ಪೋಸ್ಟ್‌ಗಳು

ಒಂದೊಳ್ಳೆ ಸಿನಿಮಾ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

‘ರಾಂಗ್‌ನಂಬರ್’ಗಳ ಸಂತೆಯಲ್ಲಿ ನಿಂತು ರೈಟ್ ನಂಬರ್ ತೋರಿಸುವ ’pk’

ಇಮೇಜ್
“ ಹಮ್‌ಕಾ ಲಗಾತ್ ಹೈ ಬಗವಾನ್ ಸೆ ಬಾತ್ ಕರೇ ಕಾ ಕಮ್ಮುನಿಕೇಸನ್ ಸಿಸ್ಟಂ ಇಸ್ ಗೋಲಾ ಕಾ ಟೋಟಲ್ ಲುಲ್ ಹೋ ಚುಕಾ ಹೇ ” (ನಂಗನ್ಸೋ ಪ್ರಕಾರ ಈ ಬೂಮಿ ಮೇಲೆ ದೇವರ ಜೊತೆ ಮಾತಾಡೋ ಕಮ್ಯುನಿಕೇಶನ್ ಸಿಸ್ಟಂ ಪೂರಾ ಎಡವಟ್ಟಾಗಿದೆ) - pk ಸಿನಿಮಾದಲ್ಲಿ ಪಿಕೆ (ಅಮೀರ್ ಖಾನ್) ಹೇಳುವ ಮಾತು \ ಏಲಿಯನ್ ಅಂದರೆ ಅನ್ಯಗ್ರಹ ಜೀವಿಯೊಬ್ಬ ಒಂದು ಸಂಶೋಧನೆಗಾಗಿ ಭೂಮಿಯ ಬಂದು ಸೀದಾ ರಾಜಾಸ್ತಾನದ ಹಳ್ಳಿಯೊಂದರಲ್ಲಿ ಇಳಿದು ತಾನು ಬಂದ ಆಕಾಶಬಂಡಿಯ (ಸ್ಪೇಸ್‌ಕ್ರಾಪ್ಟ್) ರಿಮೋಟ್ ಕಂಟ್ರೋಲರ್ ಕಳೆದುಕೊಂಡುಬಿಡುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಈ ಭಾರತ ಭೂಮಿಯ ಮಂದಿ-ಮಂದಿರಗಳ ನಡುವೆ ಅವನ ಪೀಕಲಾಟ. ಹೀಗೊಂದು ಕತೆಯನ್ನು ಹೆಣೆದು ಅದನ್ನೊಂದು ಅದ್ಭುತ ಸಿನಿಮಾ ಮಾಡಿ ಜನರ ಮುಂದಿಟ್ಟಿದೆ ರಾಜ್‌ಕುಮಾರ್ ಹಿರಾನಿ- ಅಭಿಜಿತ್ ಜೋಶಿ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಜೋಡಿ. ತ್ರೀ ಈಡಿಯಟ್ಸ್ ಸಿನಿಮಾದ ನಂತರ ಇದೀಗೆ ಅಂತಹದ್ದೇ ಒಂದು ಅದ್ಭುತ ಸಿನಿಮಾವನ್ನು ಹಿರಾನಿ-ಅಮೀರ್ ಜೋಡಿ ನೀಡಿದೆ. ಸಿನಿಮಾಗಳಿಂದ ಬರೀ ಮನರಂಜನೆಯಲ್ಲದೇ ಉತ್ತಮವಾದ ಸಂದೇಶಗಳನ್ನೂ ನಿರೀಕ್ಷಿಸುವವರು ಯಾವಕಾರಣಕ್ಕೂ ತಪ್ಪಿಸಿಕೊಳ್ಳಬಾರದ ಸಿನಿಮಾ pk . ಭೂಗೋಳದ ಮೇಲೆ ಬೆತ್ತಲೆಯಾಗಿ ಇಳಿದ ಸ್ವಲ್ಪ ಹೊತ್ತಿಗೇ ತನ್ನ ರಿಮೋಟ್ ಕಂಟ್ರೋಲರ್ ಕಳವಾಗಿ ಅದಕ್ಕಾಗಿ ಹುಡುಕುತೊಡಗುವ ಈ ಏಲಿಯೆನ್ ವರ್ತನೆಗಳನ್ನು ನೋಡಿ 'ತೂ ಪಿಕೆ ಹೈ ಕ್ಯಾ? ಎಂದು ಕೇಳುತ್ತಾರೆ. ಕೊನ...

ಮತ್ತೆ ಕಾಡಿದ ರಶೋಮನ್

ಇಮೇಜ್
ಕಳೆದ ಮಾರ್ಚ್ ೨ ರಂದು ನಡೆದ  ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ  ದೂರಾಗತೊಡಗಿದೆ. ಅಂದು ಮೂರೂ ಕಡೆಯವರಿಗೆ ಉಂಟಾದ ದೇಹದ ಮೇಲಿನ ಗಾಯಗಳೂ ವಾಸಿಯಾಗುತ್ತಿವೆ. ತಲೆಗೆ ಹಾಕಿದ್ದ ಹೊಲಿಗೆಗಳೂ ಬಿಚ್ಚಲಾಗಿದೆ. ಆದರೆ ಅಂದು ಉಂಟಾದ ಮಾನಸಿಕ ಗಾಯಗಳು ಇನ್ನು ಹತ್ತು ವರ್ಷಗಳಾದರೂ ವಾಸಿಯಾಗಲಾರವು. ಸಮಾಜದಲ್ಲಿ ಅತ್ಯಂತ ಜವಾಬ್ದಾರಿ ಹೊಂದಿದ್ದ ಈ ವೃತ್ತಿಪರರ ನಡುವಿನ ಕಂದಕ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತಿದೆ. ಅಂದಿನ ಘಟನೆ ಹೇಗೆ ನಡೆಯಿತೆಂದು ನೀವು ಪತ್ರಕರ್ತರಿಗೆ ಕೇಳಿದರೆ ಅವರು ಒಂದು ರೀತಿ ಮಾಧ್ಯಮಗಳ ಮೂಲಕ ಭಿತ್ತರಿಸಿದ್ದಾರೆ.  ವಕೀಲರು ತಮ್ಮ ಅಳಲನ್ನು ತಮ್ಮದೇ ರೀತಿ ಹೇಳುವ ಪ್ರಯತ್ನ ನಡೆಸಿದ್ದಾರೆ. ಪೊಲೀಸರು ಕೂಡಾ ಮತ್ತೊಂದು ಬಗೆಯಲ್ಲಿ ಹೇಳುತ್ತಾರೆ. ಈ ಹೊತ್ತಿನಲ್ಲಿ ನನಗೆ ಮತ್ತೊಮ್ಮೆ ಕಾಡಿದ್ದು ಜಗತ್ಪ್ರಸಿದ್ಧ ನಿರ್ದೇಶಕ ಅಕಿರಾ ಕೊರೊಸಾವಾನ ರಶೋಮನ್ (೧೯೫೦ರಲ್ಲಿ ನಿರ್ಮಿಸಿದ್ದು) ಎಂಬ ಅದ್ಭುತ ಸಿನೆಮಾ. ಈ ಸಿನೆಮಾ ನೋಡಿರುವವರಿಗೆಲ್ಲಾ ನನ್ನ ಮಾತು ಅರ್ಥವಾಗಿರುತ್ತದೆ. ಕೊರೊಸಾವಾನ ಎಲ್ಲಾ ಸಿನಿಮಾಗಳಲ್ಲಿ ಬಹಳ ಸಲ ಮತ್ತೆ ಮತ್ತೆ ಕಾಡುವುದು ರಷೊಮನ್. ಯಾಕೆಂದರೆ ಮನುಷ್ಯನ ಸ್ವಾರ್ಥ ಮತ್ತು ಆಲೋಚನೆಯ ಮಿತಿಗಳನ್ನು ಆ ಸಿನೆಮಾದ ಕತೆ ಅನಾವರಣ ಮಾಡುವಷ್ಟು ಅದ್ಭುತವಾಗಿ ಬೇರೆ ಯಾವುದೂ ಮಾಡಲು ಅಸಾಧ್ಯವೆಂದು ನನ್ನ ಭಾವನೆ.  ರಶೋಮನ್ ...

ತಾಯಿಯೇ ಮಗುವಾಗಿ ಮಗನೇ ತಾಯಾಗುವ 'ಮದರ್ ಅಂಡ್ ಸನ್'

ಇಮೇಜ್
     ಅಲ್ಲೊಬ್ಬ ತಾಯಿಯಿದ್ದಾಳೆ . ಆಕೆಯ ವಯಸ್ಕ ಮಗನಿದ್ದಾನೆ . ಜೊತೆಗೆ ಅಲ್ಲೊಂದು ತಾಯ ಮೇಲಿನ ಉತ್ಕಟವಾದ ಪ್ರೀತಿ , ಅದರ ಬೆನ್ನಹಿಂದೆಯೇ ಹೊಂಚು ಹಾಕಿ ಕುಳಿತಿರುವ ಸಾವು ! ಇವೆಲ್ಲಕ್ಕೂ ಸಾಕ್ಷಿಯಾಗುವ ನಿಸರ್ಗವಿದೆ . ಆ ತಾಯಿ ಅದ್ಯಾವುದೋ ಹೆಸರಿಲ್ಲದ ರೋಗಕ್ಕೆ ತುತ್ತಾಗಿದ್ದಾಳೆ . ಅಕ್ಷರಶಃ ಮೃತ್ಯು ಶಯ್ಯೆಯಲ್ಲಿದ್ದಾಳೆ . ಹೇಳುವುದೇ ಬೇಡ . ತನ್ನ ಬದುಕಿನ ಕಟ್ಟ ಕಡೆಯ ಕ್ಷಣಗಳನ್ನೆಣಿಸುತ್ತಿದ್ದಾಳಾಕೆ . ಅದೇ ತಾಯಿ ಈ ಮಗನನ್ನು ಹಿಂದೊಮ್ಮೆ ಆತ ಆಗಷ್ಟೇ ಕಣ್ಣು ಬಿಟ್ಟಿದ್ದ ಶಿಶುವಾಗಿದ್ದಾಗ ಹೇಗೆ ಮೈಯೆಲ್ಲಾ ಕಣ್ಣಾಗಿ ಆರೈಕೆ ಮಾಡಿದ್ದಳೋ ಅದೇ ರೀತಿಯ ಆರೈಕೆಯಲ್ಲಿ ಆ ಮಗ ಈಗ ತೊಡಗಿದ್ದಾನೆ . ''ನನ್ನನ್ನ ಹೊರಗೆ ವಾಕ್ ಕರೆದುಕೊಂಡು ಹೋಗು '' ಎಂಬ ಬೇಡಿಕೆ ಆಕೆಯದು . ಸರಿ ಎವಳನ್ನು ಎತ್ತಿಕೊಂಡು ಹೊರಡುವ ಮಗ ......... ಹೀಗೆ ಸಾಗುತ್ತದೆ ಮೊನ್ನೆ ನಾನು ನೋಡಿದ ರಷಿಯನ್ ಚಿತ್ರ ಮದರ್ ಅಂಡ್ ಸನ್ ಚಿತ್ರದ ಕಥಾ ವಸ್ತು . ಚಿತ್ರದ ನಿರ್ದೇಶಕ ಅಲೆಕ್ಷಾಂಡರ್ ಸೊಕುರೋವ್ . ಸಿನಿಮಾ ಕೇವಲ ಎಪ್ಪತ್ತಾರು ನಿಮಿಷಗಳಲ್ಲಿ ಏನು ಹೇಳಬೇಕೋ , ಹೇಗೆ ಹೇಳಬೇಕೋ ಎಲ್ಲವನ್ನೂ ಹೇಳುತ್ತದೆ . ತಾಯಿಯನ್ನು ಮಗನು ಎತ್ತಿಕೊಂಡು ಹೊರಡುವ ದೃಶ್ಯದ ಪ್ರತಿಯೊಂದು ಫ್ರೇಂಗಳೂ ಅದ್ಭುತ . ಅಲ...