ನವೆಂಬರ್ 02, 2010

ಎತ್ತ ಸಾಗಿದೆ ಮಾಹಿತಿ ಹಕ್ಕು




ಎತ್ತ ಸಾಗಿದೆ ಮಾಹಿತಿ ಹಕ್ಕು

ಕರೇಗೌಡ ಎಂಬ ಆ ವಿಧ್ಯಾರ್ಥಿ ತನ್ನ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ತಾನು ಹುಟ್ಟಿದ ವರ್ಷ ತಪ್ಪಾಗಿ ದಾಖಲಾಗಿತ್ತೆಂಬ ಕಾರಣಕ್ಕೆ ಶಿಕ್ಷಣ ಇಲಾಖೆಯ ಕಛೇರಿಗೆ ಒಂದು ಅರ್ಜಿ ಬರೆದು ತನ್ನ ಮೂಲ ಅಂಕಪಟ್ಟಿಯನ್ನು ಕಳುಹಿಸಿಕೊಟ್ಟಿದ್ದ. ಯಥಾಪ್ರಕಾರ ಆ ಇಲಾಖೆಯ ಅಧಿಕಾರಿಗಳಿಂದ ಅದನ್ನು ಸರಿತಿದ್ದಿಕೊಡುವುದು ಹೋಗಲಿ, ಕನಿಷ್ಠ ಒಂದು ಪ್ರತಿಕ್ರಿಯೆಯೂ ಬರಲಿಲ್ಲ. ಆತಂಕಕ್ಕೊಳಗಾದ ಆ ಯುವಕ ಅನೇಕ ಬಾರಿ ಪತ್ರಗಳನ್ನೂ ಬರೆದ. ಆಗಲೂ ಉತ್ತರ ಬರಲಿಲ್ಲ. ಹೀಗೇ ನಾಲ್ಕುವರ್ಷಗಳು ಕಳೆದು ಹೋದವು. ತನ್ನ ಅಂಕಪಟ್ಟಿ ಇನ್ನು ತನಗೆ ಸಿಗುವುದೇ ಇಲ್ಲವೇನೋ ಎಂಬ ತೊಳಲಾಟಕ್ಕೆ ಬಿದ್ದ ಕರೇಗೌಡ ಕೊನೆಗೆ ಮಾಹಿತಿಹಕ್ಕು ಕಾರ್ಯಕರ್ತರೊಬ್ಬರ ಸಹಾಯ ಪಡೆದ. ತನ್ನ ಅಂಕಪಟ್ಟಿಯ ಕುರಿತು ಮಾಹಿತಿ ನೀಡಲು ಮಾಹಿತಿ ಹಕ್ಕು ಕಾಯ್ದೆ ಅಡಿ ಒಂದು ಅರ್ಜಿ  ಸಲ್ಲಿಸಿದ. ಅಷ್ಟೇ ನೋಡಿ. ಆ ಅರ್ಜಿ ತಲುಪಿದ ಮೂರೇ ದಿನಗಳಲ್ಲಿ ಕರೇಗೌಡನ ಅಂಕಪಟ್ಟಿ ತಿದ್ದುಪಡಿಯೂ ಆಗಿ ಅವನ ಮನೆಯ ವಿಳಾಸಕ್ಕೇ ತಲುಪಿತ್ತು!. ಇದು ನಡೆದಿದ್ದು ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರು ತಾಲ್ಲೂಕಿನ ಮೊಗಾವಿಯಲ್ಲಿ.
ಈ ಒಂದು ಘಟನೆ ಮಾಹಿತಿ ಹಕ್ಕು ಕಾಯ್ದೆಯ ಪವರ್ ಏನು ಎಂದು ತೋರಿಸಿಕೊಡುತ್ತದೆ. ಮಾಹಿತಿ ಹಕ್ಕು ಕಾಯ್ದೆಯು ಈ ದೇಶದಲ್ಲಿ ಜಾರಿಗೆ ಬಂದು ಇದೇ ಅಕ್ಟೋಬರ್ 12 ಕ್ಕೆ ಐದನೇ ವರ್ಷಕ್ಕೆ ಕಲಿಡಲಿದೆ.
ಇಂದು ಈ ಕಾಯ್ದೆ ಒಂದು ಕಾನೂನು ಮಾತ್ರವಾಗಿಲ್ಲ. ಬದಲಿಗೆ ಜಡ್ಡುಗಟ್ಟಿಹೋಗಿರುವ ಬ್ಯೂರಾಕ್ರಸಿಯನ್ನು ಒಂದು ಕೈ ವಿಚಾರಿಸಿಕೊಳ್ಳಲು ಸಾಮಾನ್ಯ ನಾಗರಿಕರ ಪಾಲಿನ ಒಂದು ಪ್ರಬಲ ಅಸ್ತ್ರವೇ ಆಗಿದೆ ಎಂದು ತೋರಿಸಲು ನಮಗಿಂದು ನೂರಾರು ಉದಾಹರಣೆಗಳು ಸಿಗುತ್ತವೆ. ಈ ಕಾಯ್ದೆಯ ಮಹತ್ವವನ್ನು ಅರಿತ ಪ್ರಜ್ಞಾವಂತರು ಅದನ್ನು ಪ್ರಯೋಗಿಸಿ ಸಾರ್ವಜನಿಕರಿಗಾಗಿ ಸಕರ್ಾರಗಳು ತಂದ ಯೋಜನೆಗಳ ಮೇಲೆ ಒಂದು ಬಗೆಯ ಮೇಲ್ವಿಚಾರಣೆ ನಡೆಸಿದ್ದಾರೆ. ನೆನಗುದಿಗೆ ಬಿದ್ದಿದ್ದ ಎಷ್ಟೋ ಯೋಜನೆಗಳು ಮರುಜೀವ ಪಡೆದಿವೆ. ಹಲವು ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲಾಗಿದೆ. ಈ ಕಾಯ್ದೆಯಡಿ ಮಾಹಿತಿ ಕೇಳಿದ ಒಂದೇ ಕಾರಣದಿಂದ ಹಲವಾರು ಕಾನೂನು ಬಾಹಿರ ಯೋಜನೆಗಳು ಪೇರಿ ಕಿತ್ತಿವೆ. ಪಡಿತರ ದಾಸ್ತಾನುಗಳಿಂದ ಭಯಂಕರ ಹೆಗ್ಗಣಗಳ ಪಾಲಾಗಲಿದ್ದ ಬಡವರ ಪಾಲಿನ ದವಸ ದಾನ್ಯಗಳು