ಪೋಸ್ಟ್‌ಗಳು

Sign Petition For Democracy

Change.org | The Proven Petition Site

ಸಾಮಾಜಿಕ ನ್ಯಾಯವನ್ನು ಬಲಿಪಶು ಮಾಡುವುದು ಸಲ್ಲದು- ಡಾ. ಎಚ್. ಎಸ್. ರಾಘವೇಂದ್ರ ರಾವ್

ಇಮೇಜ್
  ನಮ್ಮಲ್ಲಿ ಹಿಂದೆಂದಿಗಿಂತ ಅಪಾರ ಪ್ರಮಾಣದ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇದರಲ್ಲಿ ಮೌಲ್ಯಯುತ ಸಾಹಿತ್ಯ ಎಷ್ಟರ ಮಟ್ಟಿಗೆ ಬರುತ್ತಿದೆ?  ಇದಕ್ಕೆ ನಾಲ್ಕೇ ಪುಸ್ತಕಗಳು ಪ್ರಕಟವಾಗುತ್ತಿದ್ದಾಗ ಸುಲಭವಾಗಿ ಹೇಳಬಹುದಿತ್ತು. ಆದರೆ ನಾನ್ನೂರು ಪುಸ್ತಕಗಳು ಬರುತ್ತಿರುವಾಗ ಕಷ್ಟ. ಅನೇಕ ಸಲ ಓದದೆಯೇ ತೀರ್ಮಾನ ಕೊಡುತ್ತೇವೆ. ವಯಸ್ಸಾಗುತ್ತಾ ಹೋದ ಹಾಗೆ ಇತ್ತೀಚಿನ ಬರೆಹಗಳ ಬಗ್ಗೆ ಒಂದು ಬಗೆಯ ಅಸಹನೆಯನ್ನು ಕೆಲವರು ವ್ಯಕ್ತಪಡಿಸುತ್ತಾರೆ. 70ರ ದಶಕದಲ್ಲಿ ವಿಮರ್ಶೆ ಬರೆಯಲು ಆರಂಭಿಸಿದ್ದವರಿಗೆ ೨೦೧೦ರಲ್ಲಿ ಬಂದ ಸಾಹಿತ್ಯವೂ ಅಷ್ಟೇ ಮುಖ್ಯ ಎಂಬ ಮುಕ್ತ ಮನಸ್ಸು ಇರದಿದ್ದರೆ ಈಗಿನದೇನನ್ನೂ ಓದದೇ ಆದೇ ಕುವೆಂಪು ಅದೇ ಬೆಂದ್ರೆ ಎಂದುಕೊಂಡು ಕೂತಿರಬೇಕಾಗುತ್ತದೆ.  ಬದಲಿಗೆ ನಮ್ಮ ಕಾಲದಲ್ಲಿ ಬರುತ್ತಿರುವುದರಲ್ಲಿಯೂ ಒಳ್ಳೆಯದಿರುತ್ತದೆ ಎಂಬ ತಿಳುವಳಿಕೆ ಬೇಕು. ಕಸಕಡ್ಡಿ ಎನ್ನುವುದು ಎಲ್ಲಾ ಕಾಲದಲ್ಲಿಯೂ ಇದ್ದೇ ಇರುತ್ತದೆ. ಹಿಂದೆಯೂ ಇತ್ತು. ನಾಗವೇಣಿಯವರ ’ಗಾಂಧಿ ಬಂದ’, ಮೊಗಳ್ಳಿಯವರ ಬುಗುರಿ ಇಂತವೆಲ್ಲ ಎಷ್ಟೊಂದು ಶ್ರೇಷ್ಟವಾದವುಗಳಿವೆಯಲ್ಲ. ಅಮರೇಶ ನುಗಡೋಣಿ, ಎಚ್.ಎಸ್.ಶಿವಪ್ರಕಾಶ್, ನಾರಾಯಣಸ್ವಾಮಿ ಮುಂತಾದವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಇದೇ ಹೊತ್ತಿಗೆ ಬರೆದಿದ್ದೆಲ್ಲವೂ ಸಾಹಿತ್ಯ ಎಂದು ಹೇಳಲೂ ಬರುವುದಿಲ್ಲ. ಇಂದು ಇರುವ ಒಂದು ದೊಡ್ಡ ಅಪಾಯ ಎಂದರೆ ಕೀರ್ತಿ ಅಥವಾ ಗುರುತಿಸುವಿಕೆ ಬಹಳ ಬೇಗ ಸಿಗುತ್ತಿರುವುದ...

