ಪೋಸ್ಟ್‌ಗಳು

ಇಂದು ಜಾತಿ ಎನ್ನುವುದೇ ಆಧುನಿಕತೆಯ ಒಂದು ಶಾಪ - ಡಾ. ಎಂ.ಎಸ್.ಆಶಾದೇವಿ

ಇಮೇಜ್
ಇಂದು ಜಾತಿ ಎನ್ನುವುದೇ ಆಧುನಿಕತೆಯ ಒಂದು ಶಾಪ  -   ಡಾ. ಎಂ.ಎಸ್.ಆಶಾದೇವಿ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಸಾಹಿತ್ಯ ರಚನೆ ಇಂದು ಯಾವ ಘಟ್ಟವನ್ನು ತಲುಪಿದೆ ಎಂದು ನಿಮ್ಮ   ಅನಿಸಿಕೆ ? ಎಲ್ಲ ಬಗೆಯ ಶೋಷಿತವರ್ಗಗಳ ಸಂಕಥನದಲ್ಲಿ ಗುರುತಿಸಬಹುದಾದ ಸಾಮಾನ್ಯ ಲಕ್ಷಣಗಳು ಇಲ್ಲೂ ಇವೆ. ಮೊದಲನೆಯದ್ದು ಆತ್ಮ ಮರುಕದ ಘಟ್ಟವಾದರೆ ಎರಡನೆಯದ್ದು ಸ್ವ - ಅರಿವಿನ ಘಟ್ಟ. ಮೂರನೆಯದ್ದು ಅಧಿಕೃತೆಯನ್ನು ದಾಖಲಿಸುವ ಘಟ್ಟ. ಹೀಗೆ ಇಂದು ಲೇಖಕಿಯರು ತಮ್ಮ ಅನುಭವಕ್ಕೂ ತಮ್ಮ ಬರವಣಿಗೆಗೂ ಒಟ್ಟಾರೆ ತಮ್ಮ ಅಭಿವ್ಯಕ್ತಿಗೆ ಅಧಿಕೃತತೆಯನ್ನು ಪಡೆದುಕೊಳ್ಳುವ ಒಂದು ಘಟ್ಟದಲ್ಲಿದ್ದಾರೆ. ನಮ್ಮ ಎದುರಿಗಿರುವ ಸವಾಲೆಂದರೆ ಲೋಕದೃಷ್ಟಿಯಿಂದ ಪಡೆದುಕೊಳ್ಳಬೇಕಾದ ಬಿಡುಗಡೆಗಿಂತ ಸ್ವ ಬಿಡುಗಡೆ ತುಂಬ ಮೂಲಭೂತವಾದದ್ದು ಅನ್ನಿಸುತ್ತೆ. ಇವತ್ತಿನ ಲೇಖಕಿಯರು ಅವರವರ ಬದುಕಿನ ಸಣ್ಣ ಪುಟ್ಟ ಸುಖ ಸಂತೋಷಗಳನ್ನು ತುಂಬ ಮುಖ್ಯವಾದದ್ದೆನ್ನುವ ಹಾಗೆ ,  ಅದೇ ಅವರ ಅನುಭವ ಲೋಕ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಹಾಗೆ ಬರೆಯುವಾಗ ಅವರಿಗಿರುವ ಆತ್ಮವಿಶ್ವಾಸ ಒಂದು ಗುರುತರವಾದ ಬದಲಾವಣೆಯನ್ನು ತಂದುಕೊಡುತ್ತಿದೆ. ಮಹಿಳೆಯರ ಸಾಹಿತ್ಯ ಸೃಷ್ಟಿಗೆ ಯಾವ ಪ್ರತಿಸ್ಪಂದನೆ ಸಿಗುತ್ತಿದೆ ? ಇಂದು ಮಹಿಳೆಯ ಸಾಹಿತ್ಯಕ್ಕೆ ಸಿಗ್ತಾ ಇರೋ ಸ್ಥಾನ ಬೇರೆ. ಮಹಿಳೆಯ ಸಾಹಿತ್ಯ ಮತ್ತು ಸಾಹಿತ್ಯದ ಸ್ವರೂಪ ಎರಡಕ್ಕೂ ಹತ್ತಿರದ ಸಂಬಂಧವಿದೆ. ಮಹಿಳೆಯ ಸಾಹಿತ್ಯವನ್ನು ಸಾಹಿತ್...