ಉಳಿದುಕೊಂಡಿವೆ, ಭ್ರಷ್ಟರ ಜೇಬು ಸೇರಬೇಕಿದ್ದ ಸರ್ಕಾರದ  ಅರ್ಥಾತ್ ಸಾರ್ವಜನಿಕರ ನೂರಾರು ಕೋಟಿ ರೂಪಾಯಿ ಮರಳಿ ಸರ್ಕಾರಿ  ಖಜಾನೆಯಲ್ಲೇ ಉಳಿದಿದೆ. ಸರ್ಕಾರಿ ಕಛೇರಿಗಳಿಂದ ಒಂದು ಸಣ್ಣ ಮಾಹಿತಿಯನ್ನು ನೀಡಲೂ ಇನ್ನಿಲ್ಲದ ಪಾಡು ಪಡಬೇಕಿದ್ದ ಹೊತ್ತಿನಲ್ಲಿ ಯಾವುದೇ ನಾಗರೀಕನು ಕಾಯ್ದೆಯ ಬೆಂಬಲದಿಂದ ಅಧಿಕಾರಯುತವಾಗಿ ಮಾಹಿತಿ ಪಡೆಯಲು ಸಾಧ್ಯವಾಗಿದೆ. ಸಂಶಯವೇ ಬೇಡ. ಮಾಹಿತಿ ಹಕ್ಕು ಕಾಯ್ದೆ ಕಳೆದ ಐದು ವರ್ಷಗಳಲ್ಲಿ ಭ್ರಷ್ಟತೆಯ ಕೂಪದಿಂದ ಜನಸಾಮಾನ್ಯರನ್ನು ಕಾಪಾಡುವಲ್ಲಿ ಒಂದು ಮಂತ್ರದಂಡದಂತೆ ಕೆಲಸಮಾಡಹತ್ತಿದೆ. ಹತಾಶೆಯ ಮಡುವಲ್ಲಿ ಕಾಲಕಳೆಯುತ್ತಿದ್ದ ಅಭಿವೃದ್ಧಿಹೀನ ಹಳ್ಳಿಗಾಡು ಜನರ ಮೊಗದಲ್ಲಿ ಒಂದಷ್ಟಾದರೂ ಮಂದಹಾಸ ಕಾಣಿಸಿಕೊಂಡಿರುವುದರಲ್ಲಿ ಈ ಮಾಹಿತಿ ತಿಳಿದುಕೊಳ್ಳುವ ಹಕ್ಕಿನ ಪಾತ್ರವೂ ಇದೆ. ಇತ್ತತ್ತೀಚೆಗೆ ವೆಂಕಟೇಶ್ ನಾಯಕ್ ಎಂಬುವವರ ಅಜರ್ಿಯ ಮೇರೆಗೆ ಕೇಂದ್ರ ಮಾಹಿತಿ ಆಯೋಗವು ಒಂದು ತೀಪರ್ು ನೀಡಿತು. ಸಕರ್ಾರದ ಎಲ್ಲಾ ಸಚಿವಲಯಗಳೂ ಸಹ ಕರಡು ಮಸೂದೆಗಳನ್ನು ಕ್ಯಾಬಿನೆಟ್ನಲ್ಲಿ ಊಜರ್ಿತಗೊಳಿಸುವ ಮುನ್ನ ಅವುಗಳ ಪಠ್ಯವನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡುಗಡೆಗೊಳಿಸಬೇಕು. ಇಂತದ್ದೊಂದು ಮಹತ್ವದ ಬೆಳವಣಿಗೆ ಸಾಧ್ಯವಾಗಿದ್ದು ಆರ್ಟಿಐ ದೆಸೆಯಿಂದ.
ಹಾಗೆಂದ ಮಾತ್ರಕ್ಕೆ ಈ ಮಾಹಿತಿ ಹಕ್ಕು ಕಾಯ್ದೆ ಮಹತ್ತರ ಯಶಸ್ಸನ್ನೇ ಸಾಧಿಸಿಬಿಟ್ಟಿದೆ ಎಂದು ಹೇಳಲು ಸಾಧ್ಯವೇ? ಸಧ್ಯದ ಸ್ಥಿತಿಯಲ್ಲಿ ಆ ಧೈರ್ಯ ಯಾರಿಗೂ ಇಲ್ಲ. ಏಕೆಂದರೆ ಈ ಕಾಯ್ದೆಯ ಸತ್ಪರಿಣಾಮಗಳ ಬಗ್ಗೆ ಮೇಲೆ ತಿಳಿಸಲಾದ ಉದಾಹರಣೆಗಳೆಲ್ಲವೂ ಸಲೀಸಾಗಿ ಆಗಿರುವಂತವಲ್ಲ. ಇಲ್ಲಿ ಮಾಹಿತಿ ಕಾಯ್ದೆಯಡಿ ಮಾಹಿತಿ ಕೇಳಿದ ಸಾರ್ವಜನಿಕರಿಗೆ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಸಂತೋಷದಿಂದ ನೀಡಿದ ಉದಾಹರಣೆ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಹೀಗಾಗಿ ಇಲ್ಲಿ ಬೆಂಬಲಕ್ಕೆ ಕಾಯ್ದೆ ಇದ್ದರೂ ಅಗತ್ಯ ಮಾಹಿತಿ ಪಡೆಯಲು ಒಂದು ಮಟ್ಟಿಗಿನ ಸಂಘರ್ಷವನ್ನೇ ನಡೆಸಬೇಕಾದ ಸಂದರ್ಭ ಇದೆ. ಇದು ಇಂಡಿಯಾದ ಕರಪ್ಟ್ ಆಡಳಿತ ವ್ಯವಸ್ಥೆಯ ರಿಯಲ್ ರಿಯಾಲಿಟಿ ಶೋ. ಇದಕ್ಕಿಂತ ಕಹಿಸತ್ಯವೇನೆಂದರೆ ಈ ಕಾಯ್ದೆ ಜಾರಿಯಗಿ ನಾಲ್ಕು ವರ್ಷಗಳು ಮುಗಿದ ನಂತರವೂ ಇಂತಹ ಒಂದು ಕಾಯ್ದೆ ಜಾರಿಯಲ್ಲಿದೆ ಎಂದೇ ಅರಿಯದ ಕೋಟ್ಯಂತರ ಜನರಿದ್ದಾರೆ. ಅದರಲ್ಲೂ ಗ್ರಾಮಾಂತರ ಪ್ರದೇಶದ ಜನರಿಗೆ ಮಾಹಿತಿ ಹಕ್ಕಿನ ಕುರಿತು ಶಿಕ್ಷಣ ನೀಡಿರುವ ಉದಾಹರಣೆಗಳು ಬಲು ಅಪರೂಪ.