"ನಮ್ಮ ಸಾಹಿತ್ಯ ವಿಮರ್ಶೆಯ ಮಾನದಂಡಗಳೇ ಪ್ರಶ್ನಾರ್ಹವಾಗಿವೆ": ಲಕ್ಷ್ಮಣ ಕೊಡಸೆ

ಇಮೇಜ್
ಪ್ರಜಾವಾಣಿಯಂತಹ ಪತ್ರಿಕೆಯಲ್ಲಿ ವರದಿಗಾರನ ಹುದ್ದೆಯಿಂದ ಮೊದಲುಗೊಂಡು ಸಹ ಸಂಪಾದಕ ಹುದ್ದೆಯವರಗೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ಅಪಾರ ಅನುಭವ ಪಡೆದವರು ಲಕ್ಷ್ಮಣ ಕೊಡಸೆಯವರು. ಮೂರು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕತೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡಿರುವ ಅವರು ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇಂದಿನ ಪತ್ರಿಕೋದ್ಯಮ, ಸಮಾಜ, ಸಾಹಿತ್ಯ, ರಾಜಕೀಯ ಇತ್ಯಾದಿಗಳ ಕುರಿತು ಹರ್ಷಕುಮಾರ್ ಕುಗ್ವೆ  ದ ಸಂಡೆ ಇಂಡಿಯನ್ ಗಾಗಿ ನಡೆಸಿದ ಸಂದರ್ಶನ  ಇಲ್ಲಿದೆ. ಸುದೀರ್ಘ ಅವಧಿಯ ಪತ್ರಕರ್ತ ವೃತ್ತಿಯ ನಂತರದಲ್ಲಿ ನಿವೃತ್ತಿ ಹೊಂದಿರುವುದು ಏನನ್ನಿಸುತ್ತಿದೆ?  ಆರ್ಥಿಕ ದೃಷ್ಟಿಯಿಂದ ಕೆಲಸ ಮುಂದುವರೆಸಲೇ ಬೇಕಾದ ಅಗತ್ಯ ನನಗೆ ಇನ್ನು ಇರಲಿಲ್ಲ. ಪತ್ರಿಕೋದ್ಯಮವೂ ಇತರ ವೃತ್ತಿಗಳಂತೆ ಒಂದು ವೃತ್ತಿಯಾದ್ದರಿಂದ ಅದನ್ನು ಮುಗಿಸಿ ಬೇರೆ ಜೀವನವನ್ನು ನಾವು ರೂಪಿಸಿಕೊಳ್ಳಬೇಕಾಗುತ್ತದೆ. ಪತ್ರ್ರಕರ್ತನಾದವನು  ಸಾಯುವವರೆಗೂ ಪತ್ರಕರ್ತನೇ ಎಂಬ ಭಾವನೆ ಜನರಲ್ಲಿಯೂ, ಕೆಲ ಪತ್ರಕರ್ತರಲ್ಲಿಯೂ ಇದೆ. ಹಾಗಿರಬೇಕಾಗಿಲ್ಲ. ಕಳೆದ 30-35 ವರ್ಷ ಪೂರ್ತಿ ಪತ್ರಿಕೋದ್ಯಮದಲ್ಲೇ ಮುಳುಗಿ ಹೋಗಿರುವುದರಿಂದ ಓದುವುದು ಸಾಕಷ್ಟು ಉಳಿದುಕೊಂದಿದೆ. ಸಾಕಷ್ಟು ಓದಲಿಕ್ಕಾಗದೇ ಅಪ್‌ಡೇಟ್ ಆಗಲಿಕ್ಕಾಗಲಿಲ್ಲ ಎಂಬ ಭಾವನೆ ನನಗಿದೆ. ಇಷ್ಟು ವರ್ಷಗಳ ಅನುಭವಗಳನ್ನು ಒ...

