ಕರ್ನಾಟಕದ ಮೊದಲ ಧರ್ಮ- ಬೌದ್ಧಧರ್ಮ
* ಕರ್ನಾಟಕದಲ್ಲಿ ಇತಿಹಾಸ ಆರಂಭವಾಗುವುದು ಮೌರ್ಯ ದೊರೆ ಅಶೋಕ ಬರೆಸಿದ ಶಾಸನಗಳಿಂದ. ಸಾಮ್ರಾಟ್ ಅಶೋಕನು ಬೌದ್ಧ ಉಪಾಸಕನಾಗಿದ್ದನಲ್ಲದೆ ಆತನು ಕರ್ನಾಟಕಕ್ಕೂ ಬಂದಿದ್ದಕ್ಕೆ ಬ್ರಹ್ಮಗಿರಿ ಶಾಸನ ದಾಖಲೆ ಒದಗಿಸಿದೆ. * ಸಾಮ್ರಾಟ್ ಅಶೋಕ ಇಲ್ಲಿ ಬರುವುದಕ್ಕೂ ಮೊದಲೇ, ಕ್ರಿಪೂ 5- 4ನೇ ಶತಮಾನದಿಂದಲೇ ಬೌದ್ಧ ಬಿಕ್ಕುಗಳು ನೆಲೆಗೊಂಡಿದ್ದರು ಎಂದು ಹೇಳಲಾಗುತ್ತದೆ. ಆಶೋಕನಿಗೂ ಮುಂಚೆ ಕ್ರಿ.ಪೂ 387ರಲ್ಲಿ ಇಂದಿನ ಉತ್ತರ ಪ್ರದೇಶದ ವೈಶಾಲಿಯಲ್ಲಿ ಎರಡನೇ ಸಂಗೀತಿ (ಬೌದ್ಧ ಮಹಾಸಮ್ಮೇಳನ) ನಡೆದಾಗ ಬನವಾಸಿ ಹಾಗೂ ಮಹಿಷಮಂಡಲದ ಮಹಿಶಾಸಕ ಶಾಖೆಯವರು ಅದರಲ್ಲಿ ಭಾಗವಹಿಸಿದ್ದರು ಎಂಬ ಉಲ್ಲೇಖ ದೊರಕುತ್ತದೆ. * ಕರ್ನಾಟಕದ ಪ್ರಾಚೀನ ಬೌದ್ಧ ನೆಲೆಗಳೆಲ್ಲವೂ ನವಶಿಲಾಯುಗದ ನೆಲೆಗಳು ಎಂಬುದನ್ನು ಗಮನಿಸಿದಾಗ ಅಲ್ಲೆಲ್ಲಾ ಕರ್ನಾಟಕದ ಮೊದಲ ಪೇಟೆಪಟ್ಟಣಗಳು ಅಥವಾ ನಗರಗಳು ಸ್ಥಾಪನೆಗೊಂಡಿದ್ದು ತಿಳಿದುಬರುತ್ತದೆ. ಈ ಜನನಿಬಿಡ ಸ್ಥಳಗಳ ಸಮೀಪದಲ್ಲೇ ಬೌದ್ಧ ವಿಹಾರಗಳು ಚೈತ್ಯಾಲಯಗಳು ಸ್ಥಾಪನೆಗೊಂಡಿದ್ದವು. * ಕ್ರಿ.ಪೂ. 3 ಹಾಗೂ ಕ್ರಿಪೂ 2 ನೇ ಶತಮಾನದಲ್ಲಿ ಕರ್ನಾಟಕದ ಹಲವಾರು ಕಡೆಗಳಲ್ಲಿ ಬೌದ್ಧ ವಿಹಾರಗಳು, ಸ್ತೂಪಗಳು ಇದ್ದುವೆನ್ನಲು ಸಾಕ್ಷಿಗಳಿವೆ. * ಕರ್ನಾಟಕದ ಮೊದಲ ಅರಸರು ಶಾತವಾಹನರು ಮತ್ತು ಚುಟುಗಳು. ಇವರ ಕಾಲಘಟ್ಟದಲ್ಲಿದ್ದ ನಾಣ್ಯಗಳು ಸ್ಪಷ್ಟವಾಗಿ ಇವರು ಮೂಲತಃ ಬೌದ್ಧಾನುಯಾಯಿಗಳಾಗಿದ್ದರು ಎಂಬುದನ್ನು ತಿಳಿಸುತ್ತವೆ. * ಕರ್ನಾಟಕದ ಮೊದಲ ನಾಣ್ಯಗಳು ಸ...