ರಾಶಿ ರಾಶಿ ದೂರುಗಳು
ದೇಶದ ಮಾಹಿತಿ ಹಕ್ಕು ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮ್ಯಾಗ್ಸೆಸೆ ವಿಜೇತೆ ಅರುಣಾ ರಾಯ್ ಹಾಗೂ ಡೆವೆಲಪ್ಮೆಂಡ್ ಎಕನಾಮಿಸ್ಟ್ ಜೀನ್ ಡೀಝ್ ಅವರ ಪ್ರಯತ್ನದಿಂದಾಗಿ ಸ್ವತಂತ್ರ ಮೇಲ್ಮನವಿ ಪ್ರಾಧಿಕಾರವಾದ ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗಗಳು ಜಾರಿಗೆ ಬಂದವು. ಅದರೆ ಕನರ್ಾಟಕದಲ್ಲಿ ಮಾಹಿತಿ ಆಯೋಗದ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯದ ಮಹಿತಿ ಆಯೋಗದ ಮುಂದೆ ಜಮಾವಣೆಯಾಗಿರುವ ಮೇಲ್ಮನವಿಗಳ ಪ್ರಮಾಣವನ್ನು ನೋಡಿದರೆ ನಿಜಕ್ಕೂ ನಿರಾಶೆಯಾಗುತ್ತದೆ. ಕಳೆದ ಜುಲೈ ಕೊನೆಯಲ್ಲಿ ಮಾಹಿತಿ ಆಯೋಗದ ಸುಪದರ್ಿಯಲ್ಲಿ ಇತ್ಯರ್ಥವಾಗದ ದೂರುಗಳ ಸಂಖ್ಯೆ 11,848! ಅಲ್ಲದೇ ಪ್ರತಿ ತಿಂಗಳೂ ಸಹ ಹತ್ತಿರತ್ತಿರ ಸಾವಿರ ಮೇಲ್ಮನವಿಗಳು, ದೂರುಗಳು ಜಮಾಯಿಸುತ್ತಲೇ ಇವೆ. ಮಾಹಿತಿ ಆಯೋಗವು ಸಧ್ಯದಲ್ಲಿರುವ ಸ್ಥಿತಿಯಲ್ಲೇ ಮುಂದುವರಿದರೆ ಈ ಅಷ್ಟೂ ದೂರುಗಳು ಬಗೆಹರಿಯಲು ಮತ್ತೊಂದು ದಶಕವಾದರೂ ಬೇಕು. 15 ದಿನದಲ್ಲಿ ಸಿಗಬೇಕಾದ ಮಾಹಿತಿ 10 ವರ್ಷವಾದಮೇಲೆ ಸಿಕ್ಕರೆ ಅದಕ್ಕಾಗಲೀ, ಅದನ್ನು ಕೊಡಿಸಿದ ಕಾಯ್ದೆಗಾಗಲೀ ಉಳಿಯುವ ಕಿಮ್ಮತ್ತಾದರೂ ಏನು? ಸರ್ಕಾರಿ ಪ್ರಾಧಿಕಾರಗಳಲ್ಲಿ ನೇಮಕ ಮಾಡಲಾಗುವ ಸಾರ್ವಜನನಿಕ ಮಾಹಿತಿ ಅಧಿಕಾರಿಗಳು (ಪಿಐಒ) ಅನೇಕ ಸಂದರ್ಭಗಳಲ್ಲಿ ಮಾಹಿತಿಯನ್ನು ನೀಡುವುದೇ ಇಲ್ಲ. ಅಥವಾ ಇಲ್ಲಸಲ್ಲದ ಕಾರಣವೊಡ್ಡಿ ಮಾಹಿತಿಯನ್ನು ನಿರಾಕರಿಸಿರುತ್ತಾರೆ. ಇಂತಹ ಪಿಐಓಗಳ ಮೇಲೆ ಯಾವುದೇ ಕ್ರಮವನ್ನೂ ಮಾಹಿತಿ ಆಯುಕ್ತರು ಕೈಗೊಳ್ಳದಿರುವುದೂ ಸಹ ಮಾಹಿತಿಗಾಗಿ  ಅರ್ಜಿ ಹಾಕುವವರಲ್ಲಿ ನಿರಾಸೆಯನ್ನುಂಟು ಮಾಡುತ್ತಿದೆ. ಹಾಗೆಯೇ ಪ್ರಥಮ ಹಂತದ ಮೇಲ್ಮನವಿ ಅಧಿಕಾರಿಯಂತೂ ದಿನ ತಳ್ಳುವುದಕ್ಕೆ ಮಾತ್ರ ಲಾಯಕ್ಕು.