ಹಳ್ಳಿ ಹೈದನ ತಲೆಕೆಡಿಸಿದವರಾರು?

ಇಮೇಜ್
ಮೈಸೂರು- ಮಾನಂತವಾಡಿ ಮಾರ್ಗದಲ್ಲಿ ನಾಗರಹೊಳೆ ಅಭಯಾರಣ್ಯದ ಕಾಕನಕೋಟೆ ಕಾಡಿನ ನಡುವೆ ಇರುವ ಆ ಜೇನುಕುರುಬರ ಹಾಡಿಯ ಹೆಸರು ಬಳ್ಳೇ ಹಾಡಿ . ಈ ಹಾಡಿಯ ಕೃಷ್ಣಪ್ಪ ಮತ್ತು ಲಕ್ಷ್ಮಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಗಂಡುಮಗ. ಆತ ರಾಜೇಶ. ಇಂದು ಸುವರ್ಣ ವಾಹಿನಿಯ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋನಲ್ಲಿ ಗ್ರಾಂಡ್ ಫಿನಾಲೆವರೆಗೂ ಹೋಗಿ ವಿಜಯಿಯಾಗಿ ಬಂದು ನಂತರದಲ್ಲಿ ಇನ್ನೂ ಬಿಡುಗಡೆಯಾಗದ 'ಜಂಗಲ್ ಜಾಕಿ’ ಸಿನಿಮಾದಲ್ಲಿ ಐಶ್ವರ್ಯಳೊಂದಿಗೆ ನಟಿಸಿ, ಇದೀಗ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮಾನಸಿಕ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ’ಹಳ್ಳಿ ಹೈದ’ನೇ ಈ ರಾಜೇಶ. ಕೆ.ಆರ್. ಆಸ್ಪತ್ರೆಯ ವೈದ್ಯರಾದ ಸುಧೀರ್ ಅವರು ಟಿಎಸ್‌ಐಗೆ ನೀಡಿದ ಮಾಹಿತಿಯ ಪ್ರಕಾರ ರಾಜೇಶ್‌ಗೆ ’ಅಕ್ಯೂಟ್ ಮೇನಿಯಾ’ ಅಟ್ಯಾಕ್ ಅಗಿದೆ. ಇದೊಂದು ರೋಗವೇನಲ್ಲ. ಆದರೆ ಮನಸ್ಸಿನಲ್ಲಿ ಉಂಟಾದ ತೀವ್ರ ಮಾನಸಿಕ ತಳಮಳ, ಹೊಯ್ದಾಟಗಳು ಒಬ್ಬ ವ್ಯಕ್ತಿಗೆ ಈ ಮಾನಸಿಕ ಅಸ್ವಸ್ಥತೆಯ್ನನು ಉಂಟು ಮಾಡುತ್ತದೆ ಎನ್ನುತ್ತಾರವರು. ಕಾಡಿನ ಹಾಡಿಯಲ್ಲಿ ತನ್ನ ಗೆಣೆಕಾರರೊಂದಿಗೆ ಸ್ವಚ್ಛಂದವಾಗಿ ಆಡಿಕೊಂಡಿದ್ದ ಜೇನುಕುರುಬರ ಹುಡುಗನೊಬ್ಬನಿಗೆ ಇಂತಹ ಪರಿಸ್ಥಿತಿ ಬರಲು ಕಾರಣಗಳೇನು? ಯಾರು ರಾಜೇಶನ ಇಂದಿನ ಈ ಸ್ಥಿತಿಗೆ ಕಾರಣರಾರು?  ಅದು ೨೦೧೦ನೇ ಇಸವಿಯ ಮೇ ತಿಂಗಳಿನಲ್ಲಿ ಸುವರ್ಣ ವಾಹಿನಿಯು ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋ ಸಾಕಷ್...

ಡಾ.ರಾಜ್‌ರನ್ನು ಇಂದು ನೆನೆವುದೆಂದರೆ...

ಇಮೇಜ್
ಇಲ್ಲಿಗೆ ನೂರನೇ ವರ್ಷಕ್ಕೆ ಹಿಂದೆ ಭಾರತೀಯ ನೆಲದಲ್ಲಿ ಮೊತ್ತಮೊದಲ ಸಿನಿಮಾ ಚಿತ್ರೀಕರಣ ಆರಂಭಗೊಂಡಿತ್ತು. ದಾದಾ ಸಾಹೇಬ್ ಫಾಲ್ಕೆ ನಿರ್ದೇಶನದ ಆ ರಾಜಾ ಹರಿಶ್ಚಂದ್ರ ಸಿನಿಮಾ ತೆರೆಕಂಡ ಈ 99 ವರ್ಷಗಳಲ್ಲಿ ಭಾರತೀಯ ಸಿನಿಮಾ ಇಂದು ಬಹು ಎತ್ತರಕ್ಕೆ ಬೆಳೆದು ನಿಂತಿದೆ. ಹಿಂದಿ ಚಿತ್ರರಂಗದ ಬಾಲಿವುಡ್ ಅಲ್ಲದೇ ಎಲ್ಲಾ ರಾಜ್ಯಗಳ ಮುಖ್ಯಭಾಷೆ ಹಾಗೂ ಹಲವಾರು ಉಪಭಾಷೆಗಳ ಸಿನಿಮಾ ರಂಗಗಳೂ ಏಳಿಗೆ ಕಂಡಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಇಡೀ ದೇಶದ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯೂ ಅಪಾರವಾದದ್ದು. ಅದರಲ್ಲೂ ಕನ್ನಡದ ನಟಸಾರ್ವಭೌಮ ದಿ. ಡಾ. ರಾಜ್‌ಕುಮಾರ್ ಅವರು ಕನ್ನಡಚಿತ್ರರಂಗವನ್ನು ರಾಷ್ಟ್ರಮಟ್ಟದಲ್ಲೂ ಪ್ರತಿನಿಧಿಸಬಲ್ಲ ಮೇರುನಟ. "ಡಾ. ರಾಜ್‌ಕುಮಾರ್‌ನಂತಹ ನಟ ಏನಾದರೂ  ಬಾಲಿವುಡ್‌ನಲ್ಲಿದ್ದಿದ್ದರೆ ನಮ್ಮಂವರು ಯಾವ ಕಡೆಗೂ ಇರುತ್ತಿರಲಿಲ್ಲ" ಎಂದು ಬಾಲಿವುಡ್ ಸಾಮ್ರಾಟ ಅಮಿತಾಬ್ ಬಚನ್ ಅವರೇ ಹಿಂದೊಮ್ಮೆ ಆಡಿದ್ದ ಮಾತನ್ನು ಗಮನಿಸಿದರೆ ರಾಜ್‌ಕುಮಾರ್ ಅವರ ಸ್ಥಾನವನ್ನು ಅರಿಯಬಹುದು. ಕರ್ನಾಟಕದಲ್ಲಿ 1921ರಿಂದಲೇ ಮೂಕಿಚಿತ್ರಗಳು ಆರಂಭಗೊಂಡಿದ್ದವು. 1934ರಲ್ಲಿ ಮೊತ್ತಮೊದಲ ಟಾಕಿ ಚಿತ್ರ ’ಸತಿ ಸುಲೋಚನ’ ಬಿಡುಗಡೆಗೊಂಡಿತ್ತು. ಆದರೆ ಆರಂಭ ಕಾಲದಲ್ಲಿ ಕನ್ನಡ ಚಿತ್ರಗಳು ಮದ್ರಾಸಿನ ಸಿನಿಮಾ ನಿರ್ಮಾಪಕರನ್ನೇ ಅವಲಂಬಿಸಬೇಕಾಗಿತ್ತು. ಅದೇ ಸಂದರ್ಭದಲ್ಲಿ ಪರಭಾಷಾ ಚಿತ್ರಗಳ ಡಬ್ಬಿಂಗ್ ಕೂಡಾ ಅಲ್ಪಸ್ವಲ್ಪ ಪ್ರಮಾಣ...

ಹಳ್ಳೀಮುಕ್ಕ..... ಬಿದ್‌ಬಿದ್ ನಕ್ಕ!

ಇಮೇಜ್
ಕೃತಿ: ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ ಲೇಖಕರು: ನಾಗೇಶ ಹೆಗಡೆ ಪುಟಗಳು: ೯೨ ಬೆಲೆ: ೭೫ ರೂಪಾಯಿ ಪ್ರಕಾಶನ: ಭೂಮಿ ಪ್ರಕಾಶನ ಮೊದಲ ಮುದ್ರಣ: ೨೦೧೧ ನಾಗೇಶ್ ಹೆಗಡೆಯವರ ’ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ’ ಅವರ ಹಿಂದಿನ ಎಲ್ಲ ಗಂಭೀರ ವಸ್ತು ವಿಷಯಗಳ ಕುರಿತ ಬರಹಗಳಿಗಿಂತ ಭಿನ್ನವಾಗಿ ತಮ್ಮ ಹಳ್ಳಿ, ಮನೆ ಮತ್ತು ಅವರ ತೋಟದ ಪರಿಸರದೊಂದಿಗಿನ ದಿನದಿನದ ಒಡನಾಟವನ್ನು ಹಾಸ್ಯಭರಿತವಾಗಿ ತೆರೆದಿಡುವ ಪುಸ್ತಕ. ವಿಜ್ಞಾನದ ಅದೆಂತಹ ಕಬ್ಬಿಣದಂತಹ ವಿಷಯವನ್ನೂ ಕಡಲೆಯಾಗಿಸಿ ಕನ್ನಡಿಗರು ಸುಲಲಿತವಾಗಿ ಓದಲು ಅನುವಾಗುವಂತೆ ಬರೆದುಕೊಂಡು ಬರುತ್ತಿರುವವರು ನಾಗೇಶ್ ಹೆಗಡೆ. ಈಗ ಈ ಕೃತಿಯಲ್ಲಿ ತಮ್ಮದೇ ಪ್ರಯೋಗ ಜೀವನದ ಅನುಭವಗಳನ್ನು ಮತ್ತೂ ಸೊಗಸಾಗಿ ಓದುಗರ ಮನಸ್ಸು ಮುದಗೊಳ್ಳುವಂತೆ ಬರೆದಿದ್ದಾರೆ.  ತಮ್ಮ ಪತ್ರಿಕಾ ವ್ಯವಸಾಯದಿಂದ ನಿವೃತ್ತಿ ಪಡೆದ ನಂತರ ಬೆಂಗಳೂರಿನ ಕೆಂಗೇರಿ ಬಳಿಯಲ್ಲಿ ಕೆಲವರು ಸಮಾನಾಸಕ್ತರು ಸೇರಿ ನಿರ್ಮಿಸಿಕೊಂಡ ಮೈತ್ರಿ ಗ್ರಾಮದಲ್ಲಿ ಲೇಖಕರ ಮನೆ ಮತ್ತು ಕೈತೋಟಗಳಲ್ಲಿನ ಕೈಕಾರ್ಯಗಳ ಕುರಿತಾಗಿ ಈ ಕೃತಿಯ ಹದಿನಾಲ್ಕು ಲೇಖನಗಳಿವೆ. ಕೃತಿಯ ಮೊದಲ ಲೇಖನ ’ದೈತೋಟರ ಮನೆಯ ಪಕ್ಕ ನಮ್ಮ ಕೈದೋಟ’ ನಮಗೆ ಹೊಸ ಬಗೆಯ ವಿಸಿಟಿಂಗ್ ಕಾರ್ಡನ್ನು ಪರಿಚಯಿಸುತ್ತದೆ. ಹೆಸರಾಂತ ಪರಿಸರವಾದಿ ಶ್ರೀಪಡ್ರೆಯವರು ಲೇಖಕರಿಗೆ ನೀಡುವ ಆ ವಿಸಿಟಿಂಗ್ ಕಾರ್ಡು ಬೇರೇನಲ್ಲ. ಒಂದು ಪಾರದರ್ಶಕ ಪ್ಯಾಕೆಟ್ ಒಳಗಿನ ನಾಲ್ಕು ಬಾಂಗ್ಲಾ ಬಸಳೆ ಬೀಜಗಳು! ದ...

"ಸಹಪಂಕ್ತಿ ಭೋಜನದಿಂದಲೇ ಜಾತಿ ಸಾಮರಸ್ಯ ಸಾಧ್ಯ" : ಪ್ರೊ. ಬಿ. ವಿ. ವೀರಭದ್ರಪ್ಪ

ಇಮೇಜ್
ಪ್ರೊ.ಬಿ.ವಿ.ವೀರಭದ್ರಪ್ಪನವರು ಕನ್ನಡ ನಾಡು ಕಂಡ ಪ್ರಖರ ವಿಚಾರವಾದಿ. ಅಧ್ಯಾಪಕರಾಗಿ, ಬರಹಗಾರರಾಗಿ ಪತ್ರಕರ್ತರಾಗಿ ಕೆಲಸ ಮಾಡಿದ ಬೀವಿಯವರು ನಾಡಿನ ವೈಚಾರಿಕ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ದೊಡ್ಡದು. ’ವೇದಾಂತ’ ರೆಜಿಮೆಂಟ್, ವೇದಗಳಲ್ಲಿ ಜನಸಾಮಾನ್ಯರು, ಭಗವದ್ಗೀತೆ: ಒಂದು ವೈಚಾರಿಕ ಒಳನೋಟ ಮುಂತಾದ ಅವರ ಕೃತಿಗಳು ನಾಡಿನ ವಿಚಾರ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದಿರುವಂತವಹು. ಇದೀಗ ನಿವೃತ್ತ ಜೀವನ ಸಾಗಿಸುತ್ತಿರುವ ಬೀವಿಯವರು ಸಮಕಾಲೀನ ಸಂಗತಿಕಳ ಕುರಿತು ಮಾತನಾಡಿದ್ದಾರೆ. ನಾಡಿನಲ್ಲಿ ವೈಚಾರಿಕ ಸಾಹಿತ್ಯ ಪರಂಪರೆಗೆ ಬಹಳಷ್ಟು ಕೊಡುಗೆ ನೀಡಿರುವವರು ನೀವು. ವೈಚಾರಿಕ ಸಾಹಿತ್ಯ ರಚನೆಗೆ ನೀವು ತೊಡಗಿಕೊಂಡಿದ್ದಕ್ಕೆ ಕಾರಣಗಳೇನಿತ್ತು?  ನನಗೆ ನನ್ನ ಸುತ್ತಮುತ್ತಲಿನ ಸಮಾಜವು ಧರ್ಮನಿಷ್ಟತೆ, ಜಾತಿ ನಿಷ್ಠತೆಯ ಅಂಧಕಾರದಲ್ಲಿ ಬಳಲುತ್ತಿದೆ ಎನಿಸಿತ್ತು. ಕತೆ ಕವನಕಿಂತ ವೈಚಾರಿಕ ಸಾಹಿತ್ಯ ಜನರನ್ನು ಜಾಗೃತಗೊಳಿಸಬಲ್ಲದು ಎಂಬ ನಂಬಿಕೆ ನನ್ನದಾಗಿತ್ತು. ಹಾಗಾಗಿ ಜನರಿಗೆ ವಿಚಾರವನ್ನು ನೇರವಾಗಿ ತಲುಪಿಸಬೇಕೆಂಬ ಪ್ರೇರಣೆ ಉಂಟಾಯಿತು. ಜನರು ಯಾವುದನ್ನು ಅತ್ಯಂತ ಪವಿತ್ರ, ಪೂಜ್ಯ ಎಂದು ತಿಳಿದಿದ್ದರೋ ಅದರ ಮೂಲ ಪರಿಕಲ್ಪನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದಲೇ ಅನೇಕ ಲೇಖನಗಳನ್ನು ಬರೆಯುತ್ತಾ ಹೋದೆ. ನನ್ನಲ್ಲಿ ವೈಚಾರಿಕ ಪ್ರಜ್ಞೆ ಬೆಳೆಯಲು ಕಾರಣ ಜನಪದರು. ಅವರ ನುಡಿ, ಬದುಕಿನ ಪ್ರೀತಿ, ಸ್ಥಾವರ ನಿರಾಕರಣದ ಪ...

ನಾಡಿನ ಪ್ರಗತಿಯಲ್ಲಿ GIMಗಳ ಪಾತ್ರವಿದೆಯೇ?

ಇಮೇಜ್
ಮತ್ತೊಂದು ವಿಶ್ವ ಹೂಡಿಕೆದಾರರ ಸಮ್ಮೇಳನ ನಡೆಯುತ್ತಿದೆ. ಸರ್ಕಾರದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯವರು ಈಗ ಮತ್ತೊಮ್ಮೆ ದೇಶ ವಿದೇಶಗಳಲ್ಲೆಲ್ಲ ಸುತ್ತಿ ಬಂದು ರಾಜ್ಯದಲ್ಲಿ ಬಂಡವಾಳ ಹೂಡಲು ವಿದೇಶಿ ಬಂಡವಾಳಿಗರಿಗೆ ರತ್ನಗಂಬಳಿ ಹಾಸಿದ್ದಾರೆ. ಈ ಸಲ ೫ ಲಕ್ಷ ಕೋಟಿ ಬಂಡವಾಳ, ೧೦ ಲಕ್ಷ ಉದ್ಯೋಗ ಮತ್ತು ೨೦೨೦ರೊಳಗೆ ರಾಜ್ಯದ ಒಟ್ಟು ಉತ್ಪನ್ನ ದ್ವಿಗುಣಗೊಳ್ಳಬೇಕೆನ್ನುವ ಮಹತ್ವಕಾಂಕ್ಷೆಯನ್ನು ಕೈಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ವ್ಯಕ್ತಪಡಿಸಿದ್ದಾರೆ. ಅಮೆರಿಕದ ಭಾರೀ ಉದ್ದಿಮೆಪತಿ ವಾರನ್ ಬಫೆಟ್ ಅವರನ್ನೇ ಈ ಸಲ ಕರೆದು ಕೂರಿಸಲಾಗುವುದು ಎಂದು ಹೇಳಿಕೆ ನೀಡಿದ್ದರೂ ಅವರು ಒಪ್ಪಲಿಲ್ಲವೋ ಏನು ಕತೆಯೋ ಕೊನೆಗೆ ಜಪಾನು ಜರ್ಮನಿಗಳ ಉಪಸಚಿವ, ಉಪಪ್ರಧಾನಿಗಳ ಉಪಸ್ಥಿತಿಗೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ನಮ್ಮ ಸರ್ಕಾರಗಳು ಕಳೆದ ೧೨ ವರ್ಷಗಳಿಂದ ಈ ವಿಶ್ವ ಹೂಡಿಕೆದಾರರ ಸಮ್ಮೇಳನಗಳನ್ನು (ಜಿಮ್) ಸಂಘಟಿಸುತ್ತಲೇ ಬಂದಿವೆ. ಮೊದಲ ಜಿಮ್ ೨೦೦೦ರ ಜೂನ್ ತಿಂಗಳಿನಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಾಯಕತ್ವದಲ್ಲಿ ಆಯೋಜನೆಗೊಂಡು ಆಗ ೧೩,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಒಪ್ಪಂದಗಳಾಗಿದ್ದರೆ ಯಡಿಯೂರಪ್ಪನವರು ಹಾಗೂ ಮುರುಗೇಶ್ ನಿರಾಣಿಯವರು ಆಯೋಜಿಸಿದ್ದ  ಕಡೆಯ ೨೦೧೦ರ ಜಿಮ್ ನಲ್ಲಿ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಗಳಾಗಿತ್ತು. ಹೀಗೆ ನಿರಂತರವಾಗಿ ನಡೆಸಿಕೊಂಡ...