ಪೋಸ್ಟ್‌ಗಳು

ಕನ್ನಡಕ್ಕೆ ಬಂದ ಮತ್ತಷ್ಟು ಫ್ರೆಂಚ್ ಕತೆಗಳು

ಇಮೇಜ್
ಕೃತಿ: ಕಡಲಾಚೆಯ ಚೆಲುವೆ: ಫ್ರೆಂಚ್ ಕಥಾ ಸಾಹಿತ್ಯ. ಅನುವಾದಕರು: ಕೇಶವ ಮಳಗಿ ಪ್ರಕಾಶಕರು: ಕಥನ ಪ್ರಕಾಶನ ಪುಟಗಳು: ೨೦೮ ಬೆಲೆ’ ೧೨೦ ರೂಪಾಯಿ 'ಕಥನ ಪ್ರಕಾಶನ’ವು ಪ್ರಕಟಿಸಿರುವ, ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೇಶವ ಮಳಗಿಯವರ ’ಕಡಲಾಚೆಯ ಚೆಲು’ ಮತ್ತು ’ಸಂಕಥನ’ ಎಂಬ ಎರಡು ಕೃತಿಗಳು ಅವುಗಳ ವಿಷಯ ವಸ್ತುವಿನ ಕಾರಣಕ್ಕೆ ಅತ್ಯಂತ ಪ್ರಾಮುಖ್ಯತೆ ಇರುವಂತವು. ಎರಡೂ ಕೃತಿಗಳು ಫ್ರೆಂಚ್ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳನ್ನು ಕನ್ನಡಕ್ಕೆ ಪರಿಚಯಿಸುವಲ್ಲಿ ಮಹತ್ವದ ಕೊಡುಗೆ ನೀಡಿವೆ. ಇದರಲ್ಲಿ ’ಸಂಕಥನ’ವು ಫ್ರೆಂಚ್ ನೆಲದ ವೈಚಾರಿಕ ಧಾರೆಯನ್ನು, ಸಿದ್ದಾಂತಿಗಳನ್ನು ಅವರ ತಾತ್ವಿಕ ಬರೆಹಗಳ ಸಮೇತ ಪರಿಚಯಿಸಿಕೊಟ್ಟರೆ ’ಕಡಲಾಚೆಯ ಚೆಲುವೆ’ ಕೃತಿಯು ಫ್ರೆಂಚ್ ಕಥೆಗಳನ್ನು ಅವುಗಳೆಲ್ಲಾ ಸತ್ವದೊಂದಿಗೆ ಕನ್ನಡದ ಓದುಗರಿಗೆ ದಾಟಿಸುತ್ತದೆ. ಫ್ರೆಂಚ್ ಸಾಹಿತ್ಯಲೋಕವನ್ನು ಕನ್ನಡ ಓದುಗರಿಗೆ ತೆರೆದಿಡುವ ಪ್ರಯತ್ನವನ್ನು ಈ ಹಿಂದೆ ಅನೇಕರು ಮಾಡುತ್ತಲೇ ಬಂದಿದ್ದಾರೆ. ಡಾ. ಡಿ.ಎ.ಶಂಕರ್ ಅನುವಾದಿಸಿದ್ದ ಅಲ್ಬರ್ಟ್ ಕಮುವಿನ ’ಅನ್ಯ’ ಲಂಕೇಶರ ಅನೇಕ ಬರಹಗಳು ಮತ್ತು ಎಸ್. ದಿವಾಕರ್, ಬಸವರಾಜ ರಾಯ್ಕರ್, ಕೆ.ವಿ.ತಿರುಮಲೇಶ್, ಚಂದ್ರಶೇಖರ್ ಆಲೂರು, ಮುಂತಾದವರು ಅನುವಾದಿಸಿರುವ ಹಲವಾರು ಬಿಡಿಬಿಡಿ ಕಥೆಗಳು ಕನ್ನಡಿಗರಿಗೆ ಫ್ರೆಂಚ್ ಮಣ್ಣಿನ ಸೊಗಡನ್ನು ಅನುಭವಿಸುವ ಅವಕಾಶ ಒದಗಿಸಿವೆ. ಆದರೆ ಫ್ರೆಂಚ್ ಕಥಾ ಸಾಹಿತ್ಯವನ್ನು ಹಾಗೂ ವಿಚಾ...

"ಲೇಖಕನಾದವನು ತಾನು ಕಂಡ ಸತ್ಯವನ್ನು ಪರೀಕ್ಷಿಸುತ್ತಿರಬೇಕು" - ಡಾ. ನಟರಾಜ್ ಹುಳಿಯಾರ್

ಇಮೇಜ್
ಡಾ. ನಟರಾಜ್ ಹುಳಿಯಾರ್ ಅವರು ಕಥೆಗಾರರಾಗಿ, ವಿಮರ್ಶಕರಾಗಿ ಮತ್ತು ಅಂಕಣಕಾರರಾಗಿ ಚಿರಪರಿಚಿತರು. ಲೋಹಿಯಾ ಚಿಂತನೆಗಳನ್ನು ಕನ್ನಡಕ್ಕೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇತ್ತೀಚೆಗಷ್ಟೇ ನಟರಾಜ್ ಹುಳಿಯಾರ್ ಅವರ ಮೂರು ದಶಕಗಳ ಕತೆಗಳ ಸಂಕಲನ ’ಮಾಯಾಕಿನ್ನರಿ’ ಹಾಗೂ ಸಾಂಸ್ಕೃತಿಕ ಬರಹಗಳ ಸಂಕಲನ ’ಗಾಳಿ ಬೆಳಕು’ ಬಿಡುಗಡೆಯಾಗಿವೆ. ಇದೀಗ ಹಲವು ವಿಚಾರಗಳನ್ನು ಕುರಿತು  ತಮ್ಮ ನಿಲುವುಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.  ಸಾಹಿತ್ಯ ವಿಮರ್ಶೆಯನ್ನೂ ಬರೆದಿರುವ  ನೀವು ಸಾಹಿತ್ಯ ವಿಮರ್ಶೆ ಇಂದು ಪಡೆದುಕೊಂಡಿರುವ ಪ್ರಾಮುಖ್ಯತೆ ಬಗ್ಗೆ ಏನು ಹೇಳುತ್ತೀರಿ?  ಸಾಹಿತ್ಯ ಇರುವವರೆಗೂ ಸಾಹಿತ್ಯ ವಿಮರ್ಶೆ ಇರಲೇಬೇಕಾಗುತ್ತದೆ. ಸಾಹಿತ್ಯ ವಿಮರ್ಶೆ ಇಂದು ಬೇರೆಯದೇ ಸ್ವರೂಪ ತಾಳಿದೆ. ಇಂದು ಅದು ಸಾಹಿತ್ಯ ಸಿದ್ಧಾಂತವಾಗುವ ಕಡೆ ಹೊರಳಿಕೊಂಡಿದೆ. ಸಾಹಿತ್ಯವಿಮರ್ಶೆ ಒಂದು  ಸ್ವತಂತ್ರ ಚಿಂತನಾ ಕ್ರಮವೂ ಹೌದು. ಸಂಸ್ಕೃತಿವಿಮರ್ಶೆ ಚಾಲ್ತಿಗೆ ಬಂದಾದ ಮೇಲೆ ಸಾಹಿತ್ಯವಿಮರ್ಶೆ ಕೇವಲ ಕೃತಿಯೊಂದನ್ನು ಕುರಿತ  ವಿಮರ್ಶೆಯಾಗಿ ಉಳಿದಿಲ್ಲ. ಅದು ಸಂಸ್ಕೃತಿ, ನಾಗರಿಕತೆಗೆ ಸಂಬಂಧಿಸಿದ ವಿಶಾಲ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕೀರ್ತಿನಾಥ ಕುರ್ತಕೋಟಿಯಂಥವರು ಆರಂಭಿಸಿದ ಸಾಹಿತ್ಯ ವಿಮರ್ಶೆಗೂ ಇಂದಿನ ಸಾಹಿತ್ಯ ವಿಮರ್ಶೆಗೂ ವ್ಯತ್ಯಾಸ ಇಲ್ಲಿದೆ. ಹೀಗಾಗಿ ಇಂದಿನ ಸಾಹಿತ್ಯ ವಿಮರ್ಶೆ ಸಾಹಿತ...