ಹೀನಾಯ ಸ್ಥಿತಿಯಲ್ಲಿ ಮಾಹಿತಿ ಆಯೋಗ.
ಕೆಳ ಮಟ್ಟದಲ್ಲಿ ಮಾಹಿತಿ ಹಕ್ಕಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಗೂ ಮಾಹಿತಿ ದೊರಕದ ಸಂದರ್ಭದಲ್ಲಿ ಮೇಲ್ಮನವಿಗಳನ್ನು ಸ್ವೀಕರಿಸಿ ನ್ಯಾಯ ದೊರಕಿಸಲು ಸ್ಥಾಪಿಸಲಾಗಿರುವ ರಾಜ್ಯ ಮಾಹಿತಿ ಆಯೋಗ ಇಂದು ಹೀನಾಯ ಸ್ಥಿತಿಯಲ್ಲಿದೆ ಎಂದೇ ಹೇಳಬೇಕು. ಮಾಹಿತಿ ಆಯೋಗದ ಅಗತ್ಯದ ದೃಷ್ಟಿಯಿಂದ ಸಧ್ಯದ ಪರಿಸ್ಥಿತಿಯಲ್ಲಿ ಕನಿಷ್ಠ 6-7 ಅಯುಕ್ತರಾದರೂ ಅಗತ್ಯವಿದೆ. ವಿಭಾಗೀಯ ಮಟ್ಟದಲ್ಲಿ ಆಯುಕ್ತರನ್ನು ನೇಮಿಸಿದರೆ ಇನ್ನೂ ಉತ್ತಮ . ಆದರೆ ಇಲ್ಲಿನ ಸ್ಥಿತಿ? ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು (ಸಿಐಸಿ) ಕಳೆದ ಜುಲೈ 9ರಂದು ನಿವೃತ್ತರಾಗಿದ್ದು ಇನ್ನೂ ಆ ಸ್ಥಾನ ಭತರ್ಿಯಾಗಬೇಕಿದೆ. ಅ.21 ಕ್ಕೆ ಆಯುಕ್ತ ಕೆ.ಎ.ತಿಪ್ಪೇಸ್ವಾಮಿಯವರ ಸ್ಥಾನವೂ ತೆರವಾಗಿದೆ. ಉಳಿದಿರುವುದು ಇಬ್ಬರೇ. ಆಯುಕ್ತ ಡಾ.ಹೆಚ್.ಎನ್.ಕೃಷ್ಣ ಹಾಗೂ ವಿರೂಪಾಕ್ಷಪ್ಪ. ಇಂತಹ ದಯನೀಯ ಸ್ಥಿತಿಯಲ್ಲಿರುವ ರಾಜ್ಯ ಮಾಹಿತಿ ಆಯೋಗದಿಂದ ಮಾಹಿತಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನವನ್ನು ನಿರೀಕ್ಷಿಸುವುದಾದರೂ ಹೇಗೆ?