ಇಡೀ ಭಾರತವೇ ಒಂದು ದೊಡ್ಡ ಕಸಾಯಿಖಾನೆ’ : ನಾಗೇಶ್ ಹೆಗಡೆ

ಇಮೇಜ್
ನಾಗೇಶ್ ಹೆಗಡೆ ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಮುಖ ಹೆಸರು. ೨೫ ವರ್ಷಗಳ ಹಿಂದೆ ಪರಿಸರ ವಿಜ್ಞಾನ ವಿಷಯದಲಲಿ ದೇಶದಲ್ಲೇ ಮೊದಲ ಪ್ರಾಧ್ಯಾಪಕರಾಗಿ ನೈನಿತಾಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಇವರು ನಂತರ ಸೀದಾ ಕನ್ನಡ ಪತ್ರಿಕೋದ್ಯಮಕ್ಕೆ ದುಮುಕಿ  ’ ವಿಜ್ಞಾನ ವರದಿಗಾರರಾಗಿ ’,  ಬಾತ್ಮೀದಾರರಾಗಿ ಅಂಕಣಕಾರರಾಗಿ ವಿಜ್ಞಾನದ ಸತ್ಯಗಳನ್ನು ಕನ್ನಡಿಗರಿಗೆ ಅತ್ಯಂತ ಸರಳವಾಗಿ ತಿಳಿಸುತ್ತಾ ಬಂದಿರುವವರು. ನಮ್ಮಲ್ಲಿ ವೈಜ್ಞಾನಿಕ ಚಿಂತನೆಯನ್ನು ಸದಾ ಉದ್ದೀಪನಗೊಳಿತ್ತಾ ಬಂದಿರುವ ನಾಗೇಶ್ ಹೆಗಡೆಯವರು ಹಲವಾರು ವಿಷಯಗಳ ಕುರಿತು ಹಂಚಿಕೊಂಡಿದ್ದಾರೆ. ಒಬಾಮ ಅಧಿಕಾರಕ್ಕೇರಿದಾಗಿನಿಂದ ಅಣ್ವಸ್ತ್ರ ಮುಕ್ತ ವಿಶ್ವಕ್ಕಾಗಿ ಕರೆ ನೀಡುತ್ತಲೇ ಇದ್ದಾರೆ. ಇತ್ತೀಚಿನ   ಫುಕೋಸಿಮಾ ದುರಂತದ ಹಿನ್ನೆಲೆಯಲ್ಲಿ ಒಟ್ಟಾರೆ ಅಣುಶಕ್ತಿ ಬಳಕೆಯ ಬಗ್ಗೆ ಪುನರ್ ಚಿಂತನೆ ನಡೆಸಬೇಕಾದ ಅವಶ್ಯಕತೆಯಿದೆಯೆ ? - ಮರುಚಿಂತನೆ ಈಗಾಗಲೇ ಆರಂಭವಾಗಿದೆ. ಜಪಾನ್‌ನ ಒಟ್ಟೂ ವಿದ್ಯುತ್ ಉತ್ಪಾದನೆಯಲ್ಲಿ ಅಣುಶಕ್ತಿಯ ಪಾಲು ಶೇಕಡಾ ೩೦ರಷ್ಟಿತ್ತು. ಅದನ್ನು ಶೇ. ೫೦ಕ್ಕೆ ಏರಿಸಬೇಕೆಂದು ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಫುಕುಶಿಮಾ ದುರಂತದ ಅಂಥ ವಿಸ್ತರಣಾ ಯೋಜನೆಯನ್ನು ಮರುಪರಿಶೀಲನೆ ಮಾಡುವುದಾಗಿ ಜಪಾನಿನ ಪ್ರಧಾನ ಮಂತ್ರಿ ನವೊತೊ ಕಾನ್ ಮೊನ್ನೆ ಸಂಸದೀಯ ಸಮಿತಿಯ ಎದುರು ಹೇಳಿದ್ದಾರೆ. ಜರ್ಮನಿಯಂತೂ ಈಗಿನ ಸ್ಥಾವರಗಳನ್ನೂ ಕ್ರಮೇಣ ಮುಚ್ಚುವುದಾಗಿ ಘೋಷಿಸಿದೆ. ...

ಈಗಿನ ಸರ್ಕಾರಗಳೇ ವಿವೇಚನೆ ಕಳೆದುಕೊಂಡಿವೆ” - ಪ್ರೊ.ಲಿಂಗದೇವರು ಹಳೆಮನೆ

ಇಮೇಜ್
ಲಿಂಗದೇವರು ಹಳೆಮನೆ ಇನ್ನಿಲ್ಲ.... 'ಲಿಂಗದೇವರು ಹಳೆಮನೆ ಇನ್ನಿಲ್ಲ ’  ಎಂದು ಮೈಸೂರಿನ ಪ್ರಜಾವಾಣಿಯಲ್ಲಿರುವ ಗೆಳೆಯ ನಾಗರಾಜ ಬುರಡಿಕಟ್ಟಿ ಮುಂಜಾನೆ ೪ ಘಂಟೆಗೆ ಕಳಿಸಿದ್ದ ಮೆಸೇಜನ್ನು ಐದು ಗಂಟೆಗೆ ಎದ್ದು ನೋಡಿದ ನನಗೆ ನಂಬಿಕೆಯೇ ಬರಲಿಲ್ಲ. ಮತ್ತೆ ಕೂಡಲೇ ಕಾಲ್ ಮಾಡಿ ಕೇಳೀದೆ. ‘ ನಾಗು.. ,  ಅದು ನಿಜವೇನೋ ?’. ‘ ಹೌದು ಮಾರಾಯಾ ,  ರಾತ್ರಿ ಹನ್ನೆರಡೂ ಮುಕ್ಕಾಲಿನ ಸುಮಾರಿಗೆ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡು ಬಿಟ್ಟರು.... ’. ಆಘಾತವೇ ಆಯಿತು. ಇತರೆ ಗೆಳೆಯರಿಗೆ ಮೆಸೇಜ್ ಫಾರ್ವರ್ಡ್ ಮಾಡುತ್ತಾ ,  ಈ ಇದುವರಗೆ ನನಗೆ ಪ್ರೀತಿಪಾತ್ರರಾದವರು ಈ ಕ್ರೂರ ’ ಹೃದಯಾಘಾತ ’ ದ ದಾಳಿಗೆ ಈಡಾದವರ ಲೆಕ್ಕ ಹಾಕತೊಗಿದೆ. ದೊಡ್ಡಪ್ಪ- ಹನುಮಂತಪ್ಪ ,  ಮಾವ- ನಾರಾಯಣಪ್ಪ ,  ಗೆಳೆಯ ಶರತ್ ,  ಪ್ರೀತಿಯ ನೋಸಂತಿ ಮೇಸ್ಟ್ರು ,  ಅಚ್ಚುಮೆಚ್ಚಿನ ಗೆಳೆಯ ,  ರಂಗಕರ್ಮಿ ,  ಹಾಡುಗಾರ ಗೋಪಾಲಣ್ಣ ,  ಕಿರಂ ಮೇಸ್ಟ್ರು............ ಈಗ ಮತ್ತೆ......... ಶಿವಮೊಗ್ಗದಲ್ಲಿ ರಂಗಾಯಣದ ಘಟಕವನ್ನು ಆರಂಭಿಸುವುದಾಗಿ ಮೊನ್ನೆಯಷ್ಟೇ ಲಿಂಗದೇವರು ಹಳೆಮನೆಯವರು ನಡೆಸಿದ್ದ ಪತ್ರಿಕಾ ಗೋಷ್ಠಿಯನ್ನು ನೋಡಿ ಸಂತಸವಾಗಿತ್ತು. ಒಂದು ಕರೆ ಮಾಡಿ ಅವರಿಗೊಂದು ಥ್ಯಾಂಕ್ಸ್ ಹೇಳೋಣ ಎಂದು ಯೋಚಿಸುತ್ತಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಇರುವ ಹೆಗ್ಗೋಡಿನ ನೀನಾಸಂ ,  ತುಮರಿಯ  ’ ಕಿನ್ನರ ಮ...

Moments With Nagesh hegade

ಇಮೇಜ್
ನಾಗೇಶ್ ಹೆಗಡೆಯವರ ಮನೆಯಲ್ಲಿ ಕಳೆದ ಒಂದೆರಡು ತಾಸು.......                               ನಮ್ಮ ' ದ ಸಂಡೆ ಇಂಡಿಯನ್ ’ ಪತ್ರಿಕೆಯ ’ ಸಾಕ್ಷಿ ಪ್ರಜ್ಞೆ ’ ಅಂಕಣಕ್ಕಾಗಿ ಈ ಸಲಕ್ಕೆ ನಾಗೇಶ್ ಹೆಗಡೆಯವರನ್ನು ಸಂದರ್ಶನ ಮಾಡೋಣ ಎಂದು ತೀರ್ಮಾನಿಸಿ ಅವರಿಗೆ ಕಾಲ್ ಮಾಡಿದಾಗ ನಿಮ್ಮ ಪ್ರಶ್ನೆಗಳೇನಿವೆ ಕಳುಹಿಸಿ, ನಾನು ಉತ್ತರ ಕಳುಹಿಸುತ್ತೇನೆ ಎಂದರು. ಸಂದರ್ಶನದ ನೆಪದಲ್ಲಿಯಾದರೂ ಅವರನ್ನು ಖುದ್ದಾಗಿ ಮಾತನಾಡಿಸುವ ಅವಕಾಶ ಮಿಸ್ ಆಗಿ ಬಿಡುತ್ತಲ್ಲಾ, ಛೆ ಎಂದು ಮನಸ್ಸಲ್ಲೇ ಹೇಳಿಕೊಂಡು ’ಆಯ್ತು ಸರ್ ಎಂದು ಮರುಮಾತಲ್ಲೇ 'ನೀವು ಫ್ರೀ ಇರೋದಾದ್ರೆ ನಿಮ್ಮ ಮನೆಗೇ ಬರ‍್ತೀನಿ ಸರ್’ ಎಂದೆ. ಅದಕ್ಕವರು, ನಿಮಗೆ ಬರಬೇಕೆಂದರೆ ಬನ್ನಿ. ನಾನು ಬಿಡುವಾಗೇ ಇರ‍್ತೀನಿ. ಆದ್ರೆ ಪ್ರಶ್ನೆಗಳನ್ನು ಮೊದಲೇ ಕಳುಹಿಸಿರಿ ಎಂದರು. ’ಓಕೆ’ ಸರ್ ಹಾಗಾದ್ರೆ ಬೆಳಿಗ್ಗೆ ಬರ‍್ತೀನಿ ಎಂದು ಅವರ ಮನೆಯ ವಿಳಾಸ ಬರೆದುಕೊಂಡೆ. ಪತ್ರಿಕೋದ್ಯಮದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ನನ್ನಂತಹವರಿಗೆ ಈ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನೂ, ಅನುಭವವನ್ನೂ ಗಳಿಸಿಕೊಂಡಿರುವ ನಾಗೇಶ್ ಹೆಗಡೆಯವರಂತಹವರ ಜೊತೆ ಒಂದಷ್ಟು ಹೊತ್ತು ಕಳೆಯುವುದಕ್ಕಿಂತ ಬೇರೆ ಭಾಗ್ಯ ಇದೆಯೇ? ಮರುದಿನ ಬೆಳಿಗ್ಗೆ ಆರುವರೆಗೇ ಮನೆ ಬಿಟ್ಟು ಕೆಂಗೇರಿಯಿಂದ ಹಿರಿಯ ಮಿತ್ರ ಮೂರ್ತಿಯವರ ಕಾರಿನಲ್ಲಿ ನಾಗೆಶ್ ಹೆಗಡೆಯವರ...

Documentary - Niyamgiri, You are Still Alive

ಇಮೇಜ್

Seeking the Island -'ದ್ವೀಪವ ಬಯಸಿ' ಓದಿದ ಮೇಲೆ

ಇಮೇಜ್
'ಆಧುನಿಕ' ಬಿಕ್ಕಟ್ಟುಗಳಿಗೆ ಹಿಡಿದ ಕನ್ನಡಿ- 'ದ್ವೀಪವ ಬಯಸಿ'   ನಾನು ಪುಸ್ತಕವೊಂದನ್ನು ಓದಲು ಹಿಡಿದು ಅದು ಮುಗಿದ ಮೇಲೆಯೇ ಏಳುವಂತೆ ಮಾಡಿದ್ದು ಇತ್ತೀಚೆಗೆ ಈ ಕಾದಂಬರಿಯೇ. ಓದಲು ಆರಂಭಿಸುವವಾಗ  ಅದು ಹೀಗಾಗಬಹದೆಂಬ ನಿರೀಕ್ಷೆಯೂ ನನಗಿರಲಿಲ್ಲ. ' ದ್ವೀಪವ ಬಯಸಿ ' ಕಾದಂಬರಿ ಚಿಕ್ಕಮಗಳೂರು ಸೀಮೆಯ ಗೊಲ್ಲರಹಳ್ಳಿಯಲ್ಲಿ ಹುಟ್ಟಿ ಬೆಳೆದ ಜೋಯಿಸರ ಹುಡುಗ ಶ್ರೀಕಾಂತ್ ರಾವ್ ಊರು ಬಿಟ್ಟು ಬೆಂಗಳೂರು ಅಮೆರಿಕಾ ಸೇರಿ ಬದುಕು ರೂಪಿಸಿಕೊಳ್ಳುವ ಕತೆ.  ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಆರೈಕೆಯಲ್ಲಿ ಕಿರಿಯ ಸಹೋದರ ಕೃಷ್ಣನೊಂದಿಗೆ ಬೆಳೆದ  ಶ್ರೀಕಾಂತನ  ಆತ್ಮಕಥೆಯ ರೂಪದಲ್ಲಿರುವ  ಇದು ಪ್ರಾಯಶಃ ಇತ್ತೀಚಿನ ಮಹತ್ವದ ಕಾದಂಬರಿಗಳಲ್ಲೊಂದು ಎಂದು ನನ್ನ ಭಾವನೆ.   ಗೊಲ್ಲರಹಳ್ಳಿಗೆ ಸಮೀಪದ ಯಗಚಿ ನದಿಗೆ ಡ್ಯಾಂ ಕಟ್ಟುವ ಸಲುವಾಗಿ ಒಕ್ಕಲೆಬಿಸುವ ಕಾರ್ಯ ಆರಂಭವಾದಾಗ ಇವರ ಮನೆಯೇನೂ ಮುಳುಗಡೆಯಾಗದಿದ್ದರೂ ಊರಿನ ಜನರೆಲ್ಲಾ ಬಂದಷ್ಟು ಪರಿಹಾರ ಪಡೆದು ಗುಳೇ ಹೊರಡುತ್ತಾರೆ. ಶ್ರೀಕಾಂತನ ಅಪ್ಪ ಮಾತ್ರ ಹೊರಡುವುದಿಲ್ಲ. ಬೆಂಗಳೂರಿಗೆ ಬಂದು ಹಾಸ್ಟೆಲ್ನಲ್ಲುಳಿದು, ಇಂಜಿನಿಯರಿಂಗ್ ಓದುವ ಶ್ರೀಕಾಂತ   ರಜೆಗೊಮ್ಮೆ ಮನೆಗೆ ಬಂದಾಗ ಶಾಲೆಯಲ್ಲಿ ಶತದಡ್ಡಾಗಿದ್ದ ಕೃಷ್ಣ ತನ್ನನ್ನೂ ನಗರಕ್ಕೆ ಕರೆದುಕೊಂಡು ಹೋಗಲು ಕಾಡಿ ಬೇಡುತ್ತಾನೆ. ಆದರೆ ಅದು ಕಷ್ಟವೆಂದು ತಳ್ಳಿಹಾಕಿಬಿಡುತ್ತಾನೆ ಶ್ರೀಕ...

ಎಂ ಎನ್ ಸಿಗಳ ತೆಕ್ಕೆಗೆ ಔಷಧ

ಇಮೇಜ್
  ಹೆಲ್ತ್ ಫಾರ್ Only rich! .  ಒಂದು ದೇಶದಲ್ಲಿ ತಯಾರಿಸಲಾಗುವ  ಔಷಧ ಮಾತ್ರೆಗಳು ಆ ದೇಶದ ಜನರ  ಆರೋಗ್ಯಕ್ಕಾಗಿ ಅಲ್ಲದೇ ಕೇವಲ ಬಿಸಿನೆಸ್ ಕಂಪನಿಗಳ,  ಅಥವಾ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ತಯಾರಿಸಲ್ಪಟ್ಟರೆ ಏನಾಗುತ್ತದೆ??  ಇದು ಸಧ್ಯದ  ನಮ್ಮ ಭಾರತದ ಸ್ಥಿತಿ. ಇದಕ್ಕೆ ನಮ್ಮ ರಾಜಕಾರಣಿಗಳ, ಉದ್ಯಮಿಗಳ  ದುರಾಸೆ ಒಂದೆಡೆ ಕಾರಣವಾದರೆ ವಿದೇಶೀ ದೈತ್ಯ ಕಂಪನಿಗಳ ಹಸಿವು ಮತ್ತೊಂದು ಕಾರಣ.. ಇದೆಲ್ಲಾ ಹೇಗಾಯ್ತು ಕೊಂಚ ನೋಡೋಣ. ನಮ್ಮ ದೇಶವು ಪರಕೀಯರ ನೇರ ಮುಷ್ಠಿಯಿಂದ ಪಾರಾದ ಬಳಿಕ ಹಲವಾರು ಕ್ಷೇತ್ರಗಳಲ್ಲಿ ದಾಪುಗಾಲನ್ನಿಟ್ಟಿತ್ತು. ಔಷಧ ತಯಾರಿಕೆಯ ಉದ್ದಿಮೆಯಲ್ಲಿ ಸಹ ಅದು ಮುಂದುವರೆದ ದೇಶಗಳೂ ಹುಬ್ಬೇರಿಸಿ ನಿಲ್ಲುವಂತೆ  ಅಭಿವೃದ್ಧಿ ಸಾಧಿಸಿತು. ನಮ್ಮ ಸಕರ್ಾರವು ಪಾಲಿಸಿದ ಕೆಲವಾರು ಉತ್ತಮ ಆರ್ಥಿಕ ನೀತಿಗಳಿಂದಾಗಿ ನಮ್ಮ ದೇಶದ ಔಷದೋದ್ಯಮವನ್ನು MNC ಸ್ಪರ್ಧೆಯಿಂದ  ರಕ್ಷಿಸಿ ಅದು ಅಭೂತಪೂರ್ವ ಬೆಳವಣಿಗೆ ಸಾಧಿಸುವಂತೆ ಮಾಡಲಾಗಿತ್ತು.  ಔಷದ್ಯುತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಿ ಇಡೀ ಪ್ರಪಂಚದಲ್ಲಿ ನಾವೇ ಮೂರನೇ ಸ್ಥಾನಪಡೆಯುವ ಹಂತಕ್ಕೆ ಈ ಬೆಳವಣಿಗೆ ತಲುಪಿತು. ಮಾತ್ರವಲ್ಲ ಜನರ ಅಗತ್ಯಕ್ಕನುಗುಣವಾಗಿ  ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದೂ ನಮ್ಮ ಉದ್ದಿಮೆಯ ಹೆಗ್ಗಳಿಕೆ. 2105ರ ಸುಮಾರಿಗೆ ಭಾರತದ ಔಷಧಿ ಮಾರ...