ವೀರಣ್ಣ ಮಡಿವಾಳರ ಸಂದರ್ಶನ

ಇಮೇಜ್
ಕನ್ನಡದ  ಹೊಸತಲೆಮಾರಿನ ಸಂವೇದನಾಶೀಲ ಬರೆಹಗಾರರಲ್ಲಿ ಒಬ್ಬರಾದ ವೀರಣ್ಣ ಮಡಿವಾಳರ ಅವರ 'ನೆಲದ ಕರುಣೆಯ ದನಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಗಾಗಿ ನಡೆಸಿದ ಸಂದರ್ಶನ. ನಿಮ್ಮ 'ನೆಲದ ಕರುಣೆಯ ದನಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ    ಲಭಿಸಿರುವುದು ಏನೆನ್ನಿಸುತ್ತದೆ?  ಇದು ನನ್ನ ಮತ್ತು ನನ್ನ ತಲೆಮಾರಿನ ಅಭಿವ್ಯಕ್ತಿಗೆ ಸಂದ ಗೌರವವೆಂದು ಭಾವಿಸುತ್ತೇನೆ. ಈ ಕ್ಷಣ ಅಪ್ಪನ ಬೆವರು, ಅವ್ವನ ಕನಸು ನೆನಪಾಗುತ್ತಿವೆ. ಈ ಪುರಸ್ಕಾರವನ್ನು ಕನ್ನಡ ಕಾವ್ಯವನ್ನು ಮತ್ತಷ್ಟು ಜೀವಪರವಾಗಿಸಿದ ಕವಿ ಎನ್.ಕೆ.ಹನುಮಂತಯ್ಯ, ವಿಭಾ ತಿರಕಪಡಿ, ಹಾಗೂ ನಾನು ಎಷ್ಟು ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ ಪುಟ್ಟ ಪುಸ್ತಕಗಳೇ ಆಗಿರುವ ನನ್ನ ಗಾವಡ್ಯಾನವಾಡಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ. ವರ್ತಮಾನದ ಈ ಅವಘಡದ ಕಾಲದಲ್ಲಿ ಯಾವುದೇ ಸಂವೇದನಾಶೀಲ ಮನಸ್ಸು , ಯಾವುದೇ ಪುರಸ್ಕಾರವನ್ನು ಆನಂದಿಸುವ ಸ್ಥಿತಿಯಲ್ಲಿಲ್ಲ. ಈ ಕ್ಷಣ ನನ್ನ ಶಿಕ್ಷಕ ತರಬೇತಿಯ ಖಾಲಿ ಹೊಟ್ಟೆಯ ದಿನಗಳು ನೆನಪಾಗುತ್ತಿವೆ. ಈಗ ನನ್ನ ತುತ್ತಿಗೆ ದಾರಿಯಾಗಿರಬಹುದು, ಆದರೆ ಅದೆಷ್ಟು ಎಣಿಸಲಾಗದ ಹಸಿದ ಹೊಟ್ಟೆ ಚೀಲಗಳು ಕಣ್ಣಮುಂದೆಯೇ ಇವೆ. ಇಂದು ಕೇವಲ ಅನ್ನಕ್ಕಾಗಿ ಪರದಾಟ ಮಾತ್ರವಲ್ಲ, ಅದರಾಚೆಗೆ ಬದುಕಿಗೆ ಬೆಳಕಾಗುವ ವಿದ್ಯಾದೀಪದ ಹುಡುಕಾಟದ ದುರಂತವೂ ಇದೆ. ತೀರಾ ಹೊಟ್ಟೆ ಹಸಿದರೆ ಸೊಪ್ಪ...

'ಪ್ರಾಮಾಣಿಕತೆ ಎಂಬುದು ನಾವು ನಂಬಿದ ಮೌಲ್ಯದ ಪ್ರಶ್ನೆ’- ಚಿರಂಜೀವಿ ಸಿಂಗ್

ಇಮೇಜ್
ಚಿರಂಜೀವಿ ಸಿಂಗ್ ಅವರನ್ನು ನಾನು ಮೊದಲು ನೋಡಿದ್ದು, ಅವರ ಮಾತು ಕೇಳಿದ್ದು ಕೆಲವು ವರ್ಷಗಳ ಹಿಂದೆ, ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ.  'ಹಿಂಸೆಯ ಎಡ -ಬಲ’ ಎಂಬ ಕುರಿತ ಚರ್ಚೆಗಳನ್ನು ಅಂದು ಉದ್ಘಾಟಿಸಿದ್ದ ಚಿರಂಜೀವಿ ಸಿಂಗ್ ಮಾತುಗಳು ಎಲ್ಲರನ್ನು ಪ್ರಭಾವಿಸಿದ್ದವು. ನಂತರದಲ್ಲಿ ಅವರ ಕುರಿತು ಇತರೆ ಸ್ನೇಹಿತರು ಹೇಳಿದ್ದನ್ನು ಕೇಳಿದ್ದೇನೆ. ಅದರಲ್ಲೂ  ಹಿರಿಯ ಸ್ನೇಹಿತೆ ಹಾಗೂ ದಕ್ಷ ಅಧಿಕಾರಿ ವಿ. ಭಾಗ್ಯಲಕ್ಷ್ಮಿಯವರು ಚಿರಂಜೀವಿ ಸಿಂಗ್ ಅವರ ಬಗೆಗೆ ಅದೆಷ್ಟು ಭಾವುಕರಾಗಿ ಮಾತನಾಡಿದ್ದರಂದರೆ ಅವರ ಮಾತು ಕೇಳಿದಾಗಿನಿಂದಲೂ ನನಗೆ ಚಿರಂಜೀವಿ ಸಿಂಗ್ ಅವರ ಜೊತೆ ಸ್ವಲ್ಪ ಹೊತ್ತು ಕಳೆಯುವ ಇಚ್ಛೆಯಾಗಿತ್ತು.  ನಮ್ಮ ’ದ ಸಂಡೆ ಇಂಡಿಯನ್’ನ 'ಸಾಕ್ಷಿಪ್ರಜ್ಞೆ'ಗಾಗಿ ನಾನು ಮತ್ತು ನನ್ನ ಸಹೋದ್ಯೋಗಿ ಅಹೋಬಲಪತಿ ಚಿರಂಜೀವಿ ಸಿಂಗ್ ಅವರ ಮನೆಗೆ ಹೋಗಿ ಸಂದರ್ಶನ ನಡೆಸಿಕೊಂಡು ಬಂದೆವು. ಅವರ ಬದುಕಿನ ಸರಳತೆ, ನಡೆ ನುಡಿಯ ಮಿದುತನಗಳು   ನಿಜಕ್ಕೂ ನಮ್ಮನ್ನು ತೀರಾ ಕುಬ್ಜರನ್ನಾಗಿಸಿದವು. ಹೀಗೇ ಮಾತು ಆರಂಭಿಸಿ 'ಸರ್, ನೀವು ಅಷ್ಟು ದೂರದಿಂದ ಬಂದು ಇಲ್ಲಿನವರೇ ಆಗಿಬಿಟ್ಟಿದ್ದೀರಿ. ನೀವು ವಾಪಾಸು ಹೋಗುವ ಆಲೋಚನೆ ಇದೆಯಾ? ನಿಮ್ಮ ಹುಟ್ಟೂರು ಯಾವುದು' ಎಂದೆಲ್ಲಾ ಕೇಳಿದೆ. 'ನಾನು ಹುಟ್ಟಿದ್ದು ಈಗಿನ ಪಾಕಿಸ್ತಾನದಲ್ಲಿ. ಎಂದು ಹೇಳಿದ ಅವರ ಮುಖದಲ್ಲಿ ಒಂದು ಬಗೆಯ ನೋವಿನ ಭಾವ ಮೂಡಿತು. ಈ ಕುರಿತು ಮತ್ತೆ ...

ಸರ್ಕಾರಿ ವಿಜ್ಞಾನ ಕಾಲೇಜಿನ ಯಶೋಗಾಥೆ

ಇಮೇಜ್
' ಮನಸ್ಸಿದ್ದರೆ ಮಾರ್ಗ’ ಎಂಬ ಹಳೆಯ ನಾಣ್ಣುಡಿಗೆ ನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಸಿಗುವ ಇತ್ತೀಚಿನ ಉದಾಹರಣೆ ಎಂದರೆ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು.  ಈ  ಕಾಲೇಜು  ಹತ್ತು ವರ್ಷಗಳಲ್ಲಿ  ಹೇಗೆ ಬದಲಾವಣೆ ಸಾಧಿಸಿತು ಎಂಬುದ ರ    ವರದಿ . ದ ಸಂಡೆ ಇಂಡಿಯನ್ ಪತ್ರಿಕೆ ಗಾಗಿ . .        ಖಾಸಗೀಕರಣದ ಈ ಯುಗದಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಎನ್ನುವುದು ಬಡ -ಮಧ್ಯಮ ಹಿನ್ನೆಲೆಯ ವಿದಾರ್ಥಿಗಳ ಪಾಲಿಗೆ ಗಗನ ಕುಸುಮವೇ ಆಗಿರುವಾಗ , ಯೂನಿವರ್ಸಿಟಿಗಳು ತಮ್ಮನ್ನುಳಿಸಿಕೊಳ್ಳಲು ಪರದಾಡುತ್ತಿರುವ ಈ ದಿನಗಳಲ್ಲೂ ಒಂದಷ್ಟು ಮಂದಿ ಪ್ರಾಧ್ಯಾಪಕರು ವಿಭಿನ್ನವಾಗಿ ಚಿಂತಿಸಿ , ಶ್ರದ್ಧೆಯಿಂದ ದುಡಿದರೆ ಅದ್ಭುತವನ್ನೇ ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆ ಎಂದರೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು. 91 ವರ್ಷಗಳ ಇತಿಹಾಸ ಇರುವ ಈ ಕಾಲೇಜು ಹಿಂದೆ ’ ಗ್ಯಾಸ್ ಕಾಲೇಜಿನ (ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು) ಭಾಗವಾಗಿದ್ದು 1972ರಲ್ಲಿ ಕೇವಲ ವಿಜ್ಞಾನ ಕಾಲೇಜಾಗಿ ಪ್ರತ್ಯೇಕಗೊಂಡಿತ್ತು.  1997- 1998ರ ವರೆಗೂ ರಾಜ್ಯದ ಎಲ್ಲಾ ಸರ್ಕಾರಿ ಕಾಲೇಜುಗಳ ರೀತಿಯಲ್ಲಿಯೇ ಇದೂ ಕೂಡಾ ಕ್ಷಯ ರೋಗ ಬಡಿದ ಕೃಶವಾದ ರೋಗಿಯಂತೆಯೇ ಇತ್ತು. ಒಂದಿದ್ದರೆ ಮತ್ತೊಂದಿರಲಿಲ್ಲ. ವಿಜ್ಞಾನದ ಪ್ರಯೋಗಾಲಯಗಳು ಪುರಾತನ ಕಾಲದ ವಸ್ತು ಸ...

ಮತ್ತೆ ಕಾಡಿದ ರಶೋಮನ್

ಇಮೇಜ್
ಕಳೆದ ಮಾರ್ಚ್ ೨ ರಂದು ನಡೆದ  ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ  ದೂರಾಗತೊಡಗಿದೆ. ಅಂದು ಮೂರೂ ಕಡೆಯವರಿಗೆ ಉಂಟಾದ ದೇಹದ ಮೇಲಿನ ಗಾಯಗಳೂ ವಾಸಿಯಾಗುತ್ತಿವೆ. ತಲೆಗೆ ಹಾಕಿದ್ದ ಹೊಲಿಗೆಗಳೂ ಬಿಚ್ಚಲಾಗಿದೆ. ಆದರೆ ಅಂದು ಉಂಟಾದ ಮಾನಸಿಕ ಗಾಯಗಳು ಇನ್ನು ಹತ್ತು ವರ್ಷಗಳಾದರೂ ವಾಸಿಯಾಗಲಾರವು. ಸಮಾಜದಲ್ಲಿ ಅತ್ಯಂತ ಜವಾಬ್ದಾರಿ ಹೊಂದಿದ್ದ ಈ ವೃತ್ತಿಪರರ ನಡುವಿನ ಕಂದಕ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತಿದೆ. ಅಂದಿನ ಘಟನೆ ಹೇಗೆ ನಡೆಯಿತೆಂದು ನೀವು ಪತ್ರಕರ್ತರಿಗೆ ಕೇಳಿದರೆ ಅವರು ಒಂದು ರೀತಿ ಮಾಧ್ಯಮಗಳ ಮೂಲಕ ಭಿತ್ತರಿಸಿದ್ದಾರೆ.  ವಕೀಲರು ತಮ್ಮ ಅಳಲನ್ನು ತಮ್ಮದೇ ರೀತಿ ಹೇಳುವ ಪ್ರಯತ್ನ ನಡೆಸಿದ್ದಾರೆ. ಪೊಲೀಸರು ಕೂಡಾ ಮತ್ತೊಂದು ಬಗೆಯಲ್ಲಿ ಹೇಳುತ್ತಾರೆ. ಈ ಹೊತ್ತಿನಲ್ಲಿ ನನಗೆ ಮತ್ತೊಮ್ಮೆ ಕಾಡಿದ್ದು ಜಗತ್ಪ್ರಸಿದ್ಧ ನಿರ್ದೇಶಕ ಅಕಿರಾ ಕೊರೊಸಾವಾನ ರಶೋಮನ್ (೧೯೫೦ರಲ್ಲಿ ನಿರ್ಮಿಸಿದ್ದು) ಎಂಬ ಅದ್ಭುತ ಸಿನೆಮಾ. ಈ ಸಿನೆಮಾ ನೋಡಿರುವವರಿಗೆಲ್ಲಾ ನನ್ನ ಮಾತು ಅರ್ಥವಾಗಿರುತ್ತದೆ. ಕೊರೊಸಾವಾನ ಎಲ್ಲಾ ಸಿನಿಮಾಗಳಲ್ಲಿ ಬಹಳ ಸಲ ಮತ್ತೆ ಮತ್ತೆ ಕಾಡುವುದು ರಷೊಮನ್. ಯಾಕೆಂದರೆ ಮನುಷ್ಯನ ಸ್ವಾರ್ಥ ಮತ್ತು ಆಲೋಚನೆಯ ಮಿತಿಗಳನ್ನು ಆ ಸಿನೆಮಾದ ಕತೆ ಅನಾವರಣ ಮಾಡುವಷ್ಟು ಅದ್ಭುತವಾಗಿ ಬೇರೆ ಯಾವುದೂ ಮಾಡಲು ಅಸಾಧ್ಯವೆಂದು ನನ್ನ ಭಾವನೆ.  ರಶೋಮನ್ ...

ವೆಲ್ ಡನ್ 2011, ವೆಲ್ ಕಮ್ 2012!!

ಇಮೇಜ್
ಅಬ್ಬ !! ಹೇಗೆ ಮುಗಿದೋಯ್ತಲ್ಲಾ ಒಂದಿಡೀ ವರ್ಷ ?? ಹೊಸ ವರ್ಷಕ್ಕೆ ಕಾಲಿಡುತ್ತಿರೋ ಈ ಕ್ಷಣ ಸುಮ್ಮನೇ ಒಂದು ಅವಲೋಕನಕ್ಕೆ ಕೂತಿದ್ದೇನೆ . ವಯುಕ್ತಿಕವಾಗಿ 2011 ನನಗೆ ನೂರಾರು ವಿಶಿಷ್ಟ ಅನುಭವಗಳನ್ನು ನೀಡಿದ ವರ್ಷ . ಸಹಜವಾಗಿ ಒಳ್ಳೆಯ , ಕೆಟ್ಟ , ಖುಷಿ , ನೋವು , ಆಸೆ , ನಿರಾಸೆ , ನಿಟ್ಟುಸಿರು , ಎಲ್ಲಾ ರೀತಿಯ ಅನುಭವಗಳಲ್ಲಿ ಮುಳುಗಿಸಿಬಿಟ್ಟಿತ್ತಲ್ಲ ! ಇರಲಿ ಎಲ್ಲರ ಜೀವನದಲ್ಲಾಗಿರುವುದೂ ಇದೇ ತಾನೇ ? ರೂಪಗಳಷ್ಟೆ ಬೇರೆ ಬೇರೆಯಾಗಿರಬಹುದು .   ಹೊರಪ್ರಪಂಚಕ್ಕೆ ಒಂದು ಕಣ್ಣು , ಕಿವಿಇಟ್ಟುಕೊಂಡೇ ಕೂತಿರುವವರಿಗೆ 2011 ನಿಜಕ್ಕೂ ಕೆಲವಾರು ವಿಷಯಗಳಲ್ಲಿ ಉತ್ಸಾಹ , ಕುತೂಹಲಗಳನ್ನು ತುಂಬಿ ಕಚಗುಳಿ ಇಟ್ಟ ವರುಷ . ಇದೇ ವೇಳೆಗೆ ಫುಕುಶಿಮಾದ , ಕೊಲ್ಕೋತಾದ ಆಸ್ಪತ್ರೆ ದುರಂತಗಳು ನಡೆದು ಬಹಳ ನೋವುಂಟು ಮಾಡಿದ್ದೂ ಇದೆ . ಅದೂ ಇಂತಹ ದುರಂತಗಳಿಗೆ ಮನುಷ್ಯನ ಮೂರ್ಖತನವೂ ಕಾರಣವೆಂದಾದಾಗ ಮನಸ್ಸಿಗೆ ಮತ್ತಷ್ಟು ಕಸಿವಿಸಿಯಾಗುತ್ತದೆ . ಅದಕ್ಕಿಂತ ದುರಂತವೆಂದರೆ ಫುಕುಶಿಮಾದಂತಹ ದುರಂತ ನಡೆದ ಮೇಲೂ ಎಚ್ಚೆತ್ತುಕೊಳ್ಳದ ನಮ್ಮ ಸರ್ಕಾರಗಳು ಮತ್ತೆ ಇಲ್ಲಿ ಹೊಸದಾಗಿ ಕುಂಬಕೋಣಂ ಪರಮಾಣು ರಿಯಾಕ್ಟರ್ ‌ ಗಳನ್ನು ಸ್ಥಾಪಿಸಿದ್ದು . ಅದಕ್ಕೇ ಅಲ್ಲವಾ ಐನ್ ‌ ಸ್ಟೀನ್ ಒಮ್ಮೆ   " ಎರಡು ವಿಷಯಗಳು ಅನಂತವಾಗಿವೆ . ಒಂದು ಈ ಬ್ರಹ್ಮಾಂಡವಾದರೆ ಮತ್...