ಇಲ್ಲಿ ಇನ್ನೊಂದು ಸಮಸ್ಯೆ ಇದೆ. ಸಧ್ಯ ಮಾಹಿತಿ ಆಯೋಗದಲ್ಲಿ ನೇಮಕವಾಗಿರುವವರೆಲ್ಲರೂ ಮಾಜಿ ಬ್ಯೂರಾಕ್ರಾಟ್ಗಳೇ. ಹಲವರು ನಿವೃತ್ತ ಐಎಎಸ್ ಅಧಿಕಾರಿಗಳು. ಆಯುಕ್ತರಾಗಿ ನೇಮಕಗೊಳ್ಳುವವರಿಗೆ ಸುಪ್ರೀಂ ಕೋಟರ್್ ಜಡ್ಜ್ಗಿರುವಷ್ಟೇ ಸೌಲಭ್ಯ ಇರುತ್ತದೆ. ಮಾಸಿಕ 80 ಸಾವಿರ ರೂ. ವೇತನ. ಹೆಚ್ಚಿನವರು ಇವುಗಳ ಆಸೆಯಿಂದಲೇ ಇಲ್ಲಿರಲು ಬಯಸುತ್ತಾರೆಯೇ ವಿನಃ ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನವಾಗಬೇಕೆನ್ನುವ ಇಚ್ಛಾಶಕ್ತಿಯಲ್ಲ ಎನ್ನುವುದನ್ನು ಅಯೋಗದ ಕಾರ್ಯವೈಖರಿಯ ಮೂಲಕವೇ ತಿಳಿಯಬಹುದು. ನಿಜ ಹೇಳಬೇಕೆಂದರೆ ಮಾಹಿತಿ ಆಯೋಗದ ಅಧಿಕಾರಿಗಳು ಇತರರಿಗೊಂದು ನೀತಿ ತಮಗೊಂದು ನೀತಿಯನ್ನೇ ಅನುಸರಿಸುವುದು.
ಸಧ್ಯ ತೆರವಾಗಿರುವ ಐದು ಸ್ಥಾನಗಳಿಗೆ ಈಗಾಗಲೇ 89 ಅರ್ಜಿಗಳು  ಬಂದಿವೆ. ಇದರಲ್ಲಿ 52 ಮಂದಿ ನಿವೃತ್ತ ಐಎಎಸ್, ಕೆ.ಎ.ಎಸ್, ಹಾಗೂ ನ್ಯಾಯಾಂಗ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಗಳು. ಅವೆಲ್ಲವನ್ನೂ ಸ್ಕ್ರೀನಿಂಗ್ ಮಾಡುವ ಕೆಲಸ ಇನ್ನೂ ಆಗಬೇಕಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಈ ಮಾಹಿತಿ ಹಕ್ಕು ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಯಾರು ಮಾಡುತ್ತಿದ್ದಾರೋ ಅಂತಹ `ಸಿವಿಲ್ಸೊಸೈಟಿ'ಯ ಸದಸ್ಯರನ್ನೂ ಆಯೋಗದಲ್ಲಿ ನೇಮಿಸಿಕೊಳ್ಳಬೇಕು ಎಂಬ ಒತ್ತಾಸೆ ತುಸು ತೀವ್ರವಾಗಿಯೇ ಇದೆ. ಪಕ್ಕದ ಆಂಧ್ರ, ಗುಜರಾತ್ ರಾಜ್ಯಗಳ ಮಾಹಿತಿ ಆಯೋಗದಲ್ಲಿ ಮಾತ್ರವಲ್ಲದೆ ಕೇಂದ್ರ ಆಯೋಗದಲ್ಲಿಯೂ ಇದು ಸಾಧ್ಯವಾಗಿರುವಾಗ ಕನರ್ಾಟಕದಲ್ಲೇಕೆ ಸಾಧ್ಯವಾಗಬಾರದು ಎಂಬುದು ಹಲವರ ಪ್ರಾಮಾಣಿಕ ಪ್ರಶ್ನೆ.

ಮಾಹಿತಿ ಹಕ್ಕನ್ನೇ ಉಸಿರಾಡುತ್ತಾ
..
ಈ ಮಾಹಿತಿ ಹಕ್ಕು ಕಾಯ್ದೆ ಜಾರಿಯಾದಾಗಿನಿಂದ ದೇಶದಾದ್ಯಂತ ಹುಟ್ಟಿಕೊಂಡಿರುವ ಹೊಸ ಜಾತಿಯ ಹೆಸರು `ಆರ್ಟಿಐ ಕರ್ತರು'. ಆರ್ಟಿಐ ಕಾಯ್ದೆಯ ಬೆಳಕಿನಲ್ಲಿ ಹೊಸ ಮಾರ್ಗವನ್ನು ಕಂಡುಕೊಂಡು ಸಮಾಜದ ಸೇವೆಗೆ ತಮ್ಮನ್ನು ತಾವು ಇದರ ಮೂಲಕ ತೆರೆದುಕೊಳ್ಳುತ್ತಿರುವ ಸಾವಿರಾರು ಮಂದಿ ದೇಶದಲ್ಲಿದ್ಧಾರೆ. ಕನರ್ಾಟಕದಲ್ಲೂ ಅಂತವರ ದೊಡ್ಡ ಪಟ್ಟಿಯೇ ಇದೆ. ಇದರಲ್ಲಿ ಕೆಲವರು ಇದನ್ನೇ ವೃತ್ತಿಯಗಿಯೂ ಮಾಡಿಕೊಂಡಿದ್ದರೆ ಇನ್ನು ಕೆಲವರು ಪ್ರವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಎರಡೂ ಮಾಡಿಕೊಂಡವರೂ ಇದ್ದಾರೆ. ಇಂದು ರಾಜ್ಯದಲ್ಲಿ ಈ ಕಾಯ್ದೆಯು ಒಂದಷ್ಟಾದರೂ ಜನಸಾಮಾನ್ಯರಿಗೆ ತಲುಪತೊಡಗಿದೆ ಎಂದರೆ ಅದು ಇಂತಹವರಿಂದಲೇ ಎಂದರೆ ಅತಿಶಯವಲ್ಲ. ಇಲ್ಲಿ ಉಲ್ಲೇಖಿಸಬಹುದಾವರೆಂದರೆ ಉತ್ತರ ಕನರ್ಾಟಕ ಭಾಗದ ಜೆ.ಎಂ.ರಾಜಶೇಖರ್, ಅಶೋಕ್ ಹಲಗಲಿ, ಬೆಂಗಳೂರಿನ ರವೀಂದ್ರನಾಥ ಗುರು, ವೀರೇಶ್, ಭಾಸ್ಕರ್, ವೈ.ಜಿ.ಮುರುಳೀಧರ್, ಕಾತ್ಯಾಯಿನಿ ಚಾಮರಾಜ, `ಕ್ರಿಯಾ ಕಟ್ಟೆ'ಯ ವಿಕ್ರಮ ಸಿಂಹ, ಚಿಂತಾಮಣಿಯ ಮಂಜುನಾಥ್ ರೆಡ್ಡಿ, ಶಿರಸಿಯ ಹೆಗ್ಗಡೆ ಕಡೆಕೋಡಿ, ಗುಲ್ಬರ್ಗದ ದೀಪಕ್ ಗಾಲ, ಶಿವಮೊಗ್ಗದ ಬಿ.ಎಸ್.ನಾಗರಾಜ್... ಹೀಗೆ ಪಟ್ಟಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಇವರೆಲ್ಲಾ ಮಾಹಿತಿ ಹಕ್ಕಿನ ಶಕ್ತಿ ಸಾಮಥ್ರ್ಯವನ್ನು ಅರಿಯುವುದರೊಂದಿಗೆ ಸಮಾಜದಲ್ಲಿ ಅದರ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವವರು. ಸಕರ್ಾರಿ ತರಬೇತಿ ಸಂಸ್ಥೆಗಳ ಮುಖಾಂತರ ಅಧಿಕಾರಿಗಳಿಗೆ ತರಬೇತಿ ನೀಡುತ್ತಾ, ರಾಜ್ಯದಾದ್ಯಂತ ತಿರುಗಾಡುತ್ತಾ, ಸ್ವಯಂ ಸೇವಾ ಸಂಸ್ಥೆಗಳ ಮುಖೇನ ನಾಗರೀಕರಿಗೆ ಜನಜಾಗೃತಿ ಮಾಡುತ್ತಾ, ಕೆಲವೊಮ್ಮೆ ತಮ್ಮ ವೈಯುಕ್ತಿಕ ಸಾಮಥ್ರ್ಯದಿಂದಲೇ ತಮ್ಮ ಸುತ್ತಮುತ್ತಲ ಸಾಮಾಜಿಕ ಬದುಕಿನಲ್ಲಿ ಜಾಗೃತಿಯ ಹಣತೆಯನ್ನು ಬೆಳಗಿಸುತ್ತಿರುವವರು ಇವರು. `ಮಾಹಿತಿ ಹಕ್ಕಿನ' ಪ್ರಬಲ ಆಯುಧವನ್ನು ತಾವೂ ಪ್ರಯೋಗಿಸುತ್ತಲೇ ಸಾರ್ವಜನಿಕರೂ ಹೇಗೆ ಉಪಯೋಗಿಸಬೇಕೆಂದು ತಿಳಿಹೇಳುವ ಹೊತ್ತಲ್ಲಿ ಅಧಿಕಾರಶಾಹಿಯ ಕೆಂಗಣ್ಣಿಗೆ ಗುರಿಯಾದವರೂ ಇದ್ದಾರೆ. ಹಾವೇರಿಯ ಆರೋಗ್ಯ ಇಲಾಖೆಯ ಜೆ.ಎಂ.ರಾಜಶೇಖರ್ ಒಂದು ಉದಾಹರಣೆ. ಅವರು ತಮ್ಮ ಈ ಪೃವೃತ್ತಿಯ ಕಾರಣದಿಂದಲೇ ಸಸ್ಪೆಂಡ್ ಆಗಿದ್ದರು. ಮತ್ತೆ ತಮ್ಮನ್ನು ಅಮಾನತುಗೊಳಿಸಿದ ಕುರಿತು ಮಾಹಿತಿ ಕೇಳಿ ಇದೇ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದಾಗ ನಿರುತ್ತರಿ ಮೇಲಧಿಕಾರಿಗಳು ಅಮಾನತ್ತನ್ನು ವಾಪಾಸು ಪಡೆದಿದ್ದಾರೆ.

ಇವರು ಆರ್ಟಿಐ ಹುತಾತ್ಮರು.
ಆರ್ಟಿಐ ಕಾಯ್ದೆ ನಮ್ಮ ದೇಶದಲ್ಲಿ ಜಾರಿಗೆ ಬಂದ ಮೇಲೆ ಭ್ರಷ್ಟ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಗಂಟಲೊಲಗಣ ಕಡುಬಿನಂತಾಗಿದೆ. ಈ ಕಾಯ್ದೆಯ ಕಾರಣದಿಂಲೇ ಅದೆಷ್ಟೋ ಹಗರಣಗಳು ಬಯಲಿಗೆ ಬಂದಿವೆ. ಹೀಗೆಂದೇ ಇಂತಹ ಭ್ರಷ್ಟರು ಮತ್ತು ಅವರ ಬೆಂಬಲಕ್ಕೆ ನಿಂತ ವ್ಯವಸ್ಥೆ ಪ್ರಾಮಾಣಿಕ ಆರ್ಟಿಐ ಕಾರ್ಯಕರ್ತರನ್ನು ಟಾಗರ್ೆಟ್ ಮಾಡತೊಡಗಿದ್ದಾರೆ. ಈ ಒಂದು ವರ್ಷದಲ್ಲಿ ಇಂತಹ 11 ಹೇಯ ಘಟನೆಗಳು ದೇಶದಲ್ಲಿ ನಡೆದಿವೆ. ಈ ವರ್ಷ ಇಂತಹ ಎಂಟು ಮಂದಿ ಆರ್ಟಿಐ ಕಾರ್ಯಕರ್ತರು ಹತಯೆಯಾಗಿರುವುದೇ ಇದಕ್ಕೆ ನಿದರ್ಶನ. ಕಳೆದ ಜುಲೈ ತಿಂಗಳಲ್ಲಿ ಗುಜರಾತ್ ಹೈಕೋಟರ್್ ಎದುರೇ ಅಮಿತ್ ಜೇತ್ವಾ ಎಂಬ ಕಾರ್ಯಕರ್ತನನ್ನು ಹತ್ಯೆಗೈಯಲಾಗಿತ್ತು. ಮೇ 31ರಂದು ಮಹಾರಾಷ್ಟ್ರದ ದತ್ತಾ ಪಾಟೀಲ್ರನ್ನು ಹೀಗೇ ಟಾಗರ್ೆಟ್ ಮಾಡಿ ಮುಗಿಸಲಾಗಿತ್ತು. ಎಪ್ರಿಲ್ 21 ರಂದು ವಿಠಲ್ ಗೈತ್ ರನ್ನು , ಎಪ್ರಿಲ್ 11ರಂದು ಆಂಧ್ರ ಪ್ರದೇಶದ ಸೋಲಾ ರಂಗರಾವ್, ಫೆಬ್ರವರಿ 14 ರಂದು ಮಹಾರಾಷ್ಟ್ರದ ಅರುಣ್ ಸಾವಂತ್, ಫೆ.11 ರಂದು ಬಿಹಾರದ ಶಶಿಧರ್ ಮಿಶ್ರ, ಜನವರಿ 13 ರಂದು ಪುಣೆಯ ಸತೀಶ್ ರೆಡ್ಡಿಯನ್ನು ಹತ್ಯೆಗೈಯಲಾಗಿದೆ. ದುರಂತವೆಂದರೆ ಸಕರ್ಾರವೇ ಜಾರಿಗೊಳಿಸಿರುವ ಈ ಮಹತ್ವದ ಮಾಹಿತಿ ಹಕ್ಕು ಕಾಯ್ದೆಯ ಪ್ರಾಮಾಣಿಕ ಅನುಷ್ಠಾನಕ್ಕಾಗಿ ಪ್ರಯತ್ನಿಸಿದ ಇಂತಹ ಸೇವಾ ಮನೋಭಾವನೆಯ ಯುವ ಕಾರ್ಯಕರ್ತರು ಹತ್ಯೆಯಾದಾಗ ಎಲ್ಲಾ ಸರ್ಕಾರಗಳೂ  ಕಣ್ಣೊರೆಸುವ ಹೇಳಿಕೆಯನ್ನು ನೀಡು ಕೈತೊಳೆದುಕೊಂಡಿದ್ದು ಬಿಟ್ಟರೆ ಅಪರಾಧಿಗಳ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.


ಇವರೇನು ಹೇಳುತ್ತಾರೆ
?....
"ಕಳೆದ ಮೂರು ವರ್ಷದಲ್ಲಿ ಮಾಹಿತಿ ಹಕ್ಕಿನ ಕುರಿತು ಜಾಗೃತಿ ಹೆಚ್ಚಾಗಿದೆ. ರಾಯಚೂರು, ಕೊಪ್ಪಳ, ಗುಲ್ಬರ್ಗ, ಹಾವೇರಿ ಇಂತಹ ಕಡೆ ಪರಿಣಾಮ ಕಂಡಿಬರುತ್ತಿದೆ. ಒಂದು ತಿಂಗಳಲ್ಲಿ 800ರಿಂದ 1000 ದೂರುಗಳು ಬರುತ್ತವೆ. ನಮ್ಮ ಮಾಹಿತಿ ಆಯೋಗವನ್ನು ಬಲಪಡಿಸಬೇಕಾದ ಅಗತ್ಯವಂತೂ ಇದ್ದೇ ಇದೆ. ಅಯೋಗದಲ್ಲಿ 1 ಪ್ಲಸ್10 ಬಲದ ಅಗತ್ಯ ಇದೆ. ಕನಿಷ್ಠ 1 ಪ್ಲಸ್ 6 ಆದರೂ ಇರಬೇಕು. ಸಕರ್ಾರ ಈ ಕುರಿತು ನಿರ್ಧರಿಸಬೇಕು"
ಕೆ.ಎ.ತಿಪ್ಪೇಸ್ವಾಮಿ ಮಾಜಿ ಆಯುಕ್ತರು, ರಾಜ್ಯ ಮಾಹಿತಿ ಆಯೋಗ

"ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನ ನಿರಾಶಾದಾಯಕವಾಗಿದೆ. ಅಧಿಕಾರಿಗಳು ಅಷ್ಟು ಸುಲಭವಾಗಿ ಮಾಹಿತಿಗಳನ್ನು ನೀಡುವುದಿಲ್ಲ. ಕಾರಣ ಅದು ಅವರ ವಿರುದ್ಧವೇ ಇದೆ ಎಂದು. ಹಾಗೇನೇ ಸಕರ್ಾರಿ ಪ್ರಾಧಿಕಾರಗಳಲ್ಲಿ ಮಾಹಿತಿಗಳ ರೆಕಾಡರ್ಿಂಗ್, ಫೈಲಿಂಗ್ ವ್ಯವಸ್ಥೆ ತೀರಾ ಅವ್ಯವಸ್ಥಿತವಾಗಿರುದೂ ತಕ್ಷಣದಲ್ಲಿ ಮಾಹಿತಿ ಸಿಗದಿರಲು ಕಾರಣವಾಗಿದೆ. ನಾಗರಿಕರಿಗೆ ಈ ಕಾಯ್ದೆಯ ಸಂಪೂರ್ಣ ಫಲ ಸಿಗದಿರುವುದರಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಆಯೋಗವೂ ತೃಪ್ತಿಕರವಾಗಿ ಕಾರ್ಯ ನಿರ್ವಹಿಸಿಲ್ಲ. ದೇಶದಲ್ಲಿ ನಮ್ಮ ರಾಜ್ಯ ಆಯೋಗದ ವೆಬ್ ಸೈಟಿನಟ್ಟು ಕೆಟ್ಟದಾಗಿ ಬೇರಾವುದೂ ಇಲ್ಲ"
-ವೈ.ಜಿ.ಮುರುಳೀಧರ್ ಆರ್ಟಿಐ ಕಾರ್ಯಕರ್ತ

"ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಸಾರ್ವಜನಿಕ ಪ್ರಾಧಿಕಾರಗಳು ಸ್ವಯಂಪ್ರೇರಿತವಾಗಿ ಶೇ.90ರಷ್ಟು ಮಾಹಿತಿ ನೀಡಬೆಕು. ಆದರೆ ಇಲ್ಲಿಯ ತನಕ ನೂರಕ್ಕೆ ಹತ್ತರಷ್ಟು ಅಧಿಕಾರಿಗಳು ಮಾತ್ರ ಈ ಕೆಲಸ ಮಾಡಿದ್ದಾರೆ. ಕಾಯ್ದೆಯಲ್ಲಿ ತಿಳಿಸಿರುವ ರೀತಿಯಲ್ಲಿ ಪ್ರಾಧಿಕಾರಗಳೇ ಮಹಿತಿಯನ್ನು ಬಹಿರಂಗ ಪಡಿಸಿದರೆ ಸಾರ್ವಜನಿಕರು ಮಾಹಿತಿಗಾಗಿ ಅಲೆದಾಡುವುದು ತಪ್ಪುತ್ತದೆ. ಆ ಪ್ರಬುದ್ಧತೆ ಬಹುತೇಕ ಅಧಿಕಾರಿಗಳಿಗಿಲ್ಲವೆನ್ನುವುದು ವಿಷಾದಕರ"
- ವಿಕ್ರಮಸಿಂಹ ಆರ್ಟಿಐ ಕಾರ್ಯಕರ್ತ

ಹೊಸತು - ಹಳತು : ಬುದ್ದ ತತ್ವ

ಲೋಕದ ಪ್ರತಿಯೊಂದೂ ಎಡೆಬಿಡದ ಚಲನೆಯಲ್ಲಿದೆ. ಕೆಲವೊಮ್ಮೆ ಬರಿಗಣ್ಣಿಗೆ ಚಲಿಸದೇ ಜಡವಾಗಿವೆ ಎಂದು ತೋರುವ ಪ್ರತಿಯೊಂದೂ ಚಲನೆಯಲ್ಲಿದೆ. ಒಂದು ಮರದ ತುಂಡು, ಕಬ್ಬಿಣದ ಬಿಲ್ಲೆ,...

ಮರದೊಂದು ಎಲೆ ನಾನು..

ನನ್ನ ಫೋಟೋ
A Writer, Researcher, Journalist and Activist. Born and brought up from Kugwe a village near Sagara, Shimoga district of Karnataka state. Presently working as the Editor In Chief of PEEPAL MEDIA /PEEPAL TV.