಜನರನ್ನು ಕಾಡುತ್ತಿರುವ ಯಾವ ಸಮಸ್ಯೆಗಳೂ ವಿಧಾನಸೌಧದಲ್ಲಿ ಕುಳಿತವರಿಗಾಗಲೀಕಛೇರಿಗಳಲ್ಲಿ ಕುಳಿತವರಿಗಾಗಲೀ ಕಾಣಿಸದಂತಾಗಿರುವುದು.  ಐಎಎಸ್ ಪಾಸು ಮಾಡಿದವರು ನಾವು ಜನರನ್ನು ಆಳೋಕೆ ಹುಟ್ಟಿರುವುದು ಎಂದು ಬಂದು ಆಳುವುದೇ ಎಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ನಾವು ಆಳುವ ಪರೀಕ್ಷೆ ಪಾಸು ಮಾಡಿಕೊಂಡು ಬಂದೇ ಸೀಟಿನಲ್ಲಿ ಕೂತಿದೀವಿ ಎಂದು ಬಂದು ಆಳುತ್ತಾರಲ್ಲಾ... ಈ ಐಎಎಸ್‌ನವರ ಕಾಲದಲ್ಲೇ ದೇಶ ಹಾಳಾಗಿ ಹೋಯ್ತು ಎನ್ನುವುದು ನನ್ನ ಸ್ಪಷ್ಟ ಭಾವನೆ. ಇದು ಜನಸಾಮಾನ್ಯರರೈತರ ಅಧಿಕಾರವಾಗಬೇಕೇ ಹೊರತು ಐಎಎಸ್ ಅಧಿಕಾರ ಆಗಬಾರದು.

ಸ್ವತಂತ್ರ ಭಾರತದಲ್ಲಿ ಜನರನ್ನು ಕಾಡುತ್ತಿರುವ ಪ್ರಧಾನ ಸಮಸ್ಯೆ ಯಾವುದು ಎಂದು ನಿಮ್ಮ ಭಾವನೆ?
ಜನರನ್ನು ಆವರಿಸಿಕೊಂಡಿರುವ ಅಜ್ಞಾನ ಮೂಢನಂಬಿಕೆಗಳೇ ಪ್ರಧಾನ ಸಮಸ್ಯೆ ಎನ್ನುವವವನು ನಾನು. ಈ ಜನರಿಗೆ ವಿಚಾರವಮತಿಕೆಯೇ ಇಲ್ಲವೇನೋ. ಈ ದೇಶದಲ್ಲಿ ಕಂಡಿದ್ದನ್ನೆಲ್ಲಾ ದೇವರು ಎಂದು ಪೂಜೆ ಮಾಡುತ್ತಾರೆ. ಒಂದು ಕಲ್ಲಿನ ಮೇಲೆ ಕುಂಕುಮ ಸುರಿದರೂ ಅದಕ್ಕೆ ಪೂಜೆ ಮಾಡುತ್ತಾರೆಮರದಲ್ಲಿ ದೇವರಿದೆ ಎಂದರೂ ಅದಕ್ಕೆ ಪೂಜೆ ಊದುಬತ್ತಿ ಹಚ್ಚಿ ಹರಕೆ ಕಟ್ಟುತ್ತಾರೆ. ಯಾವುದನ್ನೂ ವಿಚಾರ ಮಾಡದೇ ಒಪ್ಪೊಕೊಂಡು ಬಿಡುತ್ತಾಲ್ಲ. ಇದು ನಮ್ಮ ದೇಶದಲ್ಲಿ ಬಹುಸಂಖ್ಯಾತರ ಮೇಲೆ ಬ್ರಾಹ್ಮಣತ್ವ ಸವಾರಿ ಮಾಡುತ್ತಿರುವ ರೀತಿ. ಜನರಲ್ಲಿ ವೈಜ್ಞಾನಿಕ ಚಿಂತನೆ ಎನ್ನುವುದೇ ಇಲ್ಲ. ಈ ಮೂಢನಂಬಿಕೆಯನ್ನು ಹೋಗಲಾಡಿಸುವ ಸಂಸ್ಥೆಗಳೂ ನನಗೆ ಕಾಣುವುದಿಲ್ಲ.

ನಮ್ಮ ದೇಶದಲ್ಲಿ ಸಾಮಾಜಿಕ ಪ್ರಗತಿಯೇ ಆಗಿಲ್ಲವೇ?
ಯಾವ ಸಾಮಾಜಿಕ ಪ್ರಗತಿಈ ಕಾಲದಲ್ಲೂ ಜನರು ಜಾತಿ ಪದ್ಧತಿಯ ಅಡಿಗೇ ನರಳುತ್ತಿದ್ದಾರೆ. ಇದರಲ್ಲಿ ಚಾತುರ್ವರ್ಣ ವ್ಯವಸ್ಥೆ ಎನ್ನುವುದು ಗಡ್ಡೆ ರೂಪದಲ್ಲಿ ಕೆಲಸ ಮಾಡುತ್ತಾ ಬಂದಿದೆ. ಮೇಲಿನ ಎಲ್ಲದನ್ನೂ ಅದೇ ನಿರ್ಧಾರ ಮಾಡುತ್ತೆ. ಏನೂ ಬರದಿರುವ ದಡ್ಡನನ್ನು ಕೂಡಾ ಜನಿವಾರ ಹಾಕಿ ಅವನನ್ನು ಮುಂದಾಳಾಗಿ ಮಾಡಿಬಿಟ್ಟರು ದೇಶದಲ್ಲಿ. ಇದನ್ನು ಹೋಗಲಾಡಿಸೋಕೇ ಆಗಿಲ್ಲ. ಎಂತೆಂಥವರೋ ಪ್ರಯತ್ನಿಸದರಾದರೂ ಆ ಕೆಲಸ ಇನ್ನೂ ಆಗಿಲ್ಲ. ದೇಶವನ್ನು ಆಳಿದ ಪ್ರತಿಯೊಬ್ಬ ರಾಜ ,ಮಹಾರಾಜನೂ ಈ ಚಾತುರ್ವರ್ಣದಿಂದಲೇ ತಮಗೆ ಲಾಭ ಇರುವುದನ್ನು ಕಂಡುಕೊಂಡು ಅದರ ಪ್ರಕಾರವೇ ಆಳ್ವಿಕೆ ನಡೆಸಿದಾರೆ. ಇವತ್ತಿಗೂ ಶಾಸನಗಳನಗಳನ್ನು ರಚಿಸುತ್ತಿರುವುದು ಜಾತಿಯಿಂದ ಮೇಲಿರುವ ಬುದ್ಧಿಜೀವಿಗಳೇ.

ಹಾಗಾದರೆ ಇದಕ್ಕೆ ಪರಿಹಾರ ಎಲ್ಲಿದೆ ಎಂದು ನಿಮ್ಮ ಭಾವನೆ?
ಶೂದ್ರ ಎಂದು ಕರೆದು ನೀನು ಕೀಳು ಎಂದಾಗ ಅದನ್ನು ಒಪ್ಪಿಕೊಳ್ಳದಿರುವ ಮನೋಭಾವನೆ ದುಡಿಯುವ ಜನರಲ್ಲಿ ಬಂದುಬಿಟ್ಟರೆ ಸಾಕು. ಇಂದು ಮನುಸ್ಮೃತಿಯೇ ನಮ್ಮ ಧಾರ್ಮಿಕ ಕಾನೂನಾಗಿದೆ. ಅಧಿಕಾರಕ್ಕೆ ಹೋದವರೂ ಅದರ ಆಧಾರದಲ್ಲಿಯೇ ಕಾನೂನು ರಚಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ನಮ್ಮ ಸಂವಿಧಾನದಲ್ಲಿರುವ ಜಾತ್ಯಾತೀತ ಪರಿಕಲ್ಪನೆಗಳಿಗೆ ತಕ್ಕಂತೆ ಕಾನೂನು ರಚಿಸುತ್ತಲೇ ಇಲ್ಲ. ಮೊದಲು ಆ ಕೆಲಸವಾಗಬೇಕಾಗಿದೆ. ತುಳಿತಕ್ಕೊಳಗಾದ ಸಮುದಾಯದ ವಿದ್ಯಾವಂತರಾದವರು ತಮ್ಮ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಜವಾಬ್ದಾರಿ ಹೊರಬೇಕು. ಬಸವಣ್ಣನವರು ಹೇಳಿದ್ದರಲ್ಲ ಕಾಯಕವೇ ಕೈಲಾಸ ಎಂದು. ಹೀಗೆ ಇಂದು ಕಾಯಕದಲ್ಲಿರುವ ಶ್ರಮ ಜೀವಿಗಳಿರುವುದೇ ಕೈಲಾಸ. ನಾವು ದುಡಿದಿದ್ದನ್ನು ತಿಂದು ಸುಳ್ಳು ಬೋಧನೆ ಮಾಡುವ ಜನರೇನಿದ್ದಾರೆ ಅವರಿರುವುದು ನರಕ. ದೇಶಕ್ಕೆ ಬೇಕಾದ್ದನ್ನು ಉತ್ಪಾದನೆ ಮಾಡುವ ಶೇಕಡಾ ೮೦ ಶ್ರಮ ಜೀವಿಗಳಲ್ಲಿ ಜಾಗೃತಿ ಹುಟ್ಟಿಸುವವರೇ ನನಗೆ ಕಾಣಿಸುತ್ತಿಲ್ಲ. ಹಿಂದೆ ಬಹಳ ಮಹಾನುಭಾವರಿದ್ದರು. ಇಂದು ಎಲ್ಲೋ ಕೆಲವರಿರಬಹುದಷ್ಟೆ.

*ನಮ್ಮ ಸಮಾಜದ ಪ್ರಗತಿ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುತ್ತೀರಿ?
ಮೊದಲನೆಯದಾಗಿ ನಮ್ಮ ರೈತರು ವರ್ಗ ಸರ್ಕಾರದ ಅಧೀನದಲ್ಲಿರಬಾರದು. ಎಲ್ಲಿಯವರೆಗೆ ರೈತರು ಹಾಗೆ ಮತ್ತೊಂದು ಶಕ್ತಿಯ ಅಧೀನದಲ್ಲಿರುತ್ತಾರೋ ಅಲ್ಲಿಯವರೆಗೂ ಅವರಿಗೆ ಸ್ವಾತಂತ್ರ್ಯ ಇಲ್ಲ. ನಗರ ಕೇಂದ್ರಿತವಾಗಿರುವವರು ತಮ್ಮನ್ನು ತಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆಹಾರ ಉತ್ಪಾದಕ ಶಕ್ತಿಗೆ ಧಕ್ಕೆ ಕೊಡದ ರೀತಿ ಬದುಕಬೇಕು. ರಾಜ್ಯದ ಜನರೆಲ್ಲಾ ವಿದ್ಯಾವಂತರಾಗಲು ಎಲ್ಲಿ ಹಿಂದೆ ಬೀಳುತ್ತಿದ್ದರೆ ನೋಡಿ ಅವರಿಗೆ ಜ್ಞಾನೋದಯವಾಗುವಂತೆ ಮಾಡಬೇಕೇ ವಿನಃಇವರನ್ನು ಆಳುತ್ತೇವೆ ಎಂದು ಹೋಗ ಬಾರದು. ನಾಗರೀಕತೆ ಎಂದರೆ ಕೆಲವರ ಅಭಿವೃದ್ಧಿ ಅಲ್ಲ. ಎಲ್ಲರ ಸುಧಾರಣೆ ಆಗಬೇಕು. ನಗರವಾಸಿ ಆದವನು ಶೋಷಕ ವ್ಯವಸ್ಥೆಯೊಳಗೆ ತಾನೂ ಒಬ್ಬ ತಿನ್ನುವನಾಗಿಬಿಟ್ಟರೆ ಹೇಗೆ ಸಮಾಜ ಬದಲಾವಣೆ ಆಗುತ್ತದೆ?.

ಇಂದಿನ ಜಾಗತೀಕರಣದಿಂದ ಅಭಿವೃದ್ಧಿ ಸಾಕಷ್ಟು ಆಗಿದೆ ಎಂಬ ತಿಳಿವಳಿಕೆ ನಮ್ಮಲ್ಲಿದೆಯಲ್ಲ?
ದೇಶದ ನಿಜವಾದ ಅಭಿವೃದ್ಧಿ ಆಗಬೇಕೆಂದರೆ ಅದು ಗಾಂಧಿ ಕಲ್ಪನೆಯ ಗಾಮ ಸ್ವರಾಜ್ಯದಿಂದ ಮಾತ್ರ ಸಾಧ್ಯ. ಈ ಜಾಗತೀಕರಣದಿಂದ ಅಲ್ಲ. ಈ ಜಾಗತೀಕರಣ ಎಂದರೆ ಅದೇನೂ ವಿಶ್ವ ಸರ್ಕಾರವಲ್ಲ. ಲೋಹಿಯಾರವರು ಕೊಟ್ಟ ಅಂತಹ ವಿಶ್ವ ಸರ್ಕಾರದಲ್ಲಿ ಗ್ರಾಮಾಡsಳಿತ ಇರಬೇಕು. ಸರ್ಕಾರಗಳೇ ಇರಬಾರದು. ಗಡಿಗಳೂ ಇರಬಾರದುಡಿಂದಿನ ಜಾಗತೀಕರಣ ಅದನ್ನು ಮಾಡುತ್ತಿದೆಯೇಎಲ್ಲರನ್ನೂ ಸ್ವತಂತ್ರರನ್ನಾಗಿ ಮಾಡೋದಿಕ್ಕೆಎಲ್ಲರೂ ಮನಸಸ್ಸಿನಲ್ಲೂ ದುಗುಡ ಇಲ್ಲದೆ ಉಂಡುತಿಂದು ದೇಶದ ಉತ್ಪಾದನೆ ಜಾಸ್ತಿ ಮಾಡಿಆ ಉತ್ಪಾದನೆ ದೇಶದ ಎಲ್ಲರಿಗೂ ಸಿಗುವ ರೀತಿಬಡತನ ಎನ್ನುವುದು ಕಲ್ಪನೆಗೇ ಬರದಿರುವ ರೀತಿ ಸಮೃದ್ಧ ದೇಶ ನಿರ್ಮಾಣಕ್ಕೆ ಗಾಂಧಿ ಮಾರ್ಗವೇ ಇಂದಿಗೂ ಸೂಕ್ತವೇ ಹೊರತು ಇನ್ನಾವ ಮಾರ್ಗವೂ ಸರಿ ಇಲ್ಲ.


ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಇದಕ್ಕೆಲ್ಲಾ ಅವಕಾಶ ಇದೆಯೆಂದು ನಿಮಗನ್ನಿಸಿದೆಯಾ?
ನಮ್ಮ ಜನಪ್ರತಿನಿಧಿಗಳಾದವರಿಗೆ ಎಲ್ಲಿವರೆಗೂ ಅಧಿಕಾರ ಉಳಿಸಿಕೊಳ್ಳುವುದನ್ನು ಬಿಟ್ಟು ಸೇವಾ ಮನೋಭಾವನೆ ಬರೋದಿಲ್ಲವೋ ಅಲ್ಲಿವರೆಗೂ ಹೀಗೇ ಇದು ಕೆಡುತ್ತಲೇ ಹೋಗುತ್ತದೆ. ಎಲ್ಲಿಯವರೆಗೆ ತ್ಯಾಗ ಮನೋಭಾವನೆ ಹೊಂದಿರುವವರನ್ನು ನಾವು ಕಳಿಸುವುದಿಲ್ಲ ಅಥವಾ ಆರಿಸಿ ಹೋದವರಿಗೆ ಆ ಭಾವನೆ ಇರುವುದಿಲ್ಲ ಇದು ಹೀಗೇ ನಡೆಯುತ್ತಿದೆ. ನಾನೂ ಚುನಾವಣೆಗೆ ನಿಂತಿದ್ದೆ. ನಾನು ಆರಿಸಿ ಬಂದರೆ ಏನೋ ಸಾಧನೆ ಆಗುತ್ತೆ ಎನ್ನುವ ಭಾವನೆಯಿಂದ ನಾನು ಸ್ಪರ್ಧೆ ಮಾಡಿದೆ. ಜನರು ಅದಕ್ಕೆ ಅವಕಾಶ ಕೊಡಲಿಲ್ಲ. ತನಗೇ ಬಸ್ ಚಾರ್ಜಿಗೆ ದುಡ್ಡಿಲ್ಲದವನು ಅಲ್ಲಿ ಹೋಗಿ ಏನು ಮಾಡುತ್ತಾನೆ ಎಂಬ ಭಾವನೆ ಜನಕ್ಕೆ. ಇವತ್ತಿನ ರಾಜಕೀಯ ನೋಡಿ ಎಷ್ಟು ಹೊಲಸಾಗಿದೆ ಅಂತ. ಅಲ್ಲಾ ಈ ಮುಖ್ಯ ಮಂತ್ರಿ ಇಷ್ಟೆಲ್ಲಾ ಆದಮೇಲೆ ಬಿಟ್ಟು ಬಂದು ಬಿಡಬೇಕಿತ್ತು. ಅವರೂ ನನ್ನ ಹಾಗೆ ಒಬ್ಬ ಹೋರಾಟಗಾರನಾಗಿ ಮೇಲೆ ಹೋಗಿ ಈಗ ಇಷ್ಟೆಲ್ಲಾ ಅವಮಾನವಾದ ಮೇಲೂ ಅದೇ ಸೀಟಲ್ಲಿ ಕುಳಿತುಕೊಳ್ಳಬೇಕಿತ್ತಾಅವರೇನು ಆಳೋಕಾಗೇ ಹುಟ್ಟಿದ್ದಾರಾ?. ಇಂದು ಸರ್ಕಾರದಲ್ಲಿ ನಡೆಯುತ್ತಿರುವ ಭಾನಗಡಿಗಳನ್ನೆಲ್ಲಾ ನೋಡುತ್ತಿದ್ದರೆ ನಾನು ಸ್ವಾತಂತ್ರ್ಯ ಹೋರಾಟಗಾರನಾಗಿ ಇನ್ನೂ ಯಾಕೆ ಬದುಕಿದ್ದೇನೋ ಅನ್ನಿಸುತ್ತಿದೆ. ಇಷ್ಟರಲ್ಲೇ ಸತ್ತು ಹೋಗಿಬಿಡಬೇಕಿತ್ತು.

*ಜನಸಾಮಾನ್ಯರಿಗೆ ಇದರಿಂದೆಲ್ಲಾ ಹೊರಬರಲು ದಾರಿ ಇದೆಯೇ?
ಇಲ್ಲಿ ಆಳಲು ಹೋದವರಂತೆಯೇ ಜನರಲ್ಲೂ ಸಮಸ್ಯೆ ಇದೆ. ಆಳಲು ಹೋದವರು ಒಮ್ಮೆ ಅಧಿಕಾರ ಹಿಡಿದರೆ ಮುಗಿಯಿತು. ಅದನ್ನು ಉಳಿಸಿಕೊಳ್ಳೋದೇ ಅವರ ಮುಖ್ಯ ಕರ್ತವ್ಯವಾಗಿಬಿಡುತ್ತದೆ. ಅದೇನೂ ಜನಸೇವೆಯಿಂದ ಅಲ್ಲ ಮತ್ತೆ. ಜನರಲ್ಲಿ ಸಹ ಗುಲಾಮಗಿರಿ ಭಾವನೆ ಹೋಗಿಲ್ಲ. ನಾವು ಆಳಿಸಿಕೊಳ್ಳೋಕೇ ಇರುವವರು ಎಂಬ ಮನಸ್ಥಿತಿಯಲ್ಲಿಯೇ ಅವರಿರುತ್ತಾರೆ. ಏನೇ ಅನ್ಯಾಯ ನಡೆದರೂ ಅದನ್ನು ಪ್ರಶ್ನಿಸುವ ಮನೋಭಾವವೇ ಇಂದು ಜನರಲ್ಲಿ ಇಲ್ಲವಲ್ಲ. ಆದರೂ ಚಳುವಳಿಗಳ ಮೂಲಕ ಬದಲಾವಣೆ ಸಾಧ್ಯ ಎಂಬ ನಂಬಿಕೆ ನನ್ನಲ್ಲಿ ಇದೆ. ಏಕೆಂದರೆ ಚಳುವಳಿಯ ಶಕ್ತಿ ಏನೆಂದು ನನಗೆ ತಿಳಿದಿದೆ. ಅದು ಜನರ ಇಂತಹ ಕೀಳು ಮನೋಭಾವನೆಯನ್ನೂ ದೂರಮಾಡಿಬಿಡುತ್ತದೆ.

ನೀವು ಅಂದು ನಡೆಸಿದ ಬಗೆಯಲ್ಲಿ ಇಂದು ಚಳವಳಿಗಳು ನಡೆಯಲು ಸಾಧ್ಯವೇ?
ಇವತ್ತಿಗೂ ಆ ಸಮಜವಾದಿ ಚಳವಳಿಯ ಮಟ್ಟದಲ್ಲಿ ಬೇರೆ ಯಾವ ಚಳುವಳಿಯೂ ಬೆಳೆದಿಲ್ಲ.  ಜಯಪ್ರಕಾಶ್ ನಾರಯಣ್ಲೋಹಿಯಾರಂತವರೂ ಭಾಗವಹಿಸಿ ಜೈಲಿಗೆ ಹೋಗಿರುವಂತಹ ಆ ಚಳುವಳಿಗಿದ್ದ ಹೆಸರು ಬೇರಾವ ಚಳವಳಿಗೂ ಇಲ್ಲ. ಇಂದೂ ಸಹ ಏನೇ ಬದಲಾವಣೆ ಬಂದರೂ ಚಳವಳಿಗಳಿಂದಲೇ ಬರುತ್ತದೆ. ಚಳವಳಿ ಎಂದರೆ ಇಂದು ನಡೆಯುತ್ತಿರುವ ಅನೇಕ ಸ್ವಾರ್ಥ ಹಿತಾಸಕ್ತಿಗಳ ಚಳವಳಿಯಲ್ಲ. ಅವು ನಾಮಕಾವಸ್ಥೆ ಚಳವಳಿಯಾಗಿರಬಾರದು. ಅದು ಈ ಸರ್ಕಾರಗಳನ್ನೇ ನಡುಗಿಸುವ ಮಟ್ಟಿಗೆ ಇರಬೇಕು.

ಇಂದಿನ ಯುವಜನರಿಗೆ ಯಾವ ಸಂದೇಶ ನೀಡಲು ಇಚ್ಚಿಸುತ್ತೀರಿ?
            ಯುವಕರು ಯಾವ ಉದ್ಯೋಗದಲ್ಲೇ ಇರಲಿ ನನ್ನ ದೇಶದ ಜನ ಯಾವ ಕಡೆ ಹೋಗಬೇಕು ಎಂಬುದನ್ನು ನಿರ್ಧರಿಸಿ ವರು ಕೆಲಸ ಮಆಡಬೇಕು. ನಮ್ಮ ಜನರು ಇಂದು ಹಣ ತೊಗೊಂಡು ಓಟು ಕೊಡುವ ಪರಿಸ್ಥಿತಿಯಲ್ಲಿದ್ದಾರೆಂದರೆ ಅದಕ್ಕಿಂತಾ ಹೀನಾಯವಾದುದು ಬೇರೆ ಇಲ್ಲ. ಓಟಿನ ಹಕ್ಕನ್ನು ನಮಗೆ ಕೊಟ್ಟ ಸ್ವಾತಂತ್ರ್ಯಕಾಗಿ ಅಮದು ಏನೇನೆಲ್ಲಾ ನಡೆಯಿತುಎಷ್ಟು ಜನ ಪ್ರಾಣ ಕಳೆದುಕೊಂಡರುಎಷ್ಟು ಜನ ಏನೇನು ಅನಾಹುತಕ್ಕೆ ಗುರಿಯಾಗಿಎಷ್ಟು ಜನ ನೇಣಿಗೆ ಬಿದ್ದುಎಷ್ಟು ಜನ ಜೈಲಿಗೆ ಸೇರಿದ್ದರುನಾನೂ ಸಹ ನಾಲ್ಕು ವರ್ಷ ಜೈಲುವಾಸ ಅನುಭವಿಸಿದವನೇ. ಹೀಗೆ ತಂದಂತಹ ಸ್ವಾತಂತ್ರ್ಯದಲ್ಲಿ ಇಂದು ಹತ್ತು ರೂಪಾಯಿಗೆ ಓಟು ಮಾರಿಕೊಳ್ಳುವ ಪರಿಸ್ಥಿತಿ ಇದೆ ಎಂದರೆ ಏನು ಹೇಳುವುದು. ಇದನ್ನೆಲ್ಲಾ ಇಂದಿನ ಯುವಕರು ಗಂಭೀರವಾಗಿ ಆಲೋಚಿಸಿ ಕೆಲವರಾದರೂ ಅದನ್ನೆಲ್ಲಾ ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಹಾಕಿದರೂ ಅಷ್ಟು ಉಪಕಾರವಾಗುತ್ತದೆ.





ಇಂದು ಜಾತಿ ಎನ್ನುವುದೇ ಆಧುನಿಕತೆಯ ಒಂದು ಶಾಪ - ಡಾ. ಎಂ.ಎಸ್.ಆಶಾದೇವಿ


ಇಂದು ಜಾತಿ ಎನ್ನುವುದೇ ಆಧುನಿಕತೆಯ ಒಂದು ಶಾಪ - ಡಾ. ಎಂ.ಎಸ್.ಆಶಾದೇವಿ





ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ ಅನಿಸಿಕೆ?

ಎಲ್ಲ ಬಗೆಯ ಶೋಷಿತವರ್ಗಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದ್ದು ಆತ್ಮ ಮರುಕದ ಘಟ್ಟವಾದರೆ ಎರಡನೆಯದ್ದು ಸ್ವ - ಅರಿವಿನ ಘಟ್ಟ. ಮೂರನೆಯದ್ದು ಅಧಿಕೃತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ ತಮ್ಮ ಬರವಣಿಗೆಗೂ ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ.

ಮಹಿಳೆಯರ ಸಾಹಿತ್ಯ ಸೃಷ್ಟಿಗೆ ಯಾವ ಪ್ರತಿಸ್ಪಂದನೆ ಸಿಗುತ್ತಿದೆ?
ಇಂದು ಮಹಿಳೆಯ ಸಾಹಿತ್ಯಕ್ಕೆ ಸಿಗ್ತಾ ಇರೋ ಸ್ಥಾನ ಬೇರೆ. ಮಹಿಳೆಯ ಸಾಹಿತ್ಯ ಮತ್ತು ಸಾಹಿತ್ಯದ ಸ್ವರೂಪ ಎರಡಕ್ಕೂ ಹತ್ತಿರದ ಸಂಬಂಧವಿದೆ. ಮಹಿಳೆಯ ಸಾಹಿತ್ಯವನ್ನು ಸಾಹಿತ್ಯ ಅಂತ ಮಾತ್ರ ನೋಡಬೇಕು ಎನ್ನುವುದು ನಮ್ಮ ಹಂಬಲ. ಸಾಹಿತ್ಯದಲ್ಲಿ ಒಳ್ಳೆ ಸಾಹಿತ್ಯಕೆಟ್ಟ ಸಾಹಿತ್ಯ ಎಂದು ಮಾತ್ರ ಇರಬೇಕು ಎಂಬುದರ ಕಡೆಗೆ ನಮ್ಮ ಚಲನೆ ಇರಬೇಕು. ಅದು ತುಂಬ ದೂರದ ದಾರಿ ನಿಜ. ಆದರೆ ಸಮಾಧಾನದ ಸಂಗತಿ ಏನೆಂದರೆ ಮಹಿಳೆಯ ಸಾಹಿತ್ಯವನ್ನು ನೋಡುವ ವಿಚಾರದಲ್ಲಿ ತುಂಬಾ ಖಚಿತ ಹಾಗೂ ಗುಣಾತ್ಮಕ ಬದಲಾವಣೆಗಳಾಗುತ್ತಿರುವುದು. ಇಂದು ಹಿಂದೆ ನಿರ್ಲಕ್ಷಿಸಲ್ಪಟ್ಟ ಲೇಖಕಿಯರನ್ನೂ ಮುಂದೆ ಇಟ್ಟುಕೊಂಡು ಚರ್ಚಿಸುತ್ತಿದ್ದೇವೆ ಎಂಬುದು ಮೊದಲನೆಯದು. ಎರಡನೆಯದಾಗಿ ಲೇಖಕಿಯರನ್ನು ಬೇರೆ ಬೇರೆ ನೆಲೆಗಳಲ್ಲಿ ಅಂದರೆ ಲೇಖಕಿ ಎನ್ನುವ ನಿರ್ದಿಷ್ಟತೆಯನ್ನು ಬಿಟ್ಟು ಚರ್ಚಿಸುವ ನೆಲೆಗಳನ್ನು ಕಟ್ಟಿಕೊಡುವುದರಲ್ಲಿ ಇವತ್ತಿನ ಕನ್ನಡ ವಿದ್ವತ್ ಲೋಕಕ್ಕೆ ಆಸಕ್ತಿ ಇದೆ. ತುಂಬಾ ಮೂಲಭೂತ ಸವಾಲುಗಳು ಇನ್ನೂ ಹಾಗೇ ಉಳಿಸುಕೊಂಡಿವೆ ಎಂಬುದೇನೋ ನಿಜ.
 ನಾನು ಇತ್ತಿಚೆಗೆ ನಾನು ಕಟ್ಟಲು ಯತ್ನಿಸುತ್ತಿರುವ ಪ್ರಮೇಯ ಏನು ಎಂದರೆ ಕನ್ನಡ ವಿಮರ್ಷೆಯಲ್ಲಿ ಯಾವಾಗಲೂ ಸ್ತ್ರೀ ದೃಷ್ಟಿಕೋನವಿದೆ. ಆದರೆ ಸ್ತ್ರೀ ಸಂವೇದನೆ ಇಲ್ಲ ಎಂಬುದು. ನಮ್ಮ ಎಷ್ಟೋ ಮಹತ್ವದ ಲೇಖಕಿಯರನ್ನು ಅವರ ನಿಜವಾದ ನೆಲೆ ಮತ್ತು ಬೆಲೆಯಲ್ಲಿ ಗುರುತಿಸಲು ಏಕೆ ಸಾಧ್ಯವಾಗಲಿಲ್ಲ ಎಂದರೆ ದೃಷ್ಟಿಕೋನ ಸಾಧ್ಯವಾಗಿ ಸಂವೇದನೆ ಸಾಧ್ಯವಾಗದಿರುವುದರಿಂದಾಗಿ.
ಇಂದು ಕನ್ನಡ ಸಾಹಿತ್ಯದ ಪುನರ್‌ಮೌಲ್ಯೀಕರಣ  ಮಾಡುತ್ತಿರುವ ಈ ದಿನಗಳಲ್ಲಿ ಲೇಖಕಿಯರಿಗೆ ಬಹುಶಃ ಇಲ್ಲಿಯವರೆಗೆ  ಸಿಗದೇ ಹೋದ ಸ್ಥಾನ ಇನ್ನು ಸಿಗುತ್ತೆ ಅಂತ ನನಗನ್ನಿಸುತ್ತಿದೆ.

ಇಂದು ಮಹಿಳೆಯರ ದೃಷ್ಟಿಕೋನದಲ್ಲಿ ಯಾವ ರೀತಿಯ ಬದಲಾವಣೆ ಕಂಡು ಬರುತ್ತಿದೆಅದು ಕೇಲವ ವ್ಯಕ್ತಿನಿಷ್ಟವಾಗಿಯೇನಾದರೂ ಆಗಿದೆಯೇ?
ಸಾಹಿತ್ಯ ಸೃಷ್ಟಿಗೆ ತೊಡಗಿಕೊಂಡಿರುವವರಲ್ಲಿ ಹಲವರು ಸಮಷ್ಟಿ ನೆಲೆಯಲ್ಲೂ ಬರೆಯುತ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು. ಇಂದು ಬರೆಹ ಸ್ತ್ರೀ ಕೇಂದ್ರಿತಕ್ಕಿಂತ ಬದುಕಿನ ಕೇಂದ್ರಿತ ಸಾಹಿತ್ಯವಾಗಿದೆ. ಇದೇ ಒಂದು ಬದಲಾವಣೆ. ಆತ್ಮ ಮರುಕ ಮತ್ತು ಸ್ವ ಗ್ರಹಿಕೆಯಿಂದ ಹೊರಟು ಅಧಿಕೃತತೆಯೆಡೆ ಬಂದಿರುವುದೇ ಒಂದು ಬದಲಾವಣೆ. ಇಂದು ತುಂಬ ದೊಡ್ಡದಾಗಿರುವುದು ಯಾವುದೆಂದರೆ ಬದುಕು. ತಾನುಂಟೋ ಮೂರು ಲೋಕವುಂಟೋ ನೋಡುತ್ತಿದ್ದವರಿಗೆ ಇಂದು ಕಣ್ಣು ಹೊರಳಿಸಿ ಹೊರಳಿಸಿ ನೋಡಲಿಕ್ಕಾಗುತ್ತಿದೆ. ಹಾಗೆ ನೋಡಲಿಕ್ಕೆ ಬೇಕಾಗಿರುವ ಆತ್ಮಸಮ್ಮಾನ ಇಂದು ಸಾಧ್ಯವಾಗಿದೆ. ಕಟ್ಟಿಕೊಳ್ಳುತ್ತಿರುವ ಬದುಕಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದ ವಿಶ್ವಾಸ ಇಂದು ಸಾಧ್ಯವಾಗಿದೆ. ಹೀಗಾಗಿ ಇಂದು ಹೆಣ್ಣು ಕಂಡುಕೊಳ್ಳುತ್ತಿರುವುದು ಹೊರಗಿನದ್ದೂ ಹೌದು ಒಳಗಿನದ್ದೂ ಹೌದು. ಆದರೆ ಕೆಲವೊಮ್ಮೆ ಬಿಡುಗಡೆಯ ದಾರಿಗಳಾಗಿ ಕಂಡಿರುವುದು ಎಷ್ಟೋ ಸಲ ಬಿಡುಗಡೆಯ ದಾರಿಗಳಾಗಿರುವುದಿಲ್ಲ. ಅವು ನಮ್ಮನ್ನು ಇನ್ನೂ ಹೆಚ್ಚೆಚ್ಚು ಆಳವಾಗಿ ಹುಗಿಯುವ (ಪುರುಷ ಪ್ರಧಾನತೆಯೊಳಗೆ) ಹುನ್ನಾರಗಳಾಗಿರುತ್ತವೆ. ಆದರೆ ಸಮಾಧಾನದ ಸಂಗತಿ ಎಂದರೆ ಇಂದು ಇದು ಪುರುಷ ಪ್ರಾಧಾನ್ಯತೆಯ ಈ ಛದ್ಮವೇಷ ಅದು ಛದ್ಮವೇಷವೆ ಎನ್ನುವುದಾದರೂ ತಿಳಿಯುತ್ತಿದೆ. ಒಂದು ಕಾಲದಲ್ಲಿ ಅದು ಅರಿವಿಗೇ ಬರುತ್ತಿಲ್ಲ.

ನಮ್ಮ ಸಮಾಜದಲ್ಲಿ ಸ್ತ್ರೀವಾದ ಇಂದು ಯಾವ ಹಂತದಲ್ಲಿದೆಸ್ತ್ರೀವಾದಕ್ಕೆ ನಿಮ್ಮ ವ್ಯಾಖ್ಯಾನವೇನು?
ಸ್ತ್ರೀವಾದ ಎನ್ನುವುದು ಒಂದು ಬದುಕಿನ ಕ್ರಮ ಅಷ್ಟೆ. ನಾವು ಸಮಾನತೆಸ್ವಾತಂತ್ರ್ಯ ಯಾವುದೂ ಇಲ್ಲದಬದಲಿಗೆ ಪರಸ್ಪರ ಸ್ವಾಯತ್ತತೆಯಿಂದ ಒಪ್ಪಿ ಗೌರವಿಸುವ ಒಂದು ಜೀವನ ವಿಧಾನ ಎನ್ನುವುದು ನನ್ನ ಗ್ರಹಿಕೆ. ಆದರೆ ಸ್ತ್ರೀವಾದ ಎನ್ನುವುದು ಮಹಿಳೆಯರಿಗೇ ಸಂಬಂಧಿಸಿದ್ದಲ್ಲ. ಆ ಬದುಕಿನ ಕ್ರಮವನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಬಹಳ ಶ್ರಮ ಹಾಗೂ ಪ್ರೀತಿಯಲ್ಲಿ ಮಾತ್ರ ಕಟ್ಟಿಕೊಳ್ಳಲು ಆಗುತ್ತೆ.
ಸ್ತ್ರೀವಾದದಲ್ಲಿ ಖಂಡಿತವಾಗಿಯೂ ಒಂದು ಬೆಳವಣಿಗೆ ಇದೆ. ಸ್ತ್ರೀವಾದಿ ಚಳವಳಿಯನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ ಎನ್ನುವುದೇ ನನಗನ್ನಿಸಿದ್ದು. ಒಂದು ಕಾಲದಲ್ಲಿ ಸ್ತ್ರೀವಾದ ಭಾರತಕ್ಕೆ ಪ್ರವೇಶ ಮಾಡಿದಾಗ ಅದು ಒಂದು ಎಲ್ಲಾ ಸೌಲಭ್ಯ ಪಡೆದ ವರ್ಗದ ಪ್ರಯತ್ನವಾಗಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದು ಬೇರೆ ಬೇರೆ ಸ್ಥರಗಳಲ್ಲಿರುವವರಿಗೂ ಅದು ತಲುಪಿದೆ. ವಿದ್ಯಾವಂತರುಅವಿದ್ಯಾವಂತರುಗಾರ್ಮೆಂಟ್ ಕಾರ್ಮಿಕರುಹೀಗೆ ಎಲ್ಲರಲ್ಲಿ ಒಂದು ಜಾಗೃತಿ ಕಾಣಿಸುತ್ತಿದೆ. ಅದೇ ಹೊತ್ತಿಗೆ ಈ ಜಾಗೃತಿ ಅಥವಾ ಅರಿವು ಎನ್ನುವುದು ಆಧುನಿಕ ಹೆಣ್ಣಿನ ಹಿಂಸೆಯನ್ನು ಹಿಂದೆಂದೂ ಇರದಷ್ಟು ಹೆಚ್ಚಿಸಿದೆ ಎನ್ನುವುದೂ ಅಷ್ಟೇ ವಾಸ್ತವ. ಅರಿವಿನ ಹಿಂಸೆಯ ಘಟ್ಟವನ್ನು ದಾಟುವುದು ಯಾವ ಶೋಷಿತ ವರ್ಗಕ್ಕೂ ತುಂಬ ನಿರ್ಣಾಯಕವಾಕ ಘಟ್ಟ. ಬಹಳ ಕಷ್ಟದ ಕಾಲ ಅದು. ಆದರೆ ಹೆಣ್ಣಿನದು ಅಸಾಧಾರಣವಾದ ಆತ್ಮ ಸ್ಥೈರ್ಯದ ವ್ಯಕ್ತಿತ್ವವಾದ್ದರಿಂದ ಈ ಹಿಂಸೆಗೂ ಆಕೆ ತನ್ನನ್ನು ತಾನು ಒಡ್ಡಿಕೊಂಡಿದ್ದಾಳೆ.

ಪುರುಷ ಲೇಖಕರಲ್ಲಿ ಸ್ತ್ರೀ ಸಂವೇದನೆ ಎಷ್ಟರ ಮಟ್ಟಕ್ಕೆ ವ್ಯಕ್ತಗೊಂಡಿದೆ?

ಹೆಣ್ಣನ್ನು ತನ್ನ ನಿಜದಲ್ಲಿ ಗುರುತಿಸಲು ಪ್ರಯತ್ನಿಸಿದವರಲ್ಲಿ ಮೊದಲಿಗನಾಗಿ ನನಗೆ ಕಾಣುವುದು ಅಲ್ಲಮ. ದಾಸಿಮಯ್ಯ ಕೂಡಾ ಅದೇ ಪ್ರಯತ್ನ ನಡೆಸಿದವನು. ಆಧಿನಿಕ ಕನ್ನಡ ಸಾಹಿತ್ಯದಲ್ಲಿ ಕಾರಂತರಿದ್ದಾರೆ. ಅದೆಷ್ಟೇ ಬೌದ್ಧಿಕ ನೆಲೆಯದ್ದಾಗಿರಬಹುದಾದರೂ ಕಾರಂತರು ತುಂಬಾ  ಪ್ರಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕುವೆಂಪು ಅವರಲ್ಲಿ ಕೆಲವೊಮ್ಮೆ ಅಪ್ರಯತ್ನಪೂರ್ವಕವಾಗಿ ಸ್ತ್ರೀ ಸಂವೇದನೆ ಕಾಣಿಸುತ್ತದೆ. ಸ್ತ್ರೀ ಸಂವೇದನೆಯನ್ನು ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ ಲೇಖಕ ಎಂದರೆ ಲಂಕೇಶ್ ಅನ್ನಿಸುತ್ತೆ.
ಮಹಿಳಾ ಸಂವೇದನೆ ಎಲ್ಲಿ ಕೊರತೆ ಅನುಭವಿಸುತ್ತಿದೆ?
 ನೀವು ಈ ಥರದ ಪ್ರಶ್ನೆಗಳನ್ನು ಬೇರೆಯವರಿಗೂ ಕೇಳಬೇಕು. ಇದಿಷ್ಟೂ ಪ್ರಶ್ನೆಗಳನ್ನು ರಹಮತ್‌ರವರಿಗೂ ಕೇಳಿಬೇಕೆಂದು ಬಯಸುತ್ತೇನೆ. ನನಗೆ ರಹಮತ್‌ರೊಂದಿಗೂ ಸಮಸ್ಯೆ ಇದೆ. ಅವರು ಅಷ್ಟು ಪ್ರಾಮಾಣಿಕವಾಗಿದ್ದೂ,ಸ್ತ್ರೀಯರ ಬಗ್ಗೆ ಆಳವಾದ ಗೌರವ ವಿಶ್ವಾಸ ಎಲ್ಲಾ ಇದ್ದರೂ ಯಾಕೆ ಅವರು ಕನ್ನಡದ ಯಾವೊಬ್ಬ ಮಹತ್ವದ ಲೇಖಕಿಯ ಬಗ್ಗೆ ಬರೆದಿಲ್ಲ. ಬರೆದೇ ಇಲ್ಲವೆಂದಲ್ಲ. ಆದರೆ ಬೇರೆ ವಿಷಯಗಳ ಬಗ್ಗೆ ಅಷ್ಟಷ್ಟು ಬರೆದವರು ಈ ಬಗ್ಗೆ ಎಷ್ಟು ಬರೆಯಲು ಸಾಧ್ಯವಾಗಿದೆ ಎನ್ನುವುದು ನನ್ನ ತಕರಾರು. ಇದೇ ಪ್ರಶ್ನೆಯನ್ನು ನಾನು ಬಸವಣ್ಣನವರ ಬಗ್ಗೆಯೂ ಎತ್ತಿದಾಗ ಇವಳನ್ನು ಕೆಲಸದಿಂದ ತೆಗೀರಿ’ ಎಂದು ಹೇಳಿದರು. ಯಾಕೆಂದರೆ ದಲಿತರ ಸಣ್ಣಸಣ್ಣ ನೋವುಗಳನ್ನೂ ಅಷ್ಟು ಸೂಕ್ಷ್ಮವಾಗಿ ಆವಾಹಿಸಿಕೊಳ್ಳಲು ಬಸವಣ್ಣ ಪ್ರಯತ್ನಿಸುತ್ತಾರೆ. ಚೆನ್ನಯ್ಯನ ಮನೆಯ ದಾಸಿಯ ಮಗ’ ಎಂದಾಗ ಅವರು ತಮ್ಮನ್ನು ತಾವು ದಲಿತರೊಂದಿಗೆ ಸಮೀಕರಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ,ಹೆಣ್ಣನ್ನು ನೂರು ಸಲ ನಾಯಿ’ ಎಂದು ಕರೆಯುತ್ತಾರೆ. ನಮ್ಮ ವಿಮರ್ಷೆಯಲ್ಲೂ ಅಷ್ಟೆ. ಸಂಸ್ಕಾರಕ್ಕೆ ಸಿಗಬೇಕಾದ ಸ್ಥಾನಮಾನ ಫಣಿಯಮ್ಮಗೆ ಸಿಗಲಿಲ್ಲ?. ’ಫಣಿಯಮನನ್ನು ಹೇಗೆ ಚರ್ಚೆ ಮಾಡಬೇಕಿತ್ತೋ ಹಾಗೆ ಮಾಡಿದ್ದಿದ್ದರೆ ಇಂದು ಫಣಿಯಮ್ಮದ ಸ್ಥಾನ ಎಲ್ಲಿರುತ್ತಿತ್ತುಹೆಚ್ಚೂಕಡಿಮೆ ಸಂಸ್ಕಾರ ಎತ್ತಿದಷ್ಟೇ ಮೂಲಭೂತ ಪ್ರಶ್ನೆಗಳನ್ನು ಹೆಣ್ಣಿನ ವಿಷಯದಲ್ಲಿ ಫಣಿಯಮ್ಮ ಎತ್ತಿರಲಿಲ್ಲವೇ?.
ನಾನು ಎಷ್ಟೋ ಸೆಮಿನಾರುಗಳನ್ನು ಈ ಕಾರಣಕ್ಕೆ ತಿರಸ್ಕರಿಸಿದೀನಿ. ಯಾಕೆಂದರೆ ನಮಗೆ ಅದೇ ವಿಷಯ ಮೀಸಲಿಟ್ಟಿರುತ್ತಾರೆ. ಈಗ ಪಂಪನ ಬಗ್ಗೆ ವಿಚಾರ ಸಂಕಿರಣದಲ್ಲಿ ಒಂದು ಮಂಡನೆ. ಸ್ತ್ರೀವಾದಿ ದೃಷ್ಟಿಕೋನದಲ್ಲಿ ಪಂಪ’ ಎಂದು ಒಂದು ವಿಷಯ ಮಂಡನೆ ಇರಬೇಕಪ್ಪ. ಇಲ್ಲ ಅಂದರೆ ಯಾಕೆ ರಂಪ ಎಂದು ಸುಮಿತ್ರಾಬಾಯಿನೋಆಶಾದೇವಿನೋಗಾಯತ್ರಿನೋ ಯಾರನ್ನೋ ಒಬ್ಬರನ್ನು ಕರೆಯೋದು. ಈ ವಿಷಯದ ಬಗ್ಗೆ ಪುರುಷರೂ ಮಾತನಾಡುವಂತಾಗಬೇಕು ಎಂದು ನನ್ನ ಒತ್ತಾಯ.

ಆಧುನಿಕ ತಂತ್ರಜ್ಞಾನದ ಜಗತ್ತು ತಂದಿರುವ ಬದಲಾವಣೆ ಯಾವ ಬಗೆಯದ್ದು ಎಂದು ನಿಮ್ಮ ಭಾವನೆ?
ಇಂದು ಕಾರ್ಪೊರೇಟ್ ಪ್ರಪಂಚ ಹೆಣ್ಣಿಗೆ ಎಲ್ಲದನ್ನೂ ಕೊಟ್ಟುಬಿಟ್ಟಿರುವಂತೆ ಕಾಣಿಸುತ್ತದೆ. ಆದರೆ ಇದು ಜೆಂಡರ್ ಪಾಲಿಟಿಕ್ಸ್‌ಗಿಂತ ಹೆಚ್ಚಿನ ಕ್ರೌರ್ಯವನ್ನು ಹೆಣ್ಣುಮಕ್ಕಳ ವಿಷಯದಲ್ಲಿ ಈ ಕಾರ್ಪೊರೇಟ್ ಲೋಕ ತೋರಿಸುತ್ತಿರುವುದನ್ನು ಕಾಣುತ್ತೇವೆ. ಅಲ್ಲಿ ಒಂದು ಡಿಜೆಂಡರೈಜೇಷನ್ (ಲಿಂಗಸೂಕ್ಷ್ಮರಾಹಿತ್ಯತೆ-ಸಂ) ಕಾಣಿಸುತ್ತಿದೆ. ಗಂಡು ಹೆಣ್ಣು ಯಾವುದೂ ಅಲ್ಲ. ನೀನು ಕೆಲಸ ಮಾಡಿದೆಯೋ ಉಳಿದುಕೊಳ್ತೀಯ ಇಲ್ಲವೇ ತೆಗೆದು ಹಾಕೋದಷ್ಟೇ. ಇದು ಅಲ್ಲಿನ ಮೂಲಭೂತ ಪರಿಕಲ್ಪನೆ. ತನ್ನ ತಾಯಿತನದ ಮೂಲಭೂತ ಪ್ರಶ್ನೆಯನ್ನು ಇಟ್ಟುಕೊಂಡು ಆಕೆ ಕೆಲಸದಲ್ಲಿ ಗಂಡಿನ ಜೊತೆ ತನ್ನ ಸಮಾನ ಸ್ಪರ್ಧೆ ನಡೆಸಬೇಕಾಗಿದೆ. ಕೆಲಸ ಹಾಗೂ ತಾಯ್ತನಗಳಲ್ಲಿ ಆಯ್ಕೆಯ ಗೊಂದಲವೇ ಇಲ್ಲದಸವಾಲೂ ಇಲ್ಲದಹಾಗೂ ಆ ಎರಡರಲ್ಲಿ ಯಾವುದು ಒಂದನ್ನು ಆರಿಸಿಕೊಂಡರೂ ಅದು ತುಂಬ ನೋವಿನ ಅಯ್ಕೆಯಾಗಿರುತ್ತದೆ. ಯಾವುದನ್ನು ಆರಿಸಿಕೊಂಡರೂ ಅದರಲ್ಲಿ ಅವಳಿಗೆ ಸಂತೋಷ ಸಿಗುತ್ತಾದರೂ ಇನ್ನೊಂದು ಕಳೆದುಕೊಂಡ ದುಃಖ ಅವಳಿಗಿರುತ್ತದೆ. ಇದನ್ನು ಒಂದು ಮಾನವೀಯ ಹಿನ್ನೆಲೆಯಲ್ಲಿ ಈ ಕಾರ್ಪೊರೇಟ್ ವ್ಯವಸ್ಥೆ ನೋಡೋದೇ ಇಲ್ಲ. ತನ್ನ ಆತ್ಮ ಸ್ಥೈರ್ಯ ಉಳಿಸಿಕೊಂಡು,  vನ್ನ ಅನನ್ಯತೆಯನ್ನು ಉಳಿಸಿಕೊಂಡುತನ್ನ ಸುಖದ ಮೂಲಗಳನ್ನುಳಿಸಿಕೊಂಡು ಹೋಗೋದು ಆಕೆಯ ಪಾಲಿಗೆ ದೊಡ್ಡ ಸವಾಲಾಗಿದೆ. ಇದರಿಂದ ಆಧುನಿಕತೆಯಲ್ಲಿ ಯಾವುದು ಬಿಡುಗಡೆ ಎಂದು ಹೇಳುವುದು ಕಷ್ಟದ್ದು. ಹೀಗಿರುವಾಗ ತಾಯ್ತನದ ಸುಖ ಏನೂ ಅಲ್ಲಅದನ್ನು ಬಿಟ್ಟುಕೊಟ್ಟು ಬಿಡ್ತೀನಿ ಎಂದುಕೊಳ್ಳುವುದು ಆಕೆಗೆ ಸಾಧ್ಯವಾಗ್ತಾನೇ ಇಲ್ವಲ್ಲ. ಸಾಧ್ಯವಾಗಿಬಿಟ್ಟರೆ ಎಲ್ಲ ಸರಿಹೋಗಿಬಿಡುತ್ತೆ ಎಂದಲ್ಲ. ಆದರೆಅವಕಾಶ ಸಿಕ್ಕರೆ ಅದು ಎಲ್ಲರಿಗೂ ಬೇಕುಜಗತ್ತಿನ ಅಪೂರ್ವ ಸುಖ ಅದು ಎಂದು ಕಾಣುತ್ತೆ. ಅದು ಒಂದು ರೀತಿ ನಿಜವೂ ಹೌದು. ಮುಖ್ಯವಾಗಿ ಇಲ್ಲಿ ಆಕೆಯ ಎದುರಿಗಿರುವ ಸವಾಲೆಂದರೆ ಯಾವಾಗಲೂ ಕೆಲಸ ಮಾಡುವ ಮಹಿಳೆ ತನ್ನ ಮೇಲೆ ತಾನೇ ಒಂದು ಕೀಳರಿಮೆಯನ್ನು ಹೇರಿಕೊಳ್ತಾಳೆ. ತಾನೆಲ್ಲೋ ಇದನ್ನು ಸರಿಯಾಗಿ ನಿಭಾಯಿಸಲಿಲ್ಲವೇನೋಅದನ್ನು ಸರಿಯಾಗಿ ನಿಭಾಯಿಸಲಿಲ್ವೇನೋಎಂದು. ಯಾಕೆಂದರೆ ಈಗಾಗಲೇ ಸ್ಥಾಪಿತ ಪರಿಕಲ್ಪನೆಗಳು ನಮ್ಮ ಮನಸ್ಥಿತಿಯನ್ನು ಹಾಗೆ ರೂಪಿಸಿರುತ್ತವೆ. ಮಹಿಳೆ ಎಲ್ಲವನ್ನೂ ಸರಿಯಾಗಿ ತೂಗಿಸೋದಕ್ಕೆ ನೋಡುತ್ತಾಳೆ. ಆಕೆಗೆ ಧಾರಣ ಶಕ್ತಿ ಅಸಾಧಾರಣವಾಗಿರತ್ತೆ ಎನ್ನುವುದು ಬೇರೆ ವಿಷಯ. ಆದರೆ ಆ ಧಾರಣ ಶಕ್ತಿಗೆ ಸರಿಯಾದ ಬೆಂಬಲರಚನೆಯಿಲ್ಲದೇ ಹೋದಾಗ ಒಂದು ಸಮಯದಲ್ಲಿ ಆಕೆ ಕುಸಿದು ಹೋಗುತ್ತಾಳೆ.

ಇಂದು ಭ್ರಷ್ಟಾಚಾರದ ವಿಷಯ ಚರ್ಚೆಗೊಳಗಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?
ಇಂದು ಅತ್ಯಂತ ಭ್ರಷ್ಟ ಎಂದು ಹೇಳಲು ಒಂದು ವ್ಯಾಖ್ಯಾನ ಇದೆಯಾಇಂದು ಭ್ರಷ್ಟಾಚಾರವನ್ನು ಒಂದು ವ್ಯವಸ್ಥೆಯಾಗಿ ಒಪ್ಪಿಕೊಂಡುಬಿಟ್ಟಿರುವ ದುರಂತ ನಮ್ಮೆದುರಿಗಿದೆ. ಅಣ್ಣಾ ಹಜಾರೆಯಂತವರು ಆರಂಭಿಸಿರುವ ಚಳವಳಿ ಒಂದು ಆಶಾಕಿರಣವಾಗಿ ಕಾಣುತ್ತಿರುವುದು ನಿಜ. ಎಲ್ಲೋ ಜೆಪಿ ಶುರು ಮಾಡಿದ ತರದ ಚಳವಳಿ ಭವಿಷ್ಯದಲ್ಲಿ ಇದೆ ಎಂದೇ ನನ್ನ ಅನಿಸಿಕೆ. ನಾವು ಆಶಾವಾದಿಯಾಗಿರಲು ಎಲ್ಲೋ ಸಣ್ಣ ಅವಕಾಶವಿದೆ.

ಜಾತಿ ಸಮಾವೇಶಗಳು ಜರುಗುತ್ತಿವೆ. ಒಂದು ಜಾತಿ ಮಠಾಧೀಶರು ನೇರವಾಗಿ ಸರ್ಕಾರದ ರಕ್ಷಣೆಯಲ್ಲಿ ತೊಡಗಿದ್ದಾರಲ್ಲಾ?

ಇಂದು ಜಾತಿ ಎನ್ನುವುದು ಆಧುನಿಕತೆಯ ಒಂದು ಶಾಪವೇ ಅಲ್ಲವೇ?. ಆಧುನಿಕತೆಯ ಹಲವು ಶಾಪಗಳಲ್ಲಿ ಜಾತಿಯನ್ನು ವ್ಯವಸ್ಥೆಯ ಭದ್ರ ಭಾಗವಾಗಿಸಿದ್ದೂ ಒಂದು. ಹೇಗೆ ಕೋಮುವಾದ ಸಹ ಆಧುನಿಕತೆ ಮತ್ತು ವಿಜ್ಞಾನದ ನೆರವಿನಿಂದ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆಯೋ ಹಾಗೆ ಜಾತಿ ವಿಷಯದಲ್ಲೂ ಸಹ ಅದರ ಉಪ ಉತ್ಪನ್ನವಾಗಿದೆ.  ನಾವು ಮತ್ತೆ ಮತ್ತೆ ಜಾತಿ ವಿಷಯಕ್ಕೆ ಬರುತ್ತೇವೆಂದರೆ ಭಾರತದ ಮಟ್ಟಿಗೆ ಅದು ತೇಜಸ್ವಿ ಹೇಳುವ ರೀತಿಚರ್ಮವೇ ಆಗಿದೆ. ಅದು ಅಷ್ಟು ಸುಲಭವಾಗಿ ಹೋಗುವಂತಾದ್ದಲ್ಲ.

ಯಾವುದೇ ಒಂದು ಸಾಮಾಜಿಕ ಚಳವಳಿಯ ಅನುಪಸ್ಥಿತಿ ಸಾಹಿತ್ಯದ ಮೇಲೆ ಬೀರಿರುವ ಪರಿಣಾಮ ಎಂಥದು?
ಇಂದು ಒಂದು ಮೂರ್ತವಾದ ಚಳವಳಿ ಇಲ್ಲ. ಎಲ್ಲ ಚಳವಳಿಗಳನ್ನು ರೂಪಿಸುವುದು ಒಂದು ತಾತ್ವಿಕ ಆಕೃತಿಯೇ ಅಲ್ಲವೇ?. ಆದರೆ ಇಂದು ನಾವಿರುವ ಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲೇ ಯಾವುದೇ ಒಂದು ನಿರ್ದಿಷ್ಟ ತಾತ್ವಿಕ ಆಕೃತಿ ಮೆಲಿನ ನಂಬಿಕೆ ಎನ್ನುವುದು ಹೊರಟುಹೋಗಿದೆ. ಎಲ್ಲ ತಾತ್ವಿಕ ಆಕೃತಿಗಳು ಒಡೆದು ಹೋಗಿರುವ ಅಥವಾ ಎಲ್ಲವೂ ಸೇರಿ ಬೆರೆಯುತ್ತಿರುವ ಸನ್ನಿವೇಶ ಇದು. ಹೀಗೆ ಎಲ್ಲ ತಾತ್ವಿಕ ಆಕೃತಿಗಳು ಬೆರೆತು ಅಖಂಡವಾದ ಮಾನವೀಯ ನೆಲಯನ್ನು ಕಟ್ಟಿಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಒಂದು ಚಳವಳಿ ಎನ್ನುವುದು ಸ್ಪಷ್ಟ ರೂಪದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆಚಳವಳಿಗಳು ಇಲ್ಲದ ಕಾಲ ಒಂದು ಬರವಣಿಗೆಯಲ್ಲಿ ಯಾವತ್ತಾದರೂ ಇರುತ್ತೆ ಎಂದು ನನಗೆ ತೋರಿಬಂದಿಲ್ಲ. ಉದಾಹರಣೆಗೆ ತೇಜಸ್ವಿಯವರು ಒಮ್ಮೆ ಮಾತನಾಡುತ್ತಾ ಈ ಥಿಯರಿಗಳಿಗೆಲ್ಲಾ ನನಗೆ ಪ್ರವೇಶವೇ ಇಲ್ಲ ಎಂದರು. ಅದಕ್ಕೆ ನಾನು ಹೇಳಿದ್ದೆಹಾಗಿಲ್ಲವಾದರೆ ನಿಮ್ಮ ಕಿರಗೂರಿನ ಗಯ್ಯಾಳಿಗಳು ಓದಿ ಸ್ತ್ರೀವಾದಿ ಚರ್ಚೆ ಕಟ್ಟಿಕೋತೇನೆ ಬಿಡಿ ಎಂದಿದ್ದೆ. ಕೃತಿಯನ್ನು ಅವರು ಅರ್ಪಿಸಿರುವುದೂ ಸಹ ತಮ್ಮ ಆತ್ಮಗೌರವಕ್ಕಾಗಿ ಅವಿರತವಾಗಿ ಹೋರಾಡುತ್ತಿರುವ ಮಹಿಳೆಯರಿಗೆ’. ಅಲ್ಲಿ ಒಂದು ತತ್ವಶಾಸ್ತ್ರೀಯ ಮಂಡನೆ ಇಲ್ಲವೇಅವರು ಒಪ್ಪಿಕೊಳ್ಳದಿರಬಹುದು. ಲಂಕೇಶ್‌ಗೆ ಕೇಳಿದ್ದಿದ್ರೆ ನನಗೂ ಸಿದ್ಧಾಂತಕ್ಕೂ ಸಂಬಂಧವಿಲ್ಲ ಎಂತಲೇ ಅವರೂ ಹೇಳುತ್ತಿದ್ದರೇನೋ?

ಇಡೀ ಭಾರತವೇ ಒಂದು ದೊಡ್ಡ ಕಸಾಯಿಖಾನೆ’ : ನಾಗೇಶ್ ಹೆಗಡೆ







ನಾಗೇಶ್ ಹೆಗಡೆ ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಮುಖ ಹೆಸರು. ೨೫ ವರ್ಷಗಳ ಹಿಂದೆ ಪರಿಸರ ವಿಜ್ಞಾನ ವಿಷಯದಲಲಿ ದೇಶದಲ್ಲೇ ಮೊದಲ ಪ್ರಾಧ್ಯಾಪಕರಾಗಿ ನೈನಿತಾಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಇವರು ನಂತರ ಸೀದಾ ಕನ್ನಡ ಪತ್ರಿಕೋದ್ಯಮಕ್ಕೆ ದುಮುಕಿ ವಿಜ್ಞಾನ ವರದಿಗಾರರಾಗಿ’, ಬಾತ್ಮೀದಾರರಾಗಿ ಅಂಕಣಕಾರರಾಗಿ ವಿಜ್ಞಾನದ ಸತ್ಯಗಳನ್ನು ಕನ್ನಡಿಗರಿಗೆ ಅತ್ಯಂತ ಸರಳವಾಗಿ ತಿಳಿಸುತ್ತಾ ಬಂದಿರುವವರು. ನಮ್ಮಲ್ಲಿ ವೈಜ್ಞಾನಿಕ ಚಿಂತನೆಯನ್ನು ಸದಾ ಉದ್ದೀಪನಗೊಳಿತ್ತಾ ಬಂದಿರುವ ನಾಗೇಶ್ ಹೆಗಡೆಯವರು ಹಲವಾರು ವಿಷಯಗಳ ಕುರಿತು ಹಂಚಿಕೊಂಡಿದ್ದಾರೆ.

ಒಬಾಮ ಅಧಿಕಾರಕ್ಕೇರಿದಾಗಿನಿಂದ ಅಣ್ವಸ್ತ್ರ ಮುಕ್ತ ವಿಶ್ವಕ್ಕಾಗಿ ಕರೆ ನೀಡುತ್ತಲೇ ಇದ್ದಾರೆ. ಇತ್ತೀಚಿನ ಫುಕೋಸಿಮಾ ದುರಂತದ ಹಿನ್ನೆಲೆಯಲ್ಲಿ ಒಟ್ಟಾರೆ ಅಣುಶಕ್ತಿ ಬಳಕೆಯ ಬಗ್ಗೆ ಪುನರ್ ಚಿಂತನೆ ನಡೆಸಬೇಕಾದಅವಶ್ಯಕತೆಯಿದೆಯೆ?
-ಮರುಚಿಂತನೆ ಈಗಾಗಲೇ ಆರಂಭವಾಗಿದೆ. ಜಪಾನ್‌ನ ಒಟ್ಟೂ ವಿದ್ಯುತ್ ಉತ್ಪಾದನೆಯಲ್ಲಿ ಅಣುಶಕ್ತಿಯ ಪಾಲು ಶೇಕಡಾ ೩೦ರಷ್ಟಿತ್ತು. ಅದನ್ನು ಶೇ. ೫೦ಕ್ಕೆ ಏರಿಸಬೇಕೆಂದು ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಫುಕುಶಿಮಾ ದುರಂತದ ಅಂಥ ವಿಸ್ತರಣಾ ಯೋಜನೆಯನ್ನು ಮರುಪರಿಶೀಲನೆ ಮಾಡುವುದಾಗಿ ಜಪಾನಿನ ಪ್ರಧಾನ ಮಂತ್ರಿ ನವೊತೊ ಕಾನ್ ಮೊನ್ನೆ ಸಂಸದೀಯ ಸಮಿತಿಯ ಎದುರು ಹೇಳಿದ್ದಾರೆ. ಜರ್ಮನಿಯಂತೂ ಈಗಿನ ಸ್ಥಾವರಗಳನ್ನೂ ಕ್ರಮೇಣ ಮುಚ್ಚುವುದಾಗಿ ಘೋಷಿಸಿದೆ. ನಮ್ಮ ದೇಶದಲ್ಲಿ ಮಾತ್ರ ಅಂಥ ಸಾಧ್ಯತೆಗಳಿಲ್ಲ. ಏಕೆಂದರೆ ಈಚೆಗಷ್ಟೇ ಅಮೆರಿಕದೆದುರು ಮಂಡಿಯೂರಿ ಕೂತು ಗಾಣಕ್ಕೆ ಕೈಕೊಟ್ಟಿದ್ದಾಗಿದೆ. ಅಣುಸ್ಥಾವರಗಳ ಸುರಕ್ಷಾ ವಿಧಿವಿಧಾನಗಳ ಮರುಪರಿಶೀಲನೆ ಮಾಡಲಾಗುತ್ತದೆ ಎಂದೇನೋ ಹೇಳುತ್ತಿದ್ದಾರೆ- ಮಾಡುವವರು ಯಾರುಅದೇ ಅಣುಶಕ್ತಿ ಇಲಾಖೆಯ ತಜ್ಞರೇ ತಾನೆಈ ಆಶ್ವಾಸನೆಯನ್ನು ಜನತೆ ಹಾಗಿರಲಿಅಣುವಿಜ್ಞಾನಿಗಳೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದ್ದುದರಲ್ಲಿ ಕೊಂಚ ಸಮಾಧಾನದ ಸಂಗತಿ ಏನೆಂದರೆ ಅಣುಶಕ್ತಿ ನಿಯಂತ್ರಣ ಮಂಡಲಿ (ಎಇಆರ್‌ಬಿ)ಯನ್ನು ಅಣುಶಕ್ತಿ ಆಯೋಗದ ತೆಕ್ಕೆಯಿಂದ ಪ್ರತ್ಯೇಕಿಸಲು ನಿರ್ಧರಿಸಲಾಗಿದೆ. ಇಷ್ಟುವರ್ಷ ಎಇಆರ್‌ಬಿ ಎಂಬುದು ಹಲ್ಲಿಲ್ಲದ ಹಾವಿನಂತಿತ್ತು. ತನಗೆ ಸಂಬಳ ಕೊಡುವ ಯಜಮಾನನ ಮೇಲೆ ಕಣ್ಣಿಡಬೇಕಾದ ನೆಪಮಾತ್ರದ ಕೆಲಸ ಅದರದ್ದಾಗಿತ್ತು. ಇನ್ನುಮೇಲೆ ಅಣುಸ್ಥಾವರಗಳ ಆಗುಹೋಗುಗಳ ತಪಾಸಣೆ ಮಾಡುವ ಮಂಡಲಿಗೆ ಸ್ವತಂತ್ರ ಅಸ್ತಿತ್ವ ಸಿಗಲಿದೆ. 
ಜಾಗತಿಕ ತಾಪಮಾನ ಅಪಾಯಕಾರಿ ಮಟ್ಟ ತಲುಪುತ್ತಿದೆ. ಆದರೆಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅದಕ್ಕೆ ಹೆಚ್ಚು ಹೊಣೆಗಾರರಾಗಿರುವ ಅಮೆರಿಕ ಮತ್ತು ಚೀನಾದಂತಹ ರಾಷ್ಟ್ರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳು ತೃಪ್ತಿದಾಯಕವಾಗಿವೆಯೆ?
-ಅಮೆರಿಕವನ್ನು ಬಿಡಿಅದರ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ (ಸೀನಿಯರ್) ನಾನು ಅಮೆರಿಕಕ್ಕೆ ಅಧ್ಯಕ್ಷನೇ ವಿನಾ ಜಗತ್ತಿನ ಅಧ್ಯಕ್ಷ ಅಲ್ಲ’ ಎಂದು ರಿಯೊ ಶೃಂಗಸಭೆಗೆ ಬಂದಿದ್ದಾಗ ಘೋಷಿಸಿದ್ದರು. ಇಂದಿಗೂ ಅಲ್ಲಿನ ಅಧ್ಯಕ್ಷರ ಧೋರಣೆ ಅದೇ ಇದೆ: ಜಗತ್ತು ಎಕ್ಕುಟ್ಟಿ ಹೋದರೆ ಹೋಗಲಿತನ್ನ ದೇಶದ ಹಿತಾಸಕ್ತಿಗೆ ಏನೂ ಧಕ್ಕೆ ಆಗಬಾರದು ಎಂದು. ಇನ್ನುಇತ್ತ ಚೀನಾ ದೇಶವಂತೂ ಸಂಪನ್ಮೂಲ ಕಬಳಿಕೆ ಮತ್ತು ದುಂದುವೆಚ್ಚದಲ್ಲಿ ಅಮೆರಿಕವನ್ನು ಸರಿಗಟ್ಟಲೆಂದೇ ದಾಂಗುಡಿ ಇಡುತ್ತಿದೆ. ಆದರೆ ಮುಂದೆಯೂ ಇದೇ ಧೋರಣೆ ಇರತ್ತದೆಂದು ಹೇಳುವಂತಿಲ್ಲ. ಅಮೆರಿಕದಲ್ಲಿ ಕ್ಯಾಲಿಫೋರ್ನಿಯಾದಂಥ ರಾಜ್ಯಗಳು ಅಕ್ಷಯ ಶಕ್ತಿಮೂಲಗಳ ಅಭಿವೃದ್ಧಿಗೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿವೆ. ಕೆಲವು ಹೊಸ ವಾಣಿಜ್ಯ ಕಂಪನಿಗಳು ಈ ನಿಟ್ಟಿನ ಸಂಶೋಧನೆಗೆ ಅಪಾರ ಹಣವನ್ನು ಸುರಿಯುತ್ತಿವೆ. ಚೀನಾ ಕೂಡಾ ಸೌರಶಕ್ತಿಗಾಳಿಶಕ್ತಿಗೆ ತುಂಬ ದೊಡ್ಡ ಮೊತ್ತವನ್ನೇ ವಿನಿಯೋಗಿಸಲು ಹೊರಟಿದೆ. ಈ ಚೀನೀಯರು ಮನಸ್ಸು ಮಾಡಿದರೆ ಜಗತ್ತಿನ ದಿಶೆಯನ್ನೇ ಬದಲಿಸುತ್ತಾರೆಒಳ್ಳೆಯದಕ್ಕೊ ಕೆಟ್ಟದ್ದಕ್ಕೊ’ ಎನ್ನುತ್ತಾರೆಚೀನಾದ ಅಭಿವೃದ್ಧಿಯ ಬ್ರಹ್ಮರೂಪವನ್ನು ಅಧ್ಯಯನ ಮಾಡುತ್ತಿರುವ ಪತ್ರಕರ್ತ ಜೋನಾಥನ್ ವಾಟ್ಸ್. ?
ಜಗತ್ತಿನ ಪರಿಸರದ ಅಸಮತೋಲನಗಳಿಗೆ ಮೂಲ ಕಾರಣಗಳೇನುಪರಿಸರ ರಕ್ಷಣೆ ಸಾಧ್ಯವಾಗುವ ಬಗೆ ಹೇಗೆ?
ಅಸಮತೋಲಕ್ಕೆ ಅನೇಕ ಕಾರಣಗಳಿವೆ. ವಿಕಾಸ ಮಾರ್ಗದಲ್ಲಿ ನಾವಿನ್ನೂ ಅಂಬೆಗಾಲಿನ ಬಚ್ಚಾಗಳು. ನಮಗಿಂತ ೨೫೦ ಕೋಟಿ ವರ್ಷಗಳ ಹಿಂದೆಯೇ ವಿಕಾಸಗೊಂಡು ಸಮತೋಲ ಸಾಧಿಸಿದ ಜೀವಿಗಳನ್ನು ನಾವು ಮೂಲೆಗುಂಪು ಮಾಡಿ ಮೇಲುಗೈ ಸಾಧಿಸಲು ಹೊರಟಿದ್ದೇವೆ. ಪ್ರಕೃತಿಯೇ ಹೂತು ಬಚ್ಚಿಟ್ಟಿದ್ದ ಅಪಾಯಕಾರಿ ದ್ರವ್ಯಗಳನ್ನು (ಪೆಟ್ರೊಲಿಯಂಪಾದರಸಕಲ್ನಾರುಕಲ್ಲಿದ್ದಲುಆರ್ಸೆನಿಕ್ಯುರೇನಿಯಂ ಇತ್ಯಾದಿಗಳನ್ನು) ಹೊರಕ್ಕೆಳೆದು ಅವಸರದಲ್ಲಿ ಸುಸ್ಥಿರವಲ್ಲದ ತಂತ್ರಜ್ಞಾನವನ್ನು ರೂಪಿಸಿ ಇಡೀ ಜಗತ್ತಿಗೆ ಹಂಚಿದ್ದೇವೆ. ಮೋಟಾರು ವಾಹನ ಇರಲಿವಿದ್ಯುತ್ ಉತ್ಪಾದನ ತಂತ್ರ ಇರಲಿಮನೆಬಳಕೆಯ ಬುರುಡೆ ಬಲ್ಬ್ ಇರಲಿಅದು ಅಪಾಯವೆಂದು ಗೊತ್ತಿದ್ದರೂಲಾಭಕೋರ ಬಂಡವಾಳಶಾಹಿ ಶಕ್ತಿಗಳು ಅದರಿಂದ ನಿರಂತರ ಲಾಭವನ್ನು ಮೊಗೆಯುತ್ತಲೇ ಇದ್ದಾರೆ. ಇಂದು ಇಡೀ ಮನುಕುಲವೇ ಪೆಟ್ರೊದೊರೆಗಳ ಬಿಗಿಮುಷ್ಟಿಯಲ್ಲಿ ಸಿಲುಕಿದೆ. ಡೀಸೆಲ್,ಪೆಟ್ರೊಲ್ಕಲ್ಲಿದ್ದಲು ಬಿಟ್ಟು ಯಾರೂ ಬದುಕಲು ಸಾಧ್ಯವೇ ಇಲ್ಲವೆಂಬಂಥ ಸ್ಥಿತಿಗೆ ನಾವೆಲ್ಲ ತಲುಪಿದ್ದೇವೆ. ಅದು ನಾನಾ ಬಗೆಯ ಅಸಮತೋಲಗಳನ್ನು ಸೃಷ್ಟಿ ಮಾಡುತ್ತಲೇ ಹೋಗುತ್ತದೆ. ಬದಲೀ ಶಕ್ತಿಮೂಲಗಳ ಅಭಿವೃದ್ಧಿಗೆ ಈ ದೊರೆಗಳೇ ಇನ್ನಿಲ್ಲದ ಅಡ್ಡಗಾಲು ಹಾಕುತ್ತಿದ್ದಾರೆ. ಅವರನ್ನು ಧಿಕ್ಕರಿಸಬಲ್ಲ ರಾಜಕೀಯ ಮುತ್ಸದ್ದಿಗಳು ನಮಗಿಂದು ಬೇಕಾಗಿದ್ದಾರೆ.

ವಿಜ್ಞಾನ-ತಂತ್ರಜ್ಞಾನ ಬೆಳೆದಂತೆಲ್ಲಾ ಮೂಢನಂಬಿಕೆ ಕಡಿಮೆಯಾಗಬೇಕಿತ್ತು. ಆದರೆಅದೇ ವಿಜ್ಞಾನ ತಂತ್ರಜ್ಞಾನಗಳನ್ನು ಬಳಸಿಕೊಂಡು ಮೂಢನಂಬಿಕೆಗಳು ಹಿಂದಿಗಿಂತ ಜೋರಾಗಿ ಹರಡುತ್ತಿವೆ. ಉದಾಹರಣೆಗೆ, ಜೋತಿಷ್ಯ,ವಾಸ್ತುಗಳಂತಹ ಕಾರ್ಯಕ್ರಮಗಳು ಪ್ರತೀದಿನ ಟಿವಿಯಲ್ಲಿ ಪ್ರಸಾರವಾಗುತ್ತಿರುವುದುಆನ್‌ಲೈನ್ ಮೂಲಕ ಪೂಜೆ ಸಲ್ಲಿಸುವುದು ಇತ್ಯಾದಿ. ಹಾಗಿದ್ದರೆ ಇದಕ್ಕೆ ಪರಿಹಾರವೇನುಹೀಗಾಗುತ್ತಿರುವುದು ವಿಜ್ಞಾನದ ವೈಫಲ್ಯವೇ?
ಮೂಢನಂಬಿಕೆ ದಿನದಿನಕ್ಕೆ ಹೆಚ್ಚುತ್ತಿರುವುದು ವಿಜ್ಞಾನದ ವೈಫಲ್ಯವಲ್ಲ. ಮಾಧ್ಯಮಗಳ ವೈಫಲ್ಯ.  ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳಲು ಚಾನೆಲ್‌ಗಳಲ್ಲಿ ಕೀಳುಪೈಪೋಟಿ ಹೆಚ್ಚುತ್ತಿದೆ. ಅದಕ್ಕೇ ಟಿವಿಯನ್ನು ಮೂರ್ಖರ ಪೆಟ್ಟಿಗೆಎಂದು ಕರೆದಿದ್ದು. ದೃಶ್ಯಮಾಧ್ಯಮದೊಂದಿಗೆ ಪಂದ್ಯಕ್ಕಿಳಿದಂತೆ ಮುದ್ರಣ ಮತ್ತು ಧ್ವನಿ ಮಾಧ್ಯಮಗಳೂ ಮೂಢನಂಬಿಕೆಗಳನ್ನು ಬಿತ್ತುತ್ತಿವೆ. ಅದು ದುರದೃಷ್ಟಕರ. 
ಪ್ಲಾಸ್ಟಿಕ್ ಮೇಲಿನ ನಮ್ಮ ಅವಲಂಬನೆ ವಿಪರೀತವಾಗಿರುವ ಸಂದರ್ಭದಲ್ಲಿ ನಿಜಕ್ಕೂ ಪ್ಲಾಸ್ಟಿಕ್ ಮುಕ್ತ ವಿಶ್ವ ಆಚರಣಾತ್ಮಕವಾಗಿ ಸಾಧ್ಯವೆಅಲ್ಲದೇದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಪರಿಸರದ ಮೇಲೆ ವ್ಯಾಪಕ ಅತ್ಯಾಚಾರ ಮಾಡುತ್ತಿರುವಾಗ ಪ್ಲಾಸ್ಟಿಕ್ ತ್ಯಜಿಸಿಯಂತಹ ಘೋಷಣೆಗಳು ಕ್ಲೀಷೆಯಲ್ಲವೇ?

ಸಸ್ಯಮೂಲಗಳಿಂದಲೂ ಪ್ಲಾಸ್ಟಿಕ್ ತಯಾರಿಸಬಹುದು. ಜೋಳದ ಹಿಟ್ಟಿನ ಪ್ಲಾಸ್ಟಿಕ್‌ನಿಂದ ತಯಾರಿಸಿದ ರೀಫಿಲ್ ಪೆನ್ನೊಂದನ್ನು ೨೦ ವರ್ಷಗಳ ಹಿಂದೆಯೇ ಬ್ರಝಿಲ್‌ಗೆ ಹೋಗಿದ್ದಾಗ ನನಗೊಬ್ಬರು ಕೊಟ್ಟಿದ್ದರು (ಅದನ್ನು ಜಿರಲೆಗಳು ತಿಂದು ಮುಗಿಸಿದವು ಆ ಮಾತು ಬೇರೆ). ಸಸ್ಯಮೂಲದಿಂದ ಪ್ಲಾಸ್ಟಿಕ್ ತಯಾರಿಕೆಗೆ ಉತ್ತೇಜನ ಕೊಟ್ಟರೆಅದಕ್ಕೆಂದೇ ನಾವು ದೇಶದ ಬಂಜರುಭೂಮಿಗಳಲ್ಲಿ ವನಗಳನ್ನು ಸೃಷ್ಟಿಸಬಹುದು. ಈಗಿರುವ ವಿದೇಶೀ ಕಚ್ಚಾವಸ್ತುವನ್ನೂ ತಂತ್ರಜ್ಞಾನವನ್ನೂ ಆಧರಿಸಿದ ದೊಡ್ಡ ಫ್ಯಾಕ್ಟರಿಗಳ ಬದಲು ಗ್ರಾಮಮಟ್ಟದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಆರಂಭಿಸಬಹುದು. ಅಂಥ ಪ್ಲಾಸ್ಟಿಕ್ ಬಿಸಾಕಿದಲ್ಲೇ ಕ್ರಮೇಣ ಕೊಳೆಯುವುದರಿಂದ ಸಸ್ಯಗಳಿಗೆ ಉತ್ತಮ ಗೊಬ್ಬರವೂ ಆಗುತ್ತದೆ. ಈ ಹಿಂದೆ ಹೇಳಿದ ಪೆಟ್ರೊದೊರೆಗಳ ಬಿಗಿಮುಷ್ಟಿಯನ್ನು ಧಿಕ್ಕರಿಸಿ ಅಂಥ ಕ್ರಾಂತಿಕಾರಿ ತಂತ್ರಜ್ಞಾನಕ್ಕೆ ನೀರೆರೆದು ಪೋಷಿಸಬಲ್ಲ ಮುತ್ಸದ್ದಿಗಳು ನಮಗೆ ಬೇಕಿದ್ದಾರೆ. 
ಇಂದು ತಂತ್ರಜ್ಞಾನದ ಪ್ರಗತಿಯೊಂದಿಗೆ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚುತ್ತಿರುವುದರ ಪರಿಣಾಮಗಳೇನು?
-ಗಾಂಧೀಜಿಯವರು ಸಾಕಾರಗೊಳಿಸಿದ್ದ ಸರಳ ಬದುಕುಸಂಪನ್ನ ಚಿಂತನೆಯ ಮಾರ್ಗವನ್ನು ಗಾಂಧೀವಾದಿಗಳೂ ಅನುಸರಿಸುವುದು ಕಷ್ಟಕರವಾಗಿದೆ.  ಆದಷ್ಟು ಬೇಗಆದಷ್ಟು ಹೆಚ್ಚು ಹಣ ಗಳಿಸಬೇಕೆಂಬ ಭೋಗಪಿಪಾಸು ಸಮಾಜವನ್ನು ನಾವು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಆರ್ಥಿಕ ಅಸಮಾನತೆ ಇರುವ ನಮ್ಮ ದೇಶದಲ್ಲಿ ಕೆಲವರ ಶೋಕಿ ಬದುಕು ಇನ್ನುಳಿದವರ ಮನೋವಿಕಾರಗಳನ್ನು ಉಗ್ರಗೊಳಿಸುತ್ತದೆ ವಿನಾ ಸಮಾಜದಲ್ಲಿ ಶಾಂತಿ ನೆಲೆಸಲು ಬಿಡುವುದಿಲ್ಲ. ಪಾಶ್ಚಿಮಾತ್ಯ ಸಮಾಜದಲ್ಲಿ ತಂತ್ರಜ್ಞಾನದ ಆಗಮನ ನಿಧಾನವಾಗಿತ್ತು. ಜನರು ಅದರೊಂದಿಗೆ ಏಗುವುದನ್ನು ಕಲಿಯಲು ಸಾಕಷ್ಟು ಸಮಯವಿತ್ತು. ಅದಕ್ಕೆ ಹೊಂದುವಂಥ ಆರ್ಥಿಕತೆಯನ್ನುಸಂಸ್ಕೃತಿಯನ್ನು ರೂಪಸಿಕೊಳ್ಳಲು ಸಾಧ್ಯವಿತ್ತು. ಆದ್ದರಿಂದಲೇ ಇಂದು ಪಾಶ್ಚಾತ್ಯ ಪ್ರಪಂಚದಲ್ಲಿ ಸುಖ’ ’ಸೌಂದರ್ಯ’ ಮತ್ತು ನೆಮ್ಮದಿಯ ವ್ಯಾಪ್ತಿ ತುಂಬಾ ವಿಶಾಲವಾಗಿದೆ. ಅದು ಕೇವಲ ಮನೆಯೊಳಗಿನ ಸೌಕರ್ಯಗಳಿಗೆ ಸೀಮಿತವಾಗಿಲ್ಲ. ಮನೆಯಾಚಿನ ಫುಟ್‌ಪಾತ್ರಸ್ತೆಅದರಂಚಿನ ವಿದ್ಯುತ್ ಕಂಬಅದರಾಚಿನ ಉದ್ಯಾನಅದರಾಚಿನ ಹಳ್ಳಕೊಳ್ಳಗುಡ್ಡ ಬೆಟ್ಟಗಳನ್ನೂ ಕಲ್ಮಶರಹಿತವಾಗಿಸುಂದರವಾಗಿಉಲ್ಲಾಸದ ಸೆಲೆಯಾಗಿ ಇಟ್ಟುಕೊಳ್ಳಬೇಕೆಂಬ ತುಡಿತ ಅಲ್ಲಿ ಕಾಣುತ್ತದೆ. ನಮ್ಮಲ್ಲಿ ಹಾಗೆ ಆಗುತ್ತಿಲ್ಲ. ತಂತ್ರಜ್ಞಾನ ಆಧರಿತ ಪ್ರಗತಿ ನಮ್ಮತ್ತ ತೀರಾ ಅವಸರದಲ್ಲಿ ನುಗ್ಗಿದೆ. ಸಾಮಗ್ರಿಗಳನ್ನು ಖರೀದಿಸಿದ ವೇಗದಲ್ಲೇ ಬಿಸಾಕುವ ಪ್ರವೃತ್ತಿ ಹೆಚ್ಚುತ್ತಿದೆ. ನೀರುಖನಿಜಕಲ್ಲುಮರಳು,ದಿಮ್ಮಿರಬ್ಬರ್ಪ್ಲಾಸ್ಟಿಕ್ಗಾಜುಕಾಗದರಟ್ಟುಪಿಂಗಾಣಿಕುರಿಕೋಳಿಹಂದಿ ಎಲ್ಲವೂ ನಗರಗಳತ್ತ ಬೆಟ್ಟದೋಪಾದಿಯಲ್ಲಿ ಸಾಗಿ ಬರುತ್ತಿವೆ. ಅಷ್ಟೇ ಬೆಟ್ಟದೋಪಾದಿಯಲ್ಲಿ ತ್ಯಾಜ್ಯವಸ್ತುಗಳು ನಗರದಾಚಿನ ತಗ್ಗುಗುಂಡಿಗಳನ್ನು ಸೇರುತ್ತಿವೆ. 
ಪ್ರತಿಭಾನ್ವಿತರೆಲ್ಲಾ ವೃತ್ತಿಪರ ಕೋರ್ಸುಗಳ ಬೆನ್ನುಹತ್ತಿರುವುದರಿಂದಲಕ್ಷಾಂತರ ರೂಪಾಯಿ ಸಂಬಳ ಕೊಡುವ ವೃತ್ತಿಗಳ ಹಿಂದೆ ಬಿದ್ದಿರುವುದರಿಂದ ಮೂಲ ವಿಜ್ಞಾನದ ಬೆಳವಣಿಗೆ ಕುಂಠಿತವಾಗಿದೆ ಅನ್ನಿಸುವುದಿಲ್ಲವೆ?
- (ಈ ಪ್ರಶ್ನೆಗೆ ಚಿಕ್ಕ ಉತ್ತರ ಕೊಡಲು ಸಾಧ್ಯವಿಲ್ಲಬೇರೆ ಪ್ರಶ್ನೆ ಕೇಳಿ)
ನಮ್ಮಲ್ಲಿ ವಿಜ್ಞಾನ ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಂಡಿಸುವವರು ತೀರಾ ವಿರಳ. ಈ ಪರಿಸ್ಥಿತಿ ಏಕಿದೆ ಹಾಗೂ ಪರಿಹಾರವೇನು?
-ವಿಜ್ಞಾನ ತೀರಾ ವೇಗದಲ್ಲಿ ಬಹು ಆಯಾಮಗಳಲ್ಲಿ ಬೆಳೆಯುತ್ತಿದೆ. ಬೆಳೆಯುತ್ತ ಹೋದಂತೆ ಅದು ತನ್ನದೇ ತಾಂತ್ರಿಕ ಪರಿಭಾಷೆಗಳನ್ನು ಸೃಷ್ಟಿಸಿಕೊಳ್ಳುತ್ತ ಹೋಗುತದೆ. ಜನಸಾಮಾನ್ಯರಿಗೆ ಅಷ್ಟೇ ಅಲ್ಲಭೌತ ವಿಜ್ಞಾನದ ಹೊಸ ಸಂಶೋಧನೆಗಳನ್ನು ಸಸ್ಯವಿಜ್ಞಾನಿಗೆ ಅರ್ಥವಾಗುವಂತೆ ವಿವರಿಸುವುದು ಕಷ್ಟವಾಗುತ್ತಿದೆ. ಹೃದಯದ ಬಗ್ಗೆ ಮಾತಾಡುವಾಗ ನಾವು ರಕ್ತನಾಳ’ ’ಕವಾಟ’ ಎರಡು ಪದಗಳನ್ನಷ್ಟೇ ಬಳಸುತ್ತೇವೆ. ಹತ್ತನೆಯ ತರಗತಿಯ ವಿದ್ಯಾರ್ಥಿ ಕಷ್ಟಪಟ್ಟು ಅಭಿಧಮನಿ’, ’ಅಪಧಮನಿ’, ’ಹೃತ್‌ಕುಕ್ಷಿ’ ಮುಂತಾದ ಹತ್ತೆಂಟು ಪದಗಳನ್ನು ಉರುಹಾಕಿ ಆಮೇಲೆ ಮರೆತುಬಿಡುತ್ತಾನೆ. ಇಬ್ಬರು ಹೃದ್ರೋಗತಜ್ಞರ ಸಂಭಾಷಣೆಯಲ್ಲಿ ಅದೇ ಮುಷ್ಟಿಗಾತ್ರದ ಹೃದಯದ ಬಗ್ಗೆ ೨೮-೩೦ ಪದಗಳ ಬಳಕೆಯಾಗುತ್ತದೆ. ಅದು ಭಾಷೆಯ ಪ್ರಶ್ನೆಯಲ್ಲ. ಜ್ಞಾನರಂಗದಲ್ಲಿ ನಮ್ಮ ಒಡನಾಟದ ಪ್ರಶ್ನೆ. ನನಗೆ ಈಗಲೂ ಆಯುರ್ವೇದ ತಜ್ಞರು ಬಳಸುವ ವಾಯು’ ’ಶೀತ’, ’ಧಾತು’ ಮುಂತಾದ ಪದಗಳು ಅರ್ಥವಾಗುವುದಿಲ್ಲ. ಹಾಗೆಯೇ ಕುಂಡಲಿ ಬರೆಯುವವರ ಕುಜ’, ’ಅಂಗಾರಕ’, ’ಶನಿಗಳು ಅರ್ಥವಾಗುವುದಿಲ್ಲ. ಅದರಿಂದ ನನಗೆ ಹಾನಿಯೇನೂ ಇಲ್ಲವಲ್ಲ!
ವೈದ್ಯಕೀಯಎಂಜಿನಿಯರಿಂಗ್ ಮತ್ತು ಇನ್ನಿತರ ಉನ್ನತ ವಿಷಯಗಳನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಬೋಧಿಸುವುದು ಸಾದ್ಯವಿಲ್ಲ ಎಂಬ ವಾದವಿದೆಯಲ್ಲನಿವೇನಂತೀರಾ?
-ಪ್ರಾದೇಶಿಕ ಪದಗಳನ್ನು ಬಳಸುವುದು ಸಾಧ್ಯವಿಲ್ಲಒಪ್ಪುತ್ತೇನೆ. ಇಂದು ತಾಂತ್ರಿಕ ರಂಗದಲ್ಲಿ ಬಲುಶೀಘ್ರವಾಗಿ ಹೊಸ ಹೊಸ ಪದಗಳು ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿ ತ್ವರಿತವಾಗಿ ಎಲ್ಲೆಡೆ ಬಳಕೆಗೆ ಬರುತ್ತಿದೆ. ಅದನ್ನು ಬದಿಗಿಟ್ಟು ಮಾತೃಭಾಷೆಯಲ್ಲಿ ಪದಗಳನ್ನು ಟಂಕಿಸುತ್ತ ಕೂರುವಷ್ಟು ವ್ಯವಧಾನ ಇಲ್ಲ. ಜಪಾನೀ ಭಾಷೆಯಲ್ಲೂ ಅದು ಸಾಧ್ಯವಿಲ್ಲರಷ್ಯನ್ ಭಾಷೆಯಲ್ಲೂ ಸಾಧ್ಯವಿಲ್ಲ. ಉದಾಹರಣೆಗೆ ಕ್ರಯೊಜೆನಿಕ್ಸ್’ ಎಂಬ ಪದವನ್ನು ಜಪಾನೀ ಭಾಷೆಯಲ್ಲೂ ರಷ್ಯನ್ ಭಾಷೆಯಲ್ಲೂ ಬಳಸುತ್ತಾರೆ. ವೈದ್ಯಕೀಯ ಮತ್ತು ತಂತ್ರಜ್ಞಾನ ಎರಡೂ ರಾಜ್ಯ-ರಾಷ್ಟ್ರಗಳ ಗಡಿಯನ್ನು ಮೀರಿ ತಮ್ಮದೇ ಜ್ಞಾನವಲಯವನ್ನು ನಿರ್ಮಿಸಿಕೊಂಡು ಬೆಳೆಯುತ್ತಿವೆ. ಹೀಗಾಗಿ ವೃತ್ತಿಪರ ಕಾಲೇಜ್‌ಗಳಲ್ಲಿ ಕನ್ನಡ ನಶಿಸುತ್ತದೆ ಎಂದು ಅಳುತ್ತ ಕೂರುವುದು ಸರಿಯಲ್ಲ. ಕನ್ನಡ ನಮ್ಮ ನಮ್ಮ ಮನೆಯಲ್ಲೇಟಿವಿ ಇರುವ ಹಾಲ್‌ನಲ್ಲಿಮೊಬೈಲ್ ಇರುವ ಕೈಯಲ್ಲಿ ಸೋಲುತ್ತಿದೆ. ಅದರ ಬಗ್ಗೆ ನಮಗೆ ಆತಂಕ ಇರಬೇಕು. ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕನ್ನಡ ಭಾಷೆಲಿಪಿ ಸಲೀಸಾಗಿ ಸಂವಹನ ಆಗುತ್ತಿಲ್ಲ. ಗೂಗಲ್‌ನಲ್ಲಿ ತಮಿಳು ತೆಲುಗು ಓಡಾಡಿದಷ್ಟು ಸರಾಗವಾಗಿ ಕನ್ನಡ ಓಡಾಡುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಕ್ರಿಯಾಶೀಲತೆ ಹೆಚ್ಚಬೇಕು.   
ಇಂದು ಶ್ರೀಮಂತ ದೇಶಗಳು ಭಾರತವನ್ನು ಸುರಿಹೊಂಡ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳೇನು?
-ಬರಡು ದನಗಳನ್ನು ಡೇರಿಪತಿಗಳು ಕಸಾಯಿಖಾನೆಗೆ ಸಾಗಿಸಿ ಕೈತೊಳೆದುಕೊಳ್ಳುವುದಿಲ್ಲವೆಅದೇರೀತಿ ಶ್ರೀಮಂತ ದೇಶಗಳು ತಮ್ಮಲ್ಲಿರುವ ಹಳೇ ಹಡಗುಗಳನ್ನುಹಳೇ ಯಂತ್ರಗಳನ್ನುಹಳಸಲು ತಿಪ್ಪೆಗಳನ್ನು ನಮ್ಮತ್ತ ತಳ್ಳುತ್ತಾರೆ. ನಮ್ಮದೇ ಬೆಟ್ಟದೆತ್ತರ ಕಚಡಾವಸ್ತುಗಳ ಜತೆಗೆ ವಿದೇಶೀ ತ್ಯಾಜ್ಯಗಳೂ ಸೇರಿ ಇಡೀ ಭಾರತವೇ ಒಂದು ದೊಡ್ಡ ಕಸಾಯಿಖಾನೆ ಆಗುತ್ತಿದೆ. ನಮ್ಮಲ್ಲಿ ಉದ್ಯೋಗದ ಅಭಾವವಿದೆಎಂಥ ತುಚ್ಛ ಕೆಲಸವನ್ನೂ ಮಾಡಲು ತಯಾರಿರುವ ಅಶಿಕ್ಷಿತ ಬಡಜನರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಅಪಾಯಕಾರಿ ತ್ಯಾಜ್ಯಗಳು ಬಾರದಂತೆ ತಡೆಯಬಲ್ಲ ಅಧಿಕಾರಿಗಳಲ್ಲಿ ಭ್ರಷ್ಟರ ಸಂಖ್ಯೆಯೂ ದೊಡ್ಡದಿದೆ. ತ್ಯಾಜ್ಯ ಸಂಸ್ಕರಣೆ ಮಾಡುವಲ್ಲಿ ಸುರಕ್ಷಾ ಕ್ರಮಗಳನ್ನು ಬಿಗಿ ಇಡಲು ಬೇಕಾದ ಕಾನೂನುಗಳು ಬಲಿಷ್ಠವಾಗಿವೆ. ಆದರೆ ಕಾನೂನು ಪಾಲನೆಯಲ್ಲಿ ನಾವು ಸೋಲುತ್ತಿದ್ದೇವೆ. ಇದರಿಂದ ಉಂಟಾಗುವ ಸಮಸ್ಯೆಗಳು ಎಲ್ಲೋ ಹಳ್ಳಕೊಳ್ಳದಿಂದೆದ್ದು ನಮ್ಮ ಬಾಗಿಲನ್ನೂ ಬಡಿಯುತ್ತಿವೆ. ನಾವು ನಿತ್ಯಬಳಸುವ ಅದೆಷ್ಟೊ ಸರಕು ಸಾಮಗ್ರಿಗಳುಆಹಾರ ಧಾನ್ಯಗಳು ಯಾವ ದೇಶದ ತ್ಯಾಜ್ಯಗಳೊ ನಮಗಂತೂ ಗೊತ್ತಾಗುವುದಿಲ್ಲಆದರೆ ಸಕ್ಕರೆ ಕಾಯಿಲೆಹೃದ್ರೋಗರಕ್ತದೊತ್ತಡಕಿಡ್ನಿ ವೈಫಲ್ಯವೇ ಮುಂತಾದ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದೆ. ಸಕ್ಕರೆ ಕಾಯಿಲೆ ಮತ್ತು ಹೃದ್ರೋಗಿಗಳ ಸಂಖ್ಯೆಯಲ್ಲಿ ನಾವು ಈಗಾಗಲೇ ಜಗತ್ತಿನ ಮೊದಲ ಸ್ಥಾನವನ್ನು ಅಲಂಕರಿಸಿದ್ದೇವೆ.

ಜಾಗತೀಕರಣದ ಮೂರನೆಯ ಹಂತದ ಸುಧಾರಣೆಗಳ ಈ ದಿನಗಳಲ್ಲಿ ನಮ್ಮ ಗ್ರಾಮಗಳಲ್ಲಿನ ಕೃಷಿಬದುಕು ಯಾವ ಬಗೆಯ ಪರಿಣಾಮಗಳನ್ನು ಎದುರಿಸುತ್ತಿದೆ.

-ನಮ್ಮ ಅಶಿಕ್ಷಿತಅಸ್ವಸ್ಥಗರೀಬ ಕೃಷಿಕರನ್ನು ಹಠಾತ್ತಾಗಿ ಜರ್ಮನಿಯ ಅಥವಾ ಇಸ್ರೇಲಿನ ಕೃಷಿ ಕಂಪನಿಗಳ ಜತೆ ಕುಸ್ತಿಗೆ ಇಳಿಸುತ್ತಿದ್ದೇವೆ. ನಮ್ಮ ಕೃಷಿಕರು ಜಗತ್ತಿನ ಯಾವುದೇ ದೇಶದ ಕೃಷಿಕರ ಜತೆಗೆ ಪೈಪೋಟಿಗೆ ಇಳಿದುಧಾನ್ಯ ಉತ್ಪಾದಿಸಿಮಾರುಕಟ್ಟೆಯಲ್ಲಿ ಸೆಣಸಿ ತಮ್ಮ ಉತ್ಪಾದನೆಯನ್ನು ಮಾರಬೇಕಾಗಿ ಬಂದಿದೆ. ಸಹಜವಾಗಿ ನಮ್ಮವರ ಸೋಲು ಹೆಜ್ಜೆ ಹೆಜ್ಜೆಗೂ ಕಾಣುತ್ತಿದೆ.  ಕೃಷಿಕರು ಸಾಲು ಸಾಲಾಗಿ ಕೂಲಿಗಳಾಗಿಪರಿಸರ ನಿರಾಶ್ರಿತರಾಗಿ ನಗರಗಳತ್ತ ಸಾಗಿ ಬರುತ್ತಿದ್ದಾರೆ. ಕೃಷಿಕರ ಸಾಲ ಮನ್ನಾ ಬೇರೆ, ’ಸಬಲೀಕರಣ’ ಬೇರೆ. ನಮ್ಮಲ್ಲಿ ಸಬಲೀಕರಣ ಆಗುತ್ತಿಲ್ಲ.
ಕೃಷಿ ಕ್ಷೇತ್ರ ಇಂದು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲಯಲ್ಲಿ ನಮ್ಮ ಕೃಷಿ ವಿಶ್ವ ವಿದ್ಯಾಲಯಗಳು ಯಾವ ಬಗೆಯಲ್ಲಿ ನೆರವಾಗುತ್ತಿವೆ?
-ಕೃಷಿ ವಿಶ್ವವಿದ್ಯಾಲಯಗಳು ಹಿಂದೆಯೂ ಕೃಷಿಕರಿಗೆ ಹೊಸ ದಾರಿ ತೋರಿಸಿದ್ದು ತೀರ ಕಡಿಮೆ. ಅಲ್ಲಿನ ಸಂಶೋಧಕರ ಹಾಗೂ ಉಪನ್ಯಾಸಕರ ಪದೋನ್ನತಿಗೂ ಕೃಷಿಕರ ಕಲ್ಯಾಣಕ್ಕೂ ನಾವು ಸಂಬಂಧ ಕಲ್ಪಿಸಲೇ ಇಲ್ಲ. ಸಂಶೋಧನ ಪ್ರಬಂಧಗಳನ್ನುಡಾಕ್ಟರೇಟ್‌ಗಳನ್ನು ಉತ್ಪಾದಿಸುತ್ತಲೇ ಅವರು ಎತ್ತರೆತ್ತರದ ಸ್ಥಾನಕ್ಕೇರಿ ನಿವೃತ್ತರಾಗುವವರೇ ವಿನಾ ಅಸಲೀ ಕಳಕಳಿಯಿಂದ ಕೃಷಿಕರಿಗೆ ಪೂರಕವಾದ ಕೆಲಸ ಮಾಡಿದವರ ಸಂಖ್ಯೆ ಬೆರಳೆಣಿಕೆಯಷ್ಟೆ. ಕೃಷಿರಂಗದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಸಾರ್ವಜನಿಕರು ಹುಯಿಲೆಬ್ಬಿಸಿದಾಗ ಅವರೂ ದನಿ ಸೇರಿಸಿ ಹೌದುಹೌದುಅತಿಯಾದ ಒಳಸುರಿ ಅಪಾಯಎಂಡೊಸಲ್ಫಾನ್ ಅಪಾಯಕುಲಾಂತರಿ ಅಪಾಯ’ ಎಂದೆಲ್ಲ ಹೇಳುತ್ತಿದ್ದಾರೆ. ಇಷ್ಟು ವರ್ಷ ಕಾರ್ಪೊರೇಟ್ ಸಂಸ್ಥೆಗಳ ಸೇವೆಗೆಂದು ಕೃಷಿ ಪದವೀಧರರನ್ನು ಸೃಷ್ಟಿಸುತ್ತಿದ್ದ ಅವರಿಗೆ ಈಗಂತೂ ನೇರವಾಗಿ  ವಿದೇಶೀ ಕಂಪನಿಗಳ ಜತೆ ಕೈಜೋಡಿಸಲು ಅನುಮತಿ ಸಿಕ್ಕಿದೆ. ಅಸಲೀ ರೈತರ ಹಿತಾಸಕ್ತಿ ಈಗಲೂ ದೂರದ ವಿಷಯವೇ ಆಗಿದೆ.
ಸುಪ್ರೀಂ ಕೋರ್ಟು ಎಂಡೋಸಲ್ಫಾನ್ ನಿಷೇಧಿಸಿದ್ದು ಸರಿಯೇಭಾರತ ಸರ್ಕಾರ ಈ ನಿಷೇಧಕ್ಕೆ ಅರೆಮನಸ್ಸು ಮಾಡುತ್ತಿದೆಯಲ್ಲಾ?
-ಎಂಡೋಸಲ್ಫಾನ್‌ಗೆ ಎಂದೋ ನಿಷೇಧ ಹಾಕಬೇಕಿತ್ತು. ಆದರೆ ನ್ಯಾಯಾಂಗ ತಾನಾಗಿ ಮಧ್ಯ ಪ್ರವೇಶ ಮಾಡುವವರೆಗೆ ನಮ್ಮ  ಕಾರ್ಯಾಂಗಶಾಸನಾಂಗಗಳು ಕೈಕಟ್ಟಿ ಕೂತಿರಬಾರದಿತ್ತು.  ನ್ಯಾಯಾಂಗ ಪ್ರತಿ ಬಾರಿಯೂ ಹೀಗೆ ಸ್ವಯಂಪ್ರೇರಿತವಾಗಿ ಪ್ರಜೆಗಳ ರಕ್ಷಣೆಗೆ ಬರುವುದು ಸಂತಸದ ಸಂಗತಿಯೇ ಹೌದಾದರೂ ಪ್ರಜಾಪ್ರಭುತ್ವದ ಇತರ ಸ್ತಂಭಗಳು ಹೀಗೆ ಕೆಸರಲ್ಲಿ ಹೂತ ಕಂಬಗಳಾಗುವುದು ರಾಷ್ಟ್ರಕ್ಕೆ ಒಳ್ಳೆಯದೇನಲ್ಲ. 
ಭ್ರಷ್ಟಾಚಾರ ಸರ್ವವ್ಯಾಪಿಯಾಗಿರುವ ಹೊತ್ತಿನಲ್ಲಿ ಅಣ್ಣಾ ಹಜಾರೆಯಂತವರ ಜನಲೋಕಪಾಲ ಮಸೂದೆ ಪರ ಚಳವಳಿ’ ಆರಂಭವಾಗಿದೆ. ಇದು ನಮಗೆ ಎಷ್ಟರಮಟ್ಟಿಗೆ ಭರವಸೆಯಾಗಬಲ್ಲದೆಂಬುದು?
-ಏನು ಮಾಡಲೂ ಸಾಧ್ಯವಿಲ್ಲವೆಂಬಂತೆ ಎಲ್ಲರೂ ಹತಾಶರಾಗಿದ್ದಾಗ ಏನೋ ಸಂಚಲನ ಆರಂಭವಾಗಿದೆ. ಆದರೆ ನಮ್ಮದು ಎಲ್ಲ ರಂಗಗಳಲ್ಲೂ ಉಲ್ಟಾ ಪಿರಮಿಡ್’ ತಾನೆರಾಷ್ಟ್ರಮಟ್ಟದ ಈ ಚಳವಳಿ ಗ್ರಾಮ ಲೆಕ್ಕಿಗರಿಗೆ,ಕಂದಾಯ ಇಲಾಖೆಯ ಬಿಲ್ ಕಲೆಕ್ಟರ್‌ಗಳಿಗೆ ಬಿಸಿ ಮುಟ್ಟಿಸುವಷ್ಟು ತಳಮಟ್ಟಕ್ಕೆ ಇಳಿದೀತೆ
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮೂರು ವರ್ಷಗಳನ್ನು ಪೂರೈಸುತ್ತಿದೆ. ಇದರ ಕಾರ್ಯವೈಖರಿ ಕುರಿತು ನೂರಕ್ಕೆ ಎಷ್ಟು ಅಂಕ ಕೊಡುತ್ತೀರಿ?
 ಮೂವತ್ತು.


ಮಾನ್ಯ ಸಬಾದ್ಯಕ್ಷರಿಗೆ ಒಂದು ಬಹಿರಂಗ ಪತ್ರ

  ಮಾನ್ಯ ವಿದಾನಸಬೆಯ ಸಬಾದ್ಯಕ್ಷರಾದ ಯು ಟಿ ಕಾದರ್ ಅವರೆ, ಶಾಸಕರ ಶಿಬಿರಕ್ಕೆ ಕೆಲವರು ಆಗಮಿಸುವುದು ದೃಡಪಟ್ಟಿಲ್ಲ ಎಂದು ತಿಳಿಸಿದ್ದೀರಿ. ಸಂತೋಷ. ದೃಡಪಡುವುದೇ ಬೇಡ ಎಂದ